ಜನರು ಹಣಸಂಪಾದಿಸುತ್ತಿದ್ದರೂ ಅಥವಾ ಸಂಪಾದಿಸದೇ ಇದ್ದರೂ ಮಾನಸಿಕ ಒತ್ತಡಕ್ಕೊಳಗಾಗುವ ಜನರಿರುವ ದೇಶವೆಂದರೆ ಭಾರತ ಮಾತ್ರ. ಹಣಗಳಿಸದಿರುವಾಗ ಜನರಿಗೆ ದಿನಕ್ಕೊಂದು(ದಿನಕೊಮ್ಮೆ/ದಿನಕ್ಕೊಂದು ಬಾರಿ) ಊಟಮಾಡಬೇಕಾದ ದುರ್ಭರ ಪರಿಸ್ಥಿತಿಯ ಬಗ್ಗೆ ಕಷ್ಟವೆನಿಸುತ್ತದೆ ಮತ್ತು ಹಣ ಗಳಿಸುತ್ತಿರುವಾಗ ಅವರಿಗೆ ತೆರಿಗೆ ಪಾವತಿಮಾಡಬೇಕಾದ ಬಾಧ್ಯತೆಯ ಬಗ್ಗೆ ಒತ್ತಡವಾಗುತ್ತದೆ. ಆದರೂ ಕೂಡ ತೆರಿಗೆ ಪಾವತಿ ಮಾಡುವುದು ಎಂದರೆ ಕೆಟ್ಟ ಕೆಲಸವಲ್ಲ. ನಮ್ಮ ದೇಶಕ್ಕೆ ಸಂಬಂಧಪಟ್ಟು ನಮ್ಮ ಕರ್ತವ್ಯವಿದು. ತೆರಿಗೆ ಪಾವತಿ ಮಾಡುವುದು ಎಂದರೆ ಒಂದು ಸದುದ್ದೇಶಕ್ಕಾಗಿ ಹಣಪಾವತಿ ಮಾಡುವುದಾಗಿದೆ. ಆದರೆ ಸಣ್ಣ ಮೊತ್ತಕ್ಕೆ ಇದನ್ನು ಕಡಿಮೆಮಾಡಲು ಅಥವಾ ಪಾವತಿಮಾಡದೇ ಇರಲು ಸಾಧ್ಯವಿರುವಾಗ ಏಕೆ ನಾವು ಅಷ್ಟೊಂದು ಪಾವತಿಮಾಡಬೇಕು ಎಂದು ನಮಗನ್ನಿಸುವುದು.
ಆದಾಯ ತೆರಿಗೆ ಇಲಾಖೆಯಿಂದ ಸಂಭಾವ್ಯ ರೇಡ್ಗಳ ಬಗ್ಗೆ ಹೆದರುವ ಜನರು ತಮ್ಮ ದಾಖಲೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಯಸುತ್ತಾರೆ ಮತ್ತು ವಾಸ್ತವಕ್ಕಿಂತಲೂ ಹೆಚ್ಚಿನ ತೆರಿಗೆಯನ್ನು ಪಾವತಿಮಾಡುತ್ತಾರೆ. ಜನರು ಪಾವತಿ ಮಾಡುವ ತೆರಿಗೆಯು ಸರ್ಕಾರದ ಮಟ್ಟಿಗೆ ತುಂಬ ಚೆನ್ನಾಗಿರುತ್ತದೆ. ಆದರೆ ಜನರ ಮಟ್ಟಿಗೆ ತುಂಬಾ ಆಧ್ವಾನಗಳನ್ನು ಉಂಟುಮಾಡುತ್ತದೆ. ಸೂಕ್ತವಾಗಿ ಹಣವನ್ನು ಉಳಿತಾಯ ಮಾಡದಿರುವ ತಪ್ಪಿಗೆ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಶಿಕ್ಷೆಯ ರೂಪದಲ್ಲಿ ಸರ್ಕಾರಕ್ಕೆ ನೀಡುವ ಕ್ರಮವಿದಾಗಿದೆ. ಆದರೆ ಪಾವತಿಯಾಗುವ ತೆರಿಗೆಯು ನಮಗೆ ಜೀವನವನ್ನು ಸುಲಭಗೊಳಿಸುವುದಕ್ಕಾಗಿ ಬಳಕೆಯಾಗಬೇಕು. ಏಕೆಂದರೆ ಸರ್ಕಾರವು ಮೂಲಸೌಕರ್ಯ, ಶಿಕ್ಷಣ ವ್ಯವಸ್ಥೆ ಮತ್ತು ಇನ್ನೂ ಹಲವು ವಿಚಾರಗಳನ್ನು ಸುಧಾರಿಸಬೇಕು. ಆದರೆ ಇದರ ನೇರ ಲಾಭಗಳು ನಮಗೆ ಸಿಗುವುದಿಲ್ಲ.
ನಾವೆಲ್ಲರೂ ತಿಳಿದಿರುವಂತೆ ಮತ್ತು ಒಪ್ಪಿಕೊಳ್ಳುವಂತೆ ನೇರವಾಗಿ ಅಥವಾ ವಾಸ್ತವಿಕವಾಗಿ ನಮಗೆ ಪ್ರಯೋಜನ ನೀಡದಿರುವುದು ನಮಗೆ ಪ್ರಯೋಜನವನ್ನು ನೀಡುವುದಿಲ್ಲ. ಆದ್ದರಿಂದ ನೇರವಾದ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ತೆರಿಗೆಯನ್ನು ಪಾವತಿಸುವುದಕ್ಕೆ ಪ್ರತಿಯಾಗಿ ಎದುರು ದಾರಿಗಳನ್ನು ಹುಡುಕುತ್ತಾರೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ನಮಗೆ “ತೆರಿಗೆ ಉಳಿತಾಯದ” ಆಯ್ಕೆಗಳಿವೆ. ತೆರಿಗೆ ಉಳಿತಾಯವೆಂದರೆ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ವಿಭಿನ್ನ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಉಳಿಸುವದು ಮತ್ತು ತೆರಿಗೆ ಕಟ್ಟದೇ ಇರುವುದರ ಪ್ರಯೋಜನವನ್ನು ಪಡೆಯುವುದು. ತೆರಿಗೆರಹಿತ ಡಿವಿಡೆಂಡುಗಳನ್ನು ಕೂಡ ಪಡೆದುಕೊಳ್ಳುವುದು!
ಕೆಳಗಿನ ಹಲವಾರು ಉಪಾಯಗಳು ನಿಮಗೆ ಹಣ ಉಳಿಸಲು, ಕಡಿಮೆ ತೆರಿಗೆ ಪಾವತಿಸಲು ಅಥವಾ ತೆರಿಗೆ ಪಾವತಿಸದೇ ಇರಲು ಸಹಾಯ ಮಾಡಬಹುದು:
- ಹೋಮ್ ಲೋನ್ ಪ್ರಿನ್ಸಿಪಾಲ್, ಪಿಎಫ್, ಪಿಪಿಎಫ್, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್, ಮ್ಯೂಚುಯಲ್ ಫಂಡ್ ಇಎಲ್ಎಸ್ಎಸ್ ಮತ್ತು ವಿಮಾ ಪಾಲಿಸಿಗಳಲ್ಲಿ ಹಣ ಹೂಡಿಕೆ ಮಾಡುವುದು ನಿಮಗೆ 30,000 ರೂ. ವರೆಗೂ ತೆರಿಗೆ ಉಳಿತಾಯಕ್ಕೆ ಸಹಾಯ ಮಾಡುವುದು. ಈ ಸಾಧನಗಳಲ್ಲಿ ಸೆಕ್ಷನ್ 80ಸಿ ಅಡಿಯಲ್ಲಿ ಗರಿಷ್ಠ ರೂ. 1.5 ಲಕ್ಷದವರೆಗೂ ಹೂಡಿಕೆ ಮಾಡಬಹುದು.
- ಸೆಕ್ಷನ್ 24 ನಿಮಗೆ ಗೃಹಸಾಲಗಳಿಗೆ ಪಾವತಿಸುವ ಬಡ್ಡಿಯ ಮೇಲಿನ ತೆರಿಗೆಯಲ್ಲಿ ಉಳಿತಾಯಕ್ಕೆ ಕಾರಣವಾಗುವುದು.
- ನೀವು ಯಾವುದೇ ದಾನಧರ್ಮಗಳನ್ನು ಮಾಡಿದಲ್ಲಿ ಅದರಿಂದಲೂ ತೆರಿಗೆ ಉಳಿತಾಯ ಮಾಡಬಹುದು. ಇವುಗಳು ಸೆಕ್ಷನ್ 80 ಜಿ ಅನ್ವಯ ಬರುತ್ತವೆ.
- ವೈದ್ಯಕೀಯ ವಿಚಾರಗಳಿಗೆ ಸೂಕ್ತ ಬಿಲ್ಲುಗಳನ್ನು ತೋರಿಸುವ ಮೂಲಕ ಮತ್ತು ಲೀವ್ ಟ್ರಾವೆಲ್ ಅಲಾವೆನ್ಸ್ ಟಿಕೆಟ್ಟುಗಳನ್ನು ತೋರಿಸುವ ಮೂಲಕ ಕೂಡ ಉಳಿತಾಯಗಳನ್ನು ಮಾಡಬಹುದು.
- ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (ಎಸ್ಐಪಿಗಳು) ಹೂಡಿಕೆ ಕೂಡ ತೆರಿಗೆ ತಪ್ಪಿಸಿಕೊಳ್ಳಲು ಉತ್ತಮವಾದ ಆಯ್ಕೆಯಾಗಿದೆ.
- ನೀವು ಬಾಡಿಗೆಯ ಮನೆಯಲ್ಲಿ ಬದುಕುತ್ತಿದ್ದಲ್ಲಿ ಮನೆ ಮಾಲೀಕರಿಂದ ಬಾಡಿಗೆ ರಶೀದಿಗಳು, ಪೋಸ್ಟ್ ಆಫೀಸುಗಳು ಮತ್ತು ಬ್ಯಾಂಕುಗಳಲ್ಲಿನ ರಿಕರಿಂಗ್ ಹಾಗೂ ಫಿಕ್ಸೆಡ್ ಡಿಪಾಸಿಟ್ ಗಳು ಕೂಡ ಉಳಿತಾಯ ಮಾಡಬಹುದು.
ಹೆಚ್ಚು ಉಳಿತಾಯ ಮಾಡಲು ಮತ್ತು ಹೆಚ್ಚು ಗಳಿಸಲು ನಿಮಗೆ ಸಹಾಯ ಮಾಡುವ ವಾಸ್ತುತಜ್ಞರ ಕೆಲವು ವಾಸ್ತು ಸಲಹೆಗಳು:
- ನಿಮ್ಮ ಲಾಕರ್, ಸೇಫ್ ವಾಲ್ಟ್ ಇರಿಸಲು ಸೂಕ್ತವಾದ ಜಾಗಗಳೆಂದರೆ ಉತ್ತರ ಮತ್ತು ಈಶಾನ್ಯ ಭಾಗಗಳಾಗಿವೆ.
- ಉತ್ತರ ದಿಕ್ಕು ಸಂಪತ್ತಿನ ಒಡೆಯ ಅಥವಾ ಕುಬೇರನ ದಿಕ್ಕಾಗಿದೆ.
- ಆದಾಯ ತೆರಿಗೆ ಫೈಲುಗಳನ್ನು ವಾಯುವ್ಯ ದಿಕ್ಕಿನಲ್ಲಿ ಮಾತ್ರವೇ ಇಡಬೇಕು.
- ಸಂಪತ್ತಿನ ದಿಕ್ಕೆನಿಸಿರುವ ಉತ್ತರ ದಿಕ್ಕನ್ನು ನಿರ್ಬಂಧಿಸುವಂತಿಲ್ಲ, ಏಕೆಂದರೆ ಇದು ಹಣದ ಒಳಹರಿವಿಗೆ ಅವಕಾಶನೀಡುವುದು.
- ಜಾಣ್ಮೆಯ ಹಣ ಸಂಪಾದನೆ ತೀರ್ಮಾನಗಳಿಗಾಗಿ ನಿಮ್ಮ ನೆಚ್ಚಿನ ದಿಕ್ಕನ್ನು ತಿಳಿದುಕೊಳ್ಳಿರಿ.
- ಹೆಚ್ಚಿನ ವಾಸ್ತು ಮಾಹಿತಿಗಾಗಿ ಅಧಿಕೃತ ವಾಸ್ತು ತಜ್ಞರನ್ನು ಸಂಪರ್ಕಿಸಿ
- ನಿಮ್ಮ 1ನೇ ಅತ್ಯುತ್ತಮ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳುವುದು ನಿಮ್ಮ ವ್ಯವಹಾರ / ವೃತ್ತಿಯಲ್ಲಿನ ಪ್ರಗತಿಗೆ ಪೂರಕವಾಗುವುದು.
- ವ್ಯವಹಾರ ಸಭೆಗಳ ಸಂದರ್ಭದಲ್ಲಿ ವ್ಯಕ್ತಿಯು ತನ್ನ ನೆಚ್ಚಿನ ದಿಕ್ಕಿಗೆ ಮುಖಮಾಡಬೇಕು.








