ಹೆಬ್ಬಾಗಿಲಿನ ದಿಕ್ಕನ್ನು ಪರೀಕ್ಷೆ ಮಾಡುವುದು ಹೇಗೆ?

ಅನುಕೂಲಕರ ದಿಕ್ಕುಗಳು

ವ್ಯಕ್ತಿಯ ಹುಟ್ಟಿದ ದಿನಾಂಕವನ್ನು ಅವಲಂಬಿಸಿ ದಿಕ್ಕುಗಳನ್ನು “ಅನುಕೂಲಕರ” ಹಾಗೂ “ಅನಾನುಕೂಲಕರ” ವಲ್ಲದ್ದು ಎಂದು ವಿಂಗಡಿಸಬಹುದು. ಪ್ರತಿವ್ಯಕ್ತಿಗೆ ನಾಲ್ಕು “ಅದೃಷ್ಟ” ದಿಕ್ಕುಗಳು ಮತ್ತು ನಾಲ್ಕು “ಮಾರಕ” ದಿಕ್ಕುಗಳು ಇರುತ್ತವೆ. ವ್ಯಕ್ತಿಗೆ ಉತ್ತರ ಅಥವಾ ಪೂರ್ವ ದಿಕ್ಕುಗಳಲ್ಲಿ ಯಾವುದೇ ಒಂದು ದಿಕ್ಕು ಸೂಕ್ತವಾಗಿದ್ದಲ್ಲಿ, ಹಾಗೂ ಕಟ್ಟಡವು ಈ ದಿಕ್ಕುಗಳಿಗೆ ಮುಂಭಾಗವನ್ನು ಹೊಂದಿದ್ದಲ್ಲಿ ಸಮೃದ್ಧಿಯನ್ನು ತರುತ್ತದೆ.

ಸರಳ ವಾಸ್ತು ಚಾರ್ಟ್ ನಿಮಗೆ ನಿಮ್ಮ ಹುಟ್ಟಿದ ದಿನಾಂಕಗಳನ್ನು ಅವಲಂಬಿಸಿ ಅದೃಷ್ಟದ ದಿಕ್ಕುಗಳನ್ನು ತೋರಿಸುತ್ತದೆ. ಒಂದು ವೇಳೆ ಮನೆಯ ಅಥವಾ ಕೆಲಸದ ಸ್ಥಳದ ಮುಖ್ಯದ್ವಾರ ಅದೃಷ್ಟದ ದಿಕ್ಕುಗಳಲ್ಲಿ ಇಲ್ಲದೇ ಹೋದಲ್ಲಿ, ಆಗ ನೀವು ಪ್ರತಿಯೊಂದನ್ನು ಅಂದರೆ ಸಂಪತ್ತು, ಆರೋಗ್ಯ, ಸಮೃದ್ಧಿ, ಸಂಬಂಧಗಳು ಹಾಗೂ ಕೀರ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಒಂದು ವೇಳೆ ಮುಖ್ಯದ್ವಾರವು ಎರಡನೇ, ಮೂರನೇ ಮತ್ತು ನಾಲ್ಕನೇ ಅದೃಷ್ಟದ ದಿಕ್ಕುಗಳಲ್ಲಿದ್ದರೂ ಇದು ಕೆಟ್ಟ ಪರಿಣಾಮವನ್ನೇ ನೀಡಬಹುದು. ಇದು ವ್ಯವಹಾರದಲ್ಲಿ ನಷ್ಟ, ಕುಟುಂಬದಲ್ಲಿ ತೊಂದರೆ, ಮೊಕದ್ದಮೆಗಳು, ಆರೋಗ್ಯ ಸಮಸ್ಯೆಗಳಂತಹ ಋಣಾತ್ಮಕ ಪರಿಣಾಮಗಳನ್ನು ನೀಡಬಹುದು.

ಆದರೆ, ಒಳ್ಳೆಯ ಸುದ್ದಿಯೆಂದರೆ ಸರಳ ವಾಸ್ತು ಪ್ರತಿಯೊಂದು ಸಮಸ್ಯೆಗೂ ಪರಿಹಾರಹೊಂದಿದೆ. ಇದು ವಾಸ್ತವಿಕ, ಪ್ರಾಯೋಗಿಕ ಹಾಗೂ ನಮ್ಮ ಎಲ್ಲ ಸಮಸ್ಯೆಗಳಿಗೂ ಸಾರ್ವತ್ರಿಕವಾದ ಪರಿಹಾರವನ್ನು ಹೊಂದಿದೆ. ಇದಕ್ಕೆಂದು ನಿಮ್ಮ ಮನೆಯಲ್ಲಿ ಹೆಬ್ಬಾಗಿಲನ್ನು ಬದಲಾಯಿಸುವುದು, ಮುಂಬಾಗಿಲಿನ ದಿಕ್ಕು ಬದಲಾಯಿಸುವುದು ಮುಂತಾದ ಬದಲಾವಣೆ ಮಾಡುವ ಅಗತ್ಯ ಇರುವುದಿಲ್ಲ. ಸರಳವಾಸ್ತುವಿನ ಸೂಕ್ತವಾದ ಅನುಷ್ಠಾನದ ಮೂಲಕ, ನೀವು ವಾಸ್ತುದೋಷಗಳನ್ನು ನಿವಾರಿಸಬಹುದು. ಸರಳವಾಸ್ತುವಿನ ಪರಿಹಾರಗಳು ನೆಗೆಟಿ ವ್ಶಕ್ತಿಯನ್ನು ದಮನಿಸುತ್ತವೆ ಮತ್ತು ಮನೆಯಲ್ಲಿ ಹಾಗೂ ಸುತ್ತಲೂ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.