ವೃತ್ತಿಜೀವನದ ಮೇಲೆ ವಾಸ್ತು ಯಾವ ಪರಿಣಾಮ ಬೀರುವುದು?

ವೃತ್ತಿಜೀವನವನ್ನು ಪ್ರಾರಂಭಿಸುವುದು ಎಂಬುದು ವ್ಯಕ್ತಿಯೊಬ್ಬರ ಜೀವನದ ಅತ್ಯಂತ ಮಹತ್ವದ ಘಟ್ಟಗಳಲ್ಲೊಂದಾಗಿದೆ. ಪ್ರತಿಯೊಬ್ಬ ಯುವಕನೂ ತನ್ನ ಅಧ್ಯಯನಗಳನ್ನು ಪೂರ್ತಿಗೊಳಿಸಿದ ಬಳಿಕ ತನ್ನ ಶೈಕ್ಷಣಿಕ ಪ್ರತಿಭೆಯನ್ನು ಬಳಸಿಕೊಂಡು ತನಗಾಗಿ ತನ್ನ ನಿಕಟ ಕುಟುಂಬಕ್ಕಾಗಿ ಜೀವನೋಪಾಯವನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಕೆಲವು ಅದೃಷ್ಟಶಾಲಿಗಳು ಉದ್ಯಮಿಗಳಾಗಲು ಇಲ್ಲವೇ ತಮ್ಮ ಕುಟುಂಬದ ವ್ಯವಹಾರವನ್ನು ನಡೆಸಿಕೊಂಡು ಹೋಗಲು ಬಯಸುತ್ತಾರೆ.

ಮನೆಯ ಅಥವಾ ಕೆಲಸದ ಪ್ರತಿಯೊಂದು ಸ್ಥಳವೂ ವೃತ್ತಿಜೀವನದ ಸ್ಥಳವನ್ನು ಹೊಂದಿರುವುದು. ವೃತ್ತಿಜೀವನದ ಸ್ಥಳಕ್ಕೆ ಬಾಧೆಯುಂಟಾದಾಗ ತನ್ನಿಂತಾನೆ ವೃತ್ತಿಜೀವನದಲ್ಲಿ ಸಮಸ್ಯೆಯುಂಟಾಗುವು. ಮನೆಯ ಅಥವಾ ಕೆಲಸದ ಸ್ಥಳದ ಮುಖ್ಯದ್ವಾರವು ಸರಿಹೊಂದದ ದಿಕ್ಕಿನಲ್ಲಿದ್ದಲ್ಲಿ ಆಗ ಅದು ವೃತ್ತಿಗಾಗಿ ವಾಸ್ತು ಜೀವನದ ಪ್ರಗತಿಯ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುವುದು.ಕೆಲಸ ಸಿಗದಿರುವುದು, ಸಂಬಳದಲ್ಲಿ ಏರಿಕೆಯಿಲ್ಲದಿರುವುದು, ಭಡ್ತಿ ದೊರೆಯದಿರುವುದು ಮತ್ತು ಮ್ಯಾನೇಜರುಗಳು ಹಾಗೂ ತಂಡದ ಸದಸ್ಯರ ನಡುವೆ ಸಂಘರ್ಷಗಳು ಉಂಟಾಗಬಹುದು.

ವೃತ್ತಿಜೀವನದ ಸ್ಥಳ - ಜೀವನ ವೃತ್ತಿ ಮತ್ತು ಹೆಸರು ಖ್ಯಾತಿ ಸ್ಥಾನ

ಮನೆ ಅಥವಾ ಕೆಲಸದ ಸ್ಥಳದ ಪ್ರವೇಶದ್ವಾರವು ಸರಿಹೊಂದದಿರುವ ದಿಕ್ಕಿನಲ್ಲಿದ್ದಲ್ಲಿ ಆಗ ವೃತ್ತಿಗಾಗಿ ವಾಸ್ತು ಜೀವನದ ಪ್ರಗತಿಗೆ ಅದು ವ್ಯತಿರಿಕ್ತ ಪ್ರಭಾವ ಉಂಟುಮಾಡುವುದು. ಕೆಲಸದ ಸ್ಥಳದಲ್ಲಿ ಅಥವಾ ಮನೆಯಲ್ಲಿ ಯುವಕ ಅಥವಾ ವ್ಯಕ್ತಿಯೊಬ್ಬ ತನಗೆ ಸರಿಹೊಂದದ ದಿಕ್ಕನ್ನು ಅನುಸರಿಸಿದಲ್ಲಿ ಅದು ಆತನ ಐಕ್ಯು ಮೇಲೆ ಪರಿಣಾಮ ಬೀರುವುದು ಮತ್ತು ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಮತ್ತು ಅಂತೆಯೇ ಆ ವ್ಯಕ್ತಿಯ ಮನಃಶಾಂತಿಯ ಮೇಲೆ ವ್ಯತಿರಿಕ್ತವಾದ ಪರಿಣಾಮಗಳುಂಟಾಗುವುದಕ್ಕೆ ಕಾರಣವಾಗುವುದು.ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಕಡಿಮೆ ವ್ಯಕ್ತಿಗಳು ಯಶಸ್ಸು ಸಾಧಿಸುವುದನ್ನು ನಾವು ಗಮನಿಸಬಹುದು. ಕೆಲವರು ಗಮನಾರ್ಹವಾಗಿ ಘನವಾದ ವೃತ್ತಿಜೀವನದ ಮೇಲೆ ಕಾರ್ಯಾರಂಭಮಾಡುತ್ತಾರೆ. ಆದರೆ ವಿವಿಧ ಕಾರಣಗಳಿಂದಾಗಿ ತುಂಬ ಬೇಗನೆ ವೃತ್ತಿಜೀವನದಲ್ಲಿ ಅಪಯಶಸ್ಸಿಗೊಳಗಾಗುತ್ತಾರೆ.

ಕೆಲವು ವ್ಯಕ್ತಿಗಳು ಹಠಾತ್ತಾಗಿ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಇದೇ ರೀತಿಯಾಗಿ ಕಠಿಣವಾಗಿ ಶ್ರಮವಹಿಸಿದರೂ ಸಹ ಅರ್ಹತೆಯಿರುವ ಉದ್ಯೋಗಿಗಳಿಗೆ ‘ಭಡ್ತಿ ಸಿಗುವುದಿಲ್ಲ’, ಉದ್ಯೋಗಿಗಳಿಗೆ ಅವರ ಮೇಲ್ವಿಚಾರಕರಿಂದ ಪ್ರೇರಣೆಯಾಗಲಿ ಬೆಂಬಲವಾಗಲಿ ಸಿಗುವುದಿಲ್ಲ. ಕೆಲಸದ ಸ್ಥಳದಲ್ಲಿ ಉದ್ಯೋಗ ಅಥವಾ ಪ್ರತಿಷ್ಠೆ ಇಲ್ಲವಾಗುವುದು ಅಥವಾ ‘ಉದ್ಯೋಗದಿಂದ ವಜಾ ಮಾಡುವುದು’ ಉಂಟಾಗುತ್ತದೆ. ಅಂಥ ವ್ಯಕ್ತಿ ಕೆಲಸವನ್ನು ಪಡೆದರೂ ಎಷ್ಟೇ ನಿಷ್ಠೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಎಷ್ಟು ಗಂಟೆಗಳ ಕಾಲ ಹೆಚ್ಚಿನ ಕೆಲಸ ಮಾಡಿದರೂ ಸಹ ಅದರಲ್ಲಿ ಭಡ್ತಿಯನ್ನು ಗಳಿಸಲು ಆಗುವುದಿಲ್ಲ.

ವೃತ್ತಿಜೀವನದ ಯಶಸ್ಸಿನಲ್ಲಿ ಸರಳ ವಾಸ್ತು ಹೇಗೆ ಸಹಾಯ ಮಾಡುವುದು?

ಸರಳ ವಾಸ್ತು ಅತ್ಯುತ್ತಮ ವೃತ್ತಿಜೀವನದ ದಿಕ್ಕುಗಳನ್ನು ಸಲಹೆಮಾಡುವುದ, ಇಂಥ ದಿಕ್ಕುಗಳು ಕೆಲಸ ಹುಡುಕುವವರಿಗೆ ಸೂಕ್ತವಾಗಬಹುದಾದ ಉದ್ಯೋಗವನ್ನು ಸಂಪಾದಿಸುವ ನಿಟ್ಟಿನಲ್ಲಿ ಧನಾತ್ಮಕ ಪರಿಣಾಮವನ್ನು ಉಂಟುಮಾಡುವುದು. ಇದು ಕೆಲಸವನ್ನು ಹುಡುಕುವವರ ಆತ್ಮವಿಶ್ವಾಸದ ಮಟ್ಟಗಳನ್ನು ವೃದ್ಧಿಸುವುದು. ಧನಾತ್ಮಕ ಶಕ್ತಿಯನ್ನು ಸೂಕ್ತ ರೂಪಕ್ಕೆ ತರುವುದಕ್ಕಾಗಿ ಸರಳ ವಾಸ್ತುವು ಸಹಾಯಕವಾದ ಮತ್ತು ಸುಲಭವಾದ ಪರಿಹಾರಗಳನ್ನು ಒದಗಿಸುವುದು ಮತ್ತು ಸಂಬಂಧಪಟ್ಟ ಯುವಕ ಮತ್ತು ಆತನ ಮನೆ ಅಥವಾ ಕಚೇರಿಯ ಋಣಾತ್ಮಕ ಶಕ್ತಿಯನ್ನು ಕನಿಷ್ಠಗೊಳಿಸುವುದು. ಅಲ್ಲದೇ ಇದಕ್ಕಾಗಿ ಯಾವುದೇ ಕಟ್ಟಡದಲ್ಲಿ ಯಾವುದೇ ಒಡೆಯುವಿಕೆಗಳನ್ನಾಗಲಿ ಅಥವಾ ಪರಿವರ್ತನೆಗಳನ್ನಾಗಲಿ ಮಾಡಬೇಕಾದ ಅಗತ್ಯವಿಲ್ಲ 7 ಚಕ್ರಗಳನ್ನು ಸಕ್ರಿಯಗೊಳಿಸುವ ಮೂಲಕ ವ್ಯಕ್ತಿಯ ವೃತ್ತಿಗಾಗಿ ವಾಸ್ತು ಜೀವನದ ಪ್ರಗತಿಯನ್ನು ಹೆಚ್ಚಿಸಲಾಗುವುದು.