ಅಂಗಡಿಯ ಮೇಲೆ ವಾಸ್ತು ಯಾವ ಪರಿಣಾಮ ಬೀರುವುದು?

ಪ್ರಸಿದ್ಧಿ ಮತ್ತು ಯಶಸ್ಸನ್ನು ಗಳಿಸಲು ಒಂದು ಅಂಗಡಿಗೆ ಒಳ್ಳೆ ಮ್ಯಾನೇಜ್ಮೆಂಟ್ ಮತ್ತು ಸ್ನೇಹಮಯ ಗ್ರಾಹಕ ಸೇವೆ ಈ ಎರಡೇ ಅಂಶಗಳು ಸಾಲುವುದಿಲ್ಲ. ಸರಿಯಾದ ನಿರ್ಮಾಣ ಮತ್ತು ಬೆಲೆಬಾಳುವ ವಸ್ತುಗಳನ್ನು ಮತ್ತು ಅಂಗಡಿಯೊಳಗಿನ (ಅಥವಾ ಶೋರೂಮ್) ಪೀಠೋಪಕರಣಗಳನ್ನು ಜೋಡಿಸುವ ರೀತಿ ಸಹ ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರವು ಅಂಗಡಿಯಿರುವ ನೆಲೆಯನ್ನು ವಾಸ್ತುಪೂರಕವನ್ನಾಗಿ ಮಾಡಿ ಅಂಗಡಿಯೊಳಗೆ ಸಂಪತ್ತಿನ ಹರಿವು ಬರುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಗ್ರಾಹಕರ ಬಳಕೆದಾರ-ಅನುಭವವನ್ನು ಉತ್ತಮಪಡಿಸುತ್ತದೆ, ಅಂಗಡಿ/ಶೋರೂಂನಲ್ಲಿರುವ ವಾಸ್ತುಸಂಬಂಧಿ ದೋಷಗಳನ್ನು ಅಂಗಡಿ ವಾಸ್ತು ತೆಗೆದುಹಾಕುತ್ತದೆ ಮತ್ತು ಮಾರಾಟದಲ್ಲಿ ಹೆಚ್ಚಳ, ಹೆಚ್ಚು ಉತ್ತಮವಾದ ಸಂಪತ್ತು ಮತ್ತು ಗ್ರಾಹಕರ ಒಳಹರಿವು, ಉತ್ತಮ ಗ್ರಾಹಕ-ಮಾಲೀಕ ಸಂಬಂಧಗಳು ಮುಂತಾದವುಗಳನ್ನು ಉಂಟು ಮಾಡುತ್ತದೆ. ಸರಿಯಾದ ನಿರ್ಮಾಣ ಮತ್ತು ಅಂಗಡಿಯೊಳಗೆ ವೈಜ್ಞಾನಿಕವಾಗಿ ಉತ್ಪನ್ನಗಳ ಜೋಡಿಸುವಿಕೆಯು ಗ್ರಾಹಕರ ಮೇಲೆ ಉತ್ತಮ ಪ್ರಭಾವ ಬೀರುತ್ತವೆ ಮತ್ತು ಅಂಗಡಿಗೆ ಒಳ್ಳೆ ಹೆಸರು ತರುತ್ತದೆ.

ಅಂಗಡಿಗಾಗಿ ವಾಸ್ತು, ಮನೆಗಾಗಿ ವಾಸ್ತು ತತ್ವಗಳಿಗಿಂತ ಭಿನ್ನವಾದ ತತ್ವಗಳನ್ನು ಹೊಂದಿದೆ. ದಿಕ್ಕುಗಳು, ಅಭಿಮುಖವಾಗುವಿಕೆ, ಗಲ್ಲಾಪೆಟ್ಟಿಗೆ ಮತ್ತು ಇತರ ಸಾಮಗ್ರಿಗಳನ್ನು ಇರಿಸುವ ಸ್ಥಳದ ಆಧಾರದ ಮೇಲೆ ವಾಸ್ತು ತಜ್ಞರು ಯಾವುದೇ ರಚನೆಯನ್ನು ಮಾರ್ಪಾಡು ಮಾಡುತ್ತಾರೆ. ಎಲ್ಲಾ ಕೆಟ್ಟ-ಪ್ರಭಾವಗಳನ್ನು ತೆಗೆದುಹಾಕಿ ಬಿಸಿನೆಸ್‌ನಲ್ಲಿ ಸಮೃದ್ಧಿಯನ್ನು ತರುವಂತಹ ವಾಸ್ತುವನ್ನು ಉತ್ತಮಪಡಿಸುವ ವಸ್ತುಗಳೂ ಸಹ ಲಭ್ಯವಿವೆ. ಈ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ವಾಸ್ತುವಿನ ಶ್ರೇಷ್ಠತೆಯನ್ನು ಅರಿಯುತ್ತಿದ್ದಾರೆ ಮತ್ತು ಅದನ್ನು ಬಯಸುತ್ತಿದ್ದಾರೆ.

ಅಂಗಡಿಗಾಗಿ ವಾಸ್ತು ಸಲಹೆಗಳು:

  1. ಅಂಗಡಿಯ ಮಾಲೀಕರು ಅವರ ಅನುಕೂಲಕರ ದಿಕ್ಕುಗಳ ಪೈಕಿ ಒಂದರಲ್ಲಿ ಕುಳಿತುಕೊಳ್ಳಬೇಕು.
  2. ಅಂಗಡಿ ಅಥವಾ ಶೋರೂಂ ಒಳಭಾಗ ಆಯತಾಕಾರ ಅಥವಾ ಚೌಕಾಕಾರವಿದ್ದರೆ ಒಳಿತು.
  3. ಅಂಗಡಿಯ ಮುಖ್ಯ ಪ್ರವೇಶ ದ್ವಾರ ಯಾವುದೇ ರೀತಿ ಶಬ್ದ ಮಾಡಬಾರದು ಹಾಗು ಅದರ ಹತ್ತಿರ ಅಸ್ತವ್ಯಸ್ತತೆ ಇರಬಾರದು.
  4. ಹಣಕ್ಕೆ ಸಂಬಂಧಪಟ್ಟ ವಾಸ್ತುಶಾಸ್ತ್ರದ ಆಧಾರದ ಮೇಲೆ ಗಲ್ಲಾಪೆಟ್ಟಿಗೆ ಮತ್ತು ದೇವರುಗಳನ್ನು ಇರಿಸಿ
  5. ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಗ್ರಾಹಕರ ಮನಸ್ಸಿನ ಮೇಲೆ ಒಳ್ಳೆ ಪ್ರಭಾವ ಬೀರಲು ನಿಮ್ಮ ಅಂಗಡಿಯನ್ನು ಧೂಳುರಹಿತವಾಗಿರಿಸಿ.

ಅಂಗಡಿಯಿರುವ ಸ್ಥಳ ಮತ್ತು ಅದರ ರಚನೆ ಹಾಗು ಮಾಲೀಕರ ವ್ಯಕ್ತಿತ್ವದ ಆಧಾರದ ಮೇಲೆ ಇನ್ನೂ ಹಲವು ವಾಸ್ತು ಉಪಾಯಗಳು ಲಭ್ಯವಿವೆ. ಸರಳ ವಾಸ್ತು, ತನ್ನದೇ ಸ್ವಂತ ವಾಸ್ತು ವಿಧಿವಿಧಾನಗಳೊಂದಿಗೆ ಎಲ್ಲಾ ಅಂಗಡಿ-ವಾಸ್ತು- ತತ್ವಗಳನ್ನು ಪರಿಗಣಿಸುತ್ತದೆ ಮತ್ತು ಅಂಗಡಿ/ಶೋರೂಂಗೆ, ಅದರ ಮಾಲೀಕರಿಗೆ ಮತ್ತು ಉದ್ಯೋಗಿಗಳಿಗೆ ಪ್ರಸಿದ್ಧಿ, ಯಶಸ್ಸು ಮತ್ತು ಸಮೃದ್ಧಿಯನ್ನು ಖಚಿತಪಡಿಸುತ್ತದೆ.