ಕಾರ್ಪೊರೇಟ್ಗಳ ಮೇಲೆ ವಾಸ್ತು ಯಾವ ಪರಿಣಾಮ ಬೀರುವುದು?
corporates

ವ್ಯವಹಾರದ ಜಗತ್ತು ಮತ್ತು ವಾಣಿಜ್ಯವು ಕ್ಲಿಷ್ಟ ಸನ್ನಿವೇಶಗಳಲ್ಲಿ ತನ್ನ ಉಳಿವಿಗಾಗಿ ಲಾಭಗಳನ್ನೇ ಅವಲಂಬಿಸಿರುತ್ತದೆ. ವ್ಯವಹಾರಸ್ಥರು ವಿಶೇಷವಾಗಿ ಮೊದಲ ಸಲ ಉದ್ಯಮವನ್ನು ಪ್ರಾರಂಭಿಸುವವರು ತಮ್ಮ ಆಲೋಚನೆಗಳಿಗೆ ಸೂಕ್ತವಾದ ಸಂಪನ್ಮೂಲಗಳನ್ನು ಕಂಡುಕೊಳ್ಳಲು ಹೆಣಗುತ್ತಾರೆ ಮತ್ತು ಯಶಸ್ವಿಯಾದರೂ ಸಹ ವಾಣಿಜ್ಯ ನಡೆಸುವುದು ಮತ್ತು ಅಧಿಕ ಬಡ್ಡಿದರಗಳನ್ನು ತಾಳಿಕೊಂಡು ಹೋಗುವ ಮೂಲಕ ತಮ್ಮ ಆರಂಭಿಕ ಉದ್ಯಮವನ್ನು ಲಾಭಕ್ಕೆ ತರುವುದು ಅವರಿಗೆ ಮಹತ್ವದ ಹೋರಾಟವಾಗಿರುವುದು. ಸಂಶಯ, ಹತಾಶೆ ಮತ್ತು ಆತ್ಮವಿಶ್ವಾಸದ ಕೊರತೆಯು ಅವರ ಕೆಲಸದ ಲಕ್ಷಣಗಳಾಗಿವೆ, ಅವರು ಪ್ರತಿದಿನದ ಆಧಾರದ ಮೇಲೆ ಇದಕ್ಕೆ ಒಗ್ಗಿಹೋಗಿರುತ್ತಾರೆ. ಸರಳ ವಾಸ್ತು ತತ್ವಗಳನ್ನು ಅಳವಡಿಸಿಕೊಂಡಲ್ಲಿ ಹಸ್ತಲಾಘವ ಅಥವಾ ಉತ್ತಮ ಅದೃಷ್ಟ ಅವರಿಗಾಗಿ ಕಾಯ್ದಿರುವುದು. ಅವರ ಕೆಲಸದ ಸ್ಥಳ ಅಥವಾ ಉದ್ಯಮ (ಕಾರ್ಖಾನೆಗಳು) ಇತ್ಯಾದಿಯ ಸೂಕ್ತ ಸಮೀಕ್ಷೆಯು ” ಕಾರ್ಪೊರೇಟ್ಗಳಿಗಾಗಿ ವಾಸ್ತು ” ವಿನ ಸರಳ ವಾಸ್ತು ತತ್ವಗಳ ಬಳಕೆಯ ಮೂಲಕ ಅವರಿಗೆ ನಿಸ್ಸಂಶಯವಾಗಿ ಮತ್ತು ಸಂಶಯಾತೀತವಾಗಿ ಅತ್ಯಂತ ಅಗತ್ಯವಾದ ಯಶಸ್ಸಿನ ಮರುದೃಢೀಕರಣವನ್ನು ನೀಡುವುದು.

ವೈವಿಧ್ಯಮಯ ಕೆಲಸದ ಪರಿಸರಕ್ಕಾಗಿ ಕಾರ್ಪೊರೇಟ್ಗಳಿಗಾಗಿ ವಾಸ್ತು

ಒಂದು ವಿಭಾಗದ, ಕಂಪನಿ ನಿರ್ದೇಶಕರ ಮತ್ತು ಸಿಬ್ಬಂದಿಯ ಪ್ರಮುಖ ಸದಸ್ಯರ ಸ್ಥಿತಿ, ಕುಳಿತುಕೊಳ್ಳುವ ಸ್ಥಳಗಳು ಹಾಗೂ ದಿಕ್ಕುಗಳನ್ನು ತೀರ್ಮಾನಿಸುವ ಮೂಲಕ ಸರಳ ವಾಸ್ತುವು ಕಾರ್ಪೊರೇಟ್ಗಳಿಗಾಗಿ ವಾಸ್ತು ಅತ್ಯುತ್ತಮ ವಿಧಾನಗಳನ್ನು ಒದಗಿಸುತ್ತದೆ ಮತ್ತು ಗಮನಾರ್ಹವಾದ ಧನಾತ್ಮಕ ಶಕ್ತಿಯನ್ನು ಒದಗಿಸುತ್ತದೆ.

ಆಯಾ ಸಂಸ್ಥೆಗಳ ಪ್ರಸಕ್ತ ಯೋಜನೆಯಲ್ಲಿ ಯಾವುದೇ ರಚನಾತ್ಮಕ ಬದಲಾವಣೆಗಳನ್ನಾಗಲಿ ಅಥವಾ ಮರುಪ್ರಗತಿಗಳನ್ನಾಗಲಿ ಕೈಗೊಳ್ಳದೇ ಕಾರ್ಯಸ್ಥಳ ಅಥವಾ ಘಟಕದ ಕೆಲಸದ ವಾತಾವರಣದಲ್ಲಿ ವ್ಯವಹಾರಸ್ಥರು ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡಬಹುದು. ಆವರಣದಲ್ಲಿರುವ ಮಹತ್ವದ ಸ್ಥಳಗಳಿಗಾಗಿ ಅವರು ನೆಚ್ಚಿನ ದಿಕ್ಕನ್ನು ಅನುಸರಿಸುವುದು ಅಗತ್ಯವಾಗುತ್ತದೆ. ಪ್ರಮುಖ ಸಿಬ್ಬಂದಿ ಸದಸ್ಯರು ಕುಳಿತುಕೊಳ್ಳುವ ಸ್ಥಳಗಳು, ಹಣಕಾಸು, ಮಾನವ ಸಂಪನ್ಮೂಲ, ಗ್ರಾಹಕ ಸೇವೆ ಮುಂತಾದ ಪ್ರಮುಖ ವಿಭಾಗಗಳ ಸ್ಥಿತಿಗಳನ್ನು ಸಂಸ್ಥೆಗಳು ತತ್ವಗಳ ” ಕಾರ್ಪೊರೇಟ್ಗಳಿಗಾಗಿ ವಾಸ್ತು ” ವಿನ ಪ್ರಕಾರ ಯೋಜಿಸಬೇಕು. ಇದು ಕಚೇರಿಯಲ್ಲಿರುವ ಪ್ರಮುಖ ಶಕ್ತಿಕೇಂದ್ರಗಳನ್ನು ಪರಿಗಣಿಸುವ ಮೂಲಕ ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡುವುದು, ಈ ಮೂಲಕ ಧನಾತ್ಮಕತೆಯ ಅಲೆಗಳನ್ನು ಅತ್ಯಂತ ವೈವಿಧ್ಯಮಯ, ಉತ್ಸಾಹಿಯಾದ ಮತ್ತು ಖುಷಿದಾಯಕ ಕೆಲಸದ ಪರಿಸರವನ್ನು ಒದಗಿಸುವಲ್ಲಿ ಬಳಸಿಕೊಳ್ಳುವುದು. ಉತ್ಸಾಹಿ ಕೆಲಸದ ಪರಿಸರವು ಮಾನವ ಸಂಪನ್ಮೂಲಗಳ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಕಂಪನಿಯು ಹೆಚ್ಚು ಪರಿಣಾಮಕಾರಿಯಾದ ಉತ್ಪಾದನೆ ಪ್ರಕ್ರಿಯೆಗೆ ಹಾಗೂ ತನ್ನ ಗ್ರಾಹಕರಿಗೆ ಹಾಗೂ ಗಿರಾಕಿಗಳಿಗೆ ಸೇವೆಗಳನ್ನು ಸಲ್ಲಿಸುವುದಕ್ಕೆ ಕಾರಣವಾಗುವುದು.