vastu-remidies

ವಾಸ್ತು ಯೋಗಕ್ಷೇಮವನ್ನು ಹೆಚ್ಚಿಸಲು ಸಹಾಯಮಾಡುವುದು, ಅದು ನಮ್ಮ ವಿಧಿಯೊಂದಿಗೆ ಸಂಘರ್ಷಣೆಯನ್ನು ಮಾಡುವುದಿಲ್ಲ!ವಾಸ್ತುವು ಸಂರಚನೆಯ ವಿಜ್ಞಾನ ಹಾಗೂ ಅದು ಸಮೃದ್ಧಿಗೆ ಹೊಣೆಯಾಗಿಸುವುದು ಎಂದು ಬಲವಾಗಿ ನಂಬಲಾಗುತ್ತದೆ.ಅದೇ ಹೊತ್ತಿನಲ್ಲಿ, ವಾಸ್ತು ಶಾಸ್ತ್ರವನ್ನು ಕೂಲಂಕೂಷವಾಗಿ ಅನುಸರಿಸದೇ ಇದ್ದಾಗ, ಅದರಲ್ಲಿ ಕೆಲವು ವಿನಾಯಿತಿಗಳು ಇರಬಹುದೇ?­­ ವಿಶೇಷವಾಗಿ ನಮ್ಮಲ್ಲಿ ಹೆಚ್ಚಿನವರು ಸೊಗಸಾದ ಜೀವನಶೈಲಿಯನ್ನು ಅನುಸರಿಸುವಾಗ ಹಾಗೂ ವಾಸ್ತುಶಿಲ್ಪದ ರಚನೆಗಳನ್ನು ಪ್ರಧಾನವಾಗಿ ಯಾವುದೇ ವಾಸ್ತು ತತ್ವಗಳನ್ನು ಅನುಸರಿಸದೆಯೇ ನಿರ್ಮಿಸುವಾಗ. ಅದಕ್ಕೂ ಹೆಚ್ಚಾಗಿ, ನಿರ್ಮಾಣದ ನಿಯಮಗಳನ್ನು ಗಮನಿಸಿ ಅನುಸರಿಸಬೇಕಾಗುವುದು. ಆದ್ದರಿಂದ, ಆದರ್ಶ ವಾಸ್ತು ಅನುಸರಣೆಯು ವಾಸ್ತವವಾಗಿ ತುಂಬಾ ಕಷ್ಟಕರವಾದುದು!ಆದಾಗ್ಯೂ, ನಾವು ಕೆಲವು ರಾಜಿಗಳನ್ನು ಮಾಡಿಕೊಳ್ಳಬಹುದೇ?ಖಂಡಿತವಾಗಿಯೂ ಹೌದು.

ಪ್ರಾಯೋಗಿಕವಾಗಿ ಹೇಳುವುದಾದರೆ, ನಾವು ಹೊರಭಾಗಗಳನ್ನು ಮಾರ್ಪಡಿಸಲು ಸಾಧ್ಯವಾಗದೇ ಇದ್ದಲ್ಲಿ, ನಾವು ಸೂಕ್ಷ್ಮ ಮಟ್ಟಗಳಲ್ಲಿ ಗಮನ ಹರಿಸಲೇಬೇಕಾಗುವುದು.ಒಟ್ಟಾರೆ ಇದರ ಅರ್ಥವೇನೆಂದರೆ, ನೀವು ಒಳಭಾಗಗಳ ಮೇಲೆ ಗಮನ ಹರಿಸಲು ಪ್ರಾರಂಭಿಸಿ ಎಂದು! ವಾಸ್ತು ಶಾಸ್ತ್ರದಲ್ಲಿ ಕೆಲವು ಮಾರ್ಗಸೂಚಿಗಳು ಇತರ ಮಾರ್ಗಸೂಚಿಗಳಿಗಿಂತಲೂ ಹೆಚ್ಚು ನಿರ್ಣಾಯಕವಾಗಿರುವವು.ಒಟ್ಟಾರೆ, ಇದು ಋಣಾತ್ಮಕ ಅಂಶಗಳ ಪ್ರತಿರೋಧಗಳನ್ನು ಸಮತೋಲನಕ್ಕೆ ತರುವುದೇ ಅಗಿದೆ.

ವಾಸ್ತವವಾಗಿ ವಾಸ್ತುವು ಒಂದು ಧರ್ಮವಲ್ಲ; ಅದು ವಾಸ್ತವವಾಗಿ, ಐದು ಅಂಶಗಳಲ್ಲಿ ಪ್ರತಿಯೊಂದು ಕೂಡ ಸಂತುಲನದಲ್ಲಿರುವುದೆಂದು ಖಚಿತಪಡಿಸುತ್ತಲೇ, ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸುವ ವಿಜ್ಞಾನ! ಹಾಗೆ ಮಾಡಿದಲ್ಲಿ, ಅದು ಜೀವನದಿಂದ ಗರಿಷ್ಠ ಸಾಧ್ಯವಿರುವ ಲಾಭಗಳು ಒದಗುವಂತೆ ಮಾಡುತ್ತದೆ. ಒಂದು ಮನೆ, ಫ್ಲಾಟ್ ಅಥವಾ ಕಛೇರಿಯು ಈ ಮಾರ್ಗಸೂಚಿಗಳಲ್ಲಿ ಯಾವುದಾದರೊಂದನ್ನು ಉಲ್ಲಂಘಿಸುತ್ತಿದ್ದಲ್ಲಿ, ಅದನ್ನು ವಾಸ್ತುದೋಷವೆಂದು ಕರೆಯಲಾಗುವುದು.

ಕೊಠಡಿಗಳನ್ನು ಮಾರ್ಪಡಿಸುವುದರಿಂದ, ನಿಯಂತ್ರಕಗಳು ಮತ್ತು ಶಕ್ತಿಯುತವಾದ ವಸ್ತುಗಳನ್ನು ಬಳಸಿ ಆಂತರಿಕ ವಿನ್ಯಾಸಗಳಲ್ಲಿ ಮಾರ್ಪಾಡುಗಳನ್ನು ಮಾಡುವುದರಿಂದ ಮತ್ತು ವಸ್ತುಗಳನ್ನು ಮರುಜೋಡಿಸುವುದರಿಂದ (ಪರಿಸ್ಥಾಪನೆಗಳು) ಒಂದು ವಾಸ್ತು ದೋಷವನ್ನು (ನ್ಯೂನ್ಯತೆಯನ್ನು) ಸಾಮಾನ್ಯವಾಗಿ ನಿವಾರಿಸಬಹುದು.ಬಹುತೇಕ ಪ್ರತಿ ವಾಸ್ತು ದೋಷವು (ನ್ಯೂನ್ಯತೆಯು) ಒಂದು ನಿರ್ದಿಷ್ಟ ವಾಸ್ತು ಪರಿಹಾರವನ್ನು ಹೊಂದಿರುವುದು, ಹಾಗೂ ಅದನ್ನು ಸಮರ್ಪಕವಾಗಿ ಅನುಸರಿಸಿದಲ್ಲಿ, ಅದು ಶಾಂತಿ ಮತ್ತು ಸಮೃದ್ಧಿಯನ್ನು ತರುವ ಸಾಧ್ಯತೆ ಇರುವುದು. ವಾಸ್ತು ದೋಷಗಳನ್ನು (ನ್ಯೂನ್ಯತೆಗಳನ್ನು) ನಿರ್ಮೂಲ ಮಾಡಲು ಕೆಲವು ಪರಿಹಾರಗಳು ಕೆಲವರ ಸ್ವಂತ ನಿವಾಸಗಳ ಅಥವಾ ವಾಣಿಜ್ಯಕ ಸ್ಥಳಗಳೊಳಗೆಯೇ ಇರಬಲ್ಲವು.

ಕಟ್ಟಡ ಕೆಡವದೆಯೇ ವಾಸ್ತು ಪರಿಹಾರಗಳು:

ಕಟ್ಟಡದ ಸಂರಚನೆಯನ್ನು ಯಾವುದೇ ರೀತಿಯಲ್ಲಿಯೂ ಕೆಡವದೆಯೇ ಅಥವಾ ನವೀಕರಿಸದೆಯೇ, ಅಂದರೆ, ಗೋಡೆಗಳನ್ನು ಕೆಡವುವುದು, ಬಾಗಿಲುಗಳನ್ನು ತೆಗೆಯುವುದು/ಮಾರ್ಪಡಿಸುವುದು, ಇತ್ಯಾದಿಗಳಂತಹ ಕಾರ್ಯಗಳಿಲ್ಲದೆಯೇ ತಾವು ವಾಸ್ತು ಸುಧಾರಣೆಗಳನ್ನು ಮಾಡಬಲ್ಲೆವು ಎಂದು ಯಾರೋ ಒಬ್ಬರು ಪ್ರಸ್ತಾಪಿಸಿದರು.ಅದು ಭಾರತದ ವಾಸ್ತು ಶಾಸ್ತ್ರದಲ್ಲಿ ಸಾಧ್ಯವೇ? Space ಈ ಪದವು ಅಷ್ಟು ಹೆಚ್ಚು ಜನಪ್ರಿಯವಾಗಿರುವುದು ಏಕೆ? ಅದರೊಂದಿಗೆ, ಗರಿಷ್ಠ ನಿವಾಸಿಗಳು ಕಟ್ಟಡದ ಯಾವುದೇ ಭಾಗವನ್ನು ಕೆಡವದೆಯೇ ವಾಸ್ತು ಶಾಸ್ತ್ರ ಶಿಫಾರಸ್ಸುಗಳನ್ನು ನೀಡಬಲ್ಲರಾದಂತಹವರಿಗಾಗಿ ಹುಡುಕಾಟ ನಡೆಸಿರುವರು ಎಂದು ಕೂಡ ಗಮನಿಸಲಾಗಿದೆ.

ಸಾಮಾನ್ಯವಾಗಿ ಇಂದು ಜನರು ವಾಸ್ತು ಪರಿಹಾರಗಳನ್ನು ಕಾರ್ಯಗತಗೊಳಿಸಿ ತತ್‌ಕ್ಷಣದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯಬೇಕೆಂದು ನಿರೀಕ್ಷಿಸುವರು.ಅದು ಯಾವಾಗಲೂ ಹಾಗೆ ಆಗುವುದಿಲ್ಲ.ಫಲಿತಾಂಶಗಳು ಕಾಣಿಸಿಕೊಳ್ಳಲು ಸ್ವಲ್ಪ ಕಾಲ ತೆಗೆದುಕೊಳ್ಳುವುದೆಂದು ನಾವು ಮರೆಯಬಾರದು.ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳನ್ನು ಕೂಡ ಎದುರಿಸಲು ಶಾಂತರಾಗಿ ಎದುರುನೋಡಿ.ವಾಸ್ತು ಪರಿಹಾರಗಳನ್ನು ಕಾರ್ಯಗತಗೊಳಿಸಿದ ನಂತರ ತ್ವರಿತ ಪರಿಣಾಮಗಳನ್ನು ಪಡೆಯಲು ನಡವಳಿಕೆ ಮತ್ತು ಧೋರಣೆಯ ಅಂಶಗಳು ಕೂಡ ಪಾತ್ರವಹಿಸುತ್ತವೆ.

ಬದಲಾವಣೆಗಳು ಮತ್ತು ಒಡೆಯುವಿಕೆಗಳಿಲ್ಲದ ಸರಳ ವಾಸ್ತು ಪರಿಹಾರಗಳು:

ಸರಳ ವಾಸ್ತು ಭವಿಷ್ಯದ ಪೂರ್ವಾನುಮಾನ ಆಧಾರಿತ ಅನನ್ಯ ಮತ್ತು ವೈಜ್ಞಾನಿಕ ವಾಸ್ತು ಉಪಾಯ ಮತ್ತು ಪರಿಹಾರವಾಗಿರುವುದು, ಹಾಗೂ ಅದು ಮನೆ, ಕುಟುಂಬದ ಮುಖ್ಯಸ್ಥನ ಜನ್ಮ ದಿನ ಮತ್ತು ಲಿಂಗವನ್ನಾಧರಿಸಿ ಕಾರ್ಯವೆಸಗುವುದು.ಕುಟುಂಬವು ಎದುರಿಸುತ್ತಿರುವ ಸಮಸ್ಯೆಗಳಿಗೆ ಭವಿಷ್ಯದ ಪೂರ್ವಾನುಮಾನದ ಪರಿಹಾರಗಳನ್ನು ಕುಟುಂಬದ ಮುಖ್ಯಸ್ಥ, ಕುಟುಂಬದ ಸದಸ್ಯರ ವಿವರಗಳು ಮತ್ತು ಈ ದತ್ತಾಂಶಗಳು ಮನೆಯ ವಿವಿಧ ಮೂಲಾಂಶಗಳೊಡನೆ ಹೇಗೆ ಹೊಂದುತ್ತಿರುವವು ಎಂಬುದರ ಆಧಾರದ ಮೇಲೆ ಮಾಡಲಾಗುವುದು.ಯಾವುದೇ ಅನನುಪಾಲನೆಯು ಕುಟುಂಬದ ಮುಖ್ಯಸ್ಥನಿಗೆ ಅಥವಾ ಕುಟುಂಬದ ಸದಸ್ಯರಿಗೆ ಅಥವಾ ಇಡೀ ಕುಟುಂಬಕ್ಕೆ ಸಮಸ್ಯೆಗಳನ್ನು ಒಡ್ಡಬಹುದು.

ಸರಳ ವಾಸ್ತು ಇಂತಹ ಸಮಸ್ಯೆಗಳನ್ನು ಪೂರ್ವಾನುಮಾನಿಸಲು ಹಾಗೂ ಕುಟುಂಬದ ಸಹಮತಿಯನ್ನು ಪರಿಶೀಲಿಸಲು ಸಹಾಯ ಮಾಡುವುದು.ಕುಟುಂಬವು ನೀಡಲಾಗಿರುವ ಪೂರ್ವಾನುಮಾನದೊಡನೆ ಸಹಮತಿಯನ್ನು ವ್ಯಕ್ತಪಡಿಸಿದಲ್ಲಿ, ನಾವು ಸಮಸ್ಯೆಗಳಿಗೆ ಯಾವುದೇ ಬದಲಾವಣೆಗಳು ಮತ್ತು ಒಡೆಯುವಿಕೆಗಳಿಲ್ಲದೆಯೇ ವಾಸ್ತು ಉಪಾಯಗಳನ್ನು ಒದಗಿಸುವ ಮೂಲಕ ಪೂರ್ಣ ಸಮಾಲೋಚನೆಯನ್ನು ಒದಗಿಸುವೆವು.ಸರಳ ವಾಸ್ತು ತತ್ವಗಳನ್ನು ಕಾರ್ಯಗತಗೊಳಿಸಿದ ನಂತರ, ನಿಮ್ಮ ಅದೃಷ್ಟವು ಬದಲಾಗುವುದು, ಹಾಗೂ ಪ್ರತಿಯಾಗಿ ಅದು ನೀವು ಒತ್ತಡ ಮುಕ್ತ ಜೀವನವನ್ನು ನಡೆಸಲು ಕಾರಣವಾಗಬಹುದು. ಅಂತೆಯೇ ನಿಮ್ಮ ಕುಟುಂಬದೊಳಗೆ ಒಬ್ಬರನ್ನೊಬ್ಬರು ಹೆಚ್ಚು ಅರ್ಥಮಾಡಿಕೊಂಡು, ಪ್ರೀತಿ, ಶಾಂತಿ ಮಾತು ಸೌಹಾರ್ದಯುಕ್ತವಾಗಿ ಜೀವನ ನಡೆಸುವುದಕ್ಕೆ ಸಹಾಯವಾಗುವುದು.