ಸಂಬಳ ತೆಗೆದುಕೊಳ್ಳುವ ಉದ್ಯೋಗಿಗಳು ಯಾವಾಗಲೂ ಮೂರು ವಿಷಯಗಳ ಬಗ್ಗೆ ಗಮನಕೊಡುತ್ತಾರೆ: ತಮ್ಮ ಖಾತೆಗೆ ಸಂಬಳ ಜಮಾ ಆಗುವ ದಿನ, ಸಂಬಳ ಹೆಚ್ಚಳ ಹಾಗೂ ಬಡ್ತಿಗೆ ಕಾರಣವಾಗುವ ಅವರ ಮೌಲ್ಯಮಾಪನ. ಈ ಮೂರರಲ್ಲಿ ಉದ್ಯೋಗಿಗಳು ಬಡ್ತಿಯನ್ನು ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಕಠಿಣ ಪರಿಶ್ರಮ ಹಾಗೂ ಕಂಪೆನಿ ಮೇಲಿನ ಅವರ ಬದ್ಧತೆಯನ್ನು ಪರೀಕ್ಷಿಸುವ ಅಂಶ ಇದಾಗಿರುವುದರಿಂದ ಉದ್ಯೋಗಿಗಳ ಚಿತ್ತ ಸದಾ ಬಡ್ತಿಯ ಮೇಲೆ ಇರುತ್ತದೆ.ಉದ್ಯೋಗಿಯು ತನ್ನ ಬಡ್ತಿ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದಾದ ಅನೇಕ ಅಂಶಗಳು ಇವೆ. ಇವುಗಳಲ್ಲಿ ಹೆಚ್ಚಿನವು ವಿಶ್ವದಾದ್ಯಂತ ಪಸರಿಸಿವೆ. ಬಹು ಅಗತ್ಯವಾದ ಬಡ್ತಿಯನ್ನು ಪಡೆಯುವುದಕ್ಕೆ ನೆರವು ನೀಡುವ ಪರಿಣಾಮಕಾರಿ ಪರ್ಯಾಯ ವಿಧಾನಗಳಿಂದ ಬಹುತೇಕ ಉದ್ಯೋಗಿಗಳು ದೂರ ಇರುತ್ತಾರೆ.
ನಿಮ್ಮ ಉದ್ಯೋಗ ಬಡ್ತಿಗೆ ಕಾರಣವಾಗುವ, ಕಚೇರಿಯಲ್ಲಿ ಉತ್ಪಾದಕತೆಗೆ ಅಗತ್ಯವಾಗಿ ಬೇಕಾಗಿರುವ ಎರಡು ಸಿದ್ಧ ಶಾಸ್ತ್ರಗಳು ಇವೆ. ಅವುಗಳೆಂದರೆ ವಾಸ್ತು ಹಾಗೂ ಚಕ್ರ ಸಮತೋಲನ.
ಉದ್ಯೋಗಿಯು ಆತ/ಆಕೆಯ ಕಚೇರಿಯಲ್ಲಿ ಬಡ್ತಿ ಅವಕಾಶವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪಾಲಿಸಬೇಕಾದ ಸಲಹೆಗಳನ್ನು ಈ ಕೆಳಗೆ ಕೊಡಲಾಗಿದೆ. ವಾಸ್ತು ಹಾಗೂ ಚಕ್ರ ಸಮತೋಲನ ಕೇಂದ್ರಗಳ ಬಗ್ಗೆ ಹೆಚ್ಚಿನ ಗಮನ ಕೊಡಿ. ಯಾಕೆಂದರೆ ಇವು ವಿರಳ ಮಾಹಿತಿಯಾಗಿವೆ.
ನಿಮ್ಮ ಬಡ್ತಿಯ ಅವಕಾಶವನ್ನು ಹೆಚ್ಚಿಸುವ ಸರಳ ವಿಧಾನಗಳು:
- ಗುರಿ ಹಾಕಿಕೊಳ್ಳಿ ಮತ್ತು ಚೆನ್ನಾಗಿ ಕೆಲಸ ಮಾಡಿ: ಕಠಿಣ ಪರಿಶ್ರಮ ಹಾಗೂ ಬದ್ಧತೆ ಇಲ್ಲದಿದ್ದರೆ ಬಡ್ತಿ ಸಮಯದಲ್ಲಿ ನಿಮ್ಮನ್ನು ಖಂಡಿತವಾಗಿ ಕಡೆಗಣಿಸಲಾಗುತ್ತದೆ. ಕಾರ್ಯಸಾಧ್ಯವಾಗುವ ಗುರಿ ಇಟ್ಟುಕೊಂಡು ಅವುಗಳನ್ನು ಸಾಧಿಸಲು ಶ್ರಮಿಸಿ.
- ಮಾರ್ಗದರ್ಶಿಯೊಬ್ಬರನ್ನು ಮಾಡಿಕೊಂಡು ಅವರಿಂದ ಸಲಹೆ ಪಡೆದುಕೊಳ್ಳಿ: ಉತ್ತಮ ಜ್ಞಾನ ಹೊಂದಿರುವ ಹಿರಿಯ ಸಹೋದ್ಯೋಗಿಯ ಗೆಳೆತನ ಮಾಡಿಕೊಳ್ಳಿ. ಅವರು ಯಾವ ರೀತಿ ಬಡ್ತಿ ಪಡೆದುಕೊಂಡರು, ಉದ್ಯೋಗಿಯಿಂದ ಉನ್ನತ ಆಡಳಿತ ಮಂಡಳಿ ಏನನ್ನು ನಿರೀಕ್ಷೆ ಮಾಡುತ್ತದೆ ಎನ್ನುವುದನ್ನು ಅವರಿಂದ ತಿಳಿದುಕೊಳ್ಳಿ. ಅವರು ಕೊಡುವ ಮೌಲ್ಯಯುತ ಮಾಹಿತಿಯು, ಅದಕ್ಕೆ ಅನುಗುಣವಾಗಿ ನೀವು ಗುರಿ ಹಾಕಿಕೊಳ್ಳುವುದಕ್ಕೆ ನೆರವಾಗುತ್ತದೆ.
- ಹೊಸ ಕೌಶಲ ಪಡೆದುಕೊಳ್ಳಿ: ನೀವು ಎಲ್ಲಿ ಕೆಲಸ ಮಾಡುತ್ತೀರಿ ಎನ್ನುವುದು ಮುಖ್ಯವಾಗುವುದಿಲ್ಲ. ಸಂಸ್ಥೆಯಲ್ಲಿ ನೀವು ಮುಂದಿನ ಹಂತಕ್ಕೆ ಹೋಗಲು ನೆರವಾಗುವ ಹೊಸ ಕೌಶಲಗಳನ್ನು ಕಲಿಯಿರಿ. ಮುಂದಿನ ಹಂತದ ಕಾರ್ಯನಿರ್ವಹಣೆಗೆ ಅಗತ್ಯವಿರುವ ಕೌಶಲಗಳನ್ನು ಕಲಿತುಕೊಳ್ಳಿ.
ವಾಸ್ತು ಶಾಸ್ತ್ರದ ಮೂಲಕ ನಿಮ್ಮ ಬಡ್ತಿ ಅವಕಾಶ ಹೆಚ್ಚಿಸಿಕೊಳ್ಳಿ:
ಶಕ್ತಿಗಳು ಪರಸ್ಪರ ಬೆಸೆಯುವಂತೆ ಮಾಡಿ ಅವು ನಿಮ್ಮ ಪರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ವಿಜ್ಞಾನವೇ ವಾಸ್ತು. ನಿಮ್ಮ ದೇಹದೊಳಗೆ ಸಕಾರಾತ್ಮಕ ಶಕ್ತಿಗಳು ಸರಿಯಾದ ರೀತಿಯಲ್ಲಿ ಹರಿದಾಡಿದರೆ ನೀವು ಕೆಲಸದಲ್ಲಿ ಮೇಲ್ಮಟ್ಟ ತಲುಪುತ್ತೀರಿ.
- ಕುಳಿತುಕೊಳ್ಳುವ ಜಾಗದ ವ್ಯವಸ್ಥೆ: ಕಚೇರಿಯಲ್ಲಿ ನೀವು ಕುಳಿತುಕೊಳ್ಳುವ ಜಾಗವು ನೇರವಾಗಿ ತೊಲೆಯ ಕೆಳಗೆ ಇರದಂತೆ ಹಾಗೂ ನಿಮ್ಮ ಬೆನ್ನು ಮುಖ್ಯದ್ವಾರದತ್ತ ಇರದಂತೆ ನೋಡಿಕೊಳ್ಳಿ. ತೊಲೆಯು ಸಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಮುಖ್ಯದ್ವಾರವು ಚಿತ್ತ ಚಾಂಚಲ್ಯದ ಮೂಲ.
- ಕಚೇರಿ/ಕೆಲಸ ಮಾಡುವ ಸ್ಥಳವನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಿ: ಉದ್ಯೋಗಿಗಳು ತಾವು ಕೆಲಸ ಮಾಡುವ ಸ್ಥಳವನ್ನು ಅಲಂಕರಿಸುವುದಕ್ಕೆ ಇಂದು ಕಚೇರಿಗಳು ಅನುಮತಿ ನೀಡುತ್ತವೆ. ನಿಮ್ಮ ಹಿಂಭಾಗದ ಗೋಡೆಯ ಮೇಲೆ ಪರ್ವತಗಳ ವರ್ಣಚಿತ್ರಗಳನ್ನು ನೇತುಹಾಕಿ: ಇದು ಬೆಂಬಲವನ್ನು ಸೂಚಿಸುತ್ತದೆ ಮತ್ತು ನೀವು ಚೆನ್ನಾಗಿ ಕೆಲಸ ಮಾಡಲು ನೆರವಾಗುತ್ತದೆ.
- ದಿಕ್ಕುಗಳು: ನೀವು ಕುಳಿತುಕೊಳ್ಳುವ ದಿಕ್ಕು ನೀವು ಬಡ್ತಿಯನ್ನು ಪಡೆದುಕೊಳ್ಳುವುದಕ್ಕೆ ಕಾರಣವಾಗುವ ಅತ್ಯಂತ ಸಹಜ ಅಂಶಗಳಲ್ಲಿ ಒಂದಾಗಿರಬಹುದು. ಆದಾಗ್ಯೂ, ಜನನ ಚಾರ್ಟ್ ಪ್ರಕಾರ ಆತ ಅಥವಾ ಆಕೆ ಅನುಕೂಲಕರ ದಿಕ್ಕುಗಳನ್ನು ಹೊಂದಿರುತ್ತಾರೆ. ಕೆಲಸ ಮಾಡುವಾಗ ಅಥವಾ ಸಭೆ ನಡೆಸುವಾಗ ಈ ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡರೆ ಒಂದು ಸ್ವಾಭಾವಿಕ ಶಕ್ತಿ ಹೊರಹೊಮ್ಮುತ್ತದೆ. ಇದು ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವುದಕ್ಕೆ ಇಂಬು ನೀಡುತ್ತದೆ. (ನಿಮ್ಮ ಅನುಕೂಲಕರ ದಿಕ್ಕು ತಿಳಿದುಕೊಳ್ಳಲು ಅಥವಾ ನಿಮ್ಮ ಬಡ್ತಿ ಅವಕಾಶವನ್ನು ಹೆಚ್ಚಿಸುವ ಇತರ ವಾಸ್ತು ಸಂಬಂಧಿ ಸಲಹೆಗಳಿಗೆ ನಮ್ಮ ತಜ್ಞರನ್ನು ಸಂಪರ್ಕಿಸಿ).
ಚಕ್ರಗಳ ಸಮತೋಲನದಿಂದ ನಿಮ್ಮ ಬಡ್ತಿ ಅವಕಾಶ ಹೆಚ್ಚಿಸಿಕೊಳ್ಳಿ:
ಚಕ್ರಗಳು ವ್ಯಕ್ತಿಯ ದೇಹದಲ್ಲಿರುವ ಆಂತರಿಕ ಶಕ್ತಿ ಕೇಂದ್ರಗಳು. ಇವು ನಿಮ್ಮೊಳಗಿನ ಚೈತನ್ಯ ಹಾಗೂ ಹಿತವನ್ನು ನಿರ್ಧರಿಸುತ್ತವೆ. ಈ ಚಕ್ರಗಳು ಸಂಪೂರ್ಣವಾಗಿ ಕ್ರಿಯಾಶೀಲವಾಗಿದ್ದರೆ ಆಗ ವ್ಯಕ್ತಿಯು ತನ್ನ ಎಲ್ಲ ಕ್ರಿಯೆಗಳನ್ನು ಅತ್ಯಂತ ತೃಪ್ತಿದಾಯಕವಾಗಿ ಮಾಡುತ್ತಾನೆ. ಸಮತೋಲಿತ ಚಕ್ರವನ್ನು ಒಳಗೊಂಡ ದೇಹವು ಆಕರ್ಷಕ ವ್ಯಕ್ತಿತ್ವವನ್ನು ಹೊರಹೊಮ್ಮಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಭೆಯನ್ನು ಸೃಷ್ಟಿಸುತ್ತದೆ. ದೇಹದಲ್ಲಿರುವ ಚಕ್ರಗಳನ್ನು ಸಮತೋಲನಗೊಳಿಸುವುದಕ್ಕೆ ಅನೇಕ ವಿಧಾನಗಳು ಇವೆ. ಅವುಗಳಲ್ಲಿ ವಾಸ್ತು ಕೂಡ ಒಂದು. ವಾಸ್ತು ಶಾಸ್ತ್ರವನ್ನು ಅಳವಡಿಸಿಕೊಂಡ ಮನೆ ಹಾಗೂ ಕಚೇರಿ ಖಂಡಿತವಾಗಿಯೂ ಚಕ್ರಗಳನ್ನು ಚೈತನ್ಯಗೊಳಿಸುತ್ತವೆ ಹಾಗೂ ಬದುಕಿನಲ್ಲಿ ನಿಮ್ಮ ಪ್ರತಿಯೊಂದು ಗುರಿಗೂ ಒತ್ತಾಸೆಯಾಗಿ ನಿಲ್ಲುತ್ತವೆ.








