saralvaastu.com (“ಸೈಟ್”) ಗೆ ಸುಸ್ವಾಗತ. saralvaastu.com ಎಂಬುದು ಒಂದು ವೇದಿಕೆಯಾಗಿದ್ದು, ಅದು ತನ್ನ ಗ್ರಾಹಕರಿಗೆ ಅನನ್ಯವಾದ ಮತ್ತು ವೈಜ್ಞಾನಿಕವಾದ ವಾಸ್ತು ಪರಿಹಾರೋಪಾಯದ ಬಗೆಗಿನ ಮಾಹಿತಿಗಳನ್ನು ಒದಗಿಸುತ್ತದೆ. ನಿಮಗೆ ಆಶ್ರಯ ನೀಡಿದಂತಹ ನಿಮ್ಮ ಕನಸಿನ ಮನೆನೆಲೆಗಳಲ್ಲಿ ನೀವು ಈ ವಾಸ್ತು ಪರಿಹಾರೋಪಾಯಗಳನ್ನು ಮನೆ ಅಥವಾ ಕಾರ್ಯಸ್ಥಳಕ್ಕೆ ಅಳವಡಿಸಿಕೊಂಡಿದ್ದೇ ಆದಲ್ಲಿ, ಅದು ಮಾನವನ ಶರೀರದಲ್ಲಿರುವಂತಹ ಸಪ್ತ ಚಕ್ರಗಳನ್ನು ಸಕ್ರಿಯಗೊಳಿಸುವಲ್ಲಿ ನಿಮಗೆ ಸಹಾಯ ಮಾಡಬಲ್ಲದು. ಇದರ ಫಲವಾಗಿ ನಿಮ್ಮ ಜೀವನದ ಸಮಸ್ಯೆಗಳಿಂದ ನೀವು ಪಾರಾಗಿ ಹೊರಬರಲು ಅದು ನಿಮಗೆ ಸಹಾಯ ಮಾಡಬಲ್ಲದು.

ಸೈಟ್ ಅನ್ನು ಬಳಕೆ ಮಾಡುವ ಸಲುವಾಗಿ, ಈ ನಮ್ಮ ಸೈಟ್‌ನ ಒಬ್ಬ ಸದಸ್ಯನೆಂಬಂತೆ ನೀವು ನೋಂದಾಯಿಸಿಕೊಳ್ಳಬೇಕು (“ಸದಸ್ಯರು”). ನೀವು ಸದಸ್ಯನಾಗಬೇಕೆಂದು ಬಯಸಿದ್ದಲ್ಲಿ ಹಾಗೂ ಸರಳ ವಾಸ್ತುವಿನ (“ಸೇವೆಗಳು”) ಅಡಿಯಲ್ಲಿ ಲಭ್ಯವಿರುವ ಸೇವೆಗಳು ನಿಮಗೆ ದೊರೆಯಬೇಕೆಂದು ನೀವು ಇಚ್ಛಿಸಿದ್ದಲ್ಲಿ, ನೋಂದಾಣಿ ಪ್ರಕ್ರಿಯೆಗಾಗಿ ಮುಂದುವರಿಯುವ ಮುನ್ನ, ಬಳಕೆಯ ನಿಯಮಗಳನ್ನು ಕುರಿತ ಮಾಹಿತಿಯನ್ನು ಕೂಲಂಕುಷವಾಗಿ ತಪ್ಪದೇ ಓದಿರಿ. ಈ ಒಂದು ಬಳಕೆಯ ನಿಯಮಗಳನ್ನು ಕುರಿತಂತಹ ಮಾಹಿತಿಯು ನಿಮ್ಮ ಮತ್ತು ಸಿ ಜಿ ಪರಿವಾರ್ ಪ್ರೈವೇಟ್ ಲಿಮಿಟೆಡ್ ನಡುವೆ ಇರುವಂತಹ ಒಂದು ಕಾನೂನುಬದ್ಧವಾಗಿರುವ ಒಪ್ಪಂದವನ್ನು ರೂಪಿಸುತ್ತದೆ (ಇಲ್ಲಿಂದೀಚೆಗೆ “ಕಂಪನಿ”, “ನಾವು” ಅಥವಾ “ನಮಗೆ” ಎಂದು ಉಲ್ಲೇಖಿಸಲಾಗಿರುತ್ತದೆ). ಈ ಸೈಟ್ ಮತ್ತು ಸೇವೆಗಳನ್ನು ನೀವ ಬಳಕೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಕಂಪನಿಯು ಮಾಹಿತಿಗಳನ್ನು ಒದಗಿಸುತ್ತದೆ.

ನೋಂದಾಯಿಸುವ ಪ್ರಕ್ರಿಯೆಯ ಮೂಲಕ, ಬ್ರೌಸಿಂಗ್ ಮಾಡುವ ಮೂಲಕ ಅಥವಾ ಈ ಸೈಟ್ ಅನ್ನು ಪ್ರವೇಶಿಸುವ ಮೂಲಕ, ನೀವು ಈ ಬಳಕೆಯ ನಿಯಮಗಳನ್ನು ಜಾಗರೂಕತೆಯಿಂದ ಓದಿರುತ್ತೀರಿ ಮತ್ತು ಅರ್ಥಮಾಡಿಕೊಂಡಿರುತ್ತೀರಿ ಹಾಗೂ ಆ ನಿಯಮಗಳಿಗೆ ಬದ್ಧರಾಗಿರಬೇಕೆಂದು ಒಪ್ಪಿಕೊಂಡಿರುತ್ತೀರಿ ಎಂಬುದನ್ನು ನೀವು ಬೇಷರತ್ತಾಗಿ ಮತ್ತು ಮಾರ್ಪಡಿಸಲಾಗದ ರೀತಿಯಲ್ಲಿ ದೃಢೀಕರಿಸುತ್ತೀರಿ. ಈ ಒಪ್ಪಂದದ ಒಳಗೆ ಪ್ರವೇಶಿಸಲು ನೀವು ಕಾನೂನುಬದ್ಧವಾಗಿರುವ ಹಕ್ಕು, ಒಪ್ಪಿಗೆ, ಅಧಿಕಾರ ಮತ್ತು ಸಾಮರ್ಥ್ಯವನ್ನು ಪಡೆದಿರುವಿರಿ ಎಂಬುದನ್ನೂ ಸಹ ನೀವು ಪ್ರತಿನಿಧಿಸುತ್ತೀರಿ ಮತ್ತು ಭರವಸೆ ನೀಡುತ್ತೀರಿ. ಈ ಒಪ್ಪಂದವನ್ನು ಪ್ರವೇಶಿಸುವುದರಿಂದ ನಿಮ್ಮನ್ನು ನಿರ್ಬಂಧಿಸುವಂಥ ಯಾವುದೇ ಸಮರ್ಥ ಪ್ರಾಧಿಕಾರವಾಗಲೀ, ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ನ್ಯಾಯಾಲಯದ, ಟ್ರಿಬ್ಯೂನಲ್ ನಿಂದ ಹೊರಡಿಸಿದ ಯಾವುದೇ ಆದೇಶವಾಗಲೀ ಅಥವಾ ತೀರ್ಪು ಅಥವಾ ತಡೆಯಾಜ್ಞೆಯೇ ಆಗಲೀ ಯಾವುದೇ ಅನ್ವಯವಾಗುವ ಕಾನೂನಿನ ಮೂಲಕ ನಿಮ್ಮನ್ನು ನಿಷೇಧಿಸಲಾಗುವುದಿಲ್ಲ ಅಥವಾ ತಡೆಯಲಾಗುವುದಿಲ್ಲ.

“ಸದಸ್ಯರು”, “ಬಳಕೆದಾರ” ಅಥವಾ “ನೀವು” ಎಂದರೆ ಕಂಪನಿಯ ಈ ಅಧಿಕೃತ ಸೈಟ್ ಅನ್ನು ಪ್ರವೇಶಿಸುವಂತಹ ಯಾವುದೇ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ. ಅತಿಥೇಯವಾಗಿ ಸತ್ಕಾರ ಮಾಡುವ, ಪ್ರಕಟಕೆ ಮಾಡುವ, ಹಂಚಿಕೊಳ್ಳುವ, ವರ್ಗಾವಣೆ ಮಾಡುವ, ಪ್ರದರ್ಶಿಸುವ ಮೂಲಕ ಅಥವಾ ಮಾಹಿತಿ/ದೃಷ್ಟಿಕೋನಗಳನ್ನು ಅಪ್ಲೋಡ್ ಮಾಡುವ ಉದ್ದೇಶಗಳಿಗಾಗಿ ಕಂಪನಿಯು ಒದಗಿಸಿರುವಂತಹ ಸೈಟ್ ಅನ್ನು ಬಳಕೆದಾರನು ಉಪಯೋಗಿಸಿಕೊಳ್ಳಬಹುದು. ಹಾಗೂ ಕಂಪನಿಯ ಈ ಸೈಟ್ ಅನ್ನು ಉಪಯೋಗಿಸಿಕೊಳ್ಳುವಲ್ಲಿ ಜಂಟಿಯಾಗಿ ಬೇರೆ ವ್ಯಕ್ತಿಗಳು ಭಾಗವಹಿಸುವುದನ್ನು ಸೇರಿಸಲಾಗಿರುತ್ತದೆ.

  • ಅರ್ಹತೆ
    1. ಸೈಟ್‌ನ ಒಬ್ಬ ಸದಸ್ಯನಂತೆ ನೋಂದಾಯಿಸಕೊಳ್ಳಲು ಅಥವಾ ಈ ಸೈಟನ್ನು ಬಳಸಬೇಕಾದರೆ, ಭಾರತದ ಕಾನೂನಿನ ಪ್ರಕಾರ ನೀವು ಒಂದು ಒಪ್ಪಂದವನ್ನು ಮಾಡಿಕೊಳ್ಳಲು ಕಾನೂನುಬದ್ಧವಾಗಿ ಸಮರ್ಥವಾಗಿರಬೇಕು. ಒಂದುವೇಳೆ ನೀವುಯಾವುದೇ ತಪ್ಪಾದ ಮನವಿಯನ್ನು ಮಾಡಿದ್ದೀರೆಂಬುದು ಯಾವುದೇ ಸಮಯದಲ್ಲಾದರೂ ನಮಗೆ ಕಂಡುಬಂದರೆ, ಆಗ ಕಂಪನಿಯು ಈ ಸೈಟನ್ನು ಬಳಕೆ ಮಾಡುವ ನಿಮ್ಮ ಹಕ್ಕನ್ನು ಮತ್ತು/ಅಥವಾ ನಿಮ್ಮ ಸದಸ್ಯತ್ವವನ್ನು ಕೊನೆಗೊಳಿಸುವುದರೊಂದಿಗೆ ತನ್ನ ಹಕ್ಕನ್ನು ಕಾಯ್ದಿರಿಸುತ್ತದೆ ಹಾಗೂ/ಅಥವಾ ಯಾವುದೇ ಸ್ವಭಾವದ ಯಾವುದೇಹೊಣೆಗಾರಿಕೆಗಳಿಲ್ಲದೆ ಸೇವೆಯನ್ನು ಅಂತ್ಯಗೊಳಿಸುತ್ತದೆ.
    2. ಸೈಟ್ ಸದಸ್ಯತ್ವವು ವ್ಯಕ್ತಿಗತ ಸದಸ್ಯನಿಗೆ ಮಾತ್ರ ಪ್ರತ್ಯೇಕವಾಗಿ ಲಭ್ಯವಿರುತ್ತದೆ ಹಾಗೂ ಕಂಪನಿಗಳಿಗೆ, ಎಲ್‌ಎಲ್‌ಪಿಗಳಿಗೆ, ಸಹಭಾಗಿತ್ವ ಸಂಸ್ಥೆಗಳಿಗೆ, ಸಂಸ್ಥೆಗಳಿಗೆ, ಟ್ರಸ್ಟ್‌ಗಳಿಗೆ, ಸೊಸೈಟಿಗಳಿಗೆ, ವ್ಯಾಪಾರೋದ್ಯಮಗಳಿಂದ ಮತ್ತು / ಅಥವಾವ್ಯಕ್ತಿಗಳಿಂದ ರಚನೆಯಾದ ಸಂಘಸಂಸ್ಥೆಗಳಿಗೆ ಲಭ್ಯವಿರುವುದಿಲ್ಲ.  
  • ಕಾಲಾವಧಿ
    1. ನೀವು ಸೈಟನ್ನು ಬಳಸುವ ತನಕ ಅಥವಾ ಸೈಟ್‌ನ ಸದಸ್ಯನಾಗಿ ನೀವು ಎಲ್ಲಿಯವರೆಗೆ ಉಳಿದಿರುವಿರೋ ಅಲ್ಲಿಯವರೆಗೆ ಈ ಒಪ್ಪಂದವು ಸಂಪೂರ್ಣವಾಗಿ ಜಾರಿಯಲ್ಲಿತಕ್ಕದ್ದು ಮತ್ತು ಕಾರ್ಯಗತವಾಗಿ ಉಳಿದಿರತಕ್ಕದ್ದು. ಯಾವುದೇ ಸಮಯದಲ್ಲಿಬೇಕಾದರೂ, ಯಾವುದೇ ಕಾರಣವನ್ನು ಬೇಕಾದರೂ ನೀಡಿ ನೀವು ನಿಮ್ಮ ಸದಸ್ಯತ್ವವನ್ನು ಕೊನೆಗೊಳಿಸಬಹುದು. ನಿಮ್ಮ ಸದಸ್ಯತ್ವವನ್ನು ಕೊನೆಗಾಣಿಸುವಂತಹ ಆ ಸಂದರ್ಭದಲ್ಲಿ ನೋಂದಣಿ ಶುಲ್ಕಗಳ ಮರುಪಾವತಿಯನ್ನು, ಸಂದರ್ಶನ ನೀಡುವ ಶುಲ್ಕಗಳನ್ನು, ಸಲಹಾ ಶುಲ್ಕಗಳನ್ನು, ವಸ್ತುಗಳ ಮತ್ತು/ಅಥವಾ ಇತರ ವಸ್ತುಗಳ ಸಂಗ್ರಹಣೆಗೆವೆಚ್ಚಗಳನ್ನು, ಶುಲ್ಕಗಳನ್ನು ಕುರಿತಂತೆ ಯಾವುದೇ ರೀತಿ ಮರುಪಾವತಿಸುವುದಕ್ಕೆ ನೀವು ಅರ್ಹರಾಗಿರುವುದಿಲ್ಲ. ಒಂದುವೇಳೆ ನೀವು ಪಾವತಿಸಿದ್ದರೆ, ಮತ್ತು/ಅಥವಾ ಸೇವೆಗಳ ಅಡಿಯಲ್ಲಿ ನೀವು ಭಾಗಿಯಾಗಿದ್ದರೆ, ಅಲ್ಲಿ ಲಿಖಿತರೂಪದಲ್ಲಿ ತಿಳಿಸಲಾಗಿದ್ದರೆ ಮಾತ್ರ, ಅದನ್ನು ಕಂಪನಿಯು ಪರಿಗಣಿಸಲಾಗುವುದು. ಹಾಗಾಗಿ, ನಿಮ್ಮ ಇಮೇಲ್ ವಿಳಾಸಕ್ಕೆ ಒಂದುಮುನ್ಸೂಚನೆಯನ್ನು ಕಳುಹಿಸುವ ಮೂಲಕ ಅಥವಾ ಲಿಖಿತ ಸೂಚನೆಯನ್ನು ಕಳುಹಿಸದೆ ಮತ್ತು/ಅಥವಾ ನೀವು ಒದಗಿಸಿದಂತಹ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಕಳುಹಿಸದೇ ಮತ್ತು/ಅಥವಾ ಕರೆ ಮಾಡದೆಯೇ ಯಾವುದೇ ಕಾರಣಕ್ಕಾಗಿ ನಿಮ್ಮ ಸದಸ್ಯತ್ವವನ್ನು ಮತ್ತು/ಅಥವಾ ಸೈಟ್‌ಗೆ ಪ್ರವೇಶಿಸುವ ನಿಮ್ಮ ಹಕ್ಕನ್ನು ಕಂಪನಿಯುಕೊನೆಗೊಳಿಸಬಹುದು.
    2. ಈ ಒಪ್ಪಂದದ ಎಲ್ಲಾ ನಿಬಂಧನೆಗಳು ತಮ್ಮ ಸ್ವಭಾವತಃ ಅಂತ್ಯವನ್ನು ಉಳಿಸಿಕೊಳ್ಳಲೇಬೇಕು ಅಂದರೆ ಸೀಮಿತತೆಯಿಲ್ಲದೇ, ಹಕ್ಕು ನಿರಾಕರಣೆಗಳಿಲ್ಲದೆ, ನಷ್ಟ ಪರಿಹಾರವಿಲ್ಲದೇ ಮತ್ತು ಬಾಧ್ಯತೆಯ ಮಿತಿಗಳಿಲ್ಲದೆಯೇ ಸೇರಿದಂತೆ, ಸೇವೆಯಅಂತ್ಯವನ್ನು ಉಳಿಸಿಕೊಳ್ಳತಕ್ಕದ್ದು. ಸೇವೆಗಳ ಬಳಕೆಯ ಅಂತ್ಯವನ್ನು ಮತ್ತು ಸೇವೆಗಳನ್ನು ಪಡೆಯುವ ನಿಮ್ಮ ಹಕ್ಕನ್ನು ಕೊನೆಗೊಳಿಸುವ ನಮ್ಮ ಕಂಪನಿಯ ಈ ಕ್ರಮವು ಅಂತಹ ಅಂತ್ಯಕ್ಕೂ ಮುಂಚಿತವಾಗಿ ಉಂಟಾಗುವ ಅಥವಾ ಉದ್ಭವಿಸುವ ನಿಮ್ಮ ಯಾವುದೇ ಜವಾಬ್ದಾರಿಗಳನ್ನಾಗಲೀ/ಅನಿವಾರ್ಯತೆಗಳನ್ನಾಗಲೀ ಕಡಿಮೆಮಾಡಲು ಸಾಧ್ಯವಿಲ್ಲ. 
  • ಪಾವತಿ, ಶುಲ್ಕಗಳು ಮತ್ತು ತೆರಿಗೆಗಳು
    1. ಸೇವೆಗಳ ಬಳಕೆಯಲ್ಲಿ ನಿಮಗೆ ಅನ್ವಯವಾಗುವ ರೀತಿಯಲ್ಲಿಯೇ, ನೀವು ನೋಂದಣಿ ಶುಲ್ಕಗಳನ್ನು, ಭೇಟಿನೀಡುವ ಶುಲ್ಕಗಳನ್ನು, ಸಲಹಾ ಶುಲ್ಕಗಳನ್ನು ಮತ್ತು ಯಾವುದೇ ಇತರ ಶುಲ್ಕಗಳನ್ನು ಪಾವತಿಸಲು ಒಪ್ಪಿಕೊಂಡಿದ್ದೀರಿ. ಅಲ್ಲದೇ ಹೀಗೆಹೇಳಲಾದ ಶುಲ್ಕಗಳ ರಚನೆಯಿಂದ ನೀವು ಯಾವುದೇ ಕಾರಣಕ್ಕೂ ಉಪಾಯವಾಗಿ ತಪ್ಪಿಸಿಕೊಳ್ಳುವಂತಿಲ್ಲ.
    2. ಸೈಟ್ ನಲ್ಲಿ ಲಭ್ಯವಿರುವಂತಹ ಕಂಪನಿಯ ವಿವರಗಳಿಗೆ ಸಂಬಂಧಪಟ್ಟಂತೆ RTGS ಮೂಲಕ ಅಥವಾ NEFT ಮೂಲಕ ಅಥವಾ ಸೈಟ್‌ನಲ್ಲಿ ಮಾಡಲಾದ ಸೌಲಭ್ಯದ ಮೂಲಕ ಆನ್ಲೈನ್ ನಲ್ಲಾಗಲೀ ಹೇಳಲಾದ ಶುಲ್ಕಗಳನ್ನುಪಾವತಿಸುವ ಅವಕಾಶವಿರುತ್ತದೆ. ಆನ್ಲೈನ್ ಪೇಮೆಂಟ್ ಪ್ರಕ್ರಿಯೆಗೆ ಮೂರನೇ ವ್ಯಕ್ತಿಗಳ ಬೆಂಬಲ ಮತ್ತು ಸೇವೆಗಳ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ ನಿಮಗೆ ಉಂಟಾದ ಯಾವುದೇ ನಷ್ಟ ಅಥವಾ ಹಾನಿಗಾಗಲೀ ಕಂಪನಿಯು ಜವಾಬ್ದಾರನಾಗಿರುವುದಿಲ್ಲ ಏಕೆಂದರೆ ಈ ಮೂರನೇ ವ್ಯಕ್ತಿಗಳು ಕಂಪನಿಯ ನಿಯಂತ್ರಣವನ್ನು ಮೀರಿ ಆಚೆಗೆಕಾರ್ಯನಿರ್ವಹಿಸುತ್ತಾರೆ. ಸೂಚಿಸಿದ ಶುಲ್ಕಗಳನ್ನು ಆಫ್ಲೈನ್‌ನಲ್ಲೂ ಸಹ ಪಾವತಿಸುವ ಅವಕಾಶವಿದೆ, ನಿಮ್ಮ ಆವರಣಗಳಿಗೆ ಅವರು ಭೇಟಿ ಕೊಟ್ಟ ಸಮಯದಲ್ಲಿ ಕಂಪನಿಯ ಪ್ರತಿನಿಧಿಗಳಿಗೆ ಹಣವನ್ನು ಹಸ್ತಾಂತರಿಸುವ ಮೂಲಕ ಶುಲ್ಕಗಳನ್ನು ಆಫ್ಲೈನ್‌ನಲ್ಲಿ ಪಾವತಿಸಬಹುದು.
    3. ಎಲ್ಲಾ ಶುಲ್ಕಗಳು ಪ್ರತ್ಯೇಕವಾಗಿರುವಂತಹ ತೆರಿಗೆಗಳು, ಕರವಸೂಲಿಗಳು, ಸುಂಕಗಳು ಇತ್ಯಾದಿಗಳಿಗೆ ಅನ್ವಯಿಸುತ್ತವೆ.
    4. ಸೈಟ್‌ನಲ್ಲಿ ಒದಗಿಸುವ ಮೂಲಕ ಶುಲ್ಕದ ರಚನಾಕ್ರಮವನ್ನು ಮಾರ್ಪಡಿಸುವಂತಹ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿರುತ್ತೇವೆ, ಈ ನಮ್ಮ ಮಾರ್ಪಡಿಸಿದ ಶುಲ್ಕ ರಚನೆಯನ್ನು ಮಾನ್ಯತೆಯಿರುವುದಾಗಿ ಮತ್ತು ಸಮ್ಮತಿಸಿದ ಸಂವಹನವೆಂಬಂತೆ ಪರಿಗಣಿಸಲಾಗುವುದು.
    5. ಪಾವತಿಗಳನ್ನು ಮಾಡುವ ಪ್ರಕ್ರಿಯೆಯ ಸಲುವಾಗಿ, ನಮಗೆ ನಿಮ್ಮ ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ಸಂಖ್ಯೆ ಇತ್ಯಾದಿಗಳ ಮಾಹಿತಿಯ ಅಗತ್ಯ ಬೀಳಬಹುದು.
  • ರದ್ದತಿ ಮತ್ತು ಮರುಪಾವತಿಯ ನೀತಿ

ನೋಂದಣಿಗಾಗಿ ನೀವು ಪಾವತಿಸಿದ ಭೇಟಿ ನೀಡುವ ಮತ್ತು ಸಲಹಾ ಶುಲ್ಕಗಳನ್ನು ಯಾವುದೇ ಕಾರಣಕ್ಕೂ ಮರುಪಾವತಿಸುವ ಅವಕಾಶವಿರುವುದಿಲ್ಲ. ನಿಮ್ಮ ಆವರಣಗಳಲ್ಲಿ ನಮ್ಮ ಪ್ರತಿನಿಧಿಗಳ ಭೇಟಿಯ ನಂತರದಲ್ಲಿ ಅಥವಾ ಭೇಟಿಯ ಸಂದರ್ಭದಲ್ಲಿ ನಾವು ನೀಡಿದ ಸೇವೆಗಳಿಗೆ ಸಂಬಂಧಿಸಿದಂತೆ ತರುವಾಯ ಹೊರಗುಳಿಯಲು ನಿರ್ಧರಿಸಿದಲ್ಲಿ, ಒಂದು ವೇಳೆ ನಮ್ಮ ಸೇವೆಗಳಿಗೆ ನೀವು ಒಪ್ಪಿಗೆಯನ್ನು ನೀಡಿರುತ್ತೀರಿ ಎಂದಾದಲ್ಲಿ ಮುಂದೆ ಅದನ್ನು ಒದಗಿಸಲಾಗುತ್ತದೆ, ಆಗ ಮಾತ್ರ ನಮ್ಮೊಂದಿಗೆ ಸಂವಹನ ಮಾಡಬೇಕಾದ ಕಾರಣದಿಂದ ಭೇಟಿ ನೀಡುವ ಶುಲ್ಕವನ್ನು ನೀವು ಪಾವತಿಸುವ ಜವಾಬ್ದಾರಿಯನ್ನು ಪಡೆಯತಕ್ಕದ್ದು.

  • ವಿಷಯದಲ್ಲಿನ ಸ್ವಾಮ್ಯದ ಹಕ್ಕುಗಳು

ಸೈಟ್‌ನಲ್ಲಿ ಮತ್ತು ಸೇವೆಗಳಲ್ಲಿ ದೊರಕುವ ಎಲ್ಲಾ ಸ್ವಾಮ್ಯದ ಹಕ್ಕುಗಳನ್ನು ಕಂಪನಿಯು ಹೊಂದಿರುತ್ತದೆ ಮತ್ತು ಆ ಹಕ್ಕುಗಳನ್ನು ಉಳಿಸಿಕೊಳ್ಳುತ್ತದೆ. ಈ ಸೈಟ್ ಕೃತಿಸ್ವಾಮ್ಯವಾಗಿರುವ ಮೆಟೀರಿಯಲ್ ಅನ್ನು, ಟ್ರೇಡ್‌ಮಾರ್ಕ್‌ಗಳನ್ನು ಹಾಗೂ ಕಂಪನಿಯ ಮತ್ತು ಇದರ ಪರವಾನಗಿದಾರರ ಸ್ವಾಮ್ಯದ ಮಾಹಿತಿಯನ್ನು ಒಳಗೊಂಡಿರುತ್ತದೆ. ಬಳಕೆದಾರನಿಂದ ಪಡೆದುಕೊಳ್ಳಲಾಗಿರುವಂತಹ ಯಾವುದೇ ಅನುಮತಿಗೆ ಸಂಬಂಧಪಟ್ಟಂತೆ ಅಥವಾ ಸಾರ್ವಜನಿಕ ಡೊಮೇನ್‌ನಲ್ಲಿರುವ ಮಾಹಿತಿಯನ್ನು ಹೊರತುಪಡಿಸಿ, ಯಾವುದೇ ಅಂತಹ ಸ್ವಾಮ್ಯದ ಮಾಹಿತಿಯನ್ನು ನೀವು ನಕಲಿಸುವಂತಿಲ್ಲ, ಮಾರ್ಪಡಿಸುವಂತಿಲ್ಲ, ಪ್ರಕಟಿಸುವಂತಿಲ್ಲ, ರವಾನಿಸುವಂತಿಲ್ಲ, ವಿತರಿಸುವಂತಿಲ್ಲ, ನಿರ್ವಹಿಸುವಂತಿಲ್ಲ, ಪ್ರದರ್ಶಿಸುವಂತಿಲ್ಲ, ಅಥವಾ ಮಾರಾಟ ಮಾಡುವಂತಿಲ್ಲ. ಅಂತಹ ಯಾವುದೇ ನಡವಳಿಕೆಯಾಗಲಿ ಅಥವಾ ಪ್ರಯತ್ನಿಸಲಾದ ವರ್ತನೆಯಾಗಲೀ ಕಂಡುಬಂದಲ್ಲಿ ಅದನ್ನು ಈ ಒಪ್ಪಂದದ ಉಲ್ಲಂಘನೆಗೆ ಸಂಬಂಧಪಟ್ಟಂತೆ ಕಾಯಿದೆಬದ್ಧವಾಗಿ ರೂಪಿಸತಕ್ಕದ್ದು. ಯಾವುದೇ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಅನ್ವಯವಾಗುವ ಕಾನೂನುಕ್ರಮಗಳನ್ನು (ಸಿವಿಲ್ ಮತ್ತು/ಅಥವಾ ಕ್ರಿಮಿನಲ್) ತೆಗೆದುಕೊಳ್ಳುವ ಹಕ್ಕನ್ನು ಕಂಪನಿಯು ಕಾಯ್ದಿರಿಸುತ್ತದೆ.

  • ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ವಿಷಯ
    1. ಈ ಒಪ್ಪಂದದ ಏಕೈಕ ತೀರ್ಮಾನವನ್ನು ಕಂಪನಿಯು ಉಲ್ಲಂಘಿಸುತ್ತದೆ ಎಂದಾದಲ್ಲಿ, ಅಥವಾ ಬಹುಶಃ ಅದು ಆಕ್ರಮಣಕಾರಿ ಕಾನೂನುಬಾಹಿರವಾಗಿರಬಹುದು ಅಥವಾ ಕಂಪನಿಯ ಮತ್ತು/ಅಥವಾ ಅದರ ಸೈಟ್ ಸದಸ್ಯರ ಸುರಕ್ಷತೆಯಹಕ್ಕುಗಳನ್ನು ಉಲ್ಲಂಘಿಸಬಹುದಾದಲ್ಲಿ, ಅವರಿಗೆ ಹಾನಿಯಾಗಬಹುದಾದಲ್ಲಿ ಅಥವಾ ಬೆದರಿಕೆ ಹಾಕಬಹುದಾದಲ್ಲಿ ಅಂತಹ ಯಾವುದೇ ಪಟ್ಟೀಕರಣವನ್ನು, ಅಂಶವನ್ನು, ಸಂವಹನವನ್ನು, ಫೋಟೋಗಳನ್ನು, ಪ್ರೊಫೈಲ್‌ಗಳನ್ನು (ಸಮಗ್ರವಾಗಿ “ವಿಷಯವಸ್ತು”) ಕಂಪನಿಯು ಅಳಿಸಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡಿರುತ್ತೇನೆ ಮತ್ತುಒಪ್ಪಿಕೊಳ್ಳುತ್ತೇನೆ.
    2. ನೀವು ಸೇವೆಯ ಮೂಲಕ ಇತರೆ ಸದಸ್ಯರಿಗೆ ಲಭ್ಯವಾಗುವಂತೆ ಮಾಡುವ ಅಥವಾ ನೀವು ಅಪ್ಲೋಡ್ ಮಾಡುವ, ಪೋಸ್ಟ್/ಇಮೇಲ್ ಮಾಡುವ, ರವಾನಿಸುವ ಯಾವುದೇ ಇತರೆ ಮಾಹಿತಿಯನ್ನು, ಎಲ್ಲಾ ಡೇಟಾ, ಟೆಕ್ಸ್ಟ್, ಫೋಟೋಗ್ರಾಫ್‌ಗಳು,ಗ್ರಾಫಿಕ್ಸ್, ಸಂವಹನಗಳು, ಟ್ಯಾಗ್‌ಗಳು, ಅಥವಾ ಬೇರೆ ವಿಷಯಗಳಿಗೆ ನೀವು ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತೀರಿ ಎಂದು ನೀವು ಈ ಮೂಲಕ ಒಪ್ಪಿಕೊಳ್ಳುತ್ತೀರಿ ಮತ್ತು ಅರ್ಥಮಾಡಿಕೊಳ್ಳುತ್ತೀರಿ. ಸೇವೆಯ ಮೂಲಕ ಪೋಸ್ಟ್ ಮಾಡಲಾದ ವಿಷಯವನ್ನು ಕಂಪನಿಯು ಯಾವುದೇ ಕಾರಣಕ್ಕೂ ನಿಯಂತ್ರಿಸುವುದಿಲ್ಲ ಹಾಗೂ ಅಂತಹ ವಿಷಯದ ನಿಖರತೆ,ಸಮಗ್ರತೆ ಅಥವಾ ಗುಣಮಟ್ಟವನ್ನು ಕಂಪನಿಯು ಖಾತರಿಪಡಿಸುವುದಿಲ್ಲ. ಯಾವುದೇ ಸನ್ನಿವೇಶಗಳಲ್ಲಾಗಲೀ ಕಂಪನಿಯು, ಯಾವುದೇ ವಿಷಯದ, ಯಾವುದೇ ದೋಷಗಳು ಅಥವಾ ಲೋಪಗಳು ಸೇರಿದಂತೆ, ಯಾವುದೇ ರೀತಿಯಲ್ಲಿ ಸೀಮಿತವಾಗಿರದೆ ಕಂಪನಿಯು ಯಾವುದೇ ನಷ್ಟಕ್ಕಾಗಲೀ ಅಥವಾ ಯಾವುದೇ ರೀತಿಯ ಹಾನಿಗಾಗಲೀ ಜವಾಬ್ದಾರಿಯಾಗಿರತಕ್ಕದ್ದು. ಅಂದರೆ ಸೇವೆಯ ಮೂಲಕ ಇತರೆ ಸದಸ್ಯರಿಗೆ ಲಭ್ಯವಿರುವಂತೆ ಮಾಡಲಾದ ಯಾವುದೇ ಅಂಶವನ್ನು ಪೋಸ್ಟ್ ಮಾಡಿದ, ಇಮೇಲ್ ಮಾಡಿದ, ರವಾನಿಸಿದ ಬಳಕೆಯ ಪರಿಣಾಮವಾಗಿ ಉಂಟಾಗಬಹುದಾದ ಯಾವುದೇ ಸಮಸ್ಯೆಗೆ ಕಂಪನಿಯು ಹೊಣೆಗಾರನಾಗಿರತಕ್ಕದ್ದು. ಆದಾಗ್ಯೂ, ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ವಿಷಯವನ್ನು ಕುರಿತಂತೆ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವ ಹಕ್ಕನ್ನು ಕಂಪನಿಯು ಮೀಸಲಾಗಿಟ್ಟುಕೊಂಡಿದೆ. ಈ ಹಕ್ಕನ್ನು ಜಾರಿಗೆ ತರುವಲ್ಲಿ ಕಂಪನಿಯು ಸೈಟ್‌ನಲ್ಲಿ ನೀವು ಪೋಸ್ಟ್ ಮಾಡಿದ ವಿಷಯಕ್ಕೆ ಬೆಂಬಲ ನೀಡುವ ಯಾವುದೇ ದಾಖಲಿತ ಸಾಕ್ಷ್ಯಾಚಿತ್ರವನ್ನು ಒದಗಿಸಬೇಕೆಂದು ಕಂಪನಿಯು ನಿಮಗೆ ತಿಳಿಸಬಹುದು. ಕಂಪನಿಯ ತೃಪ್ತಿಗಾಗಿ ಅಂತಹ ದಾಖಲಿತ ಸಾಕ್ಷ್ಯಾಚಿತ್ರವನ್ನು ಒದಗಿಸುವಲ್ಲಿ ನೀವು ವಿಫಲವಾದರೆ, ಆಗ ಆ ನಡವಳಿಕೆಯು ಈ ಒಪ್ಪಂದದ ಉಲ್ಲಂಘನೆಯನ್ನು ಕಾಯಿದೆ ಬದ್ಧವಾಗಿ ರೂಪಿಸುತ್ತದೆ. ಆಗ ಕಂಪನಿಯು ತನ್ನ ವಿವೇಚನೆಯೊಂದಿಗೆ, ಯಾವುದೇ ಮರುಪಾವತಿ ಇಲ್ಲದೆ ನಿಮ್ಮ ಸದಸ್ಯತ್ವವನ್ನು ಕೊನೆಗೊಳಿಸುತ್ತದೆ.
    3. ಸೈಟ್‌ನ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ವಿಷಯವನ್ನು/ಜಾಹೀರಾತುಗಳನ್ನು ಪೋಸ್ಟ್ ಮಾಡುವ ಮೂಲಕ ನೀವು ಸ್ವಯಂಚಾಲಿತವಾಗಿ ಅನುದಾನ ಪಡೆಯುತ್ತೀರಿ ಹಾಗೂ ನೀವು ಕಂಪನಿಗೆ ಮತ್ತು ಇತರೆ ಸದಸ್ಯರಿಗೆಮಾರ್ಪಡಿಸಲಾಗದ, ಶಾಶ್ವತವಾದ, ಪ್ರತ್ಯೇಕವಲ್ಲದ, ಸಂಪೂರ್ಣವಾಗಿ ಪಾವತಿಸಿದ ಅನುದಾನ ನೀಡುವ ಹಕ್ಕನ್ನು ಪಡೆಯುವಿರಿ ಎಂದು ನೀವು ಖಚಿತಪಡಿಸುತ್ತೀರಿ ಮತ್ತು ಪ್ರತಿನಿಧಿಸುತ್ತೀರಿ. ಈ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಯನ್ನು ವಿಶ್ವದಾದ್ಯಂತ ಬಳಕೆಮಾಡಲು, ಪ್ರದರ್ಶಿಸಲು, ನಿರ್ವಹಿಸಲು ಮತ್ತು ಹಂಚಲು ಪರವಾನಗಿಯನ್ನು ನೀವು ಪಡೆದಿರುತ್ತೀರಿ.ಮೇಲ್ಕಂಡ ಉಪಪರವಾನಗಿಗಳನ್ನು ಅನುಮೋದಿಸಲು ಮತ್ತು ಪ್ರಮಾಣೀಕರಿಸಲು ಕಂಪನಿಯು ಬದ್ಧವಾಗಿರುತ್ತದೆ. ಸೈಟ್‌ನಲ್ಲಿ ಇರುವ ಅಂತಹ ಮಾಹಿತಿಯನ್ನು ವಿಷಯವನ್ನು ಇತರ ಕೃತಿಗಳಲ್ಲಿ ಅಳವಡಿಸಿಕೊಳ್ಳಲು, ಮತ್ತು ಬೇರೊಂದು ವ್ಯುತ್ಪನ್ನದ ಕಾರ್ಯಗಳಲ್ಲಿ ತಯಾರಿಸಲು ಕಂಪನಿಯು ಅಧಿಕೃತವಾಗಿ ಸಮ್ಮತಿ ನೀಡುತ್ತದೆ.
    4. ಸೈಟ್‌ನಲ್ಲಿ ಕಾನೂನುಬಾಹಿರವಾದ ಮತ್ತು ನಿಷೇಧಿಸಲಾಗಿರುವ ಒಂದು ಸೂಚಿತ ವಿಷಯದ ಪಟ್ಟಿಯನ್ನು ಕುರಿತ ವಿವರಣೆಯು ಈ ಕೆಳಕಂಡಂತಿದೆ. ನೀವು ಅಂತಹ ಕಾನೂನುಬಾಹಿರವಾದ ಮತ್ತು ನಿಷೇಧಿಸಲಾಗಿರುವ ವಿಷಯವನ್ನು ಅಥವಾಮೆಟೀರಿಯಲ್ ಅನ್ನು ಪೋಸ್ಟ್ ಮಾಡಿದಲ್ಲಿ ಆಗ ಕಂಪನಿಯು ತನ್ನ ವಿವೇಚನೆಯೊಂದಿಗೆ ತನಿಖೆ ನಡೆಸುತ್ತದೆ ಮತ್ತು ನಿಮ್ಮ ವಿರುದ್ಧ ಸೂಕ್ತವಾದ ಕಾನೂನುಕ್ರಮವನ್ನು ತೆಗೆದುಕೊಳ್ಳುತ್ತದೆ, ಈ ಕ್ರಮದಲ್ಲಿ ಯಾವುದೇ ಮಿತಿಯಿಲ್ಲದೆ ಕಂಪನಿಯು ಸಂವಹನದ ಅಪರಾಧವನ್ನು ತೆಗೆದುಹಾಕುತ್ತದೆ/ಸೇವೆಯಿಂದ ವಿಷಯವನ್ನು ಅಳಿಸಿಹಾಕುತ್ತದೆ ಹಾಗೂ ಯಾವುದೇಮರುಪಾವತಿಯಿಲ್ಲದೆ ನಿಮ್ಮ ಸದಸ್ಯತ್ವವನ್ನು ಕೊನೆಗೊಳಿಸುತ್ತದೆ.
    5. ಕಾನೂನುಬಾಹಿರವಾದ ಮತ್ತು ನಿಷೇಧಿತ ಅಂಶವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ, ಅವುಗಳಲ್ಲಿ:
      1. ಸಮುದಾಯಕ್ಕೆ ಸ್ಪಷ್ಟವಾದ ಆಕ್ರಮಣಕಾರಿ ದಾಳಿಯಾಗುತ್ತದೆ, ಅಂದರೆ ಯಾವುದೇ ಗುಂಪಿನ ಅಥವಾ ವ್ಯಕ್ತಿಯ ವಿರುದ್ಧ ಯಾವುದೇ ಬಗೆಯ ದೈಹಿಕ ಹಾನಿ ಅಥವಾ ಜನಾಂಗೀಯತೆ, ಧರ್ಮಾಂಧತೆ, ದ್ವೇಷವನ್ನು ಉತ್ತೇಜಿಸುವಂತಹ ಅಂಶ ಅಥವಾ ವಿಚಾರ;
      2. ಮತ್ತೊಬ್ಬ ವ್ಯಕ್ತಿಯ ಕಿರುಕುಳಕ್ಕೆ ಬೆಂಬಲನೀಡುವ ಪ್ರಕ್ರಿಯೆಯನ್ನು ಅಥವಾ ಪದೇಪದೇ ಪೀಡಿಸುವ ಅಂಶವನ್ನು;
      3. “ಜಂಕ್ ಮೇಲ್‌ನ”, “ಚೈನ್ ಲೆಟರ್ಸ್” ರವಾನೆಯನ್ನು ಒಳಗೊಂಡಿರುತ್ತದೆ ಅಥವಾ ಅಪೇಕ್ಷಿಸದ ಸಮೂಹ ಮೇಲ್ ಮಾಡುವುದನ್ನು ಅಥವಾ “ಸ್ಪ್ಯಾಮಿಂಗ್” ಅನ್ನು ಒಳಗೊಂಡಿದೆ;
      4. ಸುಳ್ಳು ಎಂದು ನೀವು ತಿಳಿದಿರುವ, ತಪ್ಪು ದಾರಿಗೆಳೆಯುವುದು ಎಂದು ನಿಮಗೆ ಗೊತ್ತಿರುವಂತಹ ಮಾಹಿತಿಯನ್ನು ಉತ್ತೇಜಿಸುವ ಅಂಶವನ್ನು;
      5. ಕಾನೂನು ಬಾಹಿರ ಚಟುವಟಿಕೆಗಳನ್ನು ಅಥವಾ ನಿಂದನೀಯವಾದ, ಬೆದರಿಕೆಯಾಗಿರುವ, ಅಶ್ಲೀಲ, ಮಾನನಷ್ಟದ ಅಥವಾ ಹೆಚ್ಚಾಗಿ ಸುಳ್ಳಾಗಿರುವ ವರ್ತನೆ/ನಡವಳಿಕೆಯನ್ನು ಉತ್ತೇಜಿಸುವಂತಹ ಅಂಶವನ್ನು ನಿಷೇಧಿಸುತ್ತದೆ;
      6. ಇನ್ನೊಬ್ಬ ವ್ಯಕ್ತಿಯ ಹಕ್ಕುಸ್ವಾಮ್ಯದ ಕೆಲಸದ ಅನಧಿಕೃತ ನಕಲುಪ್ರತಿಯನ್ನು ಅಥವಾ ಕಾನೂನುಬಾಹಿರ ಪ್ರತಿಯನ್ನು ಉತ್ತೇಜಿಸುತ್ತದೆ;
      7. ನಿರ್ಬಂಧಿತವಾದ ಅಥವಾ ಪಾಸ್ವರ್ಡ್ ಅನ್ನು ಮಾತ್ರ ಪ್ರವೇಶಿಸುವ ಪುಟಗಳನ್ನು, ಅಥವಾ ಗುಪ್ತ ಪುಟಗಳನ್ನು ಅಥವಾ ಚಿತ್ರ/ಇಮೇಜ್‌ಗಳನ್ನು ಒಳಗೊಂಡಿದೆ (ಮತ್ತೊಂದು ಪ್ರವೇಶಿಸಬಲ್ಲ ಪುಟದಿಂದ ಅಥವಾ ಪುಟಕ್ಕೆ ಅವುಗಳು ಲಿಂಕ್ ಆಗಿರುವುದಿಲ್ಲ);
      8. ಯಾವುದೇ ರೀತಿಯ ಅಶ್ಲೀಲವಾದ ಅಥವಾ ಲೈಂಗಿಕವಾಗಿ ವ್ಯಕ್ತಪಡಿಸುವ ಮೆಟೀರಿಯಲ್ ಅನ್ನು ಪ್ರದರ್ಶಿಸುವ ಅಂಶವನ್ನು ನಿಷೇಧಿಸುತ್ತದೆ;
      9. ಲೈಂಗಿಕವಾದ ಅಥವಾ ಹಿಂಸಾತ್ಮಕ ರೀತಿಯಲ್ಲಿ 18 ವರ್ಷದ ಒಳಗಿರುವ ಜನರನ್ನು ದುರುಪಯೋಗಪಡಿಸುವ ಮೆಟೀರಿಯಲ್ ಅನ್ನು ಒದಗಿಸುತ್ತದೆ, ಅಥವಾ 18 ವರ್ಷದ ಕೆಳಗಿನ ಜನರಿಂದ ವೈಯಕ್ತಿಕ ಮಾಹಿತ್ಯನ್ನು ಕೋರುವಂತಹ ವಿಚಾರವನ್ನು ಒದಗಿಸುತ್ತದೆ;
      10. ಕಾನೂನುಬಾಹಿರ ಶಸ್ತ್ರಾಸ್ತ್ರಗಳನ್ನು ತಯಾರಿಸುವುದು ಅಥವಾ ಖರೀದಿಸುವುದು, ಒಬ್ಬರ ಗೌಪ್ಯತೆಯನ್ನು ಉಲ್ಲಂಘಿಸುವುದು, ಅಥವಾ ಕಂಪ್ಯೂಟರ್ ವೈರಸ್‌ಗಳನ್ನು ಒದಗಿಸುವುದು ಅಥವಾ ರಚಿಸುವುದು; ಹೀಗೆ ಕಾನೂನುಬಾಹಿರವಾದ ಚಟುವಟಿಕೆಗಳನ್ನು ಕುರಿತ ಸೂಚನಾತ್ಮಕ ಮಾಹಿತಿಯನ್ನು ಒದಗಿಸುತ್ತದೆ;
      11. ಬೇರೆ ಬಳಕೆದಾರರಿಂದ ವಾಣಿಜ್ಯದ ಅಥವಾ ಅಕ್ರಮ ಉದ್ದೇಶಗಳಿಗಾಗಿ ವೈಯಕ್ತಿಕವಾಗಿ ಗುರುತಿಸುವ ಮಾಹಿತಿಯನ್ನು ಅಥವಾ ಪಾಸ್‌ವರ್ಡ್‌ಗಳನ್ನು ಕೋರುತ್ತದೆ; ಹಾಗೂ
      12. ವಾಣಿಜ್ಯಾತ್ಮಕ ಚಟುವಟಿಕೆಗಳಲ್ಲಿ ತೊಡಗುತ್ತದೆ ಮತ್ತು/ಅಥವಾ ಸ್ಪರ್ಧೆಗಳು, ಸ್ವೀಪ್ಸ್ಟೇಕ್ಸ್, ಜೂಜಾಟಗಳು, ವಿನಿಮಯಕಾರಕ, ಜಾಹೀರಾತು, ಮತ್ತು ಪಿರಮಿಡ್ ಯೋಜನೆಗಳಂತಹ ನಮ್ಮ ಪೂರ್ವ ಸೂಚನಾ ಒಪ್ಪಿಗೆಯಿಲ್ಲದೆ ಮಾರಾಟಗಳಲ್ಲಿ ತೊಡಗುತ್ತದೆ.
    6. ನೀವು ಸೈಟ್‌ಗೆ ಅತಿಥೇಯನಾಗತಕ್ಕದ್ದಲ್ಲ, ಸೈಟ್‌ನ ಯಾವುದೇ ಮಾಹಿತಿಯನ್ನು ಪ್ರದರ್ಶಿಸುವಂತಿಲ್ಲ, ಅಪ್ಲೋಡ್ ಮಾಡುವಂತಿಲ್ಲ, ಮಾರ್ಪಡಿಸುವಂತಿಲ್ಲ, ಪ್ರಕಟಿಸುವಂತಿಲ್ಲ, ರವಾಸಿಸುವಂತಿಲ್ಲ, ಪರಿಷ್ಕರಿಸುವಂತಿಲ್ಲ ಅಥವಾ ಹಂಚಿಕೊಳ್ಳುವಂತಿಲ್ಲ ಎಂಬುದಾಗಿ ನೀವು ಒಪ್ಪಿಕೊಂಡಿರುತ್ತೀರಿ, ಅವುಗಳೆಂದರೆ :
      1. ಆ ಮಾಹಿತಿಯು ಮತ್ತೊಬ್ಬ ವ್ಯಕ್ತಿಗೆ ಸೇರಿರುತ್ತದೆ ಹಾಗೂ ನೀವು ಯಾವ ವಿಚಾರ/ವಸ್ತುವಿನ ಮೇಲೆ ಯಾವುದೇ ಹಕ್ಕನ್ನು ಹೊಂದಿರದಿದ್ದರೆ;
      2. ಮಾಹಿತಿಯು ಸಮಗ್ರವಾದ ರೀತಿಯಲ್ಲಿ ಹಾನಿಕಾರಕವಾಗಿದೆ, ಕಿರುಕುಳವಾಗುತ್ತದೆ, ದಾಸದ್ರವ್ಯದ ಮಾನನಷ್ಟವುಂಟುಮಾಡುತ್ತದೆ, ಅಶ್ಲೀಲವಾಗಿದೆ, ಕಾಮಪ್ರಚೋದಕವಾಗಿದೆ, ಶಿಶುಕಾಮಿಯಾಗಿದೆ, ಅಪ್ರಾಮಾಣಿಕವಾಗಿದೆ, ಮತ್ತೊಬ್ಬರಗೌಪ್ಯತೆಯ ಮೇಲೆ ಆಕ್ರಮಣಕಾರಿಯಾಗಿದೆ, ಹಗೆತನದಿಂದ ಕೂಡಿದೆ ಅಥವಾ ಜನಾಂಗೀಯವಾಗಿ, ಮಾನವಕುಲ ಸಂಬಂಧವಾಗಿರುವ ಆಕ್ಷೇಪಾರ್ಹವಾಗಿದೆ, ಅಸಮಾಧಾನವನ್ನು ಉಂಟುಮಾಡುತ್ತದೆ, ಮನಿ ಲಾಂಡರಿಂಗ್ ಅನ್ನು ಅಥವಾ ಜೂಜಾಟವನ್ನು ಪ್ರೋತ್ಸಾಹಿಸುವುದು ಅಥವಾ ಅದಕ್ಕೆ ಸಂಬಂಧಿಸಿರುವುದು, ಅಥವಾ ಇಲ್ಲವಾದರೆ ಯಾವುದೇರೀತಿಯಿಂದಲಾದರೂ ಕಾನೂನುಬಾಹಿರವಾಗಿರುವುದನ್ನು ಉತ್ತೇಜಿಸುವಂತಿದೆ.
      3. ಯಾವುದೇ ರೀತಿಯಲ್ಲಿ ಕಿರಿಯರಿಗೆ ಹಾನಿಯುಂಟು ಮಾಡುತ್ತದೆ;
      4. ಯಾವುದೇ ಪೇಟೆಂಟ್‌ಅನ್ನು, ಟ್ರೇಡ್‌ಮಾರ್ಕ್‌ಅನ್ನು, ಹಕ್ಕುಸ್ವಾಮ್ಯವನ್ನು ಅಥವಾ ಇತರೆ ಸ್ವಾಮ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತದೆ;
      5. ಸದ್ಯಕ್ಕೆ ಜಾರಿಯಲ್ಲಿರುವಂತಹ ಯಾವುದೇ ಕಾನೂನನ್ನು ಉಲ್ಲಂಘಿಸುತ್ತದೆ;
      6. ಸ್ವಭಾವದಿಂದಲೇ ಸಮಗ್ರವಾಗಿ ಆಕ್ರಮಣಕಾರಿಯಾಗಿದೆ ಅಥವಾ ಭೀತಿಗೊಳಿಸುವಂತಹ ಯಾವುದೇ ಮಾಹಿತಿಯನ್ನು ಕುರಿತು ಸಂವಹಿಸುತ್ತದೆ ಅಥವಾ ಅಂಥ ಸಂದೇಶಗಳ ಮೂಲವನ್ನು ಕುರಿತ ವಿಳಾಸಕಾರನನ್ನು ಮೋಸಗೊಳಿಸುತ್ತದೆ ಅಥವಾ ತಪ್ಪುದಾರಿಗೆಳೆಯುತ್ತದೆ;
      7. ಮತ್ತೊಬ್ಬ ವ್ಯಕ್ತಿಯಂತೆ ವೇಷ ಹಾಕುತ್ತದೆ;
      8. ಯಾವುದೇ ಕಂಪ್ಯೂಟರ್ ಸಂಪನ್ಮೂಲದ ಕಾರ್ಯಕಾರಿತ್ವವನ್ನು ಸೀಮಿತಗೊಳಿಸಲೆಂದು, ನಾಶಪಡಿಸಲೆಂದು, ಅಡಚಣೆ ಮಾಡಲೆಂದು ವಿನ್ಯಾಸ ಮಾಡಲಾಗಿದ್ದ ಸಾಫ್ಟ್‌ವೇರ್ ವೈರಸ್ ಗಳನ್ನು ಅಥವಾ ಯಾವುದೇ ಇತರೆ ಕಂಪ್ಯೂಟರ್ ಕೋಡ್ ಅನ್ನು, ಫೈಲ್‌ಗಳನ್ನು ಅಥವಾ ಪ್ರೋಗ್ರಾಂಗಳನ್ನು ಒಳಗೊಂಡಿದೆ;
      9. ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಭಾರತದ ಸಾರ್ವಭೌಮತ್ವ, ವಿದೇಶಿ ರಾಜ್ಯಗಳೊಂದಿಗೆ ಸ್ನೇಹ ಸಂಬಂಧಗಳನ್ನು ಅಥವಾ ಸಾರ್ವಜನಿಕ ಆದೇಶ ಅಥವಾ ಯಾವುದೇ ಗ್ರಹಿಕೆಯ ಅಪರಾಧದ ಆಯೋಗಕ್ಕೆ ಪ್ರಚೋದನೆಗೆ ಎದುರಾದ ಕಾರಣಗಳನ್ನು ಕುರಿತು ಬೆದರಿಕೆ ಉಂಟುಮಾಡುತ್ತದೆ ಅಥವಾ ಯಾವುದೇಅಪರಾಧದ ತನಿಖೆಯನ್ನು ತಡೆಯುತ್ತದೆ ಅಥವಾ ಯಾವುದೇ ಬೇರೆ ರಾಷ್ಟ್ರವನ್ನು ಅವಮಾನಿಸುತ್ತಿದೆ.
      10. ಯಾವುದೇ ಮತ್ತು ಎಲ್ಲಾ ಅನ್ವಯವಾಗುವ ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿರುವ ರೀತಿಯಲ್ಲಿ ನೀವು ಈ ಸೈಟ್‌ನಲ್ಲಿ ದೊರೆಯುವ ಸೇವೆಯನ್ನು ನಿರಂತರವಾಗಿ ಬಳಸಬೇಕು.
  • ಗೌಪ್ಯತೆ

ಸೈಟ್‌ನ ಬಳಕೆ ಮತ್ತು/ಅಥವಾ ಸೈಟ್ ಒದಗಿಸುವ ಸೇವೆಯನ್ನು ನಮ್ಮ ಗೌಪ್ಯತಾ ನೀತಿಯ(“ಹೈಪರ್‌ಲಿಂಕ್”) ಮೂಲಕ ನಿರ್ವಹಿಸಲಾಗುತ್ತದೆ ಹಾಗೂ ನಿಮ್ಮ ಗೌಪ್ಯತೆಯನ್ನು ಮತ್ತು ವೈಯಕ್ತಿಕ ಡೇಟಾವನ್ನು ರಕ್ಷಿಸುವುದಕ್ಕಾಗಿ, ಆ ಸಂಬಂಧವಾಗಿ ಒಳಗೊಂಡಿರುವ ನಿಯಮಗಳನ್ನು ಮತ್ತು ನಿಬಂಧನೆಗಳನ್ನು ಅನುಸರಿಸುತ್ತದೆ.

  • ಗೌರವಾನ್ವಿತ ಅಧಿಕಾರಿ

ಈ ಒಪ್ಪಂದದ ಅಡಿಯಲ್ಲಿ ಬಳಕೆಯ ನಿಯಮಗಳಲ್ಲಿ ಯಾವುದೇ ನಿಯಮವನ್ನು ಉಲ್ಲಂಘಿಸಿರುವುದು ಗಮನಕ್ಕೆ ಬಂದಂತಹ ಸಂದರ್ಭದಲ್ಲಿ, ಆಗ, ನೀವು ಡಿಜಿಟಲ್ ಸಹಿಯಿರುವಂಥ ಇಮೇಲ್ ಮೂಲಕ ಅಥವಾ ಲಿಖಿತ ರೂಪದಲ್ಲಾಗಲೀ ನಿಮ್ಮ ಕಾಳಜಿಯನ್ನು ತೋರುವಂತೆ ಮಾಡಲು ನೀವು ಸಂಪೂರ್ಣ ಮುಕ್ತರಾಗಿರಬಹುದಾಗಿದೆ:

ಇಮೇಲ್ : grievanceofficer@saralvaastu.com

ವಿಳಾಸ : ಕುಂದುಕೊರತೆಗಳ ಅಧಿಕಾರಿ,

M/s. ಸಿ ಜಿ ಪರಿವಾರ್ ಪ್ರೈವೇಟ್ ಲಿಮಿಟೆಡ್,

ಈಎಲ್ 86, ಟಿಟಿಸಿ ಇಂಡಸ್ಟ್ರಿಯಲ್ ಎಸ್ಟೇಟ್, ಎಂಐಡಿಸಿ ಮಹಾಪೆ,

ನವಿ ಮುಂಬಯಿ, ಮಹಾರಾಷ್ಟ್ರ, ಭಾರತ – 400701

ಭಾರತದಲ್ಲಿರುವ ಸಾರ್ವಜನಿಕ ರಜಾದಿನಗಳು ಮತ್ತು ಭಾನುವಾರವನ್ನು ಹೊರತುಪಡಿಸಿ, ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗಿನ ನಡುವಿನ ಅವಧಿಯಲ್ಲಿ ಒಬ್ಬ ದೂರು ಅಧಿಕಾರಿಯವರು ಲಭ್ಯವಿರತಕ್ಕದ್ದಾಗಿದೆ.

  • ಹಕ್ಕು ನಿರಾಕರಣೆಗಳು

ಈ ಸೈಟ್‌ನೊಂದಿಗೆ ಮತ್ತು/ಅಥವಾ ಈ ಸೈಟ್‌ನಲ್ಲಿ ಲಭ್ಯವಿರುವ ಸೇವೆಗೆ ಸಂಬಂಧಿಸಿದಂತೆ ಮೆಟೀರಿಯಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅಥವಾ ಭಾಗವಹಿಸುವ ಪರಿಣಾಮವಾಗಿ ಉಂಟಾಗಬಹುದಾದ, ಸೈಟ್‌ನಲ್ಲಿರುವ ಮೆಟೀರಿಯಲ್‌ಗಳನ್ನು ಅಥವಾ ವಿಚಾರವಸ್ತುಗಳನ್ನು ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗುತ್ತದೆ ಹಾಗೂ ಯಾವುದೇ ವಿಷಯದ ಬಗ್ಗೆ ವೈದ್ಯಕೀಯ ಸಲಹೆಯನ್ನು ಕಾಯಿದೆಬದ್ಧವಾಗಿ ರೂಪಿಸುವುದಿಲ್ಲ. ಇಲ್ಲಿಂದೀಚೆಗೆ ಒದಗಿಸಲಾದ ಯಾವುದೇ ಮಾಹಿತಿಯ ನಿಖರತೆ ಅಥವಾ ಸಕಾಲಿಕತೆಗಾಗಿ ಯಾವುದೇ ಜವಾಬ್ದಾರಿಯನ್ನು ಕುರಿತಂತೆ ಕಂಪನಿಯು ಅಧಿಕಾರ ವಹಿಸಿಕೊಳ್ಳುವುದಿಲ್ಲ. ಈ ಸೈಟ್ ನ ವಿಷಯವಸ್ತುಗಳು, ಮತ್ತು ಅವುಗಳ ಆಧಾರದ ಮೇಲೆ ನೀವು ಕಾರ್ಯನಿರ್ವಹಿಸಬಾರದು ಅಥವಾ ಯಾವುದೇ ಸಂದರ್ಭ ಸನ್ನಿವೇಶಗಳ ಮೇಲೆ ಅವಲಂಬಿಸುವಂತಿಲ್ಲ. ಸೈಟ್‌ನ ಯಾವುದೇ ಪೋಸ್ಟ್ ಮಾಡಿದ ಅಂಶವನ್ನಾಗಲೀ ಅಥವಾ ಸೇವೆಯನ್ನಾಗಲೀ ಮತ್ತು / ಅಥವಾ ಸೈಟ್ ಬಳಕೆಯನ್ನಾಗಲೀ ಮತ್ತು ನಿಮ್ಮ ಪ್ರವೇಶಸಾಧ್ಯತೆಯನ್ನಾಗಲೀ ಮಾಡುವುದು ನಿಮ್ಮ ಸ್ವಂತ ಅಪಾಯಕ್ಕೆ ಬಿಟ್ಟದ್ದು. ಸೈಟ್‌ನಲ್ಲಿ ಮೆಟೀರಿಯಲ್ “ಲಭ್ಯವಿರುವಂತೆ” ಮತ್ತು “ಇರುವ ರೀತಿಯಲ್ಲೇ” ನಿಮಗೆ ಸೇವೆಗಳನ್ನು ಒದಗಿಸಲಾಗುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವ ಮತ್ತು ಒಪ್ಪಿಕೊಳ್ಳುತ್ತೇವೆ. ಕಾನೂನಿನಿಂದ ಅನುಮತಿಸಲಾದ ಪೂರ್ಣ ಪ್ರಮಾಣದ ಮಟ್ಟಿಗೆ, ಬಿಟ್ಟುಕೊಡುವ/ತೊರೆಯುವ ಸೀಮಿತಕ್ಕೆ ಒಳಪಡಿಸದೇ, ಕಂಪನಿಯು ಎಲ್ಲ ವಾರಂಟಿಗಳನ್ನು ತನ್ನದಲ್ಲವೆನ್ನುತ್ತದೆ ಅತವಾ ವ್ಯಕ್ತಪಡಿಸುತ್ತದೆ. ಇದರಲ್ಲಿ ಸೈಟ್‌ಅನ್ನು ಬಳಕೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಹಾಗೂ/ಅಥವಾ ಸೈಟ್‌ನಲ್ಲಿ ಲಭ್ಯವಿರುವ ಸೇವೆಯ ಮತ್ತು/ಅಥವಾ ಸೈಟ್‌ನಲ್ಲಿ ಪೋಸ್ಟ್ ಮಾಡಿದ ವಿಚಾರವಸ್ತುವಿನ ಬಳಕೆಯನ್ನು ಯಾವುದೇ ಪ್ರತ್ಯಕ್ಷವಾದ, ಪರೋಕ್ಷವಾದ, ದಂಡನಾತ್ಮಕ ಮತ್ತು ಪರಿಣಾಮಕಾರಿಯಾಗಿರುವ ಯಾವುದೇ ಬಗೆಯ ಪ್ರಾಸಂಗಿಕ ಹಾನಿಗಳ ಸೀಮಿತವಿಲ್ಲದೆ, ಸೈಟ್‌ಅನ್ನು ಬಳಸಿಕೊಳ್ಳುವುದರಿಂದ ಅಥವಾ ವ್ಯಕ್ತಿಪಡಿಸಿದ ಅಥವಾ ಸೂಚಿಸಲಾದ ಎಲ್ಲಾ ವಾರಂಟಿಗಳನ್ನು ತನ್ನದಲ್ಲವೆಂದು ಕಂಪನಿಯು ಹೇಳುತ್ತದೆ. ಅದರಲ್ಲಿ ನಿರ್ದಿಷ್ಟ ಉದ್ದೇಶಕ್ಕಾಗಿ, ಯುಕ್ತತೆಯ, ವ್ಯಾಪಾರೋದ್ಯಮದ, ಅಥವಾ ಉಲ್ಲಂಘನೆ-ರಹಿತವಾದಂತಹ ಎಲ್ಲಾ ವಾರಂಟಿಗಳನ್ನು ಕಂಪನಿಯು ಒಪ್ಪಕೊಳ್ಳದೇ ಇರುತ್ತದೆ/ಹಕ್ಕುಬಿಡುತ್ತದೆ. ಯಾವುದೇ ನಷ್ಟ, ಹಾನಿಗಳಿಗಾಗಲೀ ಕಂಪನಿಯು ಜವಾಬ್ದಾರಿಯಾಗುವುದಿಲ್ಲ, ಸೈಟ್ ನಲ್ಲಿ ನೋಂದಾಯಿಸುವುದನ್ನು ನಿಮ್ಮ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರದ ಮೂಲಕ ಮತ್ತು ಸೇವೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಿಮ್ಮ ಜೀವನದ ಸಮಸ್ಯೆಗಳಿಂದ ಹೊರಬರುವುದಕ್ಕೆ ಯಾವುದೇ ವಾರಂಟಿಯನ್ನಾಗಲೀ ಅಥವಾ ಸೂಚ್ಯವಾದ ಅಥವ ಸ್ಪಷ್ಟ ಖಾತರಿಯನ್ನು ಕಂಪನಿಯು ನೀಡುವುದಿಲ್ಲ. ಬಳಕೆದಾರನ ಮತ್ತು/ಅಥವಾ ಸದಸ್ಯನ ಸಂವಹನಗಳಲ್ಲಿ ಯಾವುದೇ ದೋಷಪೂರಿತ, ತಪ್ಪಾದ, ಲೋಪವಿರುವ, ಅಡಚಣೆಯ, ಅಳಿಸುವಿಕೆ, ದೋಷಯುಕ್ತ, ಕಾರ್ಯಾಚರಣೆಗೆ ಅಥವಾ ವಿಳಂಬವಾದ ಪ್ರಸರಣ, ಸಂವಹನ ಹಾದಿಯ ವಿಫಲತೆ, ಕಳ್ಳತನ ಅಥವಾ ನಾಶಪಡಿಸುವಿಕೆ ಅಥವಾ ಸೈಟ್‌ಗೆ ಅನಧಿಕೃತವಾದ ಪ್ರವೇಶ ಅಥವಾ ಮಾರ್ಪಾಟು ಕಂಡುಬಂದಲ್ಲಿ ಅದಕ್ಕೆ ಈ ನಮ್ಮ ಕಂಪನಿಯ ಅಧಿಕೃತವಾದ ಈ ಸೈಟ್ ಯಾವುದೇ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಿಲ್ಲ. ಇದರಲ್ಲಿ ಸಂಭವಿಸುವ ಯಾವುದೇ ದೋಷಗಳಿಗೆ ಅಥವಾ ಯಾವುದೇ ದೂರವಾಣಿ ನೆಟ್ವರ್ಕ್‌ನ ಅಥವಾ ಮಾರ್ಗಗಳ ತಾಂತ್ರಿಕ ದೋಷಕ್ಕೆ, ಕಂಪ್ಯೂಟರ್ ಆನ್ಲೈನ್ ಸಿಸ್ಟಂಗಳಿಗೆ, ಸರ್ವರ್‌ಗಳ ಆಥವಾ ಪೂರೈಕೆದಾರರ, ಕಂಪ್ಯೂಟರ್ ಸಲಕರಣೆಯ/ಸಾಫ್ಟ್ವೇರ್‌ನ ಯಾವುದೇ ದೋಷಗಳಿಗೆ, ಇಮೇಲ್‌ನ ಅಥವಾ ಪ್ಲೇಯರ್‌ಗಳ ವಿಫಲತೆಗಾಗಲೀ ಸಂಬಂಧಪಟ್ಟ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿಗೆ ಅಥವಾ ಇಂಟರ್ನೆಟ್‌ನಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕುರಿತಂತೆ ಅಥವಾ ಯಾವುದೇ ವೆಬ್‌ಸೈಟ್‌ನಲ್ಲಿ ಅಥವಾ ಸಂಯೋಜನೆಯಲ್ಲಿ ಉಂಟಾಗುವ ಬಳಕೆದಾರರ ಮತ್ತು/ಅಥವಾ ಸದಸ್ಯರ ಮತ್ತು/ಅಥವಾ ಯಾವುದೇ ಇತರ ವ್ಯಕ್ತಿಯ ಕಂಪ್ಯೂಟರ್‌ಗೆ ಸಂಬಂಧಪಟ್ಟಂತೆ ಹಾನಿಯಾಗಲೀ ಅಥವಾ ದೋಷವಾಗಲೀ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಗೆ ಈ ಸೈಟ್ ಜವಾಬ್ದಾರಿಯಾಗಿರುವುದಿಲ್ಲ.

  • ಬದ್ಧತೆಯ ಸೀಮಿತತೆ

ಸೈಟ್‌ನಲ್ಲಿ ನಿಮ್ಮ ಬಳಕೆಯಿಂದ ಉಂಟಾಗುವ ಯಾವುದೇ ಲಾಭ/ಪ್ರಯೋಜನಗಳ ನಷ್ಟದಲ್ಲಿ ಯಾವುದೇ ಸೀಮಿತತೆಯಿಲ್ಲದಿರುವುದೂ ಸೇರಿದಂತೆ, ಯಾವುದೇ ಪರೋಕ್ಷವಾದ, ಪ್ರಾಸಂಗಿಕವಾದ, ಅನುಕರಣೀಯ, ವಿಶೇಷ ಅಥವಾ ದಂಡನಾತ್ಮಕ ಹಾನಿಗಳಿಗೆ ಯಾವುದೇ ಸಂದರ್ಭದಲ್ಲಿಯೂ ಕೂಡ ಕಂಪನಿಯು ನಿಮಗೆ ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಹೊಣೆಗಾರನಾಗಿರುವುದಿಲ್ಲ. ಅಂತಹ ಯಾವುದೇ ಹಾನಿಗಳ ಸಾಧ್ಯತೆಯನ್ನು ಕುರಿತು ಕಂಪನಿಗೆ ಸಲಹೆ ನೀಡಲಾಗಿದ್ದರೂ ಕೂಡ, ನಿಮ್ಮ ಮೂಲಕ ಒದಗಿಸಿದ ಡೇಟಾ, ವಿಷಯವಸ್ತು, ಮಾಹಿತಿ, ಮೆಟೀರಿಯಲ್‌ಗಳಲ್ಲಿ ದೋಷಗಳು, ತಪ್ಪುಗಳು ಅಥವಾ ನಿಖರತೆಯಿಲ್ಲದಿರುವ ಅಂಶಗಳು ಕಂಡುಬಂದರೆ ಅದಕ್ಕೆ ಕಂಪನಿಯು ಜವಾಬ್ದಾರನಾಗಿರುವುದಿಲ್ಲ. ಆದರೂ ಸಹ, ಇಲ್ಲಿ ಒಪ್ಪಂದದಲ್ಲಿ ಒಳಗೊಂಡಿರುವ ವಿಚಾರವಸ್ತುವಿನ ವಿರುದ್ಧ ಯಾವುದೇ ಅಂಶವು ವಿರುದ್ಧವಾಗಿದ್ದಲ್ಲಿ, ಅಂಥ ಯಾವುದೇ ಘಟನೆಯು ಸಂಭವಿಸಿದಲ್ಲಿ, ಕಂಪನಿಗೆ ನಿಮ್ಮಿಂದ ದೊರೆಯುವ ಮಾಹಿತಿಯ ಸೇವೆಗಳಿಗಾಗಿ, ಯಾವುದೇ ಕಾರಣಕ್ಕಾಗಿ ನಿಮ್ಮೊಂದಿಗಿನ ಹೊಣೆಗಾರಿಕೆಯಲ್ಲಿ ಏನೇ ಆದರೂ ಕೂಡ ಹಾಗೂ ಕಂಪನಿಯು ತೆಗೆದುಕೊಳ್ಳುವ ಕ್ರಮವನ್ನು ಲೆಕ್ಕಿಸದೆಯೇ, ಎಲ್ಲಾ ಸಮಯದಲ್ಲೂ ಪಾವತಿಸಿದ ಸಲಹಾ ಶುಲ್ಕಗಳಿಗ ಸೀಮಿತವಾಗಿರ ಬೇಕಾಗುತ್ತದೆ,

  • ನಷ್ಟ ಪರಿಹಾರ

ಈ ಒಪ್ಪಂದದ ಉಲ್ಲಂಘನೆಯಲ್ಲಿ ಸೇವೆಯನ್ನು ನೀವು ಬಳಕೆ ಮಾಡುವ ಕಾರಣದಿಂದ ಯಾವುದೇ ಮೂರನೇ ವ್ಯಕ್ತಿಯಿಂದ ಉಂಟಾಗುವ/ಮಾಡಿದಂಥ ನ್ಯಾಯವಾದ ಅಟಾರ್ನಿಯ ಶುಲ್ಕಗಳು ಸೇರಿದಂತೆ, ಯಾವುದೇ ನಷ್ಟ/ಹಾನಿ, ಬಾಧ್ಯತೆ, ಹಕ್ಕುಕೋರಿಕೆ ಅಥವಾ ಬೇಡಿಕೆಯಿಂದ ಯಾವುದೇ ಬಗೆಯ ನಿರುಪದ್ರವಕಾರಿಯಾಗಿರುವ ಕಂಪನಿಯನ್ನು, ಅದರ ನಿರ್ದೇಶಕರನ್ನು, ಅಂಗಸಂಸ್ಥೆಗಳನ್ನು, ಅಧಿಕಾರಿಗಳು, ಉದ್ಯೋಗಿಗಳು, ಏಜೆಂಟ್ ಗಳನ್ನು ಹಾಗೂ ವ್ಯಾಪಾರೋದ್ಯಮದ ಪಾರ್ಟ್‌ನರ್‌ಗಳನ್ನು ಹಿಡಿದಿರಿಸಲು ಮತ್ತು ನಷ್ಟ ಭರ್ತಿ ತುಂಬಿಕೊಡಲು ನೀವು ಒಪ್ಪುತ್ತೀರಿ. ಈ ಒಪ್ಪಂದದಲ್ಲಿ ನಿಮ್ಮ ಪ್ರತಿನಿಧಿಗಳ ಮತ್ತು ವಾರಂಟಿಗಳ ಯಾವುದೇ ಉಲ್ಲಂಘನೆಯಿಂದಾಗಿ/ಬಿರುಕಿನಿಂದಾಗಿ ಹಾಗೂ/ಅಥವಾ ಸೈಟ್ ಬಳಕೆಯ ಈ ನಿಯಮಗಳಲ್ಲಿ ಯಾವುದನ್ನಾದರೂ ಉಲ್ಲಂಘಿಸಿದರೆ ಉದ್ಭವಿಸುವ ಸಮಸ್ಯೆಗೆ ಮತ್ತು/ಅಥವಾ ದೋಷಕ್ಕೆ ನಷ್ಟ ಭರ್ತಿ ಮಾಡಲು ನೀವು ಸಮ್ಮತಿಸಿದ್ದೀರಿ.

  • ಸೇವೆಗಳ ಬಳಕೆಯಲ್ಲಿ ಇರುವ ಹೆಚ್ಚುವರಿ ನಿಯಮಗಳು
    1. ಚಕ್ರ ಸೈನ್ಸ್, ಡೈರೆಕ್ಷನ್ ಸೈನ್ಸ್, ಸ್ಟ್ರಕ್ಚರ್ ಸೈನ್ಸ್ ಮತ್ತು ಎನರ್ಜಿ ಸೈನ್ಸ್ ಗಳಿಗೆ ಸಂಬಂಧಿಸಿದಂತೆ ಇವುಗಳ ಆಧಾರದ ಮೇಲೆ ಸಲ್ಲಿಸಬೇಕಾದ ಸೇವೆಗಳನ್ನು ಮತ್ತು ಸರಳ ವಾಸ್ತು ಪರಿಕಲ್ಪನೆಯನ್ನು ನೀವು ಒಪ್ಪಿಕೊಂಡಿರುತ್ತೀರಿ ಮತ್ತುಅಂಗೀಕರಿಸುತ್ತೀರಿ.
    2. ಭಾರತದ ಕಾನೂನಿನಿಂದ ನಿಷೇಧಿಸಲ್ಪಟ್ಟಂತಹ ಯಾವುದೇ ಮಾಂತ್ರಿಕ ಪರಿಹಾರೋಪಾಯಗಳನ್ನು ಅಥವಾ ಸೇವೆಗಳನ್ನು ನಾವು ಒದಗಿಸುವುದಿಲ್ಲ ಹಾಗೂ ಯಾವುದೇ ಮಾಂತ್ರಿಕ ಬದಲಾವಣೆಗಳಿಗೆ ಭರವಸೆ ನೀಡುವುದಿಲ್ಲವೆಂದು ನೀವುಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ, ಆದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಆವರಣದಲ್ಲಿ ಶಕ್ತಿಯನ್ನು ವೃದ್ಧಿಗೊಳಿಸಲು ಖಂಡಿತವಾಗಿಯೂ ನಾವು ಶ್ರಮಿಸುತ್ತೇವೆ.
    3. ನಮ್ಮ ಸರಳ ವಾಸ್ತುವಿನ ಪರಿಕಲ್ಪನೆ, ಇದರ ಕಾರ್ಯವಿಧಾನಗಳು ಕುರಿತಂತೆ ಮಾಹಿತಿಯುಕ್ತ ಅಪೂರ್ಣ ದರ್ಶನಕ್ಕೆ ಸಂಬಂಧಪಟ್ಟಂತೆ ಮಾತ್ರ ಸೀಮಿತವಾಗಿಲ್ಲ ಆದರೆ ಈ ವಿಚಾರವೂ ಸೇರಿದಂತೆ ನೋಂದಾಯಿತ ಸಂಖ್ಯೆಗೆಕರೆಮಾಡುವ/ಇಮೇಲ್ ಐಡಿ ಗೆ ಎಸ್‌ಎಂಎಸ್ ಕಳುಹಿಸಲು ನೀವು ನಮ್ಮನ್ನು ಅಧಿಕೃತಗೊಳಿಸಿರುತ್ತೀರಿ. ನಿಮ್ಮ ಆವರಣಗಳಲ್ಲಿ ಪ್ರಶಂಸಾ ಪತ್ರ ಇತ್ಯಾದಿಗಳಲ್ಲಿ ವಸ್ತು ಸಂಬಂಧಿಯಾಗಿ ಭೇಟಿ ನೀಡುವುದಕ್ಕೆ ನಿಮ್ಮ ಭೇಟಿ ವ್ಯವಸ್ಥೆಯನ್ನು ಕುರಿತ ದೃಢೀಕರಣವನ್ನು ನಾವು ತಿಳಿಸುವಂತೆ ನೇಮಿಸಿರುತ್ತೀರಿ. ಅಂತಹ ಕಳುಹಿಸಲಾದ ಎಸ್‌ಎಂಎಸ್ ಅನ್ನುಮತ್ತು/ಅಥವಾ ಮಾಡಿದ ಕರೆಯನ್ನು ಡಿಎನ್‌ಡಿ ಪಟ್ಟಿಯ ಅಡಿಯಲ್ಲಿ ನಿಮ್ಮನ್ನು ನೋಂದಾಯಿಸಿದ್ದರೂ ಕೂಡ ಟಿಆರ್‌ಎಐ ನಿಯಮಗಳ ಒಂದು ಉಲ್ಲಂಘನೆ ಎಂಬಂತೆ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ನೀವು ಇಲ್ಲಿಂದ ಒಪ್ಪುತ್ತೀರಿ.
    4. ನಿಮ್ಮ ಆವರಣಗಳಿಗೆ ನೀಡಿದ ಒಂದು ಭೇಟಿಯ ಸಂದರ್ಭದಲ್ಲಿ ನಿಮ್ಮ ಒಳಾಂಗಣ ಮತ್ತು ಹೊರಾಂಗಣ ಫೋಟೋ ಇಮೇಜ್‌ಗಳನ್ನು ನಮ್ಮ ಪ್ರತಿನಿಧಿಯು ತೆಗೆದುಕೊಳ್ಳತಕ್ಕದ್ದು. ನಂತರದಲ್ಲಿ ಈ ಫೋಟೋ ಇಮೇಜ್‌ಗಳನ್ನು, ಆನ್ಲೈನ್‌ನ್ನಾಗಲೀಅಥವಾ ಆಫ್ಲೈನ್‌ನ್ನಾಗಲೀ ಸಿದ್ಧಪಡಿಸಲಾದ ನಿಮ್ಮ ಆವರಣಗಳ ಲೇಔಟ್ ಚಾರ್ಟಿನ ಊರ್ಜಿತಗೊಳಿಸುವಿಕೆಗೆ ಬಳಸಲಾಗುವುದು, ಅದಕ್ಕಾಗಿ ಡೈರೆಕ್ಷನ್ ಸೈನ್ಸ್, ಸ್ಟ್ರಕ್ಚರ್ ಸೈನ್ಸ್ ಎನರ್ಜಿ ಸೈನ್ಸ್ ಮತ್ತು ಚಕ್ರ ಸೈನ್ಸ್ ಗಳಿಗೆ ಅನುಗುಣವಾಗಿ ಕೊರತೆಗಳನ್ನು ಗುರುತಿಸಲಾಗುವುದು. ನಮ್ಮ ಪ್ರತಿನಿಧಿಯ ಸೂಚನೆಗಳ ಪ್ರಕಾರ ಬಳಸಲಾಗುವ ಕಿಟ್‌ನೊಂದಿಗೆಪೂರ್ವನಿರ್ಧಾರಿತ ಕೊರತೆಗಳನ್ನು ಸರಿದೂಗಿಸಲು ಈ ಪರಿಹಾರ ಕ್ರಮಗಳನ್ನು ಪ್ರಸ್ತಾಪಿಸಲಾಗುವುದು.
    5. ಸೇವೆಗಳನ್ನು ಒದಗಿಸುವ ಉದ್ದೇಶಕ್ಕಾಗಿ ನಿಮ್ಮ ಆವರಣಗಳಲ್ಲಿ ತೆಗೆದಿರುವ ಫೋಟೋ ಇಮೇಜ್‌ಗಳನ್ನು ಬಳಸಲು ಕಂಪನಿಗೆ ನೀವು ಇಲ್ಲಿಂದಲೇ ಒಂದು ಮಾರ್ಪಡಿಸಲಾಗದ ಹಕ್ಕನ್ನು ಮತ್ತು ಅನುಮತಿಯನ್ನು ನೀಡುತ್ತೀರಿ.
    6. ಗೌಪ್ಯತೆ ಆಕ್ರಮಣ, ಹಕ್ಕುಸ್ವಾಮ್ಯದ ಉಲ್ಲಂಘನೆ ಮುಂತಾದ ಯಾವುದೇ ಹಕ್ಕುಕೋರಿಕೆಗಳಿಗೆ ಸೀಮಿತವಾಗಿಲ್ಲ ಈ ವಿಷಯವನ್ನು ಒಳಗೊಂಡಂತೆ ಎಲ್ಲಾ ಹಕ್ಕುಕೋರಿಕೆಗಳು, ಬೇಡಿಕೆಗಳು, ಹಕ್ಕುಗಳು, ಭರವಸೆಗಳು ಹಾನಿಗಳು ಮತ್ತುಹೊಣೆಗಾರಿಕೆಗಳನ್ನು ನೀವು ಈ ಮೂಲಕ ಕಂಪನಿಗೆ, ಅದರ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಎಲ್ಲಾ ವಿಚಾರಗಳನ್ನು ಬಿಡುಗಡೆ ಮಾಡುತ್ತೀರಿ, ಪರಿಚಯ ಮಾಡಿಕೊಳ್ಳುತ್ತೀರಿ ಮತ್ತು ಶಾಶ್ವತವಾಗಿ ಹೊರಬರುತ್ತೀರಿ, ಇದರಿಂದ ಹೇಳಲಾದ ಫೋಟೋ ಇಮೇಜ್‌ಗಳ ಬಳಕೆ ಅಥವಾ ವಿತರಣೆಗೆ ಸಂಬಂಧಿಸಿದಂತೆ ಉದ್ಭವವಾಗುವ ಸಮಸ್ಯೆಗಳನ್ನು ಮತ್ತುಬಾಧ್ಯತೆಗಳನ್ನು ಕಂಪನಿಯ ಮೂಲಕ ನಿಮಗೆ ತಿಳಿಸಲಾಗುವುದು.
    7. ನಮ್ಮ ಪ್ರತಿನಿಧಿಗೆ ಅವರಿಗೆ ಅಗತ್ಯವಿರುವ ರೀತಿಯಲ್ಲಿ ನಿಮ್ಮ ಆವರಣವನ್ನು ಸಮಂಜಸವಾಗಿ ಪ್ರವೇಶಿಸಲು ಮತ್ತು ಬಳಸಿಕೊಳ್ಳಲು ನೀವು ಅನುಮತಿ ನೀಡತಕ್ಕದ್ದು. ಅದೂ ಅಲ್ಲದೇ, ಆ ಅಧಿಕೃತ ಆವರಣಗಳಲ್ಲಿ ಯಾವುದೇ ಸೌಲಭ್ಯವನ್ನುಪ್ರವೇಶಿಸಲು ಮತ್ತು ಬಳಸಿಕೊಳ್ಳಲು ಸಹ ನೀವು ಅನುಮತಿಸತಕ್ಕದ್ದು ಮತ್ತು ಅವಕಾಶ ನೀಡತಕ್ಕದ್ದು ಹಾಗೂ ನೀವು ಅವರೊಂದಿಗೆ ಸಹಕರಿಸತಕ್ಕದ್ದು ಮತ್ತು ಅವರಿಗೆ ಕಾಲಕಾಲಕ್ಕೆ ಯಾವುದೇ ಹೆಚ್ಚುವರಿ ನೆರವನ್ನು ಅಥವಾ ಸಂಪನ್ಮೂಲಗಳನ್ನು ಒದಗಿಸತಕ್ಕದ್ದು. ಏಕೆಂದರೆ ಈ ಸಂಪನ್ಮೂಲಗಳು ಸೇವೆಗಳನ್ನು ಪರಿಣಾಮಕಾರಿಯಾಗಿ ಸಲ್ಲಿಸಲು ಅಗತ್ಯಬೀಳಬಹುದು.
    8. ಡಿಜಿಟಲ್ ಮೋಡ್ ಮೂಲಕ ನೀವು ಒಂದುವೇಳೆ ಸೇವೆಗಳನ್ನು ಆಯ್ಕೆ ಮಾಡಿದ್ದಲ್ಲಿ, ಆವರಣಗಳ ವಿನ್ಯಾಸವನ್ನು ಡ್ರಾಯಿಂಗ್ ಮಾಡುವುದಕ್ಕಾಗಿ, ಡಿಜಿಟಲ್ ವಿಧಾನದ ಮೂಲಕ ನಮ್ಮ ಪ್ರತಿನಿಧಿಗೆ ನಿಮ್ಮ ಆವರಣಗಳಲ್ಲಿ ನಿಮ್ಮಿಂದಲೇಸಿದ್ಧಗೊಳಿಸಲಾದ, ಅಲಂಕರಿಸಲಾದ ಫೋಟೋ ಇಮೇಜ್‌ಗಳಿಗೆ ನೀವು ಏಕಮಾತ್ರವಾಗಿ ಹೊಣೆಗಾರರಾಗತಕ್ಕದ್ದಾಗಿದೆ. ಸೇವೆಗಳಿಗೆ ಅನುಸಾರವಾಗಿ, ನಿಖರವಾಗಿಲ್ಲ / ತಪ್ಪಾಗಿದೆ ಎಂದು ಹೇಳಿದ ಇಮೇಜ್‌ಗಳ ಆಧಾರದ ಮೇಲೆ ಸಲಹೆಯನ್ನು ನೀಡಲಾಗುತ್ತದೆ, ಈ ಕಾರಣದಿಂದ ಅಥವಾ ಇದರಿಂದ ಉಂಟಾಗುವ ಯಾವುದೇ ರೀತಿಯ ಯಾವುದೇನಷ್ಟಗಳಿಗೆ, ವೆಚ್ಚಗಳಿಗೆ, ಖರ್ಚುಗಳಿಗೆ, ಹಾನಿಗಳಿಗೆ ನಮ್ಮನ್ನು ಜವಾಬ್ದಾರರಾಗಿ ನಿಲ್ಲಿಸುವಂತಿಲ್ಲ.
    9. ಸೇವೆಗಳನ್ನು ನಿರ್ವಹಿಸುವ ಕಾರಣಕ್ಕಾಗಿ ಮಾನವ-ಶಕ್ತಿ ಸಂಪನ್ಮೂಲಗಳು ಇತ್ಯಾದಿ ಸೇರಿದಂತೆ ಎಲ್ಲಾ ಅಗತ್ಯವಿರುವ ಸಂಪನ್ಮೂಲಗಳನ್ನು ನಾವು ನಿಯೋಜಿಸತಕ್ಕದ್ದು ಹಾಗೂ ಅಂತಹ ಸಂಪನ್ಮೂಲಗಳಿಗೆ ಉದ್ಯೋಗ ನೀಡುವ, ನೌಕರಿಯಲ್ಲಿತೊಡಗಿಸುವ ಮತ್ತು/ಅಥವಾ ಅಂತಹ ಸಂಪನ್ಮೂಲಗಳನ್ನು ಬದಲಾಯಿಸುವ ಮಟ್ಟಿಗೆ ನಮ್ಮನ್ನೂ ಸಹ ಅರ್ಹರೆಂದು ನಮಗೆ ಹಕ್ಕು ನೀಡತಕ್ಕದ್ದಾಗಿದೆ. ಏಕೆಂದರೆ ನಿಮಗೆ ಅಥವಾ ನಿಮ್ಮ ಅನುಮೋದನೆಗೆ ಯಾವುದೇ ಸೂಚನೆಯಿಲ್ಲದೆಯೇ ಹೊಂದಿಕೊಳ್ಳುತ್ತದೆ ಎಂದು ಭಾವಿಸಲಾಗುತ್ತದೆ.
    10. 100% ನಷ್ಟು ಎಲ್ಲಾ ಸಲಹೆಗಳನ್ನು ಅನುಷ್ಠಾನಕ್ಕೆ ತಂದನಂತರದಲ್ಲಿ, ನೀವು ಚೆಕ್ ವಿಸಿಟ್/ಪರೀಕ್ಷಾ ಭೇಟಿ(“ICV”) ಯನ್ನು ಕಾರ್ಯರೂಪಕ್ಕೆ ತರುವ ವೇಳಾಪಟ್ಟಿಗಾಗಿ ಸಲಹೆಗಾರರಿಗೆ ನೀವು ಸೂಚಿಸಬಹುದು. ಈ ಒಂದು ICVಯನ್ನು ಡಿಜಿಟಲ್ ಮಾಧ್ಯಮದ ಯಾವುದೇ ಬೇರೆ ವಿಧಾನದ ಮೂಲಕ ಅಥವಾ ವಾಟ್ಸ್‌ಅಪ್ ಮುಖಾಂತರ ಮಾಡಲೇ ಬೇಕಾಗುತ್ತದೆ.
    11. ಡಿಜಿಟಲ್ ತನಿಖೆಯ ಸಂದರ್ಭದಲ್ಲಿ ಅಥವಾ ಅದರ ಜೊತೆಯಲ್ಲಿಯೇ ಭೌತಿಕ ಅನುಷ್ಠಾನದ ಚೆಕ್ ವಿಸಿಟ್/ಪರೀಕ್ಷಾ ಭೇಟಿಗಳನ್ನು ನೀವು ಪಡೆದುಕೊಳ್ಳಲು ಬಯಸಿದರೆ, ಆಗ ಸೂಕ್ತವಾದ ಭೇಟಿ ನೀಡುವ ಶುಲ್ಕಗಳನ್ನು ನಿಮ್ಮ ತಲೆಯ ಮೇಲೆಹೇರಲೇಬೇಕಾಗುತ್ತದೆ.
    12. ಗ್ರಾಹಕರಿಂದ ಬರುವ ಅಹವಾಲುಗಳು ಮತ್ತು ಸ್ವೀಕಾರ
      1. ಸರಳ್ ವಾಸ್ತುವಿನ ಪರಿಕಲ್ಪನೆಯನ್ನು ನೀವು ಅರ್ಥಮಾಡಿಕೊಳ್ಳುತ್ತೀರೆಂದು ನೀವು ಅಂಗೀಕರಿಸುತ್ತೀರಿ, ಹಾಗಾದರೆ ಅಲ್ಲಿ ಸಲ್ಲಿಸಬೇಕಾದ ಸೇವೆಗಳಿಗೆ ಸಂಬಂಧಿಸಿದಂತೆ, ಅದರ ಜೊತೆಗೆ ನಿಯಮ ಮತ್ತು ಷರತ್ತುಗಳಿಗೆ ಅನುಸಾರವಾಗಿಇರಬೇಕಾಗುವುದು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ಅವುಗಳನ್ನು ಪರಿಹರಿಸಲು ಒಂದು ಅವಕಾಶವನ್ನು ಮತ್ತು ಸಾಕಷ್ಟು ಸಮಯವನ್ನು ನೀಡಲಾಗಿತ್ತು ಎಂದು ನೀವು ಅಂಗೀಕರಿಸುತ್ತೀರಿ.
      2. ನೀವು ಸ್ವಯಂಪ್ರೇರಣೆಯಿಂದ ಸೇವೆಗಳನ್ನು ಪಡೆದುಕೊಳ್ಳಲು ಆಯ್ಕೆ ಮಾಡಿಕೊಂಡಿರುತ್ತೀರಿ ಎಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಈ ಸೈಟ್ ನಲ್ಲಿ ಲಭ್ಯವಿರುವ ಸೇವೆಗಳನ್ನು ಪಡೆಯುವಂತೆ ನಾವು ನಿಮ್ಮನ್ನು ಪ್ರೇರೇಪಿಸಲಿಲ್ಲಎಂದು ನೀವು ಮತ್ತಷ್ಟು ಒಪ್ಪುತ್ತೀರಿ, ಪ್ರತಿನಿಧಿಸುತ್ತೀರಿ ಮತ್ತು ದೃಢೀಕರಿಸುತ್ತೀರಿ.
      3. ಕೆಲವು ನಿರ್ದಿಷ್ಟ ಸರಕುಗಳ/ಮೆಟೀರಿಯಲ್‌ಗಳ ಸಂಗ್ರಹಣೆಯ ಅವಶ್ಯಕತೆ ಬೀಳಬಹುದು ಎಂಬ ಸಲಹೆಗಳ ಅನುಷ್ಠಾನವನ್ನು ನೀವೂ ಸಹ ಅರ್ಥಮಾಡಿಕೊಂಡಿದ್ದೀರಿ ಮತ್ತು ಅಂಗೀಕರಿಸಿದ್ದೀರಿ. ನಿಮ್ಮಿಂದ ಮಾತ್ರವೇ ಆ ಖರೀದಿಗಳನ್ನುಮಾಡಿರತಕ್ಕದ್ದೆಂಬುದಾಗಿ ನೀವು ಒಪ್ಪಿಕೊಳ್ಳುತ್ತೀರಿ ಮತ್ತು ಆ ಖರೀದಿಗಳಿಗಾಗಿ ನೀವು ಯಾವುದೇ ರೀತಿಯಿಂದಲೂ ನಮಗೆ ಜವಾಬ್ದಾರರಾಗಿರುವುದಿಲ್ಲ.
      4. ಯಾವುದೇ ಸಮಯದಲ್ಲಾದರೂ, ಯಾವುದೇ ಸನ್ನಿವೇಶಗಳ ಅಡಿಯಲ್ಲಿ ಬೇಕಾದರೂ ಸೈಟ್ ನಲ್ಲಿ ದೊರೆಯುವ ಸೇವೆಗಳ ಉಪಯೋಗದ ಕಾರಣದಿಂದಾಗಿ, ಜೀವನದಲ್ಲಿ ನೀವು ಮಾಡುವ ಅಥವಾ ಅನುಭವಿಸುವ ಯಾವುದೇ ನಿರ್ಧಾರಗಳಿಗೆ,ಕ್ರಮಗಳಿಗೆ ಅಥವಾ ಫಲಿತಾಂಶಗಳಿಗೆ ಕಂಪನಿಯಾಗಲೀ ಮತ್ತು/ಅಥವಾ ಅದರ ಅಧಿಕಾರಿಗಳಾಗಲೀ, ಮ್ಯಾನೇಜರ್ ಗಳಾಗಲೀ, ಸದಸ್ಯರಾಗಲೀ, ನಿರ್ದೇಶಕರಾಗಲೀ, ನೌಕರರಾಗಲೀ, ಉತ್ತರಾಧಿಕಾರಿಗಳಾಗಲೀ, ನಿಯೋಜಕರಾಗಲೀ, ಅಂಗಸಂಸ್ಥೆಗಳಾಗಲೀ, ಪೂರೈಕೆದಾರರಾಗಲೀ ಮತ್ತು ಪ್ರತಿನಿಧಿಗಳಾಗಲೀ ಹೊಣೆಗಾರರಾಗಲು ಸಾಧ್ಯವಿಲ್ಲಎಂಬುದನ್ನು ನೀವು ಸಮ್ಮತಿಸಿ ಒಪ್ಪುತ್ತೀರಿ. ಈ ಸೇವೆಗಳ ಅಡಿಯಲ್ಲಿ ಕೊಡಲಾದ ಸಲಹೆಯನ್ನು ಅನುಷ್ಠಾನಕ್ಕೆ ತಂದ ನಂತರ ನಿಮ್ಮ ಜೀವನಕ್ಕೆ ನೀವು ಮಾತ್ರವೇ ಜವಾಬ್ದಾರರಾಗಿರುತ್ತೀರಿ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ ಮತ್ತು ಒಪ್ಪುತ್ತೀರಿ .
      5. ಈ ಸಂಸ್ಥೆಯು ಮತ್ತು ಅದರ ಅಧಿಕಾರಿಗಳು, ವ್ಯವಸ್ಥಾಪಕರು, ಸದಸ್ಯರು, ನಿರ್ದೇಶಕರು, ಉದ್ಯೋಗಿಗಳು, ಉತ್ತರಾಧಿಕಾರಿಗಳು, ನಿಯೋಜಕರು, ಅಂಗಸಂಸ್ಥೆಗಳು, ಅಂಗಸಂಸ್ಥೆಗಳು, ಪೂರೈಕೆದಾರರು ಮತ್ತು ಪ್ರತಿನಿಧಿಗಳು, ಎಲ್ಲಾ ವಾರಂಟಿಗಳನ್ನು, ಅಹವಾಲುಗಳನ್ನು ಅಥವಾ ಖಾತರಿಗಳನ್ನು ತನ್ನದಲ್ಲವೆಂದು ನಿರಾಕರಿಸುತ್ತವೆ ಎಂದು ನೀವು ಮುಂದೆ ಒಪ್ಪುತ್ತೀರಿ ಅಂದರೆ ಈ ಸೈಟ್‌ನಲ್ಲಿ ಲಭ್ಯವಿರುವ ಸೇವೆಗಳಿಗೆ ಸಂಬಂಧಿಸಿದಂತೆ ವ್ಯಕ್ತಪಡಿಸುವ ಅಥವಾ ಸೂಚಿಸಲಾದ, ಕಾನೂನುಬದ್ಧವಾಗಿರುತ್ತವೆ ಅಥವಾ ಈ ಒಪ್ಪಂದದಡಿಯಲ್ಲಿ ಒದಗಿಸಿದ್ದಂತೆ, ಅದನ್ನು ಹೊರತುಪಡಿಸಿ, ಸೇವೆಗಳನ್ನು ಈ ಸೈಟ್‌ನಲ್ಲಿ ಒದಗಿಸಬೇಕಾಗುವುದು.
    13. ಗ್ರಾಹಕನ ಕರ್ತವ್ಯಗಳು ಮತ್ತು ಜವಾಬ್ದಾರಿಗಳು
      1. ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯಲ್ಲಿ ಇರಬೇಕಾದ ಮತ್ತು/ಅಥವಾ ಸೇವೆಗಳನ್ನು ಪಡೆದುಕೊಳ್ಳಲು ಸೈಟ್‌ನಲ್ಲಿ ಒದಗಿಸಲಾದ ನೋಂದಣಿ ಅರ್ಜಿಯಲ್ಲಿನ ನಿಖರತೆಗೆ ಮತ್ತು ಸತ್ಯತೆಯ ದೃಢೀಕರಣಕ್ಕೆ ನೀವು ಜವಾಬ್ದಾರರಾಗಿರತಕ್ಕದು. ತಿಳಿಸಿದ ಅರ್ಜಿಯ ರೂಪದಲ್ಲಿ ಗೊತ್ತುಪಡಿಸಿದ ಕಾಯಿಲೆಗಳಿಗೆ ನೆರವಾಗುವಂತೆ/ಆರೋಗ್ಯ ಪರಿಸ್ಥಿತಿಗಳಿಗೆ ಬೆಂಬಲವಾಗಿ ವೈದ್ಯಕೀಯ ವರದಿಗಳ ನಕಲು ಪ್ರತಿಯನ್ನು ನೋಂದಣಿ ಅರ್ಜಿಯೊಂದಿಗೆ ಸಲ್ಲಿಸಬೇಕು.
      2. ಸಂಸ್ಥೆಯ ಮತ್ತು / ಅಥವಾ ಅದರ ಪ್ರತಿನಿಧಿಗಳ ಸೂಚನೆಗಳ ಪ್ರಕಾರ, ನೀವು ಈ ಕಿಟ್ ಅನ್ನು ಬಳಸತಕ್ಕದ್ದು.
      3. ಕಂಪನಿಯ ಮೂಲಕ ಮತ್ತು/ಅಥವಾ ಅದರ ಅಧಿಕಾರಿಗಳ ಮೂಲಕ, ಮ್ಯಾನೇಜರ್ ಮೂಲಕ, ಸದಸ್ಯರ, ನಿರ್ದೇಶಕರ, ಉದ್ಯೋಗಿಗಳು, ಉತ್ತರಾಧಿಕಾರಿಗಳ, ನಿಯೋಜಕರ, ಅಂಗಸಂಸ್ಥೆಗಳ, ಸಹವರ್ತಿಗಳ, ಪೂರೈಕೆದಾರರ ಮತ್ತು ಪ್ರತಿನಿಧಿಗಳ ಮೂಲಕ ಒದಗಿಸಲಾದ ಸೇವೆಗಳ ಬಗ್ಗೆ ಸಂಶಯ ಮೂಡಿಸಿ ಅಥವಾ ಅಸಮಾಧಾನವನ್ನು ಸೃಷ್ಟಿಸಿ, ಬ್ರ್ಯಾಂಡ್ ಇಮೇಜ್ ಮೇಲೆ ಪರಿಣಾಮ ಬೀರುವಂತಹ ಯಾವುದೇ ರೀತಿಯ ಚಟುವಟಿಕೆಯನ್ನೂ ಕೂಡ ಮಾಡಲು ನೀವು ಯಾವುದೇ ರೀತಿಯಲ್ಲಿ ಪಾಲ್ಗೊಳ್ಳುವುದಿಲ್ಲ.
    14. ದೋಷಯುಕ್ತವಾದ/ಹಾನಿಗೊಂಡ ಕಿಟ್‌ ಅನ್ನು ಹಿಂತಿರುಗಿಸುವುದು
      1. ಕಿಟ್‌ನ ವಿತರಣೆಯಲ್ಲಿ ನೀವು ಕೂಲಂಕುಷವಾದ ಉತ್ಪನ್ನದ ಒಂದು ತಪಾಸಣೆಯನ್ನು ನಡೆಸತಕ್ಕದ್ದು.
      2. ಒಂದುವೇಳೆ ಒಂದು ದೋಷಯುಕ್ತ/ಹಾನಿಗೊಳಗಾದ ಐಟಂ ಅನ್ನು ನೀವು ಸ್ವೀಕರಿಸಿದ್ದೇ ಆದಲ್ಲಿ, ಆಗ ಆ ರಸೀದಿಯಲ್ಲಿರುವ ದಿನಾಂಕದಿಂದ 14 ದಿನಗಳ ಒಳಗಾಗಿ ನಮ್ಮ ಸೇವಾ ಕೇಂದ್ರವನ್ನು ಸಂಪರ್ಕಿಸತಕ್ಕದ್ದು.
      3. ನಿಮ್ಮ ಮರು ಮನವಿಯ ರಸೀದಿಯನ್ನು ಸ್ವೀಕರಿಸಿದ ನಂತರದಲ್ಲಿ, ಆ ಉತ್ಪನ್ನವು ದೋಷಯುಕ್ತವಾಗಿದೆಯೇ/ತಪ್ಪಾಗಿದೆಯೇ ಎಂದು ಕುರಿತಾಗಿರುವ ದೂರನ್ನು ಪರೀಕ್ಷಿಸಲು ಗುಣಮಟ್ಟವನ್ನು ಪರಿಶೀಲನೆಗಾಗಿ ನಾವು ವ್ಯವಸ್ಥೆ ಮಾಡುತ್ತೇವೆ. ಈ ದೂರಿನ ಯಶಸ್ವೀ ದೃಢೀಕರಣದ ನಂತರದಲ್ಲಿ, ಆ ಮರಳಿಸುವ/ಬದಲಾಯಿಸುವ ಬಗ್ಗೆ ಮನವಿ ಮಾಡುತ್ತೇವೆ. ಹೀಗೆ ತಪ್ಪಾದ/ದೋಷಯುಕ್ತ ಐಟಂ ಗೆ ಸಂಬಂಧಿಸಿದಂತೆ ಬಳಕೆದಾರನ ಹಿತಾಸಕ್ತಿಗೆ ತಕ್ಕಂತೆ ಕಂಪನಿಯು ಸೈಟ್‌ನಲ್ಲಿ ನಡೆದುಕೊಳ್ಳುತ್ತದೆ. ದೋಷಪೂರಿತವೆನಿಸಿದ/ದೋಷಯುಕ್ತವೆಂದು ಕಂಡುಬರುವ ವಸ್ತುಗಳನ್ನು ಮಾತ್ರ ಹಿಂದಿರುಗಿಸಲಾಗುತ್ತದೆ/ ಬದಲಿಸಲಾಗುತ್ತದೆ. ಕಂಪನಿಯ ನಿರ್ಧಾರವನ್ನೇ ಅಂತಿಮ ತೀರ್ಪು ಎನ್ನಲಾಗುತ್ತದೆ ಹಾಗೂ ಆ ತೀರ್ಪಿಗೆ ತಕ್ಕಂತೆ ನಿಮ್ಮನ್ನು ನಿರ್ಬಂಧಿಸಲಾಗುತ್ತದೆ.
  • ಗ್ರಾಹಕರೊಂದಿಗೆ ಸಮಾಲೋಚನೆ ನಡೆಸುವುದನ್ನು ದಾಖಲೆ ಮಾಡಲಾಗುವುದು
    1. ಸಮಾಲೋಚನೆಯ ದಾಖಲೆಗಳನ್ನು ಕಾಳಜಿಯಿಂದ ಜಾಗ್ರತೆಯಾಗಿ ಇರಿಸುವ ಪ್ರಮಾಣಿತ ಮತ್ತು ಅಭ್ಯಾಸದ ಮೂಲಕ ಅಗತ್ಯವಿರುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ಒಪ್ಪುತ್ತೀರಿ. ಸಮಾಲೋಚನೆ ನಡೆಸುವ ಸೆಷನ್ನಿನ ವೀಡಿಯೊ ಮತ್ತು ಆಡಿಯೋ ರೆಕಾರ್ಡಿಂಗ್‌ ಮಾಡುವುದಕ್ಕೆ ನೀವು ಇದೀಗ ಕಂಪೆನಿಗೆ ಸಮ್ಮತಿಯನ್ನು ನೀಡುತ್ತೀರಿ. ನಿಮಗೆ ಒದಗಿಸಲಾದ ಸೇವೆಗಳಿಗೆ ಪೂರಕವಾಗಿ ಸಹಾಯವಾಗುವಂತೆ ರೆಕಾರ್ಡಿಂಗ್‌ಗಳನ್ನು ಬಳಸಿಕೊಳ್ಳಲಾಗುತ್ತದೆ.
    2. ದಾಖಲೆಗಳಲ್ಲಿರುವ ಅಡಗಿರುವ ಮಾಹಿತಿಯು ಸ್ವಭಾವತಃ ಗೌಪ್ಯವಾಗಿರುವುದು ಹಾಗೂ ಅಂತಹ ಮಾಹಿತಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮಾಡಬೇಕಾದ ಪ್ರತಿಯೊಂದು ಪ್ರಯತ್ನದ ಕಸರತ್ತುಗಳನ್ನು ನಾವು ಮಾಡಲೇಬೇಕಾಗುತ್ತದೆ. ಯಾವುದೇ ವ್ಯಕ್ತಿಗೆ ಮತ್ತು ಸಂಸ್ಥೆಗೆ, ಅದರ ನೌಕರರನ್ನು, ಅಧಿಕೃತ ಪ್ರತಿನಿಧಿಗಳನ್ನು, ಸಲಹೆಗಾರರನ್ನು ಮತ್ತು ವ್ಯಾಪಾರ ಸಹವರ್ತಿಗಳನ್ನು ಹೊರತುಪಡಿಸಿ ಈ ನಮ್ಮ ಸಂಸ್ಥೆಯು ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ. ಏಕೆಂದರೆ ಈ ಎಲ್ಲಾ ಮಂದಿಗಳಿಎಗೆ ಅಂಥ ಮಾಹಿತಿಯನ್ನು ಪ್ರವೇಶೀಸುವ ಅಗತ್ಯವಿರುತ್ತದೆ ಅಂದರೆ ಕಾನೂನಿನ ಮೂಲಕ ಕಡ್ಡಾಯವಾಗಿಲ್ಲದ ಸೇವೆಗಳನ್ನು ಒದಗಿಸುವುದಕ್ಕಾಗಿ ಈ ಸಮೂಹವು ಗೌಪ್ಯತಾ ಮಾಹಿತಿಯನ್ನು ಪ್ರವೇಶಿಸಬೇಕು.
  • ಇತರೆ
    1. ನೀವು ಒದಗಿಸಿದ ವೈಯಕ್ತಿಕ ಮಾಹಿತಿಯೂ ಸೇರಿದಂತೆ ಆ ವಿಚಾರಾಂಶವು, ಮಾಹಿತಿಯು ಸರಿಯಾಗಿದೆ ಮತ್ತು ನಿಖರವಾಗಿದೆ ಎಂದು ನೀವು ದೃಢೀಕರಿಸುತ್ತೀರಿ.
    2. ನಿಮ್ಮ ಪ್ರೊಫೈಲ್‌ನಲ್ಲಿ ನೀವು ಒದಗಿಸಿದ ಗುರುತು, ವಿಳಾಸ ಇತ್ಯಾದಿ ವಿವರಗಳು ಮಾನ್ಯವಾಗಿವೆಯೇ ಎಂದು ಪರಿಶೀಲಿಸುವ ಸಲುವಾಗಿ, ನಿಮ್ಮ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಅಥವಾ ಯಾವುದೇ ಇತರೆ ಸರ್ಕಾರ ಮಾನ್ಯತೆಯ ದಾಖಲೆಗಳ ನಕಲು ಪ್ರತಿಯನ್ನು ಸಲ್ಲಿಸುವಂತೆ ನಿಮಗೆ ಖಡಾಖಂಡಿತವಾಗಿ ಸಲಹೆ ನೀಡಲಾಗುತ್ತದೆ.
    3. ಶುಲ್ಕಗಳ ಮತ್ತು ಪ್ರವೇಶಧನಗಳ ಸಂಗ್ರಹಣೆಗಾಗಿ ಕಂಪನಿಯು ಮೂರನೇ ವ್ಯಕ್ತಿಯ ಪೇಮೆಂಟ್ ಗೇಟ್‌ವೇಗಳನ್ನು ಬಳಸಿಕೊಳ್ಳುತ್ತದೆ. ಪೇಮೆಂಟ್ ಗೇಟ್‌ವೇ ಒಂದುವೇಳೆ ವಿಫಲವಾದಲ್ಲಿ, ಅದನ್ನೇ ಪೇಮೆಂಟ್ ಗೇಟ್‌ವೇ ಪೂರೈಕೆದಾರರ ಮೂಲಕ ಸದಸ್ಯನಿಗೆ ಸಂವಹನ ನೀಡಲಾಗುತ್ತದೆ. ಪೇಮೆಂಟ್ ಗೇಟ್‌ವೇ ಹೆಚ್ಚುವರಿ ಕರೆನ್ಸಿ/ಪರಿವರ್ತನಾ ಶುಲ್ಕಗಳು/ಕಡಿತಗಳು/ದೋಷ ಸಮಸ್ಯೆಗಳಿಗೆ ಈ ನಮ್ಮ ಕಂಪನಿಯು ಜವಾಬ್ದಾರನಾಗಿರುವುದಿಲ್ಲ. ವಿಫಲವಾದ ಆನ್‌ಲೈನ್ ವಹಿವಾಟುಗಳ ಸಂದರ್ಭದಲ್ಲಿ, ಯಾವುದೇ ಸೇವೆಗಳನ್ನು ಪಡೆಯುವಂತಿಲ್ಲವೆಂಬ ಪರಿಣಾಮಕ್ಕೆ ಕಾರಣವಾಗುತ್ತದೆ. ಪೇಮೆಂಟ್ ಗೇಟ್‌ವೇ ಮೂಲಕ ನಿಮ್ಮ ಕಾರ್ಡ್ಅನ್ನು ತಲುಪುವ/ಬ್ಯಾಂಕ್ ಖಾತೆಗಳಿಗೆ ಮರುಪಾವತಿಗಳನ್ನು ತಲುಪುವಲ್ಲಿ, ಏನೇ ಆಗಿದ್ದರೂ ಸಹ, ಕಂಪನಿಯು ನಿಖರತೆಯ ಅಥವಾ ಸಕಾಲಿಕತೆ ಯಾವುದೇ ಗ್ಯಾರಂಟೀಗಳನ್ನು ನೀಡುವುದಿಲ್ಲ.
    4. ಒಬ್ಬ ಸದಸ್ಯನಾಗಿಬಿಡುವ ಮೂಲಕ, ಕಂಪನಿಯಿಂದ, ಅದರ ಅಂಗಸಂಸ್ಥೆಗಳಿಂದ, ಸಹವರ್ತಿಗಳಿಂದ, ಇತರ ಅಂಗಸಂಸ್ಥೆಗಳಿಂದ ಅಥವಾ ವ್ಯಾಪಾರೋದ್ಯಮದ ಪಾಲುದಾರರಿಂದ ದೊರೆಯುವ ಅಭಿಪ್ರಾಯವನ್ನು ಮತ್ತು ಪ್ರಚಾರದ ಕೊಡುಗೆಗಳನ್ನು ಕುರಿತಾಗಿರುವ, ನಿರ್ದಿಷ್ಟ ಇಮೇಲ್ ಗಳನ್ನು, ಸಂದೇಶಗಳನ್ನು, ಕರೆಗಳನ್ನು ಪಡೆದುಕೊಳ್ಳಲು ನೀವು ಸಮ್ಮತಿಸುತ್ತೀರಿ,
    5. ಈ ಒಪ್ಪಂದದ ಯಾವುದೇ ನಿಬಂಧನೆಯು ಅಮಾನ್ಯವಾಗಿದ್ದಲ್ಲಿ, ಈ ಒಪ್ಪಂದದ ಉಳಿದ ಭಾಗವನ್ನು ಸಂಪೂರ್ಣವಾಗಿ ಜಾರಿಗೆ ತರುವುದನ್ನು ಮುಂದುವರಿಸತಕ್ಕದ್ದು ಮತ್ತು ಜಾರಿ ಮಾಡತಕ್ಕದ್ದು.
  • ಬಳಕೆಯ ನಿಯಮಗಳನ್ನು ಮಾರ್ಪಡಿಸುವ ಹಕ್ಕು

ಯಾವುದೇ ಕಾರಣಕ್ಕಾಗಿ, ಮತ್ತು ಸೂಚನೆಯನ್ನು ನೀಡದೆಯೇ ಬಳಕೆಯ ನಿಯಮಗಳನ್ನು ನಿಯಮಿತವಾಗಿ ಮಾರ್ಪಡಿಸುವ ಹಕ್ಕನ್ನು ಈ ನಮ್ಮ ಕಂಪನಿಯು ಮೀಸಲಾಗಿಟ್ಟು ಕೊಂಡಿದೆ. ದಯವಿಟ್ಟು ಆಗಿಂದಾಗ್ಗೆ ಈ ಒಪ್ಪಂದವನ್ನು ಪುನರ್ ವಿಮರ್ಶಿಸಿ, ಇದರಿಂದ ಅದರಲ್ಲಿ ಮಾಡಿರುವಂತಹ ಯಾವುದೇ ಬದಲಾವಣೆಗಳನ್ನು ಕುರಿತು ನಿಮಗೆ ತಿಳಿಸಲಾಗುತ್ತದೆ. ಈ ಒಪ್ಪಂದದ ಸಂದರ್ಭದಲ್ಲಿ, ಕಂಪನಿ ಮತ್ತು ಗ್ರಾಹಕರ ನಡುವಿನ ಒಪ್ಪಂದದ ಅಡಿಯಲ್ಲಿ ಒದಗಿಸಲಾದ ಸೇವೆಗಳನ್ನು ಬದಲಾಯಿಸಬಹುದು, ಹಾಗೂ ಈ ಸೈಟ್‌ನ ಷರತ್ತು ಮತ್ತು ನಿಯಮಗಳನ್ನು ನಾವು ಪರಿಷ್ಕರಿಸಬಹುದು ಎಂಬುದಾಗಿ ನೀವು ಒಪ್ಪಿಕೊಳ್ಳುತ್ತೀರಿ. ಅಂತಹ ಯಾವುದೇ ಪರಿಷ್ಕರಣೆಯನ್ನು ಅಥವಾ ಬದಲಾವಣೆಯನ್ನು ಬಂಧಿಸಿಡಲಾಗುವುದು ಹಾಗೂ ನಮ್ಮ ಸೈಟ್‌ನಲ್ಲಿ ಪರಿಷ್ಕೃತಗೊಂಡ ಒಪ್ಪಂದ ಅಥವಾ ಸೇವೆಗಳಲ್ಲಿನ ಬದಲಾವಣೆಯನ್ನು ತಕ್ಷಣವೇ ಪರಿಣಾಮಕಾರಿಯಾಗಿ ಬಿಡುಗಡೆ ಮಾಡಲಾಗುವುದು. ನಾವು ಸ್ಪಷ್ಟವಾಗಿ ಸೂಚಿಸಬೇಕು, ಇಲ್ಲದಿದ್ದರೆ, ಸೇವೆಗಳೊಂದಿಗೆ ಸಂಬಂಧಿಸಿದ ಯಾವುದೇ ನಿಯಮಗಳನ್ನು ಕಂಪನಿಯು ರದ್ಧುಗೊಳಿಸುತ್ತದೆ ಹಾಗೂ ಇತರ ನಿಯಮಗಳನ್ನು ಒಟ್ಟುಗೂಡಿಸುತ್ತದೆ.

  • ನ್ಯಾಯವ್ಯಾಪ್ತಿ ಮತ್ತು ಅನ್ವಯವಾಗುವ ಕಾನೂನು

ಕಂಪನಿಯು ಭಾರತದ ನವಿ ಮುಂಬೈ ಎಂಬ ಸ್ಥಳದಲ್ಲಿರುವ ತನ್ನ ಕೇಂದ್ರ ಕಛೇರಿಗಳಿಂದಲೇ ಸೈಟ್ ಅನ್ನು ನಿಯಂತ್ರಿಸುತ್ತದೆ ಹಾಗೂ ನಿರ್ವಹಿಸುತ್ತದೆ ಹಾಗೂ ಸೈಟ್ ನಲ್ಲಿ ಮೆಟೀರಿಯಲ್ ಗಳು ಸೂಕ್ತವಾಗಿರುವಂತೆ ಮತ್ತು ಬೇರೆ ಸ್ಥಳಗಳಲ್ಲಿ ಬಳಕೆಗಾಗಿ ಲಭ್ಯವಾಗುವಂತೆ ಕಂಪನಿಯು ಯಾವುದೇ ಪ್ರಾತಿನಿಧ್ಯವನ್ನು ರೂಪಿಸುವುದಿಲ್ಲ. ನೀವು ಬೇರೆ ಜಾಗಗಳಿಂದ ಈ ಸೈಟ್ ಅನ್ನು ಬಳಸಿದಲ್ಲಿ, ಸ್ಥಳೀಯವಾಗಿ ಅನ್ವಯವಾಗುವ ಕಾನೂನುಗಳ ಅನುಸರಣೆಗೆ ನೀವು ಜವಾಬ್ದಾರರಾಗಿದ್ದೀರಿ, ಆದರೆ ಅದರ ಜೊತೆಗೆ ಬೇರೆ ರಾಷ್ಟ್ರಗಳ ಆಮದು ಮತ್ತು ರಫ್ತು ಮಾಡುವ ನಿಬಂಧನೆಗಳಿಗೆ ನೀವು ಸೀಮಿತವಾಗಿಲ್ಲ. ಇದೂ ಅಲ್ಲದೇ ಸ್ಪಷ್ಟವಾಗಿ ಸೂಚಿಸದ ಹೊರತಾಗಿ, ಈ ಸೈಟ್ ನಲ್ಲಿ ಕಂಡುಬರುವ ಎಲ್ಲಾ ಮಾರ್ಕೇಟಿಂಗ್ ಅಥವಾ ಪ್ರಚಾರದ ಮೆಟೀರಿಯಲ್‌ಗಳು ಭಾರತದಲ್ಲಿ ನೆಲೆಸಿರುವ ವ್ಯಕ್ತಿಗಳಿಗೆ, ಕಂಪನಿಗಳಿಗೆ ಮತ್ತು ಇತರೆ ಘಟಕಗಳಿಗೆ ಏಕಮಾತ್ರವಾಗಿ ನಿರ್ದೇಶಿಸಲ್ಪಡುತ್ತವೆ ಹಾಗೂ ಈ ಮೆಟೀರಿಯಲ್‌ಗಳು ಭಾರತದಲ್ಲಿ ಸದ್ಯಕ್ಕೆ ಜಾರಿಯಾಗಿ ಚಾಲ್ತಿಯಲ್ಲಿರುವ ಕಾನೂನುಗಳನ್ನು ಅನುಸರಿಸುತ್ತವೆ. ಭಾರತದ ನೆವಿ ಮುಂಬೈಯಲ್ಲಿ ಈ ಒಪ್ಪಂದವನ್ನು ಕಾರ್ಯಗತಗೊಳಿಸಬಹುದೆಂದು ಪರಿಗಣಿಸಲಾಗುತ್ತದೆ. ಸೈಟ್ ಅನ್ನು ಮತ್ತು/ಅಥವಾ ಸೇವೆಯನ್ನು ಪ್ರವೇಶಿಸುವ ಮತ್ತು/ಅಥವಾ ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಮೇಲೇಳುವ ಅಂಥ ಎಲ್ಲಾ ವಿವಾದಗಳು ಮತ್ತು/ಅಥವಾ ವ್ಯತ್ಯಯಗಳನ್ನು ಮತ್ತು/ಅಥವಾ ಈ ಒಪ್ಪಂದದ ಬಳಕೆಯ ನಿಯಮಗಳಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ನೀವು ಬೇಷರತ್ತಾಗಿ ಒಪ್ಪಿಕೊಳ್ಳುತ್ತೀರಿ. ಈ ಸೈಟ್ ಅನ್ನು ಬಳಸುವುದಕ್ಕೆ ಸಂಬಂಧಪಟ್ಟ ನಿಯಮಗಳನ್ನು ಭಾರತದ ಕಾನೂನುಗಳ ಆಡಳಿತಕ್ಕೆ ಒಳಪಡುತ್ತವೆ ಹಾಗೂ ಈ ಕಾನೂನು ನಿಯಮಗಳನ್ನು ಭಾರತದ ನವಿ ಮುಂಬೈನಲ್ಲಿರುವ ನ್ಯಾಯಾಲಯದ ವ್ಯಾಪ್ತಿಯೊಳಗೆ ವಿಶೇಷವಾಗಿ ಸಲ್ಲಿಸಲಾಗಿರುತ್ತದೆ.

TERMS OF USE (Version 2.0 – 29-05-2018)