ಸರಳ ಜೀವನ ಟಿವಿ ಚಾನೆಲ್ ಈಗ ಟಾಟಾ ಸ್ಕೈ ಚಾನಲ್ ನಂ. 1641ರಲ್ಲಿ ಲಭ್ಯವಿದೆ

ಸರಳ ಜೀವನ ನೇರ ಪ್ರಸಾರ

ಸರಳ ಜೀವನ ಕಾಲ್ಪನಿಕವಲ್ಲದ, ಪುರಾಣ, ಇತಿಹಾಸ, ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯಿಂದ ಆಯ್ದ ಒಳನೋಟಗಳ ಮೇಲೆ ಕೇಂದ್ರೀಕೃತವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ.

ನಮ್ಮ ಹಿರಿಯರ ಕಾಲದಿಂದ ನಡೆದು ಬಂದಂತಹ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ಅವುಗಳನ್ನು ಹೆಚ್ಚು ಪ್ರಚುರಪಡಿಸುವ ಉದ್ದೇಶದಿಂದ ಮತ್ತು ನಮ್ಮ ಸಾಂಸ್ಕೃತಿಕ ಅಭ್ಯಾಸಗಳ ಪ್ರಾಮುಖ್ಯತೆಯನ್ನು ಇಂದಿನ ಪೀಳಿಗೆಗೆ ಒಯ್ಯುವ ಗುರಿಯಿಂದ ಸರಳ ಜೀವನದ ಅಂಶಗಳು ಪುರಾಣ, ಆಯುರ್ವೇದ, ಯೋಗ, ಮತ್ತು ವಾಸ್ತು ವಿಜ್ಞಾನ ಮತ್ತು ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸದ ಒಳನೋಟಗಳನ್ನು ಒಳಗೊಳ್ಳುತ್ತವೆ. ಹಿಂದಿನ ಕಾಲದ ಮಾಹಿತಿಯನ್ನು ಇನ್ಫೊಟೇನ್‌ಮೆಂಟ್ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ತೋರಿಸಲಾಗುವ ಕಾರ್ಯಕ್ರಮಗಳು ವೈವಿಧ್ಯಮಯ, ವಿಶಿಷ್ಟ, ಮಾಹಿತಿಭರಿತ ಹಾಗು ಮನರಂಜನೀಯವಾಗಿರುತ್ತವೆ. ಸರಳ ಜೀವನ ದ ಕಾರ್ಯಕ್ರಮಗಳನ್ನು ಮಕ್ಕಳಿಂದ ಹಿರಿಯರವರೆಗೆ ಎಲ್ಲಾ ವಯಸ್ಸಿನವರನ್ನೂ ಗಮನದಲ್ಲಿರಿಸಿಕೊಂಡು ಪ್ರಸ್ತುತ ಪಡಿಸಲಾಗುತ್ತದೆ.

ಸರಳ ಜೀವನ ಕಾರ್ಯಕ್ರಮಗಳ ವಿಡಿಯೋಗಳು