ಪ್ರತಿಯೊಬ್ಬರೂ ಇತರರು ತಮ್ಮೆಡೆ ನೋಡುವಂತೆ ಮಾಡುವ ಮತ್ತು ಪ್ರಶಂಸೆಗಳನ್ನು ಪಡೆಯುವ ಉತ್ಸಾಹಿ ಮತ್ತು ಸೆಳೆಯುವ ವ್ಯಕ್ತಿತ್ವವನ್ನು ಹೊಂದಿರಲು ಬಯಸುತ್ತಾರೆ.ನಮ್ಮನ್ನು ನಾವು ಈ ರೀತಿಯಲ್ಲಿ ಬಿಂಬಿಸಿಕೊಳ್ಳಲು ಆತ್ಮವಿಶ್ವಾಸವು ಅತ್ಯಂತ ಪ್ರಮುಖವಾಗುತ್ತದೆ.ನೀವು ಜನರನ್ನು ಸೆಳೆಯುವಿರೇ ಅಥವಾ ಜನರು ನಿಮ್ಮನ್ನು ನೋಡಿ ದೂರ ಹೋಗುತ್ತಾರೆಯೇ, ನೀವು ಅವಕಾಶಗಳನ್ನು ಸೆಳೆಯುವಿರೇ ಅಥವಾ ದೂರವಿಡುವಿರೇ ಎಂಬುದು ಅಥವಾ ನೀವು ಶಕ್ತಿಗಳನ್ನು ಸೆಳೆಯುವಿರೇ ಅಥವಾ ದೂರವಿಡುವಿರೇ ಎಂಬುದು ಮಹತ್ವದ ಅಂಶವಾಗಿದೆ.ವ್ಯಕ್ತಿಯ ಆತ್ಮವಿಶ್ವಾಸವನ್ನು ಹಾಗೂ ಸ್ವಯಂ ಗೌರವವನ್ನು ಸುಧಾರಿಸುವ ಆರ್ಥಿಕ ಅವಕಾಶದಿಂದಾಗಿ ವ್ಯಕ್ತಿಯ ಆತ್ಮವಿಶ್ವಾಸದ ವೃದ್ಧಿಗಾಗಿ ಹಲವಾರು ಸಂಸ್ಥೆಗಳು ತಮ್ಮದೇ ಆದ ಕೋರ್ಸುಗಳನ್ನು ಪ್ರಾರಂಭಿಸಿವೆ.
ಈ ಸಂಸ್ಥೆಗಳು ವ್ಯಕ್ತಿಯ ವ್ಯಕ್ತಿತ್ವದ ನಿರ್ದಿಷ್ಟ ಮುಖವನ್ನು ಸುಧಾರಿಸುತ್ತವೆ; ಆದರೆ ಇನ್ನೊಂದು ವಿಧವಿದ್ದು ಅದು ಮಾನವ ದೇಹದೊಳಗಿನ ಇಡೀ ಶಕ್ತಿ ಕ್ಷೇತ್ರವನ್ನು ಸ್ಪರ್ಶಿಸುವುದು ಮತ್ತು ಆತನ ಅಥವಾ ಆಕೆಯ ತೇಜೋವಲಯವನ್ನು ಸ್ಪರ್ಶಿಸುವುದು.ವಿಧಾನವು ವಾಸ್ತು ಶಾಸ್ತ್ರದ ವಿಜ್ಞಾನವಾಗಿ ದೃಢಪಟ್ಟಿದೆ, ಇದು ಮೊದಲು ವ್ಯಕ್ತಿಯಲ್ಲಿನ ಶಕ್ತಿಯ ಹರಿವನ್ನು ಸುಧಾರಿಸಲು ನೋಡುತ್ತದೆ ಮತ್ತು ನಂತರ ಜಗತ್ತನ್ನು ಆತ್ಮವಿಶ್ವಾಸದೊಂದಿಗೆ ಎದುರಿಸಲು ಅಗತ್ಯವಿರುವ ವಿಶ್ವಾಸವನ್ನು ಒದಗಿಸುತ್ತದೆ.ವ್ಯಕ್ತಿಯೊಬ್ಬ ವಾಸ್ತುವಿನ ತತ್ವಗಳನ್ನು ಸರಿಯಾಗಿ ಅನುಸರಿಸಿದಲ್ಲಿ ಆತನ ಅಥವಾ ಆಕೆಯ ಆತ್ಮವಿಶ್ವಾಸವು ಸದಾಕಾಲವೂ ಉನ್ನತ ಮಟ್ಟದಲ್ಲಿರುವುದು.
ವಾಸ್ತುಶಾಸ್ತ್ರದ ತತ್ವಗಳ ಅನುಸಾರವಾಗಿ ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸುವ 5 ವಿಧಾನಗಳನ್ನು ಕೆಳಗೆ ನೀಡಲಾಗಿದೆ:
- ಮೊದಲನೆಯದು ಮತ್ತು ಅತ್ಯಂತ ಮಹತ್ವದ್ದೆಂದರೆ ನಿಮ್ಮ ನಾಲ್ಕು ನೆಚ್ಚಿನ ಮತ್ತು ನಾಲ್ಕು ನೆಚ್ಚಿನದ್ದಲ್ಲದ ದಿಕ್ಕುಗಳನ್ನು ಗುರುತಿಸುವುದು.ಸರಳ ವಾಸ್ತುವಿನ ತಜ್ಞರು ರೂಪಿಸಿರುವ ಸವಿವರ ವಾಸ್ತು ವಿಜ್ಞಾನದ ಪ್ರಕಾರ ವ್ಯಕ್ತಿಯೊಬ್ಬ ನೆಚ್ಚಿನ ಮತ್ತು ನೆಚ್ಚಿನದ್ದಲ್ಲದ ದಿಕ್ಕುಗಳೆರಡನ್ನೂ ಹೊಂದಿದ್ದು ಅವು ಆ ವ್ಯಕ್ತಿಯ ಆಂತರಿಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ.ಪ್ರತಿ ವ್ಯಕ್ತಿ ಕೂಡ ನಿದ್ರೆ, ಅಧ್ಯಯನ, ಕೆಲಸ ಮಾಡುವುದು ಇತ್ಯಾದಿಗೆ ನೆಚ್ಚಿನ ದಿಕ್ಕುಗಳನ್ನು ಹೊಂದಿರುತ್ತಾರೆ. ಈ ದಿಕ್ಕನ್ನು ಅತ್ಯುತ್ತಮವಾಗಿ ಬಳಕೆಮಾಡಿಕೊಳ್ಳುವುದು ವ್ಯಕ್ತಿಯ ಆತ್ಮವಿಶ್ವಾಸವನ್ನು ವೃದ್ಧಿಸುವುದು.ಸರಳ ವಾಸ್ತುವು ನಿಮಗೆ ನಿಮ್ಮ ನೆಚ್ಚಿನ ದಿಕ್ಕುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬಲ್ಲದು.
- ಧನಾತ್ಮಕ ಶಕ್ತಿಯು ಮನೆಯಲ್ಲಿ ಪ್ರಾರಂಭಗೊಳ್ಳುವುದು ಮತ್ತು ಗೋಡೆಗಳ ಮೇಲಿನ ಬಣ್ಣಗಳಿರಲಿ ಅಥವಾ ವಾಲ್ ಪೇಂಟಿಂಗ್ಗಳಿರಲಿ, ಮನೆಯಲ್ಲಿನ ಚಿತ್ರಗಳಷ್ಟು ವ್ಯಕ್ತಿಯ ಮೇಲೆ ಬೇರೆ ಯಾವವೂ ಪ್ರಭಾವ ಬೀರುವುದಿಲ್ಲ.ವಾಸ್ತುವಿನ ನಿಯಮಗಳು ಮನೆಯ ನಿರ್ದಿಷ್ಟ ಕೊಠಡಿಗಳಿಗೆ ನಿರ್ದಿಷ್ಟ ಬಣ್ಣಗಳನ್ನು ಸಲಹೆಮಾಡುತ್ತವೆ.ಈ ಬಣ್ಣಗಳು ನಮ್ಮೊಳಗೆ ನಿರ್ದಿಷ್ಟವಾದ ಶಕ್ತಿಯನ್ನು ಉಂಟುಮಾಡುತ್ತವೆ.
- ಎರಡನೇ ಅಂಶವನ್ನು ಅನುಸರಿಸುವುದು, ಮನೆಯು ಕೂಡ ಒಳ್ಳೆಯ ಸುಗಂಧವನ್ನು ಹೊಂದಿರಬೇಕು. ಊದಿನ ಕಡ್ಡಿಗಳನ್ನು ಹಚ್ಚುವುದು, ವೆಸ್ಸೆಲ್ಲಿನಲ್ಲಿ ತಾಜಾ ಹೂವುಗಳನ್ನು ಇಡುವುದು ನಮ್ಮ ಪ್ರಜ್ಞೆಗೆ ಇಂಬು ನೀಡುವುದು ಮತ್ತು ಒಳಗಿನ ಆನಂದವನ್ನು ವೃದ್ಧಿಸುವುದು.
- ನಿಮ್ಮ ಮನೆಯ ಮುಖ್ಯದ್ವಾರವನ್ನು ಅಲಂಕರಿಸಿ ಮತ್ತು ನಿಮ್ಮ ಷೂಗಳು ಮತ್ತು ಪಾದರಕ್ಷೆಗಳನ್ನು ಪ್ರತ್ಯೇಕವಾದ ಕ್ಯಾಬಿನೆಟ್ನಲ್ಲಿಡಿ.
- ನಿಮ್ಮ ಮನೆಯಿಂದ ಪೇಲವತೆಯನ್ನು ಓಡಿಸಲು ಮತ್ತು ಧನಾತ್ಮಕ ಶಕ್ತಿಯನ್ನು ತುಂಬಲು ಪ್ರತಿ ಅಂಚಿನಲ್ಲೂ ಉಪ್ಪಿನ ಕಲ್ಲನ್ನು ಇಡಿ.








