ನಿಮ್ಮ ಶಿಕ್ಷಣದ ಮೇಲೆ ವಾಸ್ತು ಯಾವ ಪರಿಣಾಮವನ್ನು ಬೀರುವುದು?

ಭಯಂಕರ ಸ್ಪರ್ಧೆಯುಳ್ಳ ಇಂದಿನ ಜಗತ್ತಿನಲ್ಲಿ ತಮ್ಮ ಮಕ್ಳಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪ್ರತಿ ಪೋಷಕರು ಅಥವಾ ಪಾಲಕರು ಕಳವಳ ಹೊಂದಿರುವುದು ತುಂಬ ಸಹಜ. ತಮ್ಮ ಸಂಬಂಧಿತ ಪರೀಕ್ಷೆಗಳಲ್ಲಿ ಯಶಸ್ಸು ಸಂಪಾದಿಸುವುದಕ್ಕಾಗಿ ಅಥವಾ ಹೆಚ್ಚಿನ ಕಲಿಕೆಯ ಪ್ರತಿಷ್ಠಿತ ಶಾಲೆಗಳಿಗೆ, ಕಾಲೇಜುಗಳಿಗೆ ಅಥವಾ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದಕ್ಕಾಗಿ ಪ್ರತಿ ವಿದ್ಯಾರ್ಥಿ ಕೂಡ ಅತ್ಯಧಿಕ ಅಂಕಗಳನ್ನು ಸಂಪಾದಿಸಲು ಬಯಸುತ್ತಾರೆ. ಈ ಹೆಗ್ಗಣದ ಓಟದಲ್ಲಿ ಹಲವರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಹೆಚ್ಚಿನವರು ಯಶಸ್ಸು ಸಂಪಾದಿಸುವುದೇ ಇಲ್ಲ ಮತ್ತು ಅವಮಾನಕಾರಿ ರೀತಿಯಲ್ಲಿ ಸೋಲುಣ್ಣುತ್ತಾರೆ.

ಇದು ವಿಫಲರಾದ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯಾ ಭಾವನೆಗಳನ್ನು, ಖಿನ್ನತೆ, ನಿದ್ರಾಹೀನತೆ ಹಾಗೂ ಅಸಹಾಯಕತೆಯ ಭಾವನೆಗಳನ್ನು ಮೂಡಿಸುವುದು. ಕಲಿಕೆಯಲ್ಲಿ ತಮ್ಮದೇ ಮಟ್ಟದಲ್ಲಿ ಪೂರ್ಣವಾದ ಯಶಸ್ಸು ಸಂಪಾದಿಸುವುದೇ ಪ್ರತಿಯೊಬ್ಬ ವಿದ್ಯಾರ್ಥಿಯ ಮಹತ್ವಾಕಾಂಕ್ಷೆ ಹಾಗೂ ಗುರಿಯಾಗಿರುತ್ತದೆ.

ಮನೆ ಮತ್ತು ಕೆಲಸದ ಸ್ಥಳದಲ್ಲಿ ಶೈಕ್ಷಣಿಕ ಸಮಸ್ಯೆಗಳಿರುತ್ತವೆ

ಪ್ರತಿ ಮನೆ ಮತ್ತು ಕೆಲಸದ ಸ್ಥಳವೂ ‘ವಿದ್ಯಾ ಸ್ಥಾನ’ವನ್ನು ಹೊಂದಿರುವುದು. ಕೆಲವು ಸಲ ಶಿಕ್ಷಣಕ್ಕಾಗಿ ವಾಸ್ತು ಸ್ಥಳವು ಮನೆ ಅಥವಾ ಕೆಲಸದ ಸ್ಥಳದಲ್ಲಿ ಇರುವುದೇ ಇಲ್ಲ. ಮನೆಯಲ್ಲಿ ಶಿಕ್ಷಣಕ್ಕಾಗಿ ವಾಸ್ತು ಸ್ಥಳವು ಇದ್ದರೂ ಸ್ನಾನದ ಕೋಣೆ, ಶೌಚಾಲಯ ಅಥವಾ ಯುಟಿಲಿಟಿ ರೂಂಗಳಿಂದಾಗಿ ಅದು ನಿರ್ಬಂಧಿತಗೊಂಡಿರಬಹುದು. ಶೈಕ್ಷಣಿಕ ವಿಚಾರಗಳು ತನ್ನಿಂತಾನೆ ತಲೆಯೆತ್ತಲಾರಂಭಿಸುತ್ತವೆ ಮತ್ತು ಅತ್ಯಂತ ದುರ್ಬಲರಾದ ಮಕ್ಕಳು ಇದರಿಂದ ಪ್ರಭಾವಿತರಾಗುತ್ತಾರೆ.

ಪ್ರತಿಯೊಂದು ಮನೆ ಅಥವಾ ಕೆಲಸದ ಸ್ಥಳವೂ ಶಿಕ್ಷಣದ ಸ್ಥಳವನ್ನು ಹೊಂದಿರುವುದು. ಶೈಕ್ಷಣಿಕ ಸ್ಥಳದ ಮೇಲೆ ಪರಿಣಾಮವುಂಟಾದಲ್ಲಿ ತನ್ನಿಂತಾನೆ ಮಕ್ಕಳ ಶಿಕ್ಷಣದಲ್ಲಿ ಸಮಸ್ಯೆಗಳುಂಟಾಗುತ್ತವೆ.

ಮಕ್ಕಳು ಅವರಿಗೆ ಅಶುಭಕರವಾದ ದಿಕ್ಕನ್ನು, ಅವರಿಗೆ ಅರಿವಿಲ್ಲದೇ ಅನುಸರಿಸಿದಾಗ 7 ಚಕ್ರಗಳು ಬಾಧಿತಗೊಳ್ಳುವವು, ಇದು ಶಿಕ್ಷಣದಲ್ಲಿ ಸಮಸ್ಯೆಗಳು, ಏಕಾಗ್ರತೆಯಲ್ಲಿ ಕೊರತೆ, ಸ್ಮರಣಶಕ್ತಿ ನಷ್ಟ, ಮಾನಸಿಕ ಒತ್ತಡ ಇತ್ಯಾದಿಗೆ ಕಾರಣವಾಗುವುದು.

ಮನೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಂರಚನೆ ಅಥವಾ ವಾಡಿಕೆಯ ಚಟುವಟಿಕೆಗಳ ಮೇಲೆ ಪರಿಣಾಮವುಂಟಾಗುವುದು ಮತ್ತು ಅವರು ಎಷ್ಟೇ ಪ್ರಯತ್ನಿಸಿದರೂ ಅಧ್ಯಯನಗಳಲ್ಲಿ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ.

ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಂದ ಪರೀಕ್ಷೆಗಳ ಸಂದರ್ಭಗಳಲ್ಲಿ ಅವರು ಓದಿದ ವಿಷಯಗಳನ್ನು ಉಳಿಸಿಕೊಳ್ಳಳು ಮತ್ತು ನೆನಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಮಕ್ಕಳಿಗೆ ತಮ್ಮ ಅಧ್ಯಯನಗಳಲ್ಲಿ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರ ನೆನಪಿನ ಶಕ್ತಿಯು ಕಡಿಮೆಯಾಗುವುದು.

ಮಕ್ಕಳಿಂದ ವಿಷಯದ ತತ್ವಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕುಟುಂಬದ ಪೋಷಣೆಯನ್ನು ಮಾಡುವ ವ್ಯಕ್ತಿಯಿಂದ ಕೂಡ ತನ್ನ ಜ್ಞಾನವನ್ನು ಹಾಗೂ ಜಾಣ್ಮೆಯನ್ನು ಬಳಕೆಮಾಡಲು ಆಗುವುದಿಲ್ಲ. ಹೀಗಾಗಿ ಇದು ಕುಟುಂಬದ ಆದಾಯ ಸಂಪಾದನೆಯ ನಷ್ಟಕ್ಕೆ, ಅಂತೆಯೇ ಕೆಲಸದಲ್ಲಿ ಹಿಂಬಡ್ತಿಗೆ ಕಾರಣವಾಗುವುದು. ಮೇಲಧಿಕಾರಿಗಳಿಂದ ಅಪೇಕ್ಷಿತ ಬೆಂಬಲ ದೊರೆಯುವುದಿಲ್ಲ.

ಮನೆಯ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಪಡೆಯುವಲ್ಲಿ ಸರಳವಾಸ್ತು ಹೇಗೆ ಸಹಾಯಮಾಡುವುದು?

ಯಾವುದೇ ಒಡೆಯುವಿಕೆಗಳು ಅಥವಾ ಮಾರ್ಪಾಟುಗಳನ್ನು ಮಾಡದೆಯೇ ಸರಳ ಶಿಕ್ಷಣಕ್ಕಾಗಿ ವಾಸ್ತು ಮನೆಯಲ್ಲಿನ ಅಥವಾ ಕೆಲಸದ ಸ್ಥಳದಲ್ಲಿನ ಬಾಧಿತ ಶೈಕ್ಷಣಿಕ ಸ್ಥಳವನ್ನು ಸರಿಪಡಿಸಲು ಸಲಹೆಗಳನ್ನು ಒದಗಿಸುವುದು.

ಸರಳ ವಾಸ್ತುವ ಅತ್ಯುತ್ತಮ ‘ಅಧ್ಯಯನ ದಿಕ್ಕನ್ನು’ ಮತ್ತು ‘ಉತ್ತಮ ನಿದ್ರೆಯ ದಿಕ್ಕನ್ನು’ ಸಲಹೆಮಾಡುವ ಮೂಲಕ ಏಕಾಗ್ರತೆ ಹಾಗೂ ಸ್ಮರಣಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವುದು.

‘ಉಳಿಸಿಕೊಳ್ಳುವ ಶಕ್ತಿಯು’ 7 ಚಕ್ರಗಳನ್ನು ಸಕ್ರಿಯಗೊಳಿಸುವುದರಿಂದ ಸುಧಾರಣೆಯನ್ನು ಕೂಡ ಪಡೆಯುವುದು. ಮಕ್ಕಳು ಯಾವುದೇ ತೊಂದರೆಯೂ ಇಲ್ಲದೇ ಸತತವಾಗಿ 2-3 ಗಂಟೆಗಳ ಕಾಲ ಚೆನ್ನಾಗಿ ಕುಳಿತುಕೊಳ್ಳಬಹುದು ಮತ್ತು ಅಧ್ಯಯನಗಳ ಎಲ್ಲಾ ಮಹತ್ವದ ತತ್ವಗಳನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬಹುದು.