ಪ್ರವೇಶ ಮತ್ತು ಮುಖ್ಯದ್ವಾರದ ಮೇಲೆ ವಾಸ್ತು ಯಾವ ಪರಿಣಾಮ ಬೀರುವುದು?
Terms & Conditions

ಜೀವನಕ್ಕಾಗಿ ಹೊಸ ಸ್ವತ್ತನ್ನು ಖರೀದಿಸಲು ಯೋಜಿಸುತ್ತಿರುವ ಅಥವಾ ಹೂಡಿಕೆ ಮಾಡಲು ಬಯಸುತ್ತಿರುವ, ತಯಾರಕರು/ಅಭಿವರ್ಧಕರು/ದಲ್ಲಾಳಿಗಳು ಅವರಲ್ಲಿ ತಮ್ಮ ಅತ್ಯಂತ ಇಷ್ಟದ ದಿಕ್ಕಿನಲ್ಲಿ ಸ್ವತ್ತನ್ನು ಒದಗಿಸುವಂತೆ ಕೋರುತ್ತಿರುವ ಜನರಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಇದೇ ರೀತಿಯಾಗಿ ಹೊಸದಾದ ಮನೆಯನ್ನು ನಿರ್ಮಾಣಮಾಡುವ ಅಥವಾ ಜಾಗಗಳನ್ನು ಖರೀದಿಸುವ ಯೋಜನೆಗಳಿರುವ ಜನರು ಅತ್ಯಂತ ನೆಚ್ಚಿನ ದಿಕ್ಕಿನಲ್ಲಿ ಇದನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದು ಕೂಡ ಅಪೇಕ್ಷಿಸುತ್ತಾರೆ. ಅವಿಭಕ್ತ ಕುಟುಂಬವಿರಲಿ ಅಥವಾ ಪ್ರತ್ಯೇಕಿತ ಕುಟುಂಬವಿರಲಿ, ತಮ್ಮ ಇಷ್ಟದ ದಿಕ್ಕುಗಳಿಗೆ ಮುಖಮಾಡಿ ಮನೆಗಳನ್ನು ಕಟ್ಟುವವರನ್ನು ಹಾಗೂ ಅವರು ಅಂಥ ಮನೆಗಳಲ್ಲಿ ಬದುಕುತ್ತಿದ್ದರೂ ಕೂಡ ಜೀವನದಲ್ಲಿ ಬೆಳವಣಿಗೆ ಕಾಣುವುದನ್ನು ನಾವು ಕಂಡಿದ್ದೇವೆ.

ಈ ಬಗೆಯ ಅಸ್ಥಿರತೆಗೆ ಸಂಬಂಧಿಸಿರುವ ಪ್ರಕರಣಗಳಲ್ಲಿ ಕಂಡುಬಂದಿರುವ ನೆನಪಿಡಬಹುದಾದ ಅತ್ಯಂತ ಸಾಂಕೇತಿಕವಾದ ಅಂಶವೆಂದರೆ ಪೋಷಕರ ಜೀವನದಲ್ಲಿ ದೊರೆಯಬಹುದಾದ ಅತ್ಯುತ್ತಮ ಸಂಗತಿಗಳನ್ನು ಪಡೆಯುವ ಮೂಲಕ ಸಂಪತ್ತು ಹಾಗೂ ಶ್ರೀಮಂತಿಕೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ಮಗನು ಉದರ ಪೋಷಣೆಯ ಜವಾಬ್ದಾರಿಯನ್ನು ಹೊರುವ ಹಂತಕ್ಕೆ ಸಿದ್ಧನಾದಾಗ ಅದೇ ಮನೆಯಲ್ಲಿ ಇದ್ದರೂ ಕೂಡ ಬೆಳವಣಿಗೆ ಕಾಣಲು ವಿಫಲಗೊಳ್ಳುತ್ತಾನೆ. ಮನೆಯ ಮುಖ್ಯದ್ವಾರಕ್ಕಾಗಿ ವಾಸ್ತು ವಿಗೆ ಸಂಬಂಧಪಟ್ಟ ಈ ಬಗೆಯ ‘ವಿಚಿತ್ರವಾದ’ ವಾಸ್ತು ಅಸಮಮಿತಿಯು ವಿವರಿಸಲು ಕಷ್ಟಕರವಾದುದಾಗಿದೆ. ಈ ವಿಚಾರದಲ್ಲಿ ಮನೆಯ ಮುಖ್ಯದ್ವಾರದ ಮೇಲೆ ನಾವು ದೋಷ ಮಾಡುವುದೇಕೆ?

ಪ್ರವೇಶ ಮತ್ತು ಮುಖ್ಯದ್ವಾರಕ್ಕಾಗಿ ಅತ್ಯುತ್ತಮವಾದ ವಾಸ್ತು ಪಡೆಯಿರಿ

ಸರಳ ವಾಸ್ತುವಿನ ಪ್ರಕಾರ ವ್ಯಕ್ತಿಯ ಜನ್ಮದಿನಾಂಕದ ಆಧಾರದ ಮೇಲೆ ಆ ವ್ಯಕ್ತಿಗೆ ಸೂಕ್ತವೆನಿಸುವ ನೆಚ್ಚಿನ ದಿಕ್ಕುಗಳನ್ನು ತೀರ್ಮಾನಿಸಲಾಗುವುದು. ನಿಮ್ಮ ಮುಖ್ಯದ್ವಾರಕ್ಕಾಗಿ ವಾಸ್ತು ವಿಗೆ ಕಾಳಜಿವಹಿಸಬೇಕಾದ ವಿಚಾರಗಳು ಎಂದರೆ:
1. ಮುಖ್ಯದ್ವಾರದ ಬಳಿಯಲ್ಲಿ ಕಸದ ತೊಟ್ಟಿಯನ್ನು ಎಂದೂ ಇಡಬೇಡಿ.
2. ಮುಖ್ಯ ದ್ವಾರವು ಯಾವಾಗಲೂ ಕತ್ತಲಿನಲ್ಲಿರುವಂತಿಲ್ಲ ಮತ್ತು ಈ ಸ್ಥಳವು ಎಲ್ಲೆಡೆ ಪ್ರಕಾಶಮಾನವಾಗಿರುವುದನ್ನು ಖಚಿತ ಪಡಿಸಿಕೊಳ್ಳಿ.
3. ಪ್ರಮುಖ ದ್ವಾರದ ಪ್ರವೇಶದ್ವಾರವನ್ನು ಅಸ್ತವ್ಯಸ್ತತೆಯಿಂದ ದೂರವಿಡಿ ಮತ್ತು ಸುತ್ತಮುತ್ತಲಿನ ಸ್ಥಳಗಳು ಧನಾತ್ಮಕವಾದ ಶಕ್ತಿಯನ್ನು ಹೀರಿಕೊಳ್ಳುವಂತೆ ಮಾಡಿ.
4. ಮುಖ್ಯದ್ವಾರವನ್ನು ಓಂ, ಸ್ವಸ್ತಿಕ್ ಅಥವಾ ಹೂಗಳು ಅಂತೆಯೇ ದೀಪಗಳು, ಅಗರಬತ್ತಿಗಳನ್ನು ಹಚ್ಚುವ ಮೂಲಕ ಅಲಂಕರಿಸಿ; ಇವು ಧನಾತ್ಮಕ ಶಕ್ತಿಯನ್ನು ಹೊಮ್ಮಿಸಲು ಸಹಾಯ ಮಾಡುತ್ತದೆ
5. ಮುಖ್ಯ ದ್ವಾರವು ಯಾವುದೇ ಧಾರ್ಮಿಕ ಸ್ಥಳ ಅಥವಾ ಪಾಳು ಕಟ್ಟಡದ ಎದುರಿನಲ್ಲಿ ಇರುವಂತಿಲ್ಲ; ಏಕೆಂದರೆ ಎದುರಿನಲ್ಲಿ ಇದ್ದಲ್ಲಿ ಬಹಳಷ್ಟು ಋಣಾತ್ಮಕ ಶಕ್ತಿಯನ್ನು ಇದು ತರುವುದು.
6. ಮುಖ್ಯದ್ವಾರಕ್ಕೆ ಎದುರಾಗಿ ಯಾವುದೇ ಗೋಡೆಯೂ ಇರುವಂತಿಲ್ಲ, ಏಕೆಂದರೆ ಗೋಡೆಯಿದ್ದಲ್ಲಿ ಇದು ಮನೆಯೊಳಗೆ ಬರುವ ಶಕ್ತಿಯ ಹರಿವನ್ನು ತಪ್ಪಿಸುತ್ತದೆ.

ಮುಖ್ಯದ್ವಾರದ ದಿಕ್ಕು

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರ ಅಥವಾ ಯಾವುದೇ ಸ್ಥಳವು ಆ ಸ್ಥಳದಲ್ಲಿ ಕೆಲಸ ಮಾಡುವ ಜನರ ಜೀವನದ ಮೇಲೆ ಗಮನಾರ್ಹವಾದ ಪರಿಣಾಮಗಳನ್ನು ಉಂಟುಮಾಡುವುದು. ಮುಖ್ಯ ದ್ವಾರಕ್ಕೆ ಸಂಬಂಧಪಟ್ಟ ಅತ್ಯಂತ ಮಹತ್ವದ ಸಂಗತಿಯೆಂದರೆ ಮುಖ್ಯ ದ್ವಾರದ ದಿಕ್ಕು. ಮುಖ್ಯದ್ವಾರಕ್ಕೆ 8 ಸಂಭಾವ್ಯ ದಿಕ್ಕುಗಳಿರುತ್ತವೆ ಮತ್ತು ಪ್ರತಿ ದಿಕ್ಕು ಕೂಡ ಜನ್ಮದಿನಾಂಕ ಹಾಗೂ ಲಿಂಗದ ಆಧಾರದ ಮೇಲೆ ಕೆಲವು ಜನರಿಗೆ ನೆಚ್ಚಿನದಾಗಿದ್ದು ಇನ್ನು ಕೆಲವರಿಗೆ ಅಶುಭವಾಗಿರುತ್ತದೆ.