ಗೃಹಕ್ಕಾಗಿ ವಾಸ್ತು

ನಿಮ್ಮ ಗೃಹಕ್ಕಾಗಿ ವಾಸ್ತು ವು ನಿಮ್ಮ ಸಂಪತ್ತು, ಆರೋಗ್ಯ, ಶಿಕ್ಷಣ, ವೃತ್ತಿ ಮತ್ತು ಸಂಬಂಧಗಳ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುವುದು.ನಾವು ನಮ್ಮ ದಿನದ ಬಹುಭಾಗವನ್ನು ಮನೆಯಲ್ಲಿಯೇ ಕಳೆಯುತ್ತೇವೆ, ಹಾಗೂ ಮನೆಯೊಳಗಿನ ಧನಾತ್ಮಕ ಅಥವಾ ಋಣಾತ್ಮಕ ಶಕ್ತಿಯು ನಿಮ್ಮ ದೇಹದೊಳಗೆ ಅನುರಣಿಸುವುದು ಹಾಗೂ ನಿಮ್ಮ ದೇಹ ಮತ್ತು ಆತ್ಮಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ರೀತಿಗಳಲ್ಲಿ ಪರಿಣಾಮಗಳನ್ನು ಬೀರುವುದು.ಇದು ನಮ್ಮ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮಗಳನ್ನು ಬೀರುವುದು, ಹಾಗೂ ನಮ್ಮ ಏಳಿಗೆ ಅಥವಾ ತೊಂದರೆಗಳಿಗೆ ಕಾರಣವಾಗಬಹುದು. ಗೃಹಕ್ಕಾಗಿ ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಉತ್ಪತ್ತಿಸಲು ಮನೆಯೊಳಗಿನ ಕೆಲವು ವಿಷಯಗಳ ಬಗ್ಗೆ ಎಚ್ಚರವಹಿಸಬೇಕು.

ಒಂದು ಗೃಹದೊಳಗೆ ಎಂಟು ದಿಕ್ಕುಗಳಿರುವವು, ಹಾಗೂ ಅವುಗಳಲ್ಲಿ ನಾಲ್ಕು ದಿಕ್ಕುಗಳು ಒಂದು ವ್ಯಕ್ತಿಗೆ ಅನುಕೂಲಕರವಾಗಿರುವವು ಮತ್ತು ಮಿಕ್ಕ ನಾಲ್ಕು ದಿಕ್ಕುಗಳು ಅನಾನುಕೂಲಕರವಾಗಿರುವವು. ಒಬ್ಬ ವ್ಯಕ್ತಿ ಮತ್ತು ಅವನ ಕುಟುಂಬವು ಸಂತೋಷವಾಗಿ ಮತ್ತು ಒಳ್ಳೆಯ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಗಳಿಂದ ಬಾಳಲು ಆ ವ್ಯಕ್ತಿಯ ಗೃಹದ ಎಲ್ಲಾ ಪ್ರಮುಖ ಸ್ಥಳಗಳು ಅವನಿಗೆ (ಗೃಹದ ಮುಖ್ಯಸ್ಥ) ಅನುಕೂಲವಾಗುವಂತೆ ಸರಿಯಾದ ದಿಕ್ಕುಗಳಲ್ಲಿ ಇರತಕ್ಕದ್ದು.

ಸರಳ ವಾಸ್ತು ಕುಟುಂಬದ ಎಲ್ಲಾ ವ್ಯಕ್ತಿಗಳಿಗೆ ವ್ಯಯಕ್ತೀಕರಿಸಲಾದ ವಾಸ್ತು ಚಾರ್ಟ್ ವನ್ನು ಒದಗಿಸುವುದು. ಈ ವಾಸ್ತು ಕೋಷ್ಟಕವು ಆ ವ್ಯಕ್ತಿಗೆ ಅನುಕೂಲಕರವಾದ ಮತ್ತು ಅನಾನುಕೂಲಕರವಾದ ದಿಕ್ಕುಗಳನ್ನು ಹೊಂದಿರುವುದು.ನಮ್ಮ ವಾಸ್ತು ಪರಿಣತರು ಆ ಕುಟುಂಬದ ಮುಖ್ಯಸ್ಥನಿಗೆ ಮತ್ತು ಕುಟುಂಬದ ಇತರ ಸದಸ್ಯರಿಗೆ ಆ ಮನೆಯ ವಾಸ್ತುವಿನ ಹೊಂದಾಣಿಕೆಯನ್ನು ವಿಶ್ಲೇಷಿಸಿ ಅವರ ಭವಿಷ್ಯದ ಪೂರ್ವಾನುಮಾನದ ವರದಿಯೊಂದನ್ನು ಅವರಿಗೆ ನೀಡುವರು.ಕುಟುಂಬದ ಮುಖ್ಯಸ್ಥ ಮತ್ತು ಮನೆಯ ಮಧ್ಯೆ ಯಾವುದೇ ಅಸಮಂಜಸತೆಯು ಆ ಕುಟುಂಬದ ಸದಸ್ಯರ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುವುದು. ನಮ್ಮ ವಾಸ್ತು ತಜ್ಞರು ಅಂತಹ ಎಲ್ಲಾ ಸಮಸ್ಯೆಗಳಿಗೆ ಮನೆಯ ಯಾವುದೇ ಭಾಗಕ್ಕೂ ಯಾವುದೇ ರಚನಾತ್ಮಕ ಬದಲಾವಣೆಗಳಿಲ್ಲದ ಪರಿಹಾರಗಳನ್ನು ಒದಗಿಸುವರು.

ಆರೋಗ್ಯಕ್ಕಾಗಿ ವಾಸ್ತು

ಆರೋಗ್ಯ ಸ್ಥಳ ‒ ಆರೋಗ್ಯ ಸ್ಥಾನ

ಯಾವುದೇ ಮನೆಯ ಆರೋಗ್ಯ ಸ್ಥಳವು ಅನಾನುಕೂಲಕರವಾದ ದಿಕ್ಕಿನಲ್ಲಿ ಇದ್ದಲ್ಲಿ ಅಥವಾ ಆ ಜಾಗದಲ್ಲಿ ಬಚ್ಚಲು ಮನೆ/ಶೌಚಾಲಯಗಳಿದ್ದಲ್ಲಿ, ಆ ಮನೆಯ ಮುಖ್ಯಸ್ಥನ ಮತ್ತು ಆತನ ಕುಟುಂಬದ ಸದಸ್ಯರ ಆರೋಗ್ಯಗಳಲ್ಲಿ ತೊಂದರೆಗಳನ್ನುಂಟು ಮಾಡುವುದು.

ಆ ಮನೆಯ ಮುಖ್ಯಸ್ಥ ಅಥವಾ ಆತನ ಕುಟುಂಬವು ಅವರ ಆರೋಗ್ಯಗಳಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುವರು, ಎಂದರೆ, ಆ ವ್ಯಕ್ತಿಗಳು ಗಂಭೀರವಾದ ವೈದ್ಯಕೀಯ ಸ್ಥಿತಿಗಳನ್ನು ಎದುರಿಸುವರು:

 • ಶಸ್ತ್ರಚಿಕಿತ್ಸೆಯ ಅಗತ್ಯ
 • ಮಕ್ಕಳಿಲ್ಲದ ದಂಪತಿಗಳು
 • ಆರೋಗ್ಯದ ವಿಷಯದಲ್ಲಿ ಯಾವುದೇ ತೊಂದರೆಗಳಿಲ್ಲದಿದ್ದರೂ ಕೂಡ ವೈದ್ಯಕೀಯ ವಿಷಯಗಳು

ಸಂಪತ್ತಿಗಾಗಿ ವಾಸ್ತು

ಯಾವುದೇ ಮನೆಯ ಆರೋಗ್ಯ ಸ್ಥಳವು ಅನಾನುಕೂಲಕರವಾದ ದಿಕ್ಕಿನಲ್ಲಿ ಇದ್ದಲ್ಲಿ ಅಥವಾ ಆ ಜಾಗದಲ್ಲಿ ಬಚ್ಚಲು ಮನೆ/ಶೌಚಾಲಯಗಳಿದ್ದಲ್ಲಿ, ಆ ಮನೆಯ ಮುಖ್ಯಸ್ಥನ ಮತ್ತು ಆತನ ಕುಟುಂಬದ ಸದಸ್ಯರ ಆರೋಗ್ಯಗಳಲ್ಲಿ ತೊಂದರೆಗಳನ್ನುಂಟು ಮಾಡುವುದು.

ಆ ವ್ಯಕ್ತಿಯು ಹಣಕಾಸಿನ ವಿಚಾರಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವನು, ಉದಾಹರಣೆಗಾಗಿ,

 • ಆತನಿಗೆ ಹಣ ಉಳಿಸಲು ಸಾಧ್ಯವಾಗದೇ ಇರಬಹುದು.

ವಿದ್ಯಾಭ್ಯಾಸಕ್ಕಾಗಿ ವಾಸ್ತು

ಯಾವುದೇ ಮನೆಯ ವಿದ್ಯಾಭ್ಯಾಸದ ಸ್ಥಳವು ಅನಾನುಕೂಲಕರವಾದ ದಿಕ್ಕಿನಲ್ಲಿ ಇದ್ದಲ್ಲಿ ಅಥವಾ ಆ ಜಾಗದಲ್ಲಿ ಬಚ್ಚಲು ಮನೆ/ಶೌಚಾಲಯಗಳಿದ್ದಲ್ಲಿ, ಆ ಮನೆಯ ಮಕ್ಕಳ ವಿದ್ಯಾಭ್ಯಾಸದ ವಿಷಯಗಳಲ್ಲಿ ತೊಂದರೆಗಳನ್ನುಂಟು ಮಾಡುವುದು.

ಮಕ್ಕಳು ವಿದ್ಯಾಭ್ಯಾಸದ ವಿಷಯಗಳಲ್ಲಿ ಈ ಕೆಳಗಿನಂತಹ ರೂಪಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವರು:

 • ನಮ್ಮ ಮನೆಯಲ್ಲಿನ ಹೆಸರು ಮತ್ತು ಕೀರ್ತಿಯ ಸ್ಥಳವು ಕಾಣೆಯಾದಲ್ಲಿ, ನಾವು ನಮ್ಮ ಜೀವನದ ಉದ್ಧಕ್ಕೂ ಸಾಧಿಸಲು ಶ್ರಮಿಸುವ ನಮ್ಮ ಹೆಸರು, ಕೀರ್ತಿ ಮತ್ತು ಅಭಿಮಾನಗಳು ಕೆಡುವ ಸನ್ನಿವೇಶಗಳಿಗೆ ಕಾರಣವಾಗಬಹುದು. ಜನರು ತಮ್ಮ ಸೃಜನಶೀಲತೆ ಮತ್ತು ಕಲ್ಪನೆಗಳನ್ನು ಪ್ರದರ್ಶಿಸಲು ಅವಕಾಶಗಳು ಸಿಗದೇ ಇರುವಂತಹ ಸ್ಥಿತಿಗಳು ಒದಗಬಹುದು.
 • ವ್ಯಕ್ತಿಗಳು ತಮ್ಮ ಸೃಜನಶೀಲತೆ ಮತ್ತು ಹೊಸ ಕಲ್ಪನೆಗಳನ್ನು ತೋರ್ಪಡಿಸಲು ಅನೇಕ ಸಮಸ್ಯೆಗಳನ್ನು ಎದುರಿಸುವರು, ಉದಾಹರಣೆಗಾಗಿ: ಸರಿಯಾದ ಮನಸ್ಸುಗಳನ್ನು ಬಳಸಿಕೊಳ್ಳುವುದು.

ಸೃಜನಶೀಲತೆಗಾಗಿ ವಾಸ್ತು

ಕೆಲವು ವ್ಯಕ್ತಿಗಳು ತುಂಬಾ ಸೃಜನಶೀಲ ಮನಸ್ಸನ್ನು ಹೊಂದಿರುತ್ತಾರೆ ಮತ್ತು ತಮ್ಮ ಸೃಜನಶೀಲತೆ ಹಾಗೂ ಅನ್ವೇಷಣೆಯನ್ನು ಬಳಕೆಮಾಡುವ ಮೂಲಕ ಹೊಸ ಔದ್ಯಮಿಕ ಯೋಜನೆಯನ್ನು ಪ್ರಾರಂಭಿಸುತ್ತಾರೆ ಮತ್ತು ದೊಡ್ಡ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಯಶಸ್ಸನ್ನು ಸಂಪಾದಿಸಲು ಬಯಸುತ್ತಾರೆ. ಆದರೆ ಇದು ಬೃಹತ್ ಪ್ರಮಾಣದಲ್ಲಿ ಹಣಕಾಸು ನಷ್ಟಗಳ ರೂಪದಲ್ಲಿ ಅವರನ್ನು ಬಾಧಿಸುವುದು.

ವೃತ್ತಿಗಾಗಿ ವಾಸ್ತು

ಯಾವುದೇ ಮನೆಯ ವೃತ್ತಿಯ ಸ್ಥಳವು ಅನಾನುಕೂಲಕರವಾದ ದಿಕ್ಕಿನಲ್ಲಿ ಇದ್ದಲ್ಲಿ ಅಥವಾ ಆ ಜಾಗದಲ್ಲಿ ಬಚ್ಚಲು ಮನೆ/ಶೌಚಾಲಯಗಳಿದ್ದಲ್ಲಿ, ಆ ಮನೆಯ ಸದಸ್ಯರ ವೃತ್ತಿಯ ವಿಷಯಗಳಲ್ಲಿ ತೊಂದರೆಗಳನ್ನುಂಟು ಮಾಡುವುದು.

ವ್ಯವಹಾರಗಳಲ್ಲಿ ತೊಡಗಿರುವ ವ್ಯಕ್ತಿಗಳು ತಮ್ಮ ತಮ್ಮ ವೃತ್ತಿಯಲ್ಲಿ ಈ ಕೆಳಗಿನಂತಹ ರೂಪಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ:

 • ಕೆಲಸ ಕಳೆದುಕೊಳ್ಳುವುದು.
 • ಮಾಡಿರುವ ಕೆಲಸಕ್ಕೆ ಮೇಲಿನ ಅಧಿಕಾರಿವರ್ಗದಿಂದ ಮೆಚ್ಚುಗೆಯ ಕೊರತೆ.

ವಿವಾಹಕ್ಕಾಗಿ ವಾಸ್ತು

ಯಾವುದೇ ಮನೆಯ ಸಂಬಂಧಗಳು ಮತ್ತು ಮದುವೆ ಸ್ಥಳವು ಅನಾನುಕೂಲಕರವಾದ ದಿಕ್ಕಿನಲ್ಲಿ ಇದ್ದಲ್ಲಿ ಅಥವಾ ಆ ಜಾಗದಲ್ಲಿ ಬಚ್ಚಲು ಮನೆ/ಶೌಚಾಲಯಗಳಿದ್ದಲ್ಲಿ, ಆ ಮನೆಯ ಸದಸ್ಯರ ಮದುವೆ ಮತ್ತು ಸಂಬಂಧಗಳ ವಿಷಯಗಳಲ್ಲಿ ತೊಂದರೆಗಳನ್ನುಂಟು ಮಾಡುವುದು.

ಪ್ರತಿ ಮನೆ ಮತ್ತು ಕೆಲಸದ ಸ್ಥಳವೂ ಕೂಡ ಒಂದು ಸಂಬಂಧಗಳ ಸ್ಥಳ ಹೊಂದಿರುವುದು.ಕೆಲವು ಬಾರಿ ಅಂತಹ ಸಂಬಂಧಗಳ ಸ್ಥಳವು ಮನೆ ಅಥವಾ ಕೆಲಸದ ಸ್ಥಳದಲ್ಲಿ ಇರದಿರಬಹುದು.ಕೆಲವೊಮ್ಮೆ ಅಂತಹ ಸಂಬಂಧಗಳ ಸ್ಥಳವು ಮನೆಯಲ್ಲಿ ಇದ್ದರೂ ಕೂಡ, ಬಚ್ಚಲು ಮನೆ, ಶೌಚಾಲಯ ಮತ್ತು ಸೌಲಭ್ಯಗಳ ಕೊಠಡಿಗಳು ಅದಕ್ಕೆ ಅಡ್ಡಿಪಡಿಸಿರಬಹುದು.ಆ ಕಾರಣದಿಂದಾಗಿ ಆ ಕುಟುಂಬದ ಸದಸ್ಯರುಗಳ ಮಧ್ಯದ ಸಂಬಂಧಗಳು ಕೆಡಲು ಶುರುವಾಗುವುದು.

ವ್ಯಕ್ತಿಗಳು ತಮ್ಮ ತಮ್ಮ ಸಂಬಂಧಗಳು ಮತ್ತು ಮದುವೆಗಳಲ್ಲಿ ಈ ಕೆಳಗಿನಂತಹ ರೂಪಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆವುದು:

 • ಹೊಂದಾಣಿಕೆ ಕೂಡಿ ಬಂದರೂ ಕೂಡ ಮದುವೆಗೆ ವಿಳಂಬವಾಗುವುದು;
 • ವಿಚ್ಛೇದನ
 • ಗಂಡ ಮತ್ತು ಹೆಂಡತಿಯ ನಡುವೆ, ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರ ನಡುವೆ, ತಂದೆ ಮತ್ತು ತಾಯಿಯರ ನಡುವೆ ಅಸೌಹಾರ್ದಯುಕ್ತ ಸಂಬಂಧ.