ಶೈಕ್ಷಣಿಕ ಸಂಸ್ಥೆಗಾಗಿ ವಾಸ್ತುವಿನ ಮಹತ್ವ

ಶೈಕ್ಷಣಿಕ ಸಂಸ್ಥೆಗಾಗಿ ವಾಸ್ತು ವು ಆ ಸಂಸ್ಥೆಯ, ಶಿಕ್ಷಕರ ಹಾಗೂ ಅದೇ ರೀತಿ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪ್ರಮುಖಪಾತ್ರ ನಿರ್ವಹಿಸುವುದು. ಸೂಕ್ತ ವಾಸ್ತು ಹೊಂದಾಣಿಕೆಯಿದ್ದಲ್ಲಿ ಅತ್ಯಂತ ಯಶಸ್ವಿ ಶೈಕ್ಷಣಿಕ ಸಂಸ್ಥೆಗಳು ಮಹಾನ್ ವಾಸ್ತು ಕೃತಿಗಳಾಗಲು ಸಾಧ್ಯವಿದೆ.

ಸರಳ ವಾಸ್ತುವಿನ ಪ್ರಕಾರ ಶೈಕ್ಷಣಿಕ ಸಂಸ್ಥೆಗಾಗಿ ವಾಸ್ತು ವನ್ನು ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರ ವಾಸ್ತು ದಿಕ್ಕುಗಳ ಜೊತೆ ಜೋಡಿಸಬೇಕಾದ ಅಗತ್ಯವಿದೆ. ಶೈಕ್ಷಣಿಕ ಸಂಸ್ಥೆಗಾಗಿ ವಾಸ್ತು ವಿನ ವಿಷಯದಲ್ಲಿ ಮುಖ್ಯಸ್ಥರ ವಾಸ್ತುವಿನ ಜೊತೆ ಅದು ಸರಿಹೊಂದದಿದ್ದಲ್ಲಿ ವಾಸ್ತು ಪಾಲನೆ ವಿಚಾರಗಳನ್ನು ಹೊಂದಿಸುವುದಕ್ಕಾಗಿ ಕೆಲವು ಪರಿಹಾರಗಳನ್ನು ಹೇಳಬಹುದು.

ವಿದ್ಯಾರ್ಥಿಗಳಿಗಾಗಿ
for-students

ಶಾಲೆ, ಕಾಲೇಜು ಅಥವಾ ಕೋಚಿಂಗ್ ಸಂಸ್ಥೆಯಂಥ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಮಯದ ಹೆಚ್ಚಿನ ಭಾಗವನ್ನು ಶಿಕ್ಷಕರಿಗೆ ಆಲಿಸುತ್ತ, ತಮ್ಮ ಕೋರ್ಸ್ ಅನ್ನು ಅಭ್ಯಾಸ ಮಾಡುತ್ತ ಕಳೆಯುತ್ತಾರೆ. ಅವರ ಚಕ್ರಗಳು (ಆಜ್ಞಾ ಚಕ್ರ) ಸೂಕ್ತವಾಗಿ ಶಕ್ತಿಶಾಲಿಗೊಳ್ಳುವುದಕ್ಕಾಗಿ ಹಾಗೂ ಏಕಾಗ್ರತೆಯಿಂದ ವಿಚಾರಗಳನ್ನು ಕೇಳಿ ಅರ್ಥಮಾಡಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಸೂಕ್ತವಾದ ದಿಕ್ಕಿನಲ್ಲಿ ಕುಳಿತುಕೊಳ್ಳುವುದು ಮಹತ್ವದ್ದಾಗಿದೆ.

ಎಲ್ಲಾ ಅಧ್ಯಯನ ಮೇಜುಗಳೂ ಅಚ್ಚುಕಟ್ಟಾಗಿ ಹಾಗೂ ಸ್ವಚ್ಛವಾಗಿ ಇರಬೇಕು. ಅವುಗಳು ತುಂಬಾ ಪುಸ್ತಕಗಳು ಮತ್ತು ವಸ್ತುಗಳಿಂದ ಕಿಕ್ಕಿರಿದಿರುವಂತಿಲ್ಲ.

ಶಾಲಾ ಕೋಣೆಗಾಗಿ
class-room

ಯಶಸ್ವಿ ಶೈಕ್ಷಣಿಕ ಸಂಸ್ಥೆಯನ್ನು ನಡೆಸುವುದಕ್ಕಾಗಿ ಶಾಲಾ ತರಗತಿಗಳನ್ನು ತುಂಬ ಮಹತ್ವನೀಡುವ ಮೂಲಕ ವಿನ್ಯಾಸಗೊಳಿಸಬೇಕು, ಏಕೆಂದರೆ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕಳೆಯುವುದು ತರಗತಿಗಳಲ್ಲೇ ಆಗಿರುತ್ತದೆ.  ತರಗತಿಯು ಸ್ವಚ್ಛ, ಪ್ರಕಾಶಯುತ ಮತ್ತು ದುರ್ವಾಸನೆಯಿಂದ ಮುಕ್ತವಾಗಿರಬೇಕು ಮತ್ತು ಸೂಕ್ತ ಬೆಳಕು ಹಾಗೂ ಗಾಳಿಯನ್ನು ಹೊಂದಿರಬೇಕು. ಗದ್ದಲಯುಕ್ತ ಮತ್ತು ಕಿಕ್ಕಿರಿಯುವಿಕೆಯನ್ನು ತಪ್ಪಿಸುವುದಕ್ಕಾಗಿ ಹಾಗೂ ತರಗತಿಯ ಪರಿಸರವನ್ನು ಶಾಂತವಾಗಿಡುವುದಕ್ಕಾಗಿ ತರಗತಿಯ ಸ್ಥಳವು ಶಾಂತವಾಗಿರಬೇಕು.  ತರಗತಿಯು ಬೀಮ್ ಅಥವಾ ಬಾತ್ ರೂಂ ಕೆಳಗೆ ಇರುವಂತಿಲ್ಲ. ತರಗತಿಯಲ್ಲಿ ಸೂಕ್ತ ಸ್ಥಳಗಳಲ್ಲಿ ಸ್ಫೂರ್ತಿ ತುಂಬುವ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಜನರ ಚಿತ್ರಗಳನ್ನು ಇರಿಸಬೇಕು. ಚಿಹ್ನೆಗಳು ಓಡುವ ಕುದುರೆಗಳು, ಮೂಡುವ ಸೂರ್ಯ, ಸರಸ್ವತಿ ದೇವಿಯ ಚಿತ್ರಗಳು, ವಿದ್ಯಾರ್ಥಿಗಳ ಹಿಂದಿನ ಸಾಧನೆಗಳನ್ನು ಸೂಚಿಸುವ ಟ್ರೋಫಿಗಳ ಚಿತ್ರಗಳನ್ನು ಒಳಗೊಳ್ಳಬೇಕು.

ತರಗತಿಗಳನ್ನು ಪ್ರಖರವಾದ ಬಣ್ಣಗಳಿಂದ ಪೇಂಟ್ ಮಾಡಬೇಕು. ಕಂಬಗಳು, ಪೀಠೋಪಕರಣಗಳ ಮೊನಚಾದ ತುದಿಗಳು, ತೆರೆದ ಶೆಲ್ಫುಗಳಂಥ ಯಾವುದೇ ಅಡೆತಡೆಗಳನ್ನು ತಪ್ಪಿಸಬೇಕು. ಗೋಡೆಗಳ ಎದುರಿನಲ್ಲಿ ಅಧ್ಯಯನ ಮೇಜುಗಳನ್ನು ಇರಿಸುವಂತಿಲ್ಲ.