2016ರ ಡಿಸೆಂಬರ್ 31ರ ರಾತ್ರಿ ಗಡಿಯಾರದಲ್ಲಿ 12 ಹೊಡೆಯುತ್ತಿದ್ದಂತೆಯೇ, ಅದು ಹುಮ್ಮಸ್ಸು ಮತ್ತು ಉತ್ಸಾಹದಿಂದ 2017ನ್ನು ಸ್ವಾಗತಿಸುವ ಸಮಯ. ಪ್ರತಿ ವರ್ಷ, ಯಾವುದೇ ಹೊಸ ದಿನದಲ್ಲಾಗುವಂತೆ ಯಶೋವಂತರಾಗುವುದು, ಸಂತೋಷವಾಗಿರುವುದು, ಪ್ರತಿಯೊಬ್ಬರ ಭರವಸೆಯಾಗಿರುತ್ತದೆ ಮತ್ತು ಸವಾಲೂ ಆಗಿರುತ್ತದೆ. 1ನೇ ಜನವರಿಯಂದು ಮಾಡಲಾಗುವ ಸಾಮಾನ್ಯ ವಿಷಯವೆಂದರೆ ಸ್ನೇಹಿತರು ಮತ್ತು ಕುಟುಂಬದವರಿಗೆ ಶುಭಾಶಯಗಳನ್ನು ತಿಳಿಸುವುದು. ಹೊಸ ವರ್ಷದ ಮತ್ತೊಂದು ಸಾಮಾನ್ಯ ವಿಷಯವೆಂದರೆ ಹೊಸ ವರ್ಷದ ಸಂಕಲ್ಪಗಳನ್ನು ಮಾಡುವುದು. ಬಹಳಷ್ಟು ಜನರು ಹೊಸ ವರ್ಷವನ್ನು ಕೆಟ್ಟ ಚಟಗಳನ್ನು ಬಿಡಲು, ಗುರಿಗಳನ್ನು ನಿಗದಿಪಡಿಸಲು ಮತ್ತು ಪುನರಾರಂಭ ಮಾಡಲು ಒಂದು ಅವಕಾಶವನ್ನಾಗಿ ನೋಡುತ್ತಾರೆ
ಎಲ್ಲಾ ಪ್ರಮುಖ ಸಮೀಕ್ಷೆಗಳ ಪ್ರಕಾರ ಜನರು ಮಾಡುವ ಐದು ಪ್ರಮುಖ ಸಂಕಲ್ಪಗಳನ್ನು ಈ ಕೆಳಗೆ ನೀಡಲಾಗಿದೆ:
- ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಕೇಂದ್ರೀಕರಿಸುವುದು (ನಿಕೋಟಿನ್ ಉತ್ಪನ್ನಗಳು ಮತ್ತು ಆಲ್ಕೋಹಾಲ್ ವರ್ಜಿಸುವುದು, ಜಿಮ್ ಸೇರುವುದು, ವ್ಯಾಯಾಮ ಮಾಡುವುದು, ತೂಕ ಕಡಿಮೆಯಾಗುವುದು, ಧ್ಯಾನ ಮಾಡುವುದು, ಮುಂತಾದ)
- ಆರ್ಥಿಕವಾಗಿ ಹೆಚ್ಚು ಜವಾಬ್ದಾರಿಯುತರಾಗುವುದು
- ಹೊಸ ಕೆಲಸಕ್ಕಾಗಿ ಹುಡುಕುವುದು ಅಥವಾ ಕೆಲಸದಲ್ಲಿ ಅಥವಾ ವಿದ್ಯಾಭ್ಯಾಸದಲ್ಲಿ ಇನ್ನೂ ಉತ್ತಮವಾಗಿ ನಿರ್ವಹಿಸುವುದು (ಪರೀಕ್ಷೆಗಳನ್ನು ಪಾಸು ಮಾಡುವುದು ಅಥವಾ ವೃತ್ತಿಪರ ಪ್ರಮಾಣಪತ್ರಗಳನ್ನು ಪಡೆಯುವುದು ಅಥವಾ ಕೆಲಸದಲ್ಲಿ ಪ್ರಮೋಷನ್ ಪಡೆಯುವುದು)
- ಪರಿವಾರ ಮತ್ತು ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ
- ಕನಿಷ್ಠ ಒಂದು ಹೊಸ ಹವ್ಯಾಸವನ್ನು ರೂಢಿಸಿಕೊಳ್ಳುವುದು
ಹಾಗಿದ್ದರೂ, ಇತರ ಸಮೀಕ್ಷೆಗಳ ಪ್ರಕಾರ ಎಲ್ಲಾ ಸಂಕಲ್ಪಗಳ ಪೈಕಿ 70% ಅನ್ನು ಜನವರಿ ಕೊನೆಯವರೆಗೆ ಮುರಿಯಲಾಗುತ್ತದೆ ಮತ್ತು ಜೀವನ ತನ್ನ ಹಳೇ ಅಭ್ಯಾಸಕ್ಕೆ ಹಿಂದಿರುಗುತ್ತದೆ. ಹೀಗಾಗುವುದಕ್ಕೆ ಮುಖ್ಯ ಕಾರಣ ಏಕಾಗ್ರತೆ ಮತ್ತು ಇಚ್ಛಾಶಕ್ತಿಯ ಕೊರತೆ. ಹೊಸ ವರ್ಷದ ಸಂಕಲ್ಪಕ್ಕೆ ವಾಸ್ತು ಸಹಾಯಕ ಎಂಬುದಕ್ಕೆ ಇದು ಮೊದಲ ಕಾರಣ. ವಾಸ್ತುಶಾಸ್ತ್ರದ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರು ಆತ್ಮವಿಶ್ವಾಸ ಮತ್ತು ಧ್ಯೇಯದತ್ತ ಸಾಗುವ ಭಾವನೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಉತ್ಸಾಹ ಕುಂದದೆ ಅಥವಾ ನಿರಾಶರಾಗದೆ ಸವಾಲುಗಳನ್ನು ಸ್ವೀಕರಿಸಲು ಮಾರ್ಗದರ್ಶನ ಮಾಡುವಂತಹ ಸಕಾರಾತ್ಮಕತೆಯನ್ನು ಅವರೊಳಗೆ ತುಂಬುತ್ತದೆ. ಜೀವನ ಎಂಬುದು ಹೂವಿನ ಹಾಸಿಗೆಯಲ್ಲ ಎಂಬುದು ಎಲ್ಲರಿಗೂ ತಿಳಿದಿದೆ; ಖಂಡಿತವಾಗಿ ಅದರಲ್ಲಿ ಏರಿಳಿತಗಳಿರುತ್ತವೆ. ಆದರೆ ನಿಮ್ಮ ಸುತ್ತಲೂ ನೀವು ಸಕಾರಾತ್ಮಕ ಶಕ್ತಿಯನ್ನು ಹೊಂದಿದ್ದರೆ ಅದು ಕಷ್ಟಕಾಲದಲ್ಲಿ ನಿಮಗೆ ಮಾರ್ಗದರ್ಶನ ಮಾಡುತ್ತದೆ. ಈ ಕಾರಣದಿಂದ ನೀವು 2017ರಲ್ಲಿ ವಾಸ್ತುವನ್ನು ಅಳವಡಿಸಿಕೊಳ್ಳಬೇಕು.
ವಾಸ್ತುವನ್ನು ಅನುಸರಿಸಲು, ವಿಶೇಷವಾಗಿ ಸರಳವಾಸ್ತು ತತ್ವಗಳನ್ನು ಅನುಸರಿಸಲು ಎರಡನೇ ಕಾರಣವೆಂದರೆ, ದೇಹದಲ್ಲಿನ ಪ್ರಮುಖವಾದ ಏಳು ಚಕ್ರಗಳನ್ನು ತೆರೆಯುವುದು. ಪುರಾತನ ಭಾರತೀಯ ವಿಜ್ಞಾನದ ಪ್ರಕಾರ, ಮಾನವ ದೇಹದ ಎಲ್ಲಾ ಚಕ್ರಗಳು ಸಮತೋಲನೆಯಲ್ಲಿರುವಾಗ ಅಥವಾ ತೆರೆದುಕೊಂಡಾಗ ವ್ಯಕ್ತಿಯ ಆರೋಗ್ಯ ಹಾಗು ದೈಹಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸ್ಥಿತಿ ತನ್ನ ಅತ್ಯುತ್ತಮ ಮಟ್ಟದಲ್ಲಿರಲು ಸಾಧ್ಯವಾಗುತ್ತದೆ. ಸರಳವಾಸ್ತು, ದಿಕ್ಕುಗಳ ವಿಜ್ಞಾನದೆಡೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಈ ಚಕ್ರಗಳನ್ನು ಪುನರುಜ್ಜೀವನಗೊಳಿ ಸುತ್ತದೆ. ಚಕ್ರಗಳು ಕ್ರಿಯಾಶೀಲಗೊಂಡಾಗ ವ್ಯಕ್ತಿಯು ಶಕ್ತಿಯನ್ನು ಪಡೆಯುತ್ತಾನೆ ಮತ್ತು ಯಾವುದೇ ಚಾಂಚಲ್ಯವಿಲ್ಲದೆ ಜೀವನದ ಸವಾಲುಗಳನ್ನು ಎದುರಿಸುತ್ತಾ ಮುಂದೆ ಸಾಗುವಂತಹ ಪ್ರಭಾಮಂಡಲವನ್ನು ಹೊಂದುತ್ತಾನೆ.
ಬದಲಾವಣೆ ಎಂಬುದು ನಮ್ಮಿಂದಲೇ, ಅತ್ಯಂತ ಸುಲಭಸಾಧ್ಯ ಮಾರ್ಗದಲ್ಲಿ ಅದನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಾರಂಭವಾಗಬೇಕು ಎಂದು ಸರಳವಾಸ್ತು ನಂಬುತ್ತದೆ. 2017ರಲ್ಲಿ ಶಾಂತಿಮಯ ಮತ್ತು ಸಫಲ ಜೀವನ ನಡೆಸಲು ಮನೆಯಲ್ಲಿ ಅನುಸರಿಸಬಹುದಾದ ಕೆಲ ಸರಳವಾಸ್ತು ಮಾರ್ಗಗಳು ಈ ಕೆಳಗಿನಂತಿವೆ:
- ಮನೆಯನ್ನು ಯಾವಾಗಲೂ ಸ್ವಚ್ಛವಾಗಿರಿಸಿ ಮತ್ತು ಕಿಟಕಿಗಳು ಮತ್ತು ಟೇಬಲ್ಗಳ ಮೇಲಿನ ಧೂಳನ್ನು ಒರೆಸುತ್ತಿರಿ. ಮನೆಯನ್ನು ಅಸ್ತವ್ಯಸ್ತತೆಯಿಂದ ಮುಕ್ತವಾಗಿರಿಸಿ.
- ಮುಖ್ಯ ಪ್ರವೇಶದ ಬಾಗಿಲನ್ನು ಸ್ವಚ್ಛವಾಗಿರಿಸಿ. ಗರಿಷ್ಠ ಸಕಾರಾತ್ಮಕ ಶಕ್ತಿ ಪ್ರವೇಶಿಸುವಂತಹ ಸ್ಥಳವಿದು.
- ನಿದ್ರಿಸುವಾಗ ನಿಮ್ಮ ತಲೆಯನ್ನು ನಿಮ್ಮ 2ನೇ ಅನುಕೂಲಕರ ದಿಕ್ಕಿನಲ್ಲಿರಿಸಿ. ಇದು ನಿಮ್ಮ ಏಳು ಚಕ್ರಗಳನ್ನು ಕ್ರಿಯಾಶೀಲಗೊಳಿಸುತ್ತದೆ ಮತ್ತು ಯಾವುದೇ ಆರೋಗ್ಯಸಂಬಂಧಿ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
- ನಿಮ್ಮ ಜೀವನದ ಎಲ್ಲಾ ವಿಷಯಗಳಲ್ಲೂ ಸಕಾರಾತ್ಮಕ ಫಲಿತಾಂಶಗಳನ್ನು ಆಕರ್ಷಿಸಲು ನಿಮ್ಮ ಅನುಕೂಲಕರ ಬಣ್ಣದ ಬಟ್ಟೆಯನ್ನು ಧರಿಸಿ.
- 7 ಚಕ್ರಗಳನ್ನು ಕ್ರಿಯಾಶೀಲಗೊಳಿಸಲು ಮತ್ತು ಕೆಲಸದಲ್ಲಿನ ದಕ್ಷತೆಯನ್ನು ಸುಧಾರಿಸಲು ಆಫೀಸ್ನಲ್ಲಿರುವಾಗ ನಿಮ್ಮ 1ನೇ ಅನುಕೂಲಕರ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಿ.
ಇವು ನಿಮ್ಮ ಹೊಸ ವರ್ಷದ ಸಂಕಲ್ಪವನ್ನು ಸಾಧಿಸಲು ನೀವು ಅಳವಡಿಸಿಕೊಳ್ಳಬಹುದಾದ ಕೆಲವು ತತ್ವಗಳು. 2017ರಲ್ಲಿ ವಾಸ್ತು ಬಗ್ಗೆ ಹೆಚ್ಚು ತಿಳಿಯಲು ಸರಳವಾಸ್ತು ತಜ್ಞರನ್ನು ಸಂಪರ್ಕಿಸಿ.
2017ರಲ್ಲಿ ನಿಮ್ಮೆಲ್ಲಾ ಗುರಿಗಳನ್ನು ಸಾಧಿಸುವ ಶಕ್ತಿ ಮತ್ತು ತಾಳ್ಮೆಯನ್ನು ಭಗವಂತ ನೀಡಲಿ! ಅದ್ಭುತವಾದ ಹೊಸ ವರ್ಷ 2017 ನಿಮ್ಮದಾಗಲಿ.









Health
Dear Neharu,
We appreciate your interest to acquaint yourself with Saral Vaastu concept.Please share your contact details with us so that our concern team can get back to you and help you with the same.You can Email us your details on our email ID support@saralvaastu.com.
For any queries, please contact on 9448286758/9448286755 (8 am to 8 pm). You can download your personal vastu assistant, Saral Vaastu mobile app, from google play store https://goo.gl/pYZ9WG.