ನಿಮಗೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಕುರಿತು ಭಯವಿದೆಯೇ? ಕೆಲಸದ ಭದ್ರತೆಯಿಲ್ಲದೇ ನೀವು ಭಯದಲ್ಲಿ ಜೀವಿಸುತ್ತಿದ್ದೀರಾ? ಜಗತ್ತು 50, 30 ಅಥವಾ 10 ವರ್ಷಗಳ ಹಿಂದೆ ಇದ್ದುದಕ್ಕಿಂತಲೂ ತುಂಬ ಭಿನ್ನವಾಗಿದೆ. ಉದ್ಯೋಗ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆಯು ಹಲವು ಪಟ್ಟು ಹೆಚ್ಚಾಗಿದೆ ಮತ್ತು ಉದ್ಯೋಗಿಗಳು ಸಂಸ್ಥೆಯೊಂದರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಅಥವಾ ಮುಂದಿನ ಹಂತಕ್ಕೆ ಪ್ರಮೋಷನ್ ಪಡೆಯುವುದಕ್ಕಾಗಿ ಅನ್ವೇಷಣೆ ಮಾಡಬೇಕಾಗಿದೆ ಮತ್ತು ಅಧ್ಯಯನ ಮಾಡಬೇಕಾಗಿದೆ. ಹಿಂದೆಂದೂ ಸತ್ಯವಾಗಿರದ ನಾಣ್ಣುಡಿಯೊಂದು ಇಂದಿನ ಜಗತ್ತಿನಲ್ಲಿ ಹುಟ್ಟಿಕೊಂಡಿದೆ:
“ಅದೇ ಸ್ಥಳವನ್ನು ಕಾಯ್ದುಕೊಳ್ಳಬೇಕೆಂದರೆ ನೀವು ಓಡುತ್ತಲೇ ಇರಬೇಕು”
ತಂತ್ರಜ್ಞಾನ, ಜಾಗತೀಕರಣ, ಹಿಂಜರಿತ, ಮಾರುಕಟ್ಟೆ ಗಾತ್ರ ಇಳಿಕೆ, ಹೊರಗುತ್ತಿಗೆ ಇತ್ಯಾದಿಯಿಂದಾಗಿ ಜಗತ್ತು ತುಂಬಾ ಬದಲಾಗಿದೆ. 10 ವರ್ಷಗಳ ಹಿಂದೆ ಇದ್ದ ವ್ಯಕ್ತಿಗೆ ಹೋಲಿಸಿದಲ್ಲಿ ಇಂದು ಉದ್ಯೋಗಿಗಳು 8-10 ವಿಭಿನ್ನ ಉದ್ಯೋಗಳಲ್ಲಿ ಮತ್ತು ಸ್ಥಾನಗಳಲ್ಲಿ ಅನುಭವವನ್ನು ಹೊಂದಿರುತ್ತಾರೆ. ಕಂಪನಿಯ ಸಿಇಒ ಅವರಿಂದ ಪ್ರಾರಂಭಿಸಿ ಕಟ್ಟಕಡೆಯ ಉದ್ಯೋಗಿಯ ವರೆಗೆ ಎಲ್ಲರೂ ಸಹ ಉದ್ಯೋಗದ ಭದ್ರತೆಯಲ್ಲಿ ಕೊರತೆ ಎದುರಿಸಬೇಕಾಗಿದೆ. ಕೆಲಸವನ್ನು ನಿರ್ವಹಿಸುವುದು ಮತ್ತು ಮಾನಸಿಕ ಒತ್ತಡ ಎರಡನ್ನೂ ಉದ್ಯೋಗಿಗಳು ಎದುರಿಸಬೇಕಾಗುತ್ತದೆ.
ವಿವಿಧ ವ್ಯಕ್ತಿಗಳು ಉದ್ಯೋಗದ ಅಭದ್ರತೆಯನ್ನು ಭಿನ್ನವಾದ ರೀತಿಯಲ್ಲಿ ನಿರ್ವಹಿಸುತ್ತಾರೆ. ಇವೆಲ್ಲವೂ ಅವರ ಮನೆಯ ಜೀವನ, ಅವರು ತೆಗೆದುಕೊಂಡಿರಬಹುದಾದ ಸಾಲಗಳು; ಹಣಕಾಸು ಸನ್ನಿವೇಶಗಳು, ಸಹೋದ್ಯೋಗಿಗಳು, ಮೇಲಧಿಕಾರಿಗಳು ಅಥವಾ ಮ್ಯಾನೇಜರುಗಳ ಮೇಲೆ ಅವಲಂಬಿಸಿರುತ್ತದೆ.
ಉದ್ಯೋಗ ಭದ್ರತೆಯ ಬಗ್ಗೆ ನಿಮಗಿರುವ ಭೀತಿಯನ್ನು ನಿವಾರಿಸಿಕೊಳ್ಳುವುದಕ್ಕಾಗಿ ವಿಶಿಷ್ಟ ವಿಧಾನಗಳನ್ನು ಓದುವುದನ್ನು ಮುಂದುವರಿಸುವುದಕ್ಕೂ ಮುನ್ನ ನಮ್ಮ ಭವಿಷ್ಯವೇನು ಎಂಬುದನ್ನು ತಿಳಿದುಕೊಳ್ಳಲು ಅಸಾಧ್ಯ ಮತ್ತು ಅದರ ಬಗ್ಗೆ ಭಯಪಡುವುದು ನಮ್ಮ ಇಂದಿನ ಜೀವನವನ್ನು ಹಾಳು ಮಾಡುವುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ವಿಷಯದ ಬಗ್ಗೆ ತಜ್ಞರು ಸಲಹೆಮಾಡುವ ಹಲವಾರು ವಿಧಾನಗಳಿವೆ. ಬಳಕೆಮಾಡಬಹುದಾದ ಸಾಮಾನ್ಯ ವಿಧಾನಗಳಲ್ಲಿ ಕೆಲಸದ ಕುರಿತು ಇನ್ನಷ್ಟು ಕಲಿಯುವುದು, ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಜೊತೆ ಸೌಹಾರ್ದಯುತವಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು, ಸಮಯ ನಿರ್ವಹಣೆ, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವ ತಂತ್ರಗಳು ಸೇರುತ್ತವೆ.
ನಿಮ್ಮ ಭಯಗಳನ್ನು ಕಡಿಮೆಮಾಡಲು ನಿಮಗೆ ಸಹಾಯಮಾಡಬಲ್ಲ ವಿಶ್ವವ್ಯಾಪಿ ಶಕ್ತಿಗಳಿವೆ. ಪ್ರಾಚೀನ ಭಾರತೀಯ ವಿಜ್ಞಾನವಾಗಿರುವ ವಾಸ್ತು ಶಾಸ್ತ್ರವು ಮಹತ್ವ ಪಡೆಯುವುದೇ ಇಲ್ಲಿ. ವಾಸ್ತು ಶಾಸ್ತ್ರವು ಪಾಶ್ಚಿಮಾತ್ಯ ನಾಗರಿಕತೆಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಏಕೆಂದರೆ ಅವರು ಭಾರತೀಯ ಸಂಸ್ಕೃತಿಯ ಸಾಮರ್ಥ್ಯ ಮತ್ತು ಅರ್ಥವನ್ನು ತಿಳಿದುಕೊಳ್ಳುತ್ತಿದ್ದಾರೆ. ವಿಶ್ವವ್ಯಾಪಿ ಶಕ್ತಿಗಳನ್ನು ಗುರಿಮಾಡಿಕೊಳ್ಳುವಲ್ಲಿ ಮತ್ತು ಅವುಗಳನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳುವಲ್ಲಿ ವಾಸ್ತುವಿನ ಅಡಿಪಾಯವು ಗಮನ ಕೇಂದ್ರೀಕರಿಸುತ್ತದೆ. ಸರಳ ವಾಸ್ತುವಿನಲ್ಲಿನ ತಜ್ಞರು ವಾಸ್ತು ಶಾಸ್ತ್ರದ ಬಗ್ಗೆ ವಿವರಗಳನ್ನು ನೀಡಬಲ್ಲರು; ಆದರೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಭೀತಿಯನ್ನು ಇಲ್ಲವಾಗಿರುವ ನಿರ್ದಿಷ್ಟವಾದ ಮಹತ್ವದ ಸಂಗತಿಗಳನ್ನಷ್ಟೇ ಇಲ್ಲಿ ನಾವು ಬಿಂಬಿಸುತ್ತೇವೆ.
ಕಚೇರಿಯಲ್ಲಿನ ವಾಸ್ತು:
- ನೀವು ಕುಳಿತಿರುವ ಸ್ಥಿತಿಯನ್ನು ಪರಾಮರ್ಶಿಸಿ. ಒಂದು ವೇಳೆ ನೀವು ಬೀಮ್ ಕೆಳಗೆ ಕುಳಿತಿದ್ದಲ್ಲಿ ನೀವು ಕುಳಿತಿರುವ ಸ್ಥಳವನ್ನು ಬದಲಿಸುವಂತೆ ನಿಮ್ಮ ಮೇಲಧಿಕಾರಿಯನ್ನು ಕೇಳಿರಿ.
- ನಿಮ್ಮ ಹಿಂದಿನ ಗೋಡೆಯ ಮೇಲೆ ಪರ್ವತದ ಪೋಸ್ಟರ್ ಹಚ್ಚಿರಿ. ನೀವು ನಿಮ್ಮ ಗ್ರಾಹಕರ ಜೊತೆ ಕೆಲಸ ಮಾಡುವಾಗ ಬೆಂಬಲ ಮತ್ತು ತೀರ್ಮಾನವನ್ನು ಇದು ಸೂಚಿಸುವುದು.
- ನಿಮ್ಮ ನೆಚ್ಚಿನ ದಿಕ್ಕುಗಳಾವವು ಎಂಬುದನ್ನು ತಿಳಿಯಲು ಸರಳ ವಾಸ್ತುವಿನಲ್ಲಿನ ತಜ್ಞರನ್ನು ಸಂಪರ್ಕಿಸಿ. ಕೆಲಸದಲ್ಲಿ ಮತ್ತು ಸಭೆಗಳ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳುವುದು ನಿಮಗೆ ದೀರ್ಘಕಾಲಿಕ ಪ್ರಯೋಜನಗಳನ್ನು ನೀಡುವುದು.
ಮನೆಯಲ್ಲಿನ ವಾಸ್ತು:
- ರಾತ್ರಿವೇಳೆಯಲ್ಲಿ ವಿಶ್ರಾಂತಿಗಾಗಿ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆಮಾಡಿಕೊಳ್ಳುವುದಕ್ಕಾಗಿ ನಿಮ್ಮ ನೆಚ್ಚಿನ ದಿಕ್ಕುಗಳಿಗೆ ತಲೆಹಾಕಿ ಮಲಗಿ. ಸೂಕ್ತವಾಗಿ ನಿದ್ರಿಸುವ ಮೂಲಕ ನೀವು ನಿಮ್ಮ ಕಚೇರಿಗೆ ಒತ್ತಡವಿಲ್ಲದ ಸ್ಥಿತಿಯಲ್ಲಿ ಪ್ರವೇಶಿಸಬಹುದು.
- ತೇವಾಂಶವಿರುವ ವಾತಾವರಣದಲ್ಲಿ ಮನೆಯ ಪ್ರತಿ ಮೂಲೆಯಲ್ಲೂ ಉಪ್ಪಿನ ಕಲ್ಲನ್ನು ಇಡಿ. ಉಪ್ಪಿನ ಕಲ್ಲಿನ ದೀಪಗಳು ಕೂಡ ಸಹಾಯಕ.
- ಮನೆಯ ಸೂಕ್ತ ಸ್ಥಳಗಳಲ್ಲಿ ವಾಸ್ತು ಸಾಮಗ್ರಿಗಳನ್ನು ಇಡುವುದು ಋಣಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುವುದು ಮತ್ತು ನಿಮ್ಮಲ್ಲಿ ಧನಾತ್ಮಕತೆಯನ್ನು ತರುವುದು.
ಚಕ್ರ ಸಮತೋಲನಕ್ಕಾಗಿ ವಾಸ್ತು:
ಸೂಕ್ತ ವಾಸ್ತು ವಿಧಾನಗಳನ್ನು ಅನುಸರಿಸುವುದರಿಂದ ದೇಹದ ಶಕ್ತಿಯ ಮಟ್ಟವು ಸುಧಾರಿಸುವುದು. ಈ ಧನಾತ್ಮಕವಾದ ಶಕ್ತಿಯು ಧ್ಯಾನದ ಜೊತೆ ಸೇರಿ ದೇಹದ ಏಳು ಚಕ್ರಗಳನ್ನು ತೆರೆಯುವುದು. ಕಿರೀಟ ಅಥವಾ ಸಹಸ್ರಾರ ಎಂದು ಕರೆಯಲಾಗುವ ಏಳನೇ ಚಕ್ರವನ್ನು ತೆರೆಯುವ ಮೂಲಕ ನೀವು ನಿಮ್ಮೊಂದಿಗೆ ಹಾಗೂ ಜೀವನದಲ್ಲಿನ ಮಹತ್ವದ ಶಕ್ತಿಯೊಂದಿಗೆ ಆಳವಾದ ಸಂವಹನವನ್ನು ನೀವು ಸಾಧಿಸುವಿರಿ. ಸಹಸ್ರಾರ ಚಕ್ರವು ನಮ್ಮ ಎಲ್ಲ ಭಯಗಳನ್ನೂ ನಿರ್ಮೂಲನಗೊಳಿಸುವುದು.









I will trouble in job, I am in leaving in rent house
Dear Krishnanand,
We appreciate your interest to acquaint yourself with Saral Vaastu concept.Please share your contact details with us so that our concern team can get back to you and help you with the same.You can Email us your details on our email ID support@saralvaastu.com.
For any queries, please contact on 9448286758/9448286755 (8 am to 8 pm).