ಸರಳ ವಾಸ್ತು ಎಫ್‌ ಎ ಕ್ಯೂ ವಿಭಾಗವು ನಿಮಗೆ ಸರಳ ವಾಸ್ತು ಹೇಗೆ ಕೆಲಸ ಮಾಡುತ್ತದೆ, ಸರಳ ವಾಸ್ತು ಸೇವೆ ಪಡೆಯುವ ವಿಧಾನ, ಹೇಗೆ ನಮ್ಮನು ಸಂಪರ್ಕಿಸಬಹುದು, ಮುಂತಾದ ಮಾಹಿತಿಯನ್ನು ಒದಗಿಸುವುದು.

ಸರಳ ವಾಸ್ತುವಿನಿಂದ ಎಷ್ಟು ದಿನಗಳಲ್ಲಿ ಫಲಿತಾಂಶವನ್ನು ಪಡೆಯಬಹುದು?

ಸರಳ ವಾಸ್ತುವಿನ ಪ್ರಕ್ರಿಯೆಗಳನ್ನು ಗುರೂಜಿಯವರು ಸಲಹೆ ಮಾಡಿರುವಂತೆ ಸಂಪೂರ್ಣವಾಗಿ ಅಳವಡಿಸಿಕೊಂಡ ನಂತರ, 7-180 ದಿನಗಳಲ್ಲಿ ಖಚಿತ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವಿರುತ್ತದೆ.

.

ಸರಳ ವಾಸ್ತುವು ಭಾರತೀಯ ಸಾಂಪ್ರದಾಯಿಕ ವಾಸ್ತು ಶಾಸ್ತ್ರಕ್ಕಿಂತ ಹೇಗೆ ಭಿನ್ನವಾಗಿದೆ?

ನಮ್ಮ ತಜ್ಞರು ನಿಮ್ಮ ಮನೆಗೆ ಭೇಟಿ ನೀಡುವರು ಮತ್ತು ನಿಮ್ಮ ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿ ಮನೆ/ಕೆಲಸದ ಸ್ಥಳವನ್ನು ವಿಶ್ಲೇಷಿಸುವರು. ವಿಶ್ಲೇಷಣೆಗಳನ್ನು ಅವಲಂಬಿಸಿ, ನಿಮ್ಮ ಕುಟುಂಬವು ಎದುರಿಸುತ್ತಿರುವ ಆರೋಗ್ಯ, ಸಂಪತ್ತು, ಸಂಬಂಧಗಳು/ವಿವಾಹ, ಮಕ್ಕಳ ಶಿಕ್ಷಣ ಮತ್ತು ಕೆರಿಯರ್‌ ಇತ್ಯಾದಿಗಳಂತಹ ನಿರ್ದಿಷ್ಟ ಸಮಸ್ಯೆಗಳನ್ನು ನಾವು ಮುನ್ಸೂಚಿಸುತ್ತೇವೆ. ನೀವು ನಿಖರ ಮುನ್ಸೂಚನೆ ನೀಡುವುದನ್ನು ಕಂಡು ಆಶ್ಚರ್ಯಪಡುತ್ತೀರಿ. ನೀವು ಎದುರಿಸುತ್ತಿರುವ ಸಮಸ್ಯೆಗಳಿಗೆ ನಾವು ವೈಜ್ಞಾನಿಕ ಪರಿಹಾರಗಳನ್ನು ನಿಮಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆ ನೀಡುತ್ತೇವೆ. ನಮ್ಮ ಸೇವೆಗಳನ್ನು ಜಾರಿಗೊಳಿಸಿದ ನಂತರ ನಾವು 7-180 ದಿನಗಳಲ್ಲಿ ಫಲಿತಾಂಶಗಳ ಖಾತರಿ ನೀಡುತ್ತೇವೆ.

life-problems-200x200

ಸರಳ ವಾಸ್ತುವು ಇತರ ವಾಸ್ತು ಶಾಸ್ತ್ರಗಳಿಗಿಂತ ಹೇಗೆ ಭಿನ್ನವಾಗಿದೆ?

11-600x250

ಈ ಎಲ್ಲ ಭಾರತೀಯ ಸಾಂಪ್ರದಾಯಿಕ ಭವಿಷ್ಯ ಶಾಸ್ತ್ರಗಳೂ ಮೂಲತಃ ವೈಯಕ್ತಿಕ ಸದಸ್ಯನಿಗೆ ಸೂಚಿಸಲಾಗಿರುವ ಪರಿಹಾರಗಳಾಗಿದ್ದು, ವಿವರಗಳನ್ನು ಶಾಸ್ತ್ರಜ್ಞರಿಗೆ ನೀಡಿದಾಗ ಆ ನಿರ್ದಿಷ್ಟ ಸದಸ್ಯನಿಗೆ ಸೂಕ್ತವಾದ ಪರಿಹಾರಗಳನ್ನು ಆತನ ಜಾತಕದಂತಹ ಕೋಷ್ಠಕಗಳ ನೆರವಿನಿಂದ ಕೇವಲ ಆತನಿಗೆ ಸಂಬಂಧಿಸಿ ನೀಡಲಾಗುತ್ತದೆ. ಸರಳ ವಾಸ್ತುವಿನಲ್ಲಿ ಕೇವಲ ಜಾತಕ ಕುಂಡಲಿಯೊಂದೇ ಅಲ್ಲದೇ ಸಾಧಕ ಹಾಗೂ ಬಾಧಕವಾಗಿರುವ ದಿಕ್ಕುಗಳು, ಬಣ್ಣಗಳು ಮುಂತಾದವುಗಳನ್ನು ಗಮನಿಸಿ ಭವಿಷ್ಯ ನುಡಿಯಲಾಗುತ್ತದೆ. ನಾವು ಕುಟುಂಬದ ಎಲ್ಲ ಸದಸ್ಯರ ಜನ್ಮ ದಿನಾಂಕ ಗಮನಿಸುತ್ತೇವೆ ಮತ್ತು ಅವರ ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಮೂಲಗಳ ಸಲಹೆ ಮಾಡುತ್ತೇವೆ ಮತ್ತು ಇಡೀ ಕುಟುಂಬವನ್ನು ಪ್ರಭಾವಿಸುತ್ತಿರುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತೇವೆ.

ಸರಳ ವಾಸ್ತುವು ನಿಖರವಾಗಿ ಹೇಗೆ ಕೆಲಸ ಮಾಡುತ್ತದೆ?

1-1-200x200
predict-200x200
plan1-200x200
calling-200x200

ಸರಳ ವಾಸ್ತು ತತ್ವಗಳನ್ನು ಸಾರ್ವತ್ರಿಕವಾಗಿ ಬಳಕೆ ಮಾಡುವುದರ ಮೂಲಕ ನಮ್ಮ ಸರಳ ವಾಸ್ತುತಜ್ಞರು ನಿಮ್ಮ ಮನೆ ಅಥವಾ ಕೆಲಸದ ಸ್ಥಳದಲ್ಲಿ ಭೌತಿಕ ತಪಾಸಣೆಯನ್ನು ಮಾಡುತ್ತಾರೆ. ನಿಮ್ಮ ಮನೆಯ ಪ್ಲಾನ್, ಕೆಲಸದ ಸ್ಥಳದ ಪ್ಲಾನ್ ಅಥವಾ ಸಂಸ್ಥೆಯ ಪ್ಲಾನ್ ಅನ್ನು ಸಮಾಲೋಚನೆ ಮಾಡುತ್ತಾರೆ (ಒಂದು ವೇಳೆ ನಿಮಗೆ ಪ್ಲಾನ್ ಇಲ್ಲದೇ ಇದ್ದರೆ, ನಮ್ಮ ತಜ್ಞರು ಸ್ಥಳದಲ್ಲಿಯೇ ಪ್ಲಾನ್ ಮಾಡುತ್ತಾರೆ) ಮತ್ತು ಮನೆಯಲ್ಲಿ ನಿಮ್ಮ ಸಮಸ್ಯೆಯ ಸ್ಥಳದ ನಿಖರ ಮುನ್ಸೂಚನೆಯನ್ನು ಒದಗಿಸುತ್ತಾರೆ. ಮುನ್ಸೂಚನೆಯು ಕುಟುಂಬದ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ನಿಖರವಾಗಿ ಸರಿಹೊಂದುವಂತಿದ್ದಲ್ಲಿ, ಸದ್ಯದ ಪ್ಲಾನ್‌ಗೆ ಯಾವುದೆ ಭೌತಿಕ ಬದಲಾವಣೆಗಳನ್ನು ಮಾಡದೇ, ನಮ್ಮ ತಜ್ಞರು ಸರಳ ವಾಸ್ತುವಿನ ಪರಿಹಾರೋಪಾಯಗಳನ್ನು ಗುರೂಜಿಯವರಿಂದ ಶಕ್ತಿ ತುಂಬಲ್ಪಟ್ಟಿರುವ ಅನೇಕ ವಸ್ತುಗಳ ರೂಪದಲ್ಲಿ ಒದಗಿಸುತ್ತಾರೆ. ವ್ಯಕ್ತಿಗತವಾದ ಜಾತಕ ಕುಂಡಲಿಗಳ ನೆರವಿನೊಂದಿಗೆ ಸಾಧಕ ಹಾಗೂ ಬಾಧಕ ದಿಕ್ಕುಗಳನ್ನು ಸಾಧಕ ಮತ್ತು ಬಾಧಕವಾಗಿರುವ ಬಣ್ಣಗಳ ಜೊತೆಯಲ್ಲಿ ಅಷ್ಟೇ ಅಲ್ಲದೇ ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದ ಮಾಹಿತಿಗಳು, ಅದೃಷ್ಟ ಸಂಖ್ಯೆ ಇತ್ಯಾದಿಗಳನ್ನು ಪರಿಗಣಿಸಿ ಕೋಷ್ಠಕದ ರೂಪದಲ್ಲಿ ಮತ್ತು ಪ್ರತಿಯೊಬ್ಬ ಸದಸ್ಯನ ಮಾಹಿತಿಯನ್ನು ನೀಡಲಾಗುತ್ತದೆ. ನಮ್ಮ ತಜ್ಞರು ಸಮಸ್ಯೆಯನ್ನು ಖಚಿತವಾಗಿ ತಿಳಿದುಕೊಂಡ ನಂತರ, ನಿಮ್ಮ ವ್ಯಕ್ತಿಗತ ಹಾಗೂ ಕುಟುಂಬದ ಸದಸ್ಯರ ಸಮಸ್ಯೆಗಳಿಗಾಗಿ ಖಚಿತ ಪರಿಹಾರೋಪಾಯವನ್ನು ಒದಗಿಸುತ್ತಾರೆ. ಸರಳ ವಾಸ್ತುವಿನ ಶಾಶ್ವತವಾದ ವೈಜ್ಞಾನಿಕ ಪರಿಹಾರಗಳು, ನಿಮ್ಮ ದುರಾದೃಷ್ಟದ ಗಡಿಯಾರವನ್ನು ಹಿಂತಿರುಗಿಸುವಲ್ಲಿ ನೆರವು ನೀಡುತ್ತವೆ ಮತ್ತು ಭೌತಿಕ, ಆಧ್ಯಾತ್ಮಿಕ ಮತ್ತು ಲೌಕಿಕವಾಗಿರುವಂತಹ ಜೀವನದ ಎಲ್ಲ ಮಟ್ಟಗಳಲ್ಲಿ ಮಹತ್ತರವಾದ ಪ್ರಗತಿಯನ್ನು ತರುತ್ತವೆ.

ನಾನು ಸರಳ ವಾಸ್ತುವಿನ ಸಲಹೆ ಪಡೆಯುವುದು ಹೇಗೆ?

ಕೆಳಗೆ “ನಮ್ಮನ್ನು ಸಂಪರ್ಕಿಸಿ” ವಿಭಾಗದಲ್ಲಿ ನೀಡಿರುವ ಫೋನ್ ಸಂಖ್ಯೆಗಳು ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ಈ ಮೂರು ರಾಜ್ಯಗಳಿಗೆ ಆಗಿರುತ್ತವೆ. ನಾವು ಸೇವೆಗಳನ್ನು 3-5 ದಿನಗಳಲ್ಲಿ ಸರಳ ವಾಸ್ತು ತಜ್ಞರು ಸಂಬಂಧಿಸಿದ ಮನೆ ಅಥವಾ ಕೆಲಸದ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಒದಗಿಸುತ್ತೇವೆ. ತಜ್ಞರು ಹಾಗೂ ಸಮಸ್ಯೆ ಹೊಂದಿರುವ ವ್ಯಕ್ತಿಯ ಲಭ್ಯತೆ ಹಾಗೂ ಅನುಕೂಲತೆಯನ್ನು ಅವಲಂಬಿಸಿ ಭಾರತದಾದ್ಯಂತ ಸಲಹಾ ಸೇವೆಯನ್ನು ನಿಗದಿಪಡಿಸಬಹುದು.

ಸರಳ ವಾಸ್ತುವನ್ನು ಬಾಡಿಗೆ ಮನೆಗಳಿಗೂ ಕೂಡ ಅನ್ವಯಿಸಬಹುದೇ?

ಸರಳ ವಾಸ್ತುವಿನ ನೈಜ ವೈಶಿಷ್ಟ್ಯತೆಯೆಂದರೆ ಇದನ್ನು ಯಾವುದೇ ಸ್ಥಳ, ಸ್ವಂತ ಕಟ್ಟಡ ಅಥವಾ ಬಾಡಿಗೆ ಕಟ್ಟಡ ಯಾವುದಿದ್ದರೂ ಅನ್ವಯಿಸಬಹುದು ಮತ್ತು ಪ್ರಯೋಜನ ಪಡೆಯಬಹುದು. ಸ್ಥಳಕ್ಕಿಂತ ಆ ಸ್ಥಳದಲ್ಲಿ ಬದುಕುತ್ತಿರುವ ವ್ಯಕ್ತಿಯೇ ಇದರಲ್ಲಿ ಮುಖ್ಯವಾಗಿರುತ್ತಾನೆ. ನಮ್ಮ ತಜ್ಞರು ಸಲಹೆ ಮಾಡುವ ರೀತಿಯಲ್ಲಿ ಸರಳ ವಾಸ್ತುವಿನ ಸೂಕ್ತ ಪ್ರಕ್ರಿಯೆಯನ್ನು ಸರಿಯಾಗಿ ಅಳವಡಿಸಿಕೊಳ್ಳುವ ಮೂಲಕ ಆ ನಿರ್ದಿಷ್ಟ ಸ್ಥಳದಲ್ಲಿ ವಾಸಿಸುತ್ತಿರುವ ಅಥವಾ ವ್ಯಾಪಾರ ಆರಂಭಿಸುವ ವ್ಯಕ್ತಿಯು ಪ್ರಯೋಜನವನ್ನು 7-180 ದಿನಗಳಲ್ಲಿ ಒಳಗೆ ಪಡೆಯಬಹುದು.

.

own-rented-300x300

ನಮಗೆ ಸರಳ ವಾಸ್ತುವು, ನಮ್ಮ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಯೋಜನಕಾರಿಯಾಗಬಹುದೇ?

ಸರಳ ವಾಸ್ತುವು ಕೇವಲ ನಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಅಷ್ಟೇ ಕೆಲಸ ಮಾಡುವುದಿಲ್ಲ, ಇದು ಸಂಪೂರ್ಣವಾಗಿ ನಮ್ಮ ತಜ್ಞರ ಪರಿಶೀಲನೆ ಹಾಗೂ ದಿಕ್ಕು ಹಾಗೂ ಶಕ್ತಿಯ ಸ್ಥಳಗಳನ್ನು ಗುರುತಿಸುವ ಮೂಲಕ ಸಂಪೂರ್ಣವಾಗಿ ವೈವಾಹಿಕ ತೊಂದರೆ, ಮಕ್ಕಳ ಶಿಕ್ಷಣ, ವ್ಯಕ್ತಿಗತ ಸಮಸ್ಯೆ, ಮನೆಗೆ ಸಂಬಂಧಿಸಿದ ಸಮಸ್ಯೆಗಳಿಗೂ ಸಹ ಪರಿಹಾರವನ್ನು ಒದಗಿಸುವುದು. ಸರಿಯಾದ ಶಕ್ತಿ ಕೇಂದ್ರದ ಪ್ರಭಾವಲಯ ಹಾಗೂ ಸೂಕ್ತ ದಿಕ್ಕಿನ ಜೊತೆಯಲ್ಲಿ ಅದನ್ನು ಸಂಯೋಜಿಸುವುದರಿಂದ ಪ್ರಭಾವಿತ ವ್ಯಕ್ತಿಗಳು ಎಲ್ಲ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯುವುದಷ್ಟೇ ಅಲ್ಲದೇ ಇತರ ಉಲ್ಲೇಖಿಸಿದ ಸಮಸ್ಯೆಗಳಿಗೂ ಕೂಡ ಪರಿಹಾರವನ್ನು ಪಡೆಯಬಹುದು.

ಇಂದಿನ ದಿನಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಕುಟುಂಬದ ಪ್ರತಿಯೊಬ್ಬರನ್ನೂ ಪ್ರಭಾವಿಸುತ್ತಿರುತ್ತವೆ. ಹವಾಮಾನದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕೂಡ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಡೆಂಗ್ಯೂ, ಮಲೇರಿಯಾ, ಸಾಮಾನ್ಯ ಕೆಮ್ಮು ಮತ್ತು ನೆಗಡಿಗಳು ಈಗ ಮನೆಯಲ್ಲಿ ಖಾಯಂ ಆಗಿ ಇರುವ ಖಾಯಿಲೆಗಳಾಗಿದ್ದು ದೊಡ್ಡ ದೊಡ್ಡ ನಗರಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಬಿಟ್ಟಿವೆ. ಹಾಗಾಗಿ ನಮ್ಮನ್ನು ಸುರಕ್ಷಿತವಾಗಿ ಹಾಗೂ ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಶಕ್ತಿಯುತವಾಗಿ ಉಳಿಸಿಕೊಳ್ಳುವುದು ಅತ್ಯಂತ ಮುಖ್ಯವೆನಿಸಿದೆ.

ಮೊದಲ ತಡೆಕ್ರಮವಾಗಿ, ಸರಳ ವಾಸ್ತುವು ನಮ್ಮ ಕೆಲಸದ ಸ್ಥಳ ಹಾಗೂ ಮನೆಗಳಲ್ಲಿ ಆರೋಗ್ಯ ಸ್ಥಾನಕ್ಕೆ ಸಂಬಂಧಿಸಿ ಮುಖ್ಯವಾಗಿರುತ್ತದೆ. ನಮ್ಮ ಸರಳ ವಾಸ್ತು ತಜ್ಞರು ಆರೋಗ್ಯ ಸ್ಥಾನ ಅಥವಾ ನಿಖರ ಸ್ಥಾನವನ್ನು ಪತ್ತೆ ಮಾಡಲು ಸಾಧ್ಯವಾದಲ್ಲಿ, ಇದು ಮನೆಯ ಅನುಕೂಲಕರ ದಿಕ್ಕಿನ ಮೂಲಕ ಶಕ್ತಿಯ ಪ್ರಭಾವಲಯವನ್ನು ನೀಡುವುದು ಸಾಧ್ಯವಾಗುತ್ತದೆ. ಕುಟುಂಬದ ಸದಸ್ಯರನ್ನು ಅಸ್ವಸ್ಥತೆಗೆ ಈಡುಮಾಡುತ್ತಿರುವ ಮನೆಯಲ್ಲಿರುವ, ಋಣಾತ್ಮಕವಾದ ಶಕ್ತಿಯನ್ನು ಉಂಟುಮಾಡುತ್ತಿರುವ ಹಾನಿಕಾರಕ ಸಂಗತಿಗಳು ಇಲ್ಲದಂತಾಗುತ್ತವೆ ಮತ್ತು ಮನೆಗೆ ಧನಾತ್ಮಕ ಶಕ್ತಿಯು ತುಂಬುವಂತಾಗಿ ಮನೆಯ ಸದಸ್ಯರಿಗೆ ಉಂಟಾಗುತ್ತಿರುವ ಎಲ್ಲ ಆರೋಗ್ಯ ತೊಂದರೆಗಳನ್ನು ನಿವಾರಿಸುತ್ತದೆ. ಋಣಾತ್ಮಕ ಶಕ್ತಿಯಿಂದ ತುಂಬಿರುವ ಈ ಆರೋಗ್ಯ ಸ್ಥಾನ ಅಥವಾ ಸ್ಥಳವು ಧನಾತ್ಮಕ ಶಕ್ತಿಯನ್ನು ಹೊರಸೂಸುವುದು ಸಾಧ್ಯವಾದಲ್ಲಿ ಮನೆಯಲ್ಲಿ ಆರೋಗ್ಯಕರ ವಾತಾವರಣವನ್ನು ಉಂಟುಮಾಡುತ್ತದೆ. ಮನೆಯಲ್ಲಿನ ಆರೋಗ್ಯಕರ ವಾತಾವರಣವು ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಪ್ರತಿಯೊಬ್ಬರೂ “ಶಾಂತಿಯಿಂದ ಸಂಪಾದಿಸುವ” ಸಾಮರ್ಥ್ಯವನ್ನು ಒದಗಿಸುತ್ತದೆ.

life-problems-1