vastu-sharata

ವಾಸ್ತುಶಾಸ್ತ್ರ, "ವಾಸ್ತುಶಿಲ್ಪದ ವಿಜ್ಞಾನ"

ವಾಸ್ತು ಶಾಸ್ತ್ರ ವು ಪ್ರಾಚೀನ ಭಾರತೀಯ ನಾಗರಿಕತೆಗಳು ಸಾವಿರಾರು ವರ್ಷಗಳಿಂದ ವ್ಯಾಪಕವಾಗಿ ಅಧ್ಯಯನ ಮಾಡಿರುವ ವಿಜ್ಞಾನ ಹಾಗೂ ಅದು ಪ್ರಮುಖವಾದ ವೈದಿಕ ವಿಜ್ಞಾನಗಳಲ್ಲಿ ಒಂದು ಭಾಗ. ವಾಸ್ತುಶಾಸ್ತ್ರದ ಜನನವು ಮನುಕುಲದ ಕಲ್ಯಾಣ ಮತ್ತು ಜೀವನದ ಸಮರ್ಥನೆಗಳ ಉದ್ದೇಶಗಳಿಂದ ಪ್ರೇರಣೆ ಪಡೆದಿರುವುದು.ಅದರ ಮೂಲ ಪದ “ವಾಸ” ವೆನ್ನುವುದರ ಅರ್ಥ “ವಾಸಿಸುವುದು, ಜೀವಿಸುವುದು, ಇರುವುದು, ಉಳಿಯುವುದು” ಎಂದು.

ವಾಸ್ತು ಶಾಸ್ತ್ರ ವು ದಿಕ್ಕುಗಳು, ಬ್ರಹ್ಮಾಂಡದ ಶಕ್ತಿಯ ವಿಜ್ಞಾನ, ಹಾಗೂ ಅದು ಮಾನವ ಜೀವನದ ಮೇಲೆ ಬ್ರಹ್ಮಾಂಡದ ಶಕ್ತಿಯು ಹೇಗೆ ಪರಿಣಾಮ ಬೀರುವುದು ಎಂಬುದನ್ನು ವಿವರಿಸುತ್ತದೆ. ವಾಸ್ತು ಶಾಸ್ತ್ರ ವು ಮನುಕುಲಕ್ಕೆ ಪರಿಸರದೊಡನೆ ಸಾಮರಸ್ಯದಿಂದ ಬದುಕುವುದು ಹೇಗೆಂದು ಕಲಿಸುವುದು.

ಪ್ರತಿ ಸ್ಥಳ ‒ ಅದು ಮನೆ, ಸಂಸ್ಥೆಯ ಕಛೇರಿ, ಕೈಗಾರಿಕೆ ಅಥವಾ ವಿದ್ಯಾ ಸಂಸ್ಥೆಗಳೇ ಆಗಿರಲಿ ‒ 8 ದಿಕ್ಕುಗಳನ್ನು ಹೊಂದಿರುತ್ತದೆ. ಅವುಗಳು ನಾಲ್ಕು ಮುಖ್ಯ ದಿಕ್ಕುಗಳು ಮತ್ತು ನಾಲ್ಕು ಮೂಲೆಗಳು. ಪ್ರತಿ ದಿಕ್ಕಿಗೂ ಒಂದು ಮಹತ್ವವಿರುವುದು, ಉದಾಹರಣೆಗಾಗಿ, ಯಾವುದೇ ಸ್ಥಳದ ಮುಖ್ಯ ಪ್ರವೇಶವು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಇದ್ದಲ್ಲಿ, ಅದು ಆ ಸ್ಥಳದಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಜನರು ಆರೋಗ್ಯ, ಸಂಪತ್ತು, ಸಂವಹನ (ಸಂಬಂಧಗಳು), ಇತ್ಯಾದಿಗಳ ವಿಷಯಗಳಲ್ಲಿ ಕೆಲವೊಂದು ಸಾಮರ್ಥ್ಯಗಳನ್ನು ಉಳ್ಳವರು ಎಂಬುದನ್ನು ಸೂಚಿಸುತ್ತದೆ.

ದಿಕ್ಕುಗಳು

ಒಟ್ಟಾಗಿ, 8 ದಿಕ್ಕುಗಳಿರುವವು, ಹಾಗೂ ಅವುಗಳಲ್ಲಿ ಪ್ರತಿಯೊಂದರ ಕೇಂದ್ರಭಾಗವು 45 ಕೋನಾಂಶಗಳಿಂದ (ಡಿಗ್ರಿಗಳಿಂದ) ಬೇರ್ಪಟ್ಟಿರುವುದು, ಎಂದರೆ, ಅದರ ಅರ್ಥ, ಪ್ರತಿ ದಿಕ್ಕು 45 ಕೋನಾಂಶಗಳನ್ನು ವ್ಯಾಪಿಸುವುದು ಎಂದು.

ಗಡಿಯಾರದ ಮುಳ್ಳು ತಿರುಗುವ ಆಕಾರದಲ್ಲಿ, ಈ ದಿಕ್ಕುಗಳು ಇಂತಿವೆ:

1. ಉತ್ತರ – उत्तर
2. ಉತ್ತರ ಪೂರ್ವ (ಈಶಾನ್ಯ) – ऐशानी
3. ಪೂರ್ವ – पूर्वा
4. ದಕ್ಷಿಣ ಪೂರ್ವ (ಆಗ್ನೇಯ) – आग्नेयी
5. ದಕ್ಷಿಣ – दक्षिणा
6. ದಕ್ಷಿಣ ಪಶ್ಚಿಮ (ನೈರುತ್ಯ) – नैर्ॠता
7. ಪಶ್ಚಿಮ – पश्चिमा
8. ಉತ್ತರ ಪಶ್ಚಿಮ (ವಾಯವ್ಯ) – वायव्या

 

ದಿಕ್ಕುಗಳನ್ನು ಕಂಡುಹಿಡಿಯಲು ದಿಕ್ಸೂಚಿಯನ್ನು ಹೇಗೆ ಬಳಸುವುದು

  • ದಿಕ್ಸೂಚಿಯನ್ನು ನಿಮ್ಮ ಹಸ್ತದ ಮಧ್ಯಭಾಗದಲ್ಲಿರಿಸಿ, ಹಾಗೂ ದಿಕ್ಸೂಚಿಯು ಓರೆಯಾಗದಂತೆ ಹಿಡಿಯಿರಿ.
  • ದಿಕ್ಸೂಚಿಯ ಕೆಂಪು ಮುಳ್ಳು ಉತ್ತರ ದಿಕ್ಕಿಗೆ ನಿಖರವಾಗಿ ತೋರುವವರೆಗೂ ದಿಕ್ಸೂಚಿಯನ್ನು ತಿರುಗಿಸಿ.