ಮನುಷ್ಯರು ಧನಾತ್ಮಕ ಶಕ್ತಿಯಿಂದ ಸುತ್ತುವರಿದಿರುವಾಗ ಹಾಗೂ ಅನುಕೂಲಕರ ದಿಕ್ಕುಗಳನ್ನು ಅನುಸರಿಸಿದಾಗ ೭ ಚಕ್ರಗಳನ್ನು ಸತತವಾಗಿ ಸಂತೋಷಕರವಾದ ಜೀವನವನ್ನು ನೀಡಲು ಶಕ್ತಿಯನ್ನು ಪಡೆಯುತ್ತವೆ. ಸಮತೋಲನದಲ್ಲಿರಲು, ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಹಾಗೂ ಧನಾತ್ಮಕ ಆಲೋಚನೆಗಳನ್ನು ಉಳಿಸಿಕೊಳ್ಳಲು ನಿಮ್ಮ 7 ಚಕ್ರಗಳನ್ನು ತೆರೆಯುವುದು ಹಾಗೂ ಹಿತವಾದ ರೀತಿಯಲ್ಲಿ ಶಕ್ತಿಯು ಒಳಹರಿಯುವುದಕ್ಕೆ ಅವಕಾಶ ನೀಡುವುದು ಶಕ್ತಿದಾಯಕ ಸಾಧನವಾಗಿರುತ್ತದೆ. ಚಕ್ರಗಳೆಂದರೆ ಶಕ್ತಿವಲಯಗಳು ಮತ್ತು ಇವನ್ನು ನಮ್ಮ ಶಕ್ತಿ ಕ್ಷೇತ್ರಗಳನ್ನು, ಭೌತಿಕ ಕಾಯಗಳನ್ನು ಹಾಗೂ ವ್ಯಾಪಕವಾದ ವಿಶ್ವಶಕ್ತಿಯ ಕ್ಷೇತ್ರವನ್ನು ಸಂಪರ್ಕಿಸುವ ಅನೇಕ ಕಾರ್ಯಗಳನ್ನು ನಿರ್ವಹಿಸುವ ಬೇರೆ ಬೇರೆ ಬಣ್ಣಗಳ ವಿದ್ಯುದೀಯ ಶಕ್ತಿಯ ಚಕ್ರಗಳು ಎನ್ನಬಹುದು.
ಈ 7 ಚಕ್ರಗಳು ಎಂಡೋಕ್ರೈನ್ ವ್ಯವಸ್ಥೆಗೆ ನೇರ ಸಂಪರ್ಕವನ್ನು ಹೊಂದಿವೆ ಮತ್ತು ಅದನ್ನು ನಿಯಂತ್ರಿಸುವ ಮೂಲಕ ವಯಸ್ಸಾಗುವಿಕೆಯನ್ನು ತಡೆಯುತ್ತವೆ. 7 ಚಕ್ರಗಳನ್ನು ಪ್ರಭಾಮಂಡಲ ಹಾಗೂ ದೇಹದ ಒಳಗಿನ ಸಮಯದ ವ್ಯವಸ್ಥೆಯನ್ನು ಬೇರೆ ಬೇರೆ ಮಟ್ಟದ ಪ್ರಭಾಮಂಡಲ ಹಾಗೂ ವಿಶ್ವಶಕ್ತಿಯನ್ನು ಜೋಡಿಸುತ್ತವೆ. ಅವು ಭೌತಿಕ ದೇಹಕ್ಕೆ ಶಕ್ತಿಯ ಹರಿವನ್ನು ಪ್ರಭಾವಿಸುತ್ತವೆ. ಅವು ವಾತಾವರಣದಿಂದ ಪ್ರಾಥಮಿಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಇದನ್ನು ಶಕ್ತಿಯ ಅಗತ್ಯವಿರುವಲ್ಲಿಗೆ ಹರಿಸುತ್ತವೆ.

ನಮ್ಮ ದೇಹದೊಳಗಿನ ಸಪ್ತ ಚಕ್ರಗಳು ಮತ್ತು ಜೀವನದ ಮೇಲೆ ಅವುಗಳ ಪ್ರಭಾವ.

ಸಹಸ್ರಾರ ಚಕ್ರ

1-150x150

ಸಹಸ್ರಾರ ಚಕ್ರವನ್ನು “ತಲೆಯ ಮೇಲಿನ ಚಕ್ರ” ಎಂದು ಕೂಡ ಕರೆಯುತ್ತಾರೆ, ಇದು ತಲೆ ಹಾಗೂ ಮೆದುಳಿನ ಮೇಲಿರುತ್ತದೆ. ಇದು 7 ಚಕ್ರಗಳು ಮೊದಲನೇಯದು. ಸಹಸ್ರಾರ ಚಕ್ರ ಕ್ರಿಯಾಶೀಲವಾಗಿರದೇ ಇದ್ದಲ್ಲಿ, ಇದು ಖಿನ್ನತೆ, ಪಾರ್ಕಿನ್‌ಸನ್ಸ್ ಸಿಂಡ್ರೋಮ್, ಸ್ಕಿಝೋಫ್ರೆನಿಯಾ, ಅಪಸ್ಮಾರ, ಸೆನೈಲ್ ಡಿಮೆನ್ಶಿಯಾ, ಅಲ್ಝೈಮರ್‌ ಖಾಯಿಲೆ, ಇತರ ಮನೋರೋಗಗಳು, ಗೊಂದಲ ಮತ್ತು ತಲೆ ಸುತ್ತುವಿಕೆಯನ್ನು ಉಂಟುಮಾಡಬಹುದು.

 

ಆಜ್ಞಾ ಚಕ್ರ

2-150x150

ಆಜ್ಞಾ ಚಕ್ರವನ್ನು “ಲಲಾಟ ಚಕ್ರ” ಎಂದು ಕರೆಯಲಾಗುತ್ತದೆ, ಇದು ಹಣೆಯ ಮಧ್ಯಭಾಗದಲ್ಲಿ ಇರುತ್ತದೆ. ಇದು 7 ಚಕ್ರಗಳು ಎರಡನೇಯದು. ನಮ್ಮ ಆಜ್ಞಾ ಚಕ್ರವನ್ನು ಕ್ರಿಯಾಶೀಲಗೊಳಿಸದೇ ಇದ್ದಲ್ಲಿ, ಇದು ಒತ್ತಡ, ತಲೆನೋವು, ಮೈಗ್ರೇನ್, ದೃಷ್ಟಿ ಸಮಸ್ಯೆಗಳು, ಸಮೀಪದೃಷ್ಟಿ ದೋಷ, ದೂರದೃಷ್ಟಿದೋಷ, ಗ್ಲಾಕೋಮಾ, ಮೋತಿಬಿಂದು, ಸೈನಸ್‌ ಸಮಸ್ಯೆಗಳು, ಕಿವಿಯ ಸಮಸ್ಯೆಗಳು ಇತ್ಯಾದಿ ಉಂಟುಮಾಡುವುದು.

ವಿಶುದ್ಧ ಚಕ್ರ

3-150x150

ವಿಶುದ್ಧ ಚಕ್ರವನ್ನು “ಕಂಠದ ಚಕ್ರ” ಎಂದು ಕರೆಯಲಾಗುತ್ತದೆ, ಇದು ಗಂಟಲು ಹಾಗೂ ಶ್ವಾಸಕೋಶದ ಪ್ರದೇಶದಲ್ಲಿ ಇರುತ್ತದೆ. ಇದು 7 ಚಕ್ರಗಳು ಮೂರನೇಯದು. ನಮ್ಮ ವಿಶುದ್ಧ ಚಕ್ರವು ಕ್ರಿಯಾಶೀಲವಾಗದೇ ಇದ್ದಲ್ಲಿ ಇದು ಥೈರಾಯ್ಡ್ ಸಮಸ್ಯೆಗಳನ್ನು ಉಂಟುಮಾಡಬಹುದು – ಅಂದರೆ ಥೈರಾಯ್ಡ್ ಸಹಜಕ್ಕಿಂತ ಕಡಿಮೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬಹುದು, ಅಥವಾ ಅನೋರೆಕ್ಸಿಯಾ ನರ್ವೋಸಾ (ಇದು ಒಂದಕ್ಕಿಂತ ಹೆಚ್ಚು ಚಕ್ರಗಳಿಗೆ ಸಂಬಂಧಿಸಿದ ಸಮಸ್ಯೆ), ಅಸ್ತಮಾ, ಬ್ರಾಂಕೈಟಿಸ್ ಆಲಿಸುವಿಕೆಯ ಸಮಸ್ಯೆ, ಟಿನೈಟಿಸ್‌ ಮುಂತಾದವುಗಳನ್ನು ಉಂಟುಮಾಡಬಹುದು. ಇದು ಲಲಾಟ ಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣವಾಗುವಂತೆ ಮಾಡಿ ಜೀರ್ಣಾಂಗ ವ್ಯೂಹದ ಮೇಲ್ಭಾಗ, ಬಾಯಿಯ ಆಲ್ಸರ್‌ಗಳು, ಗಂಟಲು ನೋವು, ಟಾನ್ಸಲೈಟಿಸ್ ಮುಂತಾದವುಗಳನ್ನು ಉಂಟುಮಾಡಬಹುದು.

ಅನಾಹತ ಚಕ್ರ

4-150x150

ಅನಾಹತ ಚಕ್ರವನ್ನು “ಹೃದಯ ಚಕ್ರ” ಎಂದೂ ಕರೆಯುವರು, ಇದು ಹೃದಯದ ಭಾಗದಲ್ಲಿರುತ್ತದೆ. ಇದು 7 ಚಕ್ರಗಳು ನಾಲ್ಕನೇಯದು. ನಮ್ಮ ಅನಾಹತ ಚಕ್ರವನ್ನು ಕ್ರಿಯಾಶೀಲಗೊಳಿಸಿದಲ್ಲಿ, ಇದು ಹೃದಯ ರೋಗ, ಕೆಳಗಿನವುಗಳನ್ನು ಒಳಗೊಂಡಂತೆ ರೋಗನಿರೋಧಕ ವ್ಯವಸ್ಥೆಯ ರೋಗಗಳನ್ನುಉಂಟುಮಾಡಬಹುದು: ಮ್ಯಾಲ್ಜಿಯಾ, ಎನ್ಸೆಫಲೈಟಿಸ್ (ಕೆಲವೊಮ್ಮೆ ಇದನ್ನು ದೀರ್ಘಕಾಲ ಸುಸ್ತಿನ ರೋಗ ಎನ್ನುವರು) ಹಾಗೂ ಉಳಿದ ಅನೇಕ ರೋಗನಿರೋಧಕ ವ್ಯವಸ್ಥೆಯ ರೋಗಗಳು, ಅಲರ್ಜಿಗಳು, ಸ್ತನ ಕ್ಯಾನ್ಸರ್.

ಮಣಿಪೂರ ಚಕ್ರ

5-150x150

ಮಣಿಪೂರ ಚಕ್ರವನ್ನು “ಸೌರ ಜಾಲದ ಚಕ್ರ” ಎಂದೂ ಕೂಡ ಕರೆಯುವರು, ಇದು ಜಠರ, ಗುಲ್ಮ ಮತ್ತು ಹೊಟ್ಟೆಯ ಭಾಗದಲ್ಲಿರುತ್ತದೆ. ಇದು 7 ಚಕ್ರಗಳು ಐದನೇಯದು. ಮಣಿಪೂರ ಚಕ್ರ ಕ್ರಿಯಾಶೀಲವಾಗದೇ ಇದ್ದರೆ ಇದು ಮಧುಮೇಹ, ಮೇದೋಜೀರಕಾಂಗದ ಉರಿಯೂತ, ಜಠರದ ರೋಗ, ಪಿತ್ತಕೋಶದ ಆಲ್ಸರ್, ಕಾಲಿಕ್ಸ್ ಖಾಯಿಲೆ, ಮೂತ್ರಕೋಶ ಕಲ್ಲುಗಳಿಗೆ ಕಾರಣವಾಗಬಹುದು.

ಸ್ವಾಧಿಷ್ಠಾನ ಚಕ್ರ

6-150x150

ಸ್ವಾಧಿಷ್ಠಾನ ಚಕ್ರವನ್ನು “ತ್ರಿಕಾಸ್ಥಿ ಚಕ್ರ” ಎಂದೂ ಕರೆಯುವರು, ಇದು ಗರ್ಭಾಶಯ, ದೊಡ್ಡ ಕರುಳು, ಪ್ರೋಸ್ಟೇಟ್, ಅಂಡಾಶಯಗಳು ಮತ್ತು ವೃಷಣಗಳ ಪ್ರದೇಶದಲ್ಲಿರುತ್ತದೆ. ಇದು 7 ಚಕ್ರಗಳು ಆರನೇಯದು. ಸ್ವಾಧಿಷ್ಠಾನ ಚಕ್ರವು ಕ್ರಿಯಾಶೀಲವಾಗದೇ ಇದ್ದರೆ, ಇದು ಋತುಸ್ರಾವದ ವ್ಯತ್ಯಾಸ, ಋತುಚಕ್ರದ ಸಮಸ್ಯೆಗಳು, ಗರ್ಭಾಶಯದ ಫೈಬ್ರಾಯ್ಡ್‌ಗಳು, ಓವೇರಿಯನ್ ಸಿಸ್ಟ್‌ಗಳು, ಇರಿಟೆಬಲ್ ಬಾವೆಲ್ ಸಿಂಡ್ರೋಮ್, ಎಂಡೋಮೆಟ್ರಿಯಾಸಿಸ್, ವೃಷಣದ ರೋಗಗಳು, ಪ್ರೋಸ್ಟೇಟ್ ರೋಗಗಳು ಇತ್ಯಾದಿಗಳನ್ನು ಉಂಟುಮಾಡಬಹುದು.

ಮೂಲಾಧಾರ ಚಕ್ರ

7-150x150

ಮೂಲಧಾರ ಚಕ್ರವನ್ನು “ಮೂಲ ಚಕ್ರ” ಎಂದು ಕರೆಯಲಾಗುತ್ತದೆ, ಇದು ಬೆನ್ನು ಹುರಿಯ ಬುಡದಲ್ಲಿ ಇರುತ್ತದೆ. ಇದು ಏಳು ಚಕ್ರಗಳಲ್ಲಿ ಕೊನೆಯದು, ನಮ್ಮ ಮೂಲಾಧಾರ ಚಕ್ರವು ಕ್ರಿಯಾಶೀಲವಾಗಿರದಿದ್ದರೆ, ಮಲಬದ್ಧತೆ, ಬೇಧಿ, ಮೂಲವ್ಯಾಧಿ, ಕೊಲೈಟಿಸ್, ಕ್ರೋಹ್ನ್‌ನ ಖಾಯಿಲೆ, ಕೈ ಹಾಗೂ ಕಾಲ್ಬೆರಳುಗಳು ತಣ್ಣಗಿರುವುದು, ಪದೇ ಪದೇ ಮೂತ್ರ ವಿಸರ್ಜನೆ, ಅಧಿಕ ರಕ್ತದ ಒತ್ತಡ, ಮೂತ್ರಪಿಂಡದ ಕಲ್ಲುಗಳು, ನಪುಂಸಕತ್ವ ಮತ್ತು ಸೊಂಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.