ಉದ್ಯೋಗ ಕಳೆದುಕೊಳ್ಳುವುದು ಎಂಬುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ; ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಮತ್ತು ಜನರು ಸಾಮಾನ್ಯವಾಗಿ ಕೋಪಕ್ಕೆ ತುತ್ತಾಗುತ್ತಾರೆ. ಹತಾಶರಾಗುತ್ತಾರೆ ಮತ್ತು ಖಿನ್ನತೆಗೆ ಬೀಳುತ್ತಾರೆ. ಜನರು ಬೇಗನೆ ಮತ್ತೊಂದು ಉದ್ಯೋಗ ಸಂಪಾದಿಸದೇ ಇದ್ದರೆ ಅಥವಾ ಪ್ರೇರಣೆಯ ಕೊರತೆ ಅನುಭವಿಸಿದರೆ ಖಿನ್ನತೆಯು ಪ್ರಾರಂಭವಾಗುತ್ತದೆ. ಉದ್ಯೋಗ ಕಳೆದುಕೊಂಡ ತಕ್ಷಣ ಉಂಟಾಗುವ ನಿರುದ್ಯೋಗವು ವ್ಯಕ್ತಿಯ ಆತ್ಮವಿಶ್ವಾಸಕ್ಕೆ ಕುಂದುಂಟುಮಾಡುವುದು ಮತ್ತು ಗುರಿಸಾಧನೆಗೆ ತೊಡಕಾಗುವುದು. ಇದೇ ಸಮಯದಲ್ಲೇ ವ್ಯಕ್ತಿಯು ತಮ್ಮ ಸ್ಫೂರ್ತಿಯನ್ನು ಇಟ್ಟುಕೊಳ್ಳಬೇಕಾದ ಮತ್ತು ಪ್ರಬಲಗೊಳ್ಳಬೇಕಾದ ಅಗತ್ಯವಿರುತ್ತದೆ.
ಉದ್ಯೋಗ ನಷ್ಟದ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು
ಉದ್ಯೋಗಗಳು ನಮಗೆ ಜೀವನ, ಅರ್ಥ, ಉದ್ದೇಶ ಹಾಗೂ ರಚನಾತ್ಮಕತೆಯನ್ನು ಒದಗಿಸುವ ಅಗತ್ಯ ಲಕ್ಷಣವೆನಿಸಿವೆ. ಇದು ಸಮಾಜವು ನಮ್ಮನ್ನು ಹೇಗೆ ನೋಡುವುದು ಮತ್ತು ನಾವು ನಮ್ಮನ್ನು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಮೇಲೆ ಪ್ರಭಾವ ಬೀರುವುದು. ಉದ್ಯೋಗ ನಷ್ಟದಿಂದಾಗಿ ನಿಯಮಿತ ಆದಾಯದ ನಷ್ಟವೊಂದೇ ಅಲ್ಲ, ಬದಲಿಗೆ ಬೇರೆ ಕ್ಲಿಷ್ಟ ಸನ್ನಿವೇಶಗಳು ಕೂಡ ಉಂಟಾಗುತ್ತವೆ:
- ವ್ಯಕ್ತಿಯು ತನ್ನ ವೃತ್ತಿಪರ ಗುರುತನ್ನು ಕಳೆದುಕೊಳ್ಳಬೇಕಾಗುವುದು
- ಆದಾಯವಿಲ್ಲದಿರುವುದರಿಂದ ಅಭದ್ರತೆಯುಂಟಾಗುವುದು
- ಸಾಮಾಜಿಕ ಸಂಪರ್ಕಜಾಲವಿಲ್ಲದಂತಾಗುವುದು
- ದೈನಂದಿನ ಬದುಕಿಗೆ ತೊಡಕುಂಟಾಗುವುದು
- ಇದು ಆತ್ಮವಿಶ್ವಾಸ ಮತ್ತು ಸ್ವಪ್ರತಿಷ್ಠೆಗೆ ಮಸಿ ಬಳಿಯುವುದು
- ವೃತ್ತಿಪರ ಚಹರೆಯು ಇಲ್ಲದಂತಾಗುವುದು
ಉದ್ಯೋಗ ಕಳೆದುಕೊಂಡ ನಂತರ ಉಂಟಾಗುವ ಖಿನ್ನತೆಯನ್ನು ಹಲವು ವಿಧಗಳಲ್ಲಿ ಎದುರಿಸಬಹುದು, ಮತ್ತು ವಾಸ್ತು ಶಾಸ್ತ್ರವೆಂಬುದು ಈ ವಿಧಾನಗಳ ಪೈಕಿ ಒಂದೆನಿಸಿದೆ. ನೀವು ನಿಮ್ಮ ಮನೆಯಲ್ಲಿ ಕುಳಿತು ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವಾಗ ನೀವು ಸ್ಫೂರ್ತಿ ತುಂಬಿಕೊಳ್ಳಬೇಕು ಮತ್ತು ಧನಾತ್ಮಕವಾಗಿರಬೇಕು. ಮಂಕು ಕವಿದಂತೆ ಮತ್ತು ಆಸಕ್ತಿಹೀನರಾಗಿ ಇರುವುದು ಸೂಕ್ತವಲ್ಲ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪರಿವರ್ತನೆಯನ್ನು ತರುವ ಮೂಲಕ ವಾಸ್ತು ಶಾಸ್ತ್ರವು ನಿಮಗೆ ಸಹಾಯ ಮಾಡುವುದು.
ಕೆಲಸವು ನಷ್ಟವಾದ ಬಳಿಕ ಖಿನ್ನತೆಯಿಂದ ದೂರವಾಗುವ ವಿಧಾನಗಳು ಮತ್ತು ವಾಸ್ತುವು ನಿಮಗೆ ಹೇಗೆ ಸಹಾಯ ಮಾಡಬಹುದು:
- ಕೆಲಸವನ್ನು ಕಳೆದುಕೊಂಡ ಬಳಿಕ ಸ್ವಲ್ಪಮಟ್ಟಿಗೆ ವಿರಾಮ ಪಡೆಯುವುದು ಅಥವಾ ಕೆಲಸವಿಲ್ಲದ ತಕ್ಷಣವೇ ಹೊಸ ಕೆಲಸವನ್ನು ಹುಡುಕಲು ಪ್ರಾರಂಭಿಸುವುದು ಉತ್ತಮ. ನಿಮ್ಮ ಸ್ನೇಹಿತರು ಅಥವಾ ಪತ್ನಿಯ ಬಳಿ ವಿಷಯವನ್ನು ಹೇಳಿಕೊಳ್ಳಿ ಮತ್ತು ಅವರ ಸಲಹೆಗಳನ್ನು ಪಡೆಯಿರಿ.
- ನಿಮ್ಮ ಖರ್ಚುಮಾಡುವ ಅಭ್ಯಾಸಗಳನ್ನು ಕಡಿಮೆಮಾಡಿರಿ
- ನಿಮ್ಮ ಉದ್ಯೋಗವನ್ನು ಗಳಿಸಲು ಸಮಯವು ಅಗತ್ಯವಾದಲ್ಲಿ ಯಾವುದಾದರೂ ಹವ್ಯಾಸವನ್ನು ಬೆಳೆಸಿಕೊಳ್ಳಿ. ವ್ಯಾಯಾಮ ಮಾಡಲು ಪ್ರಾರಂಭಿಸಿ. ಸುಮ್ಮನೆ ಕೂರಬೇಡಿ.
- ನೆಟ್ವರ್ಕ್ ರಚನೆಯು ಸಂಭಾವ್ಯ ಉದ್ಯೋಗಾವಕಾಶಗಳ ಬಗ್ಗೆ ತಿಳಿದುಕೊಳ್ಳಲು ಉತ್ತಮವಾದ ವಿಧಾನವಾಗಿದೆ. ನಿಮ್ಮ ಹಳೆಯ ಸಹೋದ್ಯೋಗಿಗಳಿಗೆ ಕರೆಮಾಡಿ ಅಥವಾ ಸೂಕ್ತವಾದ ಉದ್ಯೋಗವನ್ನು ಹುಡುಕುವಂತೆ ನಿಮ್ಮ ಸ್ನೇಹಿತರಿಗೆ ತಿಳಿಸಿ.
- ಮುಖ್ಯ ಪ್ರವೇಶದ್ವಾರದ ಸ್ಥಳ ಅಥವಾ ದಿಕ್ಕು ಮಹತ್ವದ್ದಾಗಿದೆಯಾದರೂ ಮನೆಯ ಮುಖ್ಯ ದ್ವಾರವು ಅಚ್ಚುಕಟ್ಟಾಗಿರುವುದು ಕೂಡ ಮಹತ್ವದ್ದಾಗಿದೆ. ಮುಖ್ಯ ದ್ವಾರದಲ್ಲಿ ಸ್ಥಳವಿರಲಿ. ಚಲನವಲನಕ್ಕೆ ಯಾವುದೇ ತೊಂದರೆ ಬಾರದಂತಿರಲಿ.
- ನಿಮ್ಮ ಬೆಡ್ ರೂಮ್ ನೀವು ಪ್ರತಿದಿನ 8-10 ಗಂಟೆಗಳನ್ನು ಕಳೆಯುವ ಸ್ಥಳವಾಗಿದೆ ಮತ್ತು ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಸಮಗ್ರವಾದ ಪರಿಣಾಮವನ್ನು ಬೀರುತ್ತದೆ. ಇದು ಸರಿಯಾದ ದಿಕ್ಕಿನಲ್ಲಿದೆಯೇ (ಇಲ್ಲದಿದ್ದಲ್ಲಿ ಪರಿಹಾರಗಳಿಗಾಗಿ ಕೇಳಿ) ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಸರಳ ವಾಸ್ತು ತಜ್ಞರನ್ನು ಸಂಪರ್ಕಿಸಿ. ಕೊಠಡಿಯ ದಿಕ್ಕು, ಹಾಸಿಗೆಯ ಸ್ಥಿತಿ ಮತ್ತು ನಿದ್ರೆಯ ಬದಿ ಇವು ಭೌತಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
- ಕನ್ನಡಿಯನ್ನು ನಿಮ್ಮ ಬೆಡ್ ರೂಮಿನಲ್ಲಿ ತಪ್ಪಾಗಿ ಇರಿಸಿದಲ್ಲಿ ಇದು ಋಣಾತ್ಮಕತೆಗೆ ಮತ್ತು ವೈಫಲ್ಯಕ್ಕೆ ಕಾರಣವಾಗುವುದು. ಅತ್ಯಂತ ಸರಳವಾದ ಪರಿಹಾರವೆಂದರೆ ರಾತ್ರಿಯ ವೇಳೆಯಲ್ಲಿ ಕನ್ನಡಿಯನ್ನು ಬಟ್ಟೆಯೊಂದಿಗೆ ಮುಚ್ಚುವುದಾಗಿದೆ.
- ಮನೆಯಲ್ಲಿ “ಮನೋರಂಜನೆಗೆ ಮೀಸಲಾದ” ಕೆಲವು ಸ್ಥಳಗಳಿರಬೇಕು. ಈ ಭಾಗವು ಕತ್ತರಿಸಲ್ಪಟ್ಟಿದ್ದರೆ ಅಥವಾ ದುರ್ಬಲವಾಗಿದ್ದರೆ ಅಥವಾ ಆಲೋಚನೆಯ ಪ್ರಕ್ರಿಯೆಗೆ ತೊಡಕಾಗುವಂತಿದ್ದರೆ ಇದು ಹಳೆಯ ನೆನಪುಗಳು ಮತ್ತು ಮಾನಸಿಕ ತೊಂದರೆಯುಂಟುಮಾಡುವ ಆಲೋಚನೆಗಳಿಗೆ ಕಾರಣವಾಗುತ್ತದೆ. ಈ ಸ್ಥಳದ ಪರಿಣಾಮವನ್ನು ಕಡಿಮೆಮಾಡುವುದಕ್ಕಾಗಿ ಹಲವಾರು ಪರಿಹಾರ ಕ್ರಮಗಳಿರುತ್ತವೆ.
- ವಾಸ್ತುವಿನ ಪ್ರಕಾರ ಮನೆಯಲ್ಲಿ ಒಂದು ಖಿನ್ನತೆಯ ವಲಯ ಕೂಡ ಇರುವುದು. ಈ ಸ್ಥಳದಲ್ಲಿ ನಿಮ್ಮ ಕುಟುಂಬದ ಫೋಟೊಗಳನ್ನು ಇರಿಸುವುದು ಖಿನ್ನತೆಗೆ ಹಾಗೂ ಕುಟುಂಬದಲ್ಲಿ ಕಲಹಗಳಿಗೆ ಕಾರಣವಾಗುವುದು.
ಇವು ಉದ್ಯೋಗ ಕಳೆದುಕೊಂಡ ಬಳಿಕ ಸನ್ನಿವೇಶವನ್ನು ಎದುರಿಸಲು ವಾಸ್ತುವು ಸಹಾಯ ಮಾಡಬಹುದಾದ ಸರಳವಾದ ವಿಧಾನಗಳೆಂದರೆ ಇವೇ ಆಗಿವೆ.









I need help regarding lost of my job in age 59 , worked hard without any complaints in service but no scope of action , hence decided to resign,, concerned official no action they order ed for release from job…….