ಜೀವನ ಸಮಸ್ಯೆಗಳ ಮುಕ್ತ ಗ್ರಾಮ ಯೋಜನೆ
guruji3-300x300

ಜೀವನ ಸಮಸ್ಯೆಗಳ ಮುಕ್ತ ಗ್ರಾಮ ಯೋಜನೆಯು ಡಾ॥ ಶ್ರೀ ಚಂದ್ರಶೇಖರ್ ಗುರೂಜಿ  ರವರು ಮನುಕುಲದ ಒಳಿತಿಗಾಗಿ ಕಲ್ಪಿಸಿಕೊಂಡ ಒಂದು ದೊಡ್ಡ ಸಾಮಾಜಿಕ ಉಪಕ್ರಮವಾಗಿರುವುದು.ಜೀವನ ಸಮಸ್ಯೆಗಳ ಮುಕ್ತ ಗ್ರಾಮ ಯೋಜನೆ ಕಾರ್ಯಕ್ರಮದಡಿ ಸಿ. ಜಿ. ಪರಿವಾರ್ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದು, ಹಾಗೂ ಆ ಹಳ್ಳಿಗಳ ಪ್ರತಿಯೊಂದು ಸದಸ್ಯನಿಗೂ ಕೂಡ ಅವನ ಮನೆಗಾಗಿ ಸರಳ ವಾಸ್ತುವನ್ನು ನೀಡಲಾಗುವುದು. ಸರಳ ವಾಸ್ತುವು ಗ್ರಾಮಸ್ಥರಿಗೆ ತಮ್ಮ ತಮ್ಮ ಆರೋಗ್ಯ, ಸಂಪತ್ತು, ಸಂತೋಷ, ಶಾಂತಿ ಮತ್ತು ಸಮೃದ್ಧಿಗಳನ್ನು ಸುಧಾರಿಸಲು ಸಹಾಯ ಮಾಡುವುದು ಹಾಗೂ ಅವರ ಜೀವನದ ಗುಣಮಟ್ಟವನ್ನು ವರ್ಧಿಸುವುದು.ಈ ಸಾಮಾಜಿಕ ಯೋಜನೆಯು ಎಲ್ಲಾ ಗ್ರಾಮಸ್ಥರಿಗೆ ಸಂಪೂರ್ಣವಾಗಿ ಉಚಿತವಾಗಿರುವುದು.ಸಿ. ಜಿ. ಪರಿವಾರ್ ಆ ರೀತಿಯಲ್ಲಿ ಜೀವನ ಸಮಸ್ಯೆಗಳ ಮುಕ್ತ ಗ್ರಾಮ ಯೋಜನೆಯಡಿ ದತ್ತು ತೆಗೆದುಕೊಂಡ ಮೊದಲ ಗ್ರಾಮವೆಂದರೆ ಗೊಡ್ಚಿ ಗ್ರಾಮ. ಗೊಡ್ಚಿ ಗ್ರಾಮದ ಸ್ಥಳೀಯ ವಿಧಾನ ಸಭೆಯ ಪರಿಷದ್ ಸದಸ್ಯರಾಗಿರುವ ಶ್ರೀ. ನಾಗರಾಜ್ ಚುಬಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿರುವರು.”ಗುರೂಜಿಯವರು ಸರಳ ವಾಸ್ತು ವಿನ ಪ್ರಯೋಜನಗಳನ್ನು ಇನ್ನೂ ಉತ್ತಮವಾದ ಸ್ಥಾನಕ್ಕೆ ದೊರೆಯುವಂತೆ ಮಾಡಲು ಇನ್ಯಾವುದೇ ಹಳ್ಳಿಯನ್ನು ಆರಿಸಿಕೊಳ್ಳಬಹುದಿತ್ತು; ಆದರೆ ಅವರು ಈ ಕಡಿಮೆ ಸವಲತ್ತುಗಳುಳ್ಳ ಮತ್ತು ಬಡ ಗ್ರಾಮವನ್ನು ಆರಿಸಿಕೊಂಡರು.” ಎಂದು ಅವರು ವಿವರಿಸಿದರು.”ಗುರೂಜಿಯವರ ಉದ್ಧೇಶವು ಸರಳ ವಾಸ್ತುವಿನ ಪ್ರಯೋಜನಗಳು ಗ್ರಾಮಸ್ಥರಿಗೆ ಒದಗುವ ಮೂಲಕ ಅವರಿಗೆ ನೈಜವಾಗಿ ಸಹಾಯ ಮಾಡುವುದು ಹಾಗೂ ಅವರ ಜೀವನಗಳನ್ನು ಸುಧಾರಿಸುವುದೇ ಆಗಿದೆ.” ಎಂದು ಕೂಡ ಅವರು ಉಲ್ಲೇಖಿಸಿದರು.ಆ ಗ್ರಾಮದ ಪ್ರತಿ ಮನೆಗೂ ಕೂಡ ವಾಸ್ತು ಸಮಾಲೋಚನೆಗಳನ್ನು ಪೂರ್ಣಗೊಳಿಸುವ ಸಲುವಾಗಿ ಸರಳ ವಾಸ್ತುವಿನಿಂದ ವಾಸ್ತು ಪರಿಣತರು ಅಲ್ಲಿ ನೆಲೆಸಿದ್ದಾರೆ.

ಸಿ. ಜಿ. ಪರಿವಾರ್ ನ ಮುಖ್ಯ ಗುರಿಯೆಂದರೆ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವುದು.ಬಡ ಮತ್ತು ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಿ. ಜಿ. ಪರಿವಾರ್ ಹಬ್ಬಳ್ಳಿ-ಧಾರವಾಡ ರಸ್ತೆಯ ಮೇಲೆ 14 ಎಕರೆ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಂಡಿದೆ.ಈ ಸೌಕರ್ಯವು ಸಂಪೂರ್ಣವಾಗಿ ತಯಾರಾದ ನಂತರ, ಇದು ಪ್ರತಿ ವರ್ಷ 10,000 ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಶಿಕ್ಷಣವನ್ನು ನೀಡುವುದು.

ಗುರೂಜಿಯವರು ನಾವೀನ್ಯತೆಯುಳ್ಳ ಇನ್ನೊಂದು ಕಾರ್ಯಕ್ರಮ, “ಶಿಕ್ಷಣ ಸಮಸ್ಯೆಗಳು ಮುಕ್ತ ಯೋಜನೆ” ಯ ಬಗ್ಗೆ ತಮ್ಮ ಕಲ್ಪನೆಯನ್ನು ಕೂಡ ಹಂಚಿಕೊಂಡರು.ಈ ಕಾರ್ಯಕ್ರಮದಡಿ, ಓದಿನ ಮೇಲೆ ಏಕಾಗ್ರತೆಯನ್ನು ಹೊಂದಿ ಅಧ್ಯಯನವನ್ನು ಮಾಡಲು ಸಾಧ್ಯವಾಗದೇ ಇರುವ ವಿದ್ಯಾರ್ಥಿಗಳಿಗೆ ಸರಳ ವಾಸ್ತು ವಿನ ಮೂಲಕ ಏಕಾಗ್ರತೆವಹಿಸಿ ಅಧ್ಯಯನ ಮಾಡಲು ವಿಧಾನಗಳನ್ನು ಕಲಿಸಲಾಗುವುದು. ಸರಳ ವಾಸ್ತುವಿನ ಪರಿಣತರು ಕರ್ನಾಟಕದ ಎಲ್ಲಾ ಮಹಾವಿದ್ಯಾಲಯಗಳಲ್ಲಿನ ಶಿಕ್ಷಕರಿಗೆ  ತರಬೇತಿಯನ್ನು ನೀಡುವುದು. ಹೀಗೆ ಮಾಡುವುದರಿಂದ, ಅವರು ಮಕ್ಕಳ ಒಳಿತಿಗಾಗಿ ದಿಕ್ಸೂಚಿಯನ್ನು ಪರೀಕ್ಷಿಸಿ ಮಕ್ಕಳಿಗೆ ಅವರ ಅನುಕೂಲಕರ ದಿಕ್ಕುಗಳಲ್ಲಿ ಕುಳಿತು ವಿದ್ಯಾಭ್ಯಾಸ ಮಾಡಲು ಹೇಳುವರು.