ಸರಳ ವಾಸ್ತುವು ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುವ ಮೂಲಕ ದೇಹದ ಧನಾತ್ಮಕ ಶಕ್ತಿ ಯನ್ನು ಹೆಚ್ಚಿಸುವುದಕ್ಕೆ ಸಹಾಯಮಾಡುತ್ತದೆ.

ನಮ್ಮ ಸುತ್ತಲಿನ ನಿಸರ್ಗ ಅಥವಾ ಪರಿಸರವು ನಾವು ತಿಳಿದಿರುವಂತೆಯೇ ಶಕ್ತಿಯಿಂದ ತುಂಬಿದೆ. ಈ ಶಕ್ತಿಯನ್ನು ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಗಳೆಂದು ವಿಂಗಡಿಸಬಹುದು. ಸರಳ ವಾಸ್ತುವು ಋಣಾತ್ಮಕ ಶಕ್ತಿಯನ್ನು ಉಂಟುಮಾಡುವ ಅಭ್ಯಾಸಗಳನ್ನು ತಗ್ಗಿಸುವ ಅಥವಾ ಸಂಪೂರ್ಣವಾಗಿ ಇಲ್ಲದಂತೆ ಮಾಡುವ ಹಾಗೂ ಎಲ್ಲೆಡೆ ಧನಾತ್ಮಕ ಶಕ್ತಿ ಯನ್ನು ಹೆಚ್ಚಿಸುವ ಕಾರ್ಯಗಳನ್ನು ಮಾಡುವ ರೂಢಿಗಳನ್ನು ಪಾಲಿಸುವುದನ್ನು ಒಳಗೊಂಡಿದೆ. ಮನೆಯಲ್ಲಿ ಧನಾತ್ಮಕ ಶಕ್ತಿ ಯು ತುಂಬಲು ಸರಳವಾದ, ಸುಲಭವಾಗಿ ಅಳವಡಿಸಿಕೊಳ್ಳುವುದಕ್ಕೆ ಸಾಧ್ಯವಿರುವ, ಸಂಪೂರ್ಣ ಸೂಕ್ತವಾದ ಪರಿವರ್ತನೆಗಳು ಹಾಗೂ ಬದಲಾವಣೆಗಳನ್ನು ಸರಳ ವಾಸ್ತುವಿನ ಪ್ರಕಾರ ಸಲಹೆ ಮಾಡಲಾಗುತ್ತದೆ. ಅಂತಹ ರೂಢಿಗಳನ್ನು ಬಳಸಿಕೊಂಡಿರುವ ಮನೆಯಲ್ಲಿ ವಾಸಿಸುವ ಜನರಿಗೆ ಆರೋಗ್ಯ, ಸಂಪತ್ತು ಹಾಗೂ ಶಾಂತಿಯುತ ಜೀವನದಂತಹ ಪ್ರಯೋಜನಗಳು ಸಾಧ್ಯವಾಗುತ್ತವೆ. ಸರಳ ವಾಸ್ತುವಿನ ಪ್ರಕಾರ ಸಲಹೆ ಮಾಡಲಾಗುತ್ತದೆ. ಅಂತಹ ರೂಢಿಗಳನ್ನು ಬಳಸಿಕೊಂಡಿರುವ ಮನೆಯಲ್ಲಿ ವಾಸಿಸುವ ಜನರಿಗೆ ಆರೋಗ್ಯ, ಸಂಪತ್ತು ಹಾಗೂ ಶಾಂತಿಯುತ ಜೀವನದಂತಹ ಪ್ರಯೋಜನಗಳು ಸಾಧ್ಯವಾಗುತ್ತವೆ.

ಇಂದು ನಾವು ನಮ್ಮ ಸುತ್ತಲೂ ಋಣಾತ್ಮಕ ಶಕ್ತಿಯು ಪ್ರವಹಿಸುವುದನ್ನು ಕಡಿಮೆ ಮಾಡುವುದಕ್ಕೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲು ಯೋಚಿಸಬೇಕು. ನಾವು ಆಧುನಿಕ ಫ್ಲಾಟ್‌ಗಳು ಹಾಗೂ ಅಪಾರ್ಟ್‌ಮೆಂಟುಗಳಲ್ಲಿ ಬದುಕುತ್ತಿರುವಾಗ ನಿಜ ಜೀವನದ ವಾಸ್ತವಿಕತೆಗಳಿಂದ ಹೊರಬರುವುದು ಸಾಧ್ಯವಿರುವುದಿಲ್ಲ, ಏಕೆಂದರೆ ನಮ್ಮಿಂದ ಕಟ್ಟಡದ ಬದಲಾವಣೆ ಮಾಡುವುದು ಸಾಧ್ಯವಿರುವುದಿಲ್ಲ. ಆದರೆ ಸರಳ ವಾಸ್ತುವಿನ ಕಲ್ಪನೆಗಳು ಮತ್ತು ತತ್ವಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ನಮ್ಮಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ, ಇದರಿಂದ ನಮ್ಮ ಕುಟುಂಬದ ಸದಸ್ಯರು ಆರೋಗ್ಯಕರ, ಶಾಂತಿಯುತ ಮತ್ತು ಸಮೃದ್ಧಿಯ ಜೀವನವನ್ನು ಜೀವಿಸಬಹುದು. ಸರಳ ವಾಸ್ತುವಿನ ಸುಲಭ, ನಯವಾದ ಹಾಗೂ ದೋಷವಿಲ್ಲದ ವೈಜ್ಞಾನಿಕ ಪರಿಹಾರಗಳು ಮಾನವತೆಯ ಒಳ್ಳೆಯದಕ್ಕಾಗಿಯೇ ಇರುತ್ತವೆ ಮತ್ತು ಇಲ್ಲಿ ಬೇಸರಿಸಲು ಕಾರಣವೇ ಇರುವುದಿಲ್ಲ. ಮೊದಲಿನಿಂದಲೂ ಯಾವುದೇ ಬೇಧ-ಭಾವವಿಲ್ಲದೇ ಎಲ್ಲ ಮಾನವರು ಸರಳ ವಾಸ್ತುವಿನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರ ಪ್ರಯೋಜನವನ್ನು ಸಂತೋಷ, ಸಮೃದ್ಧಿ, ಶಾಂತಿ ಮತ್ತು ನೆಮ್ಮದಿಗಳ ರೂಪದಲ್ಲಿ ಪಡೆದು ಅವರ ಅಪೇಕ್ಷೆಗಳನ್ನು ತಮ್ಮ ಜೀವನದಲ್ಲಿ ಸಾಧಿಸುವಂತಾಗಲಿ ಎನ್ನುವುದು ಡಾ. ಶ್ರೀ ಚಂದ್ರಶೇಖರ ಗುರೂಜಿಯವರ ಆಕಾಂಕ್ಷೆಯಾಗಿದೆ.