ನಿಮ್ಮ ವಿವಾಹದ ಮೇಲೆ ವಾಸ್ತು ಯಾವ ಪರಿಣಾಮ ಬೀರುವುದು?

ಸರಳ ವಾಸ್ತುವಿನಿಂದ ಸಂಬಂಧಕ್ಕಾಗಿ ವಾಸ್ತು ಎಂಬುದು ಹಲವಾರು ವರ್ಷಗಳ ಅಧ್ಯಯನದ ಬಳಿಕ ಡಾ. ಶ್ರೀ ಚಂದ್ರಶೇಖರ ಗುರೂಜಿ ಅವರು ಸಂಶೋಧಿಸಿರುವ ವಿಶಿಷ್ಟ ಮತ್ತು ವೈಜ್ಞಾನಿಕವಾದ ವಾಸ್ತು ಪರಿಹಾರವಾಗಿದೆ. ಕುಟುಂಬದ ಸದಸ್ಯರುಗಳ, ಕಚೇರಿಯ ಸಹೋದ್ಯೋಗಿಗಳ ಅಥವಾ ವ್ಯವಹಾರ ಪಾಲುದಾರರ ನಡುವಿನ ಸಂಬಂಧಗಳು ಅವರ ಮನೆ, ಕಚೇರಿ ಮತ್ತು ವ್ಯವಹಾರ ಸ್ಥಳಗಳ, ಪ್ರಾಥಮಿಕವಾಗಿ ವಾಸದ ಮತ್ತು ಕೆಲಸದ ಸ್ಥಳದ ಸುತ್ತಲಿನ ಶಕ್ತಿಯ ಹರಿವಿನ ಪ್ರಭಾವಕ್ಕೊಳಗಾಗುತ್ತದೆ.

ನಮ್ಮ ಸಾಂಪ್ರದಾಯಿಕ ಕೌಟುಂಬಿಕ ಸಂರಚನೆಯ, ಸಂಬಂಧಗಳ ಅತ್ಯಂತ ಪ್ರಮುಖವಾದ ಭಾಗವು ಗಂಡ ಮತ್ತು ಹೆಂಡತಿಯಿಂದ ಪ್ರಾರಂಭಿಸಿ ಒಡಹುಟ್ಟಿದವರು, ಚಿಕ್ಕಪ್ಪ ಚಿಕ್ಕಮ್ಮಂದಿರು, ನಿಕಟ ಸ್ನೇಹಿತರು, ನೆರೆಹೊರೆಯವರು ಹೀಗೆ ಎಷ್ಟೇ ಭಿನ್ನವಾಗಿದ್ದರೂ ನಮ್ಮ ದೈನಂದಿನ ಜೀವನದಲ್ಲಿ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ನಮ್ಮ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಆದರೆ ಇಂದಿನ ಜಗತ್ತಿನಲ್ಲಿ ಸಂಬಂಧಗಳಲ್ಲಿನ ಹಲವಾರು ಪ್ರಕರಣಗಳಲ್ಲಿ ವಿಚ್ಛೇದನ ಮತ್ತು ಪ್ರತ್ಯೇಕಗೊಳ್ಳುವಿಕೆಗೆ ಕಾರಣವಾಗುವ ಹಾಗೂ ಮಕ್ಕಳ ತೊಂದರೆಗಳನ್ನು ಕಾಣುತ್ತೇವೆ. ಇದು ಸಮಾಜದಲ್ಲಿ ತುಂಬಾ ಅಸಂಘಟಿತತೆ ಮತ್ತು ಕಳವಳಕ್ಕೆ ಕಾರಣವಾಗಿದೆ.

ವೈವಾಹಿಕ ವಿಳಂಬಗಳು ಅಥವಾ ವಿವಾಹಗಳಲ್ಲಿ ಒಡಕುಂಟುಮಾಡುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ವಾಸ್ತುವಿನ ಮಹತ್ವ

ಪ್ರತಿಯೊಂದು ಮನೆ ಅಥವಾ ಕೆಲಸದ ಸ್ಥಳವೂ ಸಂಬಂಧದ ಸ್ಥಳವನ್ನು ಹೊಂದಿರುವುದು. ಸಂಬಂಧದ ಸ್ಥಳವು ಟಾಯ್ಲೆಟ್ ಅಥವಾ ಬಾತ್ ರೂಂ ಮತ್ತು ಯುಟಿಲಿಟಿಗಳಿಂದ ಸಮಸ್ಯೆಗೊಳಗಾಗಿದ್ದಲ್ಲಿ ಮೇಲೆ ಹೇಳಿರುವಂತೆ ವೈವಾಹಿಕ ಸಂಬಂಧಗಳನ್ನು ಬೆಸೆಯುವಲ್ಲಿ ಸಮಸ್ಯೆಯುಂಟಾಗುವುದು.

ಒಬ್ಬ ಪವಿತ್ರ ವ್ಯಕ್ತಿ ಅಥವಾ ಸಂತ ಅಥವಾ ಯಾವುದೇ ‘ಅವತಾರಗಳ’ (ಅವಿವಾಹಿತ) ಚಿತ್ರವನ್ನು ಹಜಾರ ಅಥವಾ ಮಲಗುವ ಕೊಠೆಡಿಯಲ್ಲಿ ಇರಿಸಿದಲ್ಲಿ ಇದು ವೈವಾಹಿಕ ಸಂಬಂಧಗಳನ್ನು ಬೆಸೆಯುವಲ್ಲಿ ಅನಿರೀಕ್ಷಿತ ವಿಳಂಬಗಳು ಮತ್ತು ಒಡಕುಗಳಿಗೆ ಕಾರಣವಾಗುವುದು. ಸರಳ ವಾಸ್ತು ಪರಿಹಾರಗಳ ಪ್ರಕಾರ ಮಲಗುವ ಕೊಠಡಿಯ ವಾಸ್ತುವಿನೊಂದಿಗೆ ನೀವು ನಿಮ್ಮ ವೈವಾಹಿಕ ಜೀವನವನ್ನು ಸುಧಾರಿಸಿಕೊಳ್ಳಬಹುದು.

ಪದೇ ಪದೇ ನೋಡಲು ಬರುತ್ತಿದ್ದರೂ ವಧುವಿಗೆ ಸೂಕ್ತ ವೈವಾಹಿಕ ಸಂಗಾತಿ ದೊರೆಯುವುದಿಲ್ಲ. ಇದಕ್ಕೆ ಪ್ರಾಯಶಃ ಆಕೆ ವಧುವನ್ನು ನೋಡುವ ಸಂದರ್ಭದಲ್ಲಿ ಸರಿಯಾದ ದಿಕ್ಕಿಗೆ ಕುಳಿತುಕೊಳ್ಳದೇ ಇರುವುದು ಕಾರಣವಾಗಿರಬಹುದು. ಇದು ವೈವಾಹಿಕ ಪ್ರಸ್ತಾಪಗಳ ಬಗ್ಗೆ ಒಪ್ಪಿಗೆ ನೀಡದಿರಲು ಕಾರಣವಾಗಿರಬಹುದು.

ಭಾವೀ ವಧುವಿನ ಬೆಡ್ ರೂಂ ಅಥವಾ ನಿದ್ರಿಸುವ ದಿಕ್ಕು ಅನಾನುಕೂಲಕರ ದಿಕ್ಕಿನಲ್ಲಿದ್ದಲ್ಲಿ ಇದು ವಧುವಿಗೆ ಆರೋಗ್ಯದ ತೊಂದರೆಗಳನ್ನು ಉಂಟುಮಾಡಬಹುದು, ಉದಾಹರಣೆಗೆ: ಸೌಂದರ್ಯ ಕಳೆದುಕೊಳ್ಳುವುದು ಅಥವಾ ವಧು ದಪ್ಪ ಅಥವಾ ಬೊಜ್ಜು ಪಡೆಯುವುದು.

ನೋಡಲು ಸುಂದರವಾಗಿರುವುದರಿಂದ, ಉತ್ತಮ ಶಿಕ್ಷಣ ಪಡೆದಿರುವುದರಿಂದ, ಉತ್ತಮ ಕೌಟುಂಬಿಕ ಹಿನ್ನೆಲೆಯಿರುವುದರಿಂದ ಮತ್ತು ಉತ್ತಮ ಉದ್ಯೋಗದಲ್ಲಿರುವ, ಉತ್ತಮ ಹಿನ್ನೆಲೆ ಹಾಗೂ ವೃತ್ತಿಯನ್ನುಳ್ಳ ವರನಷ್ಟೇ ಅರ್ಹತೆ ಪಡೆದಿರುವುದರಿಂದ ಹೊರನೋಟಕ್ಕೆ ವಧುವಿನಲ್ಲಿ ಏನೂ ದೋಷ ಕಾಣಿಸುವುದಿಲ್ಲ. ಆದರೂ ವೈವಾಹಿಕ ಉದ್ದೇಶಗಳಿಗಾಗಿ ಅವರಿಬ್ಬರೂ ಸಂಗಾತಿಗಳಾಗಲು ಹೊಂದಾಣಿಕೆಯಾಗುವುದಿಲ್ಲ.

ವಧುವರರ ಜಾತಕಗಳು ಚೆನ್ನಾಗಿ ಹೊಂದಾಣಿಕೆಯಾಗುವುದಾದರೂ ಅವರ ಸಂಬಂಧವನ್ನು ಅಂತಿಮಗೊಳಿಸುವಲ್ಲಿ ವಿವರಿಸಲಾಗದ ತೊಂದರೆಗಳು ಎದುರಾಗುತ್ತವೆ.

ಹಲವಾರು ಭಾವೀ ವರರು ಹಾಗೂ ಅವರ ಕುಟುಂಬಗಳು ವಧುವಿನ ಸ್ಥಳಕ್ಕೆ ಭೇಟಿನೀಡುತ್ತಾರೆ. ಆದರೂ ಪ್ರಾರಂಭಿಕ ಒಪ್ಪಿಗೆಯ ಬಳಿಕ ಕೊನೆಯ ಕ್ಷಣದಲ್ಲಿ ವಿವಾಹವನ್ನು ಅಂತಿಮಗೊಳಿಸುವಲ್ಲಿ ಹೇಳಲಾಗದ ಯಾವುದೋ ಬಗೆಯ ಸಮಸ್ಯೆಯೊಂದು ಉಂಟಾಗುವುದು. ಇದು ವಧುವಿನ ಕುಟುಂಬವನ್ನು ಗೊಂದಲದಲ್ಲಿಡುವುದು.

ಯಾವುದೋ ಬಗೆಯ ವಧುದಕ್ಷಿಣೆ ಅಥವಾ ವಧುವಿನ ಕುಟುಂಬದಲ್ಲಿ ಮಾಡಲಾಗುವ ಬೇರಾವುದೇ ಬೇಡಿಕೆಗಳು ಬಾಂಧವ್ಯವನ್ನು ಅಂತಿಮಗೊಳಿಸಿದ ಬಳಿಕ ಕೂಡ ವೈವಾಹಿಕ ಸಂಬಂಧವನ್ನು ಬೆಸೆಯುವಲ್ಲಿ ಸಮಸ್ಯೆಯೊಡ್ಡುವವು.

ಇಂದಿನ ‘ಹೊಸ ಜಗತ್ತಿನ ಭ್ರಮೆಯಲ್ಲಿರುವ’ ವಧುಗಳು ಮತ್ತು ವರರು ‘ಪ್ರೇಮ ವಿವಾಹ’ ಅಥವಾ ‘ಲಿವಿಂಗ್ ಟುಗೆದರ್’ಗೆ ಮೊರೆಹೋಗುತ್ತಾರೆ. ವದು ವರರ ಕುಟುಂಬಗಳು ನಿಗದಿಗೊಳಿಸುವ ಅರೇಂಜ್ಡ್ ಮ್ಯಾರೇಜ್ ಬದಲಿಗೆ ಸಂಗಾತಿಯನ್ನು ವಿವಾಹಕ್ಕೂ ಮುನ್ನವೇ ಅರಿಯುವ ವ್ಯವಸ್ಥೆಯಿದು.

ವೈವಾಹಿಕ ಸಂಬಂಧಗಳ ವಿಚಾರದಲ್ಲಿ ಸರಳ ವಾಸ್ತುವು ಯಾವ ರೀತಿಯಲ್ಲಿ ಸಹಾಯ ಮಾಡುವುದು?

ಸರಳ ವಾಸ್ತುವಿನ ವಿವಾಹಕ್ಕಾಗಿ ವಾಸ್ತು ಮನೆ ಅಥವಾ ಕೆಲಸದ ಸ್ಥಳದಲ್ಲಿನ ಯಾವುದೇ ಕಟ್ಟಡದ ಒಡೆಯುವಿಕೆಗಳಾಗಲಿ ಮಾರ್ಪಾಟುಗಳಾಗಲಿ ಇಲ್ಲದೆಯೇ ಸಹಾಯಕವಾದ ಮತ್ತು ಸುಲಭವಾದ ಪರಿಹಾರಗಳನ್ನು ವೈವಾಹಿಕ ವಾಸ್ತುವಿನ ರೂಪದಲ್ಲಿ ಒದಗಿಸುವುದು ಮತ್ತು ಇವು ಧನಾತ್ಮಕ ಶಕ್ತಿಯನ್ನು ಉತ್ತೇಜಿಸುವ ಮತ್ತು ಋಣಾತ್ಮಕ ಶಕ್ತಿಯನ್ನು ಕನಿಷ್ಠಗೊಳಿಸುವ ಮೂಲಕ ಸುಧಾರಣೆಯನ್ನು ತರಬಲ್ಲವು.

ಸರಳ ವಾಸ್ತುವಿನ ವಿವಾಹಕ್ಕಾಗಿ ವಾಸ್ತು ವಿವಾಹ ಸಂಬಂಧಿ ವಿಷಯಗಳಲ್ಲಿ ವಾಸ್ತುವಿಗೆ ಸಂಬಂಧಪಟ್ಟ ಸೂಕ್ತ ಪರಿಹಾರಗಳನ್ನು ಒದಗಿಸುವುದು. ಇದು ವಧುವಿನ ಮತ್ತು ವರನ ಕುಟುಂಬಗಳಿಂದ ಭಾವೀ ವೈವಾಹಿಕ ಸಂಬಂಧಗಳನ್ನು ಬೆಸೆಯುವಲ್ಲಿ ಸಹಾಯ ಮಾಡುವುದು.

ಸಂಬಂಧದ ಸಮಸ್ಯೆಗಳಿಗಾಗಿ ವಾಸ್ತುವಿನ ಮಹತ್ವ

ಪ್ರತಿ ಮನೆ ಮತ್ತು ಕೆಲಸದ ಸ್ಥಳವೂ ‘ಸಂಬಂಧ ಸ್ಥಾನ’ವನ್ನು ಹೊಂದಿರುವುದು. ಕೆಲವು ಸಲ ಸಂಬಂಧದ ಸ್ಥಳವು ಮನೆ ಅಥವಾ ಕೆಲಸದ ಸ್ಥಳದಲ್ಲಿ ಇರುವುದೇ ಇಲ್ಲ. ಮನೆಯಲ್ಲಿ ಸಂಬಂಧದ ಸ್ಥಳವು ಇದ್ದರೂ ಸ್ನಾನದ ಕೋಣೆ, ಶೌಚಾಲಯ ಅಥವಾ ಯುಟಿಲಿಟಿ ರೂಂಗಳಿಂದಾಗಿ ಅದು ನಿರ್ಬಂಧಿತಗೊಂಡಿರಬಹುದು. ಕುಟುಂಬದ ಸದಸ್ಯರ ನಡುವೆ ತನ್ನಿಂತಾನೆ ಸಂಬಂಧದ ಸಮಸ್ಯೆಗಳು ಬೆಳೆಯಲು ಪ್ರಾರಂಭಗೊಳ್ಳುತ್ತವೆ.

ಪ್ರತಿಯೊಂದು ಮನೆ ಅಥವಾ ಕೆಲಸದ ಸ್ಥಳವೂ ಸಂಬಂಧದ ಸ್ಥಳವನ್ನು ಹೊಂದಿರುವುದು. ಸಂಬಂಧದ ಸ್ಥಳವು ಟಾಯ್ಲೆಟ್ ಅಥವಾ ಬಾತ್ ರೂಂ ಮತ್ತು ಯುಟಿಲಿಟಿಗಳಿಂದ ಸಮಸ್ಯೆಗೊಳಗಾಗಿದ್ದಲ್ಲಿ ಮೇಲೆ ಹೇಳಿರುವಂತೆ ಸಂಬಂಧಗಳನ್ನು ಬೆಸೆಯುವಲ್ಲಿ ಸಮಸ್ಯೆಯುಂಟಾಗುವುದು.

ಅಡುಗೆಕೋಣೆಯು ಅನನುಕೂಲಕರ ದಿಕ್ಕಿನಲ್ಲಿದ್ದಲ್ಲಿ ಕುಟುಂಬದ ಸದಸ್ಯರ ನಡುವಿನ ಸಂಬಂಧಗಳ ಮೇಲೆ ಇದು ಪ್ರಭಾವ ಬೀರುವುದು.

ಲಿವಿಂಗ್ ರೂಮ್ ಅಥವಾ ಬೆಡ್ ರೂಮಿನಲ್ಲಿ ದೇವಿ ಅಥವಾ ದೇವರ ಉಗ್ರ ರೂಪಗಳನ್ನುಳ್ಳ ಚಿತ್ರಗಳನ್ನು ಇಟ್ಟಲ್ಲಿ ಅದು ಕುಟುಂಬದ ಸದಸ್ಯರ ನಡುವೆ ವಿವರಿಸಲಾಗದ ರೀತಿಯ ಜಗಳಗಳು ಮತ್ತು ಉಗ್ರ ನಡವಳಿಕೆಗೆ ಕಾರಣವಾಗುವುದು.

ಕುಟುಂಬದ ಸದಸ್ಯರು ಅವರಿಗೆ ಅಶುಭಕರವಾದ ದಿಕ್ಕನ್ನು, ಅವರಿಗೆ ಅರಿವಿಲ್ಲದೇ ಅನುಸರಿಸಿದಾಗ 7 ಚಕ್ರಗಳು ಬಾಧಿತಗೊಳ್ಳುವವು, ಇದು ಶಿಕ್ಷಣದಲ್ಲಿ ಸಮಸ್ಯೆಗಳು, ಏಕಾಗ್ರತೆಯಲ್ಲಿ ಕೊರತೆ, ಸ್ಮರಣಶಕ್ತಿ ನಷ್ಟ, ಮಾನಸಿಕ ಒತ್ತಡ ಇತ್ಯಾದಿಗೆ ಕಾರಣವಾಗುವುದು.

ಗಂಡ ಹೆಂಡತಿಯ ನಡುವೆ ಚಿಕ್ಕಪುಟ್ಟ ವಿಷಯಗಳ ಕುರಿತು ಸತತ ಜಗಳಗಳು ಉಂಟಾಗಬಹುದು ಮತ್ತು ಇದು ವಿಚ್ಛೇದನ, ಪ್ರತ್ಯೇಕಗೊಳ್ಳುವಿಕೆ ಅಥವಾ ಸಂಬಂಧದ ಸಾಮಾನ್ಯ ಒಡಕಿಗೆ ಕಾರಣವಾಗಬಹುದು.

ಹೆತ್ತವರು ಮತ್ತು ಮಕ್ಕಳ ನಡುವೆ ಅಭಿಪ್ರಾಯ ಬೇಧಗಳು ಕುಟುಂಬದ ಶಾಂತಿ ಮತ್ತು ಸೌಹಾರ್ದಕ್ಕೆ ಭಂಗವುಂಟು ಮಾಡಬಹುದು.

ನೆರೆಹೊರೆಯವರ, ಸಹ ಕೆಲಸಗಾರರ ಜೊತೆ ಮತ್ತು ಒಡಹುಟ್ಟಿದವರ ನಡುವೆ ಅನಿರೀಕ್ಷಿತ ಜಗಳಗಳು ಕುಟುಂಬದ ಯೋಗಕ್ಷೇಮದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದು ಸಮಾಜದಲ್ಲಿ ಕುಟುಂಬದ ಪ್ರತಿಷ್ಠೆಗೆ ಮಸಿ ಬಳಿಯುತ್ತವೆ. ಇದಲ್ಲದೇ ಕೆಲಸದ ಸ್ಥಳದಲ್ಲಿ ಕೂಡ ವೈಯಕ್ತಿಕ ಸಂಬಂಧಗಳನ್ನು ನಿರ್ವಹಿಸಿಕೊಂಡು ಹೋಗುವಲ್ಲಿ ಸಮಸ್ಯೆಗಳು ಉಂಟಾಗಬಹುದು.

ಸರಳ ವಾಸ್ತುವು ಹಾನಿಗೊಂಡ ಮತ್ತು ಒಡಕುಂಟಾದ ಸಂಬಂಧಗಳ ವಿಷಯದಲ್ಲಿ ಸಹಾಯ ಮಾಡುವುದು

ಯಾವುದೇ ಒಡೆಯುವಿಕೆಗಳು ಅಥವಾ ಮಾರ್ಪಾಟುಗಳನ್ನು ಮಾಡದೆಯೇ ಸರಳ ವಾಸ್ತುವಿನ ಸಂಬಂಧಕ್ಕಾಗಿ ವಾಸ್ತು ಮನೆಯಲ್ಲಿನ ಅಥವಾ ಕೆಲಸದ ಸ್ಥಳದಲ್ಲಿನ ಬಾಧಿತ ಸಂಬಂಧದ ಸ್ಥಳವನ್ನು ಸರಿಪಡಿಸಲು ಸಲಹೆಗಳನ್ನು ಒದಗಿಸುವುದು.

ಕುಟುಂಬದ ಸದಸ್ಯರ ನಡುವಿನ ಭಾವನಾತ್ಮಕ ಬೆಸುಗೆಯನ್ನು ಸುಧಾರಿಸುವ ಜೊತೆಗೆ ‘ಅತ್ಯುತ್ತಮ ಸಂಬಂಧದ ದಿಕ್ಕು’ ಮತ್ತು ‘ಅತ್ಯುತ್ತಮ ಮಲಗುವ ದಿಕ್ಕನ್ನು’ ಸರಳ ವಾಸ್ತುವಿನ ಸಂಬಂಧಕ್ಕಾಗಿ ವಾಸ್ತು ಸಲಹೆಮಾಡುವುದು. ಕುಟುಂಬದಲ್ಲಿ ಸಂಬಂಧದ ಗುಣವು ಸುಧಾರಣೆಗೊಳ್ಳುವ ಮೂಲಕ ಏಳು ಚಕ್ರಗಳು ಸಕ್ರಿಯಗೊಳ್ಳುವುದಕ್ಕೆ ಕಾರಣವಾಗುವುದು.

ಕುಟುಂಬದಲ್ಲಿ ಧನಾತ್ಮಕ ಸಂಬಂಧವನ್ನು ಬೆಳೆಸುವುದಕ್ಕೆ ಮಹತ್ವ ನೀಡುವುದಕ್ಕಾಗಿ ಸರಳ ವಾಸ್ತುವು ಗೋಡೆಗಳ ಮೇಲೆ ಧನಾತ್ಮಕ ಚಿತ್ರಗಳನ್ನು ಇಡುವುದಕ್ಕೆ ಸಲಹೆಮಾಡುವುದು.