ಬಳಕೆದಾರರು ಒದಗಿಸುವ ಮಾಹಿತಿಯು ನಮಗೆ ಸರಳ ವಾಸ್ತು ಅಪ್ಲಿಕೇಶನ್ ಅನ್ನು ಸುಧಾರಿಸಲು ಹಾಗೂ ನಿಮಗೆ ಅತ್ಯಂತ ಬಳಕೆದಾರ-ಸ್ನೇಹಿ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ.

ಬಳಕೆದಾರರು ತಮ್ಮ ಹೊಸ ಬಳಕೆದಾರರ ಹೆಸರು ಮತ್ತು ಗುಪ್ತಪದಗಳನ್ನು ಸೃಷ್ಟಿಸಲು ಬಯಸದಿದ್ದಲ್ಲಿ, ಅವರು ತಮ್ಮ ಫೇಸ್ಬುಕ್ ಅಥವಾ ಗೂಗಲ್ ರುಜುವಾತುಗಳ ಮೂಲಕ ಲಾಗಿನ್ ಆಗಬಹುದು.

ನಮ್ಮ ಬಳಕೆದಾರರಿಗೆ ಸರಳ ವಾಸ್ತು ಅಪ್ಲಿಕೇಶನ್ ಪ್ರತಿಕ್ರಿಯಾ ಸಾಮರ್ಥ್ಯವನ್ನು ಸುಧಾರಿಸುವ ಸಲುವಾಗಿ ನಾವು ಸ್ಥಳೀಯ ಡೇಟಾ ಸ್ಟೋರ್/ವಿಷಯಗಳ ಇತಿಹಾಸ, ಅಥವಾ ಅಂತಹ ವಿದ್ಯುನ್ಮಾನ ಉಪಕರಣಗಳನ್ನು ಬಳಸುವ ಮೂಲಕ ಮಾಹಿತಿಯನ್ನು ಸಂಗ್ರಹಿಸಬಹುದು. ಅದಕ್ಕಾಗಿ, ಬಳಕೆದಾರರ ವ್ಯಯಕ್ತಿಕ ಆಸಕ್ತಿಗಳನ್ನು ತಿಳಿದುಕೊಳ್ಳಲು ಎಪ್ ನ ಪ್ರತಿ ಭೇಟಿಗಾರ (ಬಳಕೆದಾರ) ರಿಗೆ ಒಂದು ಅನನ್ಯ ಯಾದೃಚ್ಛಿಕ ಸಂಖ್ಯೆಯನ್ನು ಅವರ ಬಳಕೆದಾರರ ಗುರುತು ಚಿಹ್ನೆ (ಬಳಕೆದಾರರ ಐಡಿ) ಯಾಗಿ ನಿಯೋಜಿಸಲಾಗುವುದು. ನಾವು ಪಡೆಯುವ ನಿಮ್ಮ ವ್ಯಯಕ್ತಿಕ ಮಾಹಿತಿಯೆಂದರೆ ನೀವು ನಮಗೆ ಒದಗಿಸುವ ಮಾಹಿತಿಗಳು ಮಾತ್ರ. ನಮ್ಮ ಜಾಹಿರಾತುಗಾರರು ತಮ್ಮ ಗುರುತು ಹಿಡಿಯುವಿಕೆಗಾಗಿ ಸ್ಥಳೀಯ ಡೇಟಾ ಸ್ಟೋರ್‌ಗಾಗಿನ ಮಾಹಿತಿಯನ್ನು ನಮ್ಮ ಮೂಲಕ ಪಡೆಯಬಲ್ಲರು.

ನಾವು ನಮ್ಮ ಜಾಹಿರಾತುಗಾರರಿಗೆ ‒ ಅವರು ನಮ್ಮ ಬಳಕೆದಾರರನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಜಾಲತಾಣದಲ್ಲಿ ಜಾಹಿರಾತುಗಳ ಮೌಲ್ಯವನ್ನು ಅವರು ದೃಢೀಕರಿಸಿಕೊಳ್ಳಲು ಸಹಾಯವಾಗುವುದಕ್ಕಾಗಿ ‒ ಮಾಹಿತಿಯನ್ನು ಒದಗಿಸಿದಲ್ಲಿ, ಅದು ಸಾಮಾನ್ಯವಾಗಿ ನಮ್ಮ ಎಪ್‌ ನೊಳಗಿನ ವಿವಿಧ ಪುಟಗಳಿಗೆ ಬರುವ ಭೇಟಿಗಳ ಬಗ್ಗೆ ಒಗ್ಗೂಡಿಸಲಾದ ಸರಾಸರಿ ಅಂಕಿಅಂಶಗಳ ರೂಪದಲ್ಲಿರುವುದು. ನೀವು ಸರಳ್‌ವಾಸ್ತು ಎಪ್ ನೊಡನೆ ನೋಂದಾಯಿಸಿಕೊಂಡಲ್ಲಿ, ನಿಮಗೆ ಪ್ರಯೋಜನವಾಗುವುದೆಂದು ನಾವು ನಂಬುವಂತಹ ವೈಶಿಷ್ಟ್ಯಗಳನ್ನು ಒದಗಿಸುವಂತಹ ಅದ್ಯತನಗೊಳಿಸಲಾದ ನಿಮ್ಮ ವಿಷಯಗಳನ್ನು ನೀವು ಕಾಲ-ಕಾಲಕ್ಕೆ ಪಡೆಯುವಿರಿ.

ಈ ದತ್ತಸಂಚಯ (ಡೇಟಾಬೇಸ್) ವನ್ನು ಒಂದು ಫೈರ್‌ವಾಲ್ ನಿಂದ ಭದ್ರಗೊಳಿಸಲಾಗಿರುವ ಸರ್ವರ್‌ಗಳಲ್ಲಿ ದಾಸ್ತಾನುಮಾಡಲಾಗುವುದು; ಈ ಸರ್ವರ್‌ಗಳನ್ನು ತಲುಪಲು ಗುಪ್ತಪದಗಳಿಂದ ಭದ್ರಗೊಳಿಸಿರಲಾಗುವುದು ಹಾಗೂ ಕಟ್ಟುನಿಟ್ಟಾಗಿ ಸೀಮಿತ ಬಳಕೆದಾರರಿಗೆ ಮಾತ್ರ ಅವಕಾಶವಿರುವುದು. ಆದಾಗ್ಯೂ, ನಮ್ಮ ಭದ್ರತಾ ಕ್ರಮಗಳು ಎಷ್ಟೇ ಪರಿಣಾಮಕಾರಿಯಾಗಿದ್ದರೂ ಸಹ, ಯಾವುದೇ ಭದ್ರತಾ ವ್ಯವಸ್ಥೆಯು ಅಭೇದ್ಯವಲ್ಲ. ನಾವು ನಮ್ಮ ದತ್ತಸಂಚಯದ ಭದ್ರತೆಯ ಬಗ್ಗೆ ಖಾತರಿ ನೀಡಲಾಗುವುದಿಲ್ಲ, ಹಾಗೆಯೇ ನೀವು ನಮಗೆ ಅಂತರ್ಜಾಲದ ಮೂಲಕ ಒದಗಿಸುವ ಮಾಹಿತಿಯು ನಿಮ್ಮಿಂದ ನಮಗೆ ರವಾನಿಸಲಾಗುತ್ತಿರುವಾಗ ಅದನ್ನು ಇತರರು ಕದ್ದಾಲಿಸಲಾರರು ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಮತ್ತು, ಸಹಜವಾಗಿ, ಚರ್ಚೆ ಕ್ಷೇತ್ರಗಳಿಗೆ ನೀವು ಸೇರಿಸುವ ನಿಮ್ಮ ಪೋಸ್ಟ್‌ಗಳು ಅಂತರ್ಜಾಲವನ್ನು ತಲುಪಬಲ್ಲ ಯಾರಿಗೇ ಆದರೂ ಲಭ್ಯವಾಗುವವು.

ಆದಾಗ್ಯೂ, ಅಂತರ್ಜಾಲವು ಒಂದು ನಿರಂತರವಾಗಿ ವಿಕಸಿಸುತ್ತಿರುವ ಮಾಧ್ಯಮವಾಗಿರುವುದು. ಅವಶ್ಯವಿರುವ ಭವಿಷ್ಯದ ಬದಲಾವಣೆಗಳನ್ನು ಅಳವಡಿಸುವುದಕ್ಕಾಗಿ, ನಾವು ಕಾಲ-ಕಾಲಕ್ಕೆ ನಮ್ಮ ಗೋಪ್ಯತೆ ಕಾರ್ಯನೀತಿಯನ್ನು ಬದಲಿಸಬಹುದು. ಆದರೂ ಸಹಜವಾಗಿ, ಹೊಸ ಕಾರ್ಯನೀತಿ ಏನೇ ಇದ್ದರೂ ಕೂಡ, ನಾವು ಸಂಗ್ರಹಿಸುವ ಯಾವುದೇ ಮಾಹಿತಿಯ ನಮ್ಮ ಬಳಕೆಯು ಅಂತಹ ಮಾಹಿತಿಯ ಸಂಗ್ರಹಕ್ಕೆ ಅನ್ವಯಿಸುವ ನಮ್ಮ ಕಾರ್ಯನೀತಿಯೊಂದಿಗೆ ಯಾವಾಗಲೂ ಸ್ಥಿರವಾಗಿ ಹೊಂದಿರುವುದು.

ನಿಮಗೆ ಈ ಕಾರ್ಯನೀತಿಯ ಬಗ್ಗೆ ಯಾವುದೇ ಪ್ರಶ್ನೆಗಳು ಇದ್ದಲ್ಲಿ ಅಥವಾ ಸ್ಫಷ್ಟೀಕರಣಗಳು ಬೇಕಾದ್ದಲ್ಲಿ, ನೀವು ಅವುಗಳನ್ನು ಇಮೇಲ್ ಮೂಲಕ app@saralvaastu.com ಕ್ಕೆ ಅಥವಾ ಅಂಚೆಯ ಮೂಲಕ ಸಿ. ಜಿ. ಪವಾರ್ ಖಾಸಗಿ ನಿಯಮಿತ ಕ್ಕೆ ಈಎಲ್‑86, ಟಿಟಿಸಿ ಕೈಗಾರಿಕಾ ಪ್ರದೇಶ, ಎಂಐಡಿಸಿ, ಮಹಾಪೆ, ನವಿ ಮಂಬೈ ಮಹಾರಾಷ್ಟ್ರ, 400 701 ರವಾನಿಸಬಹುದು ಅಥವಾ ನಮ್ಮ ದೂರವಾಣಿ ಸಂಖ್ಯೆಯಾದ (022) 61092732 ಗೆ ಕರೆ ನೀಡಬಹುದು.