ನೀವು ಸ್ಥಳ ಬದಲಿಸುತ್ತಿದ್ದೀರಾ? ಇದು ಸುಲಭ. ಆದರೆ ನೀವು ವಿಭಿನ್ನ ಸಾಂಸ್ಕೃತಿಕ ಮತ್ತು ಭಾಷಾ ಜನಸಮುದಾಯಗಳಿರುವ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿರುವಿರಾ? ಹಾಗಾದರೆ ಹೊಂದಿಕೊಳ್ಳಲು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ತುಂಬ ಕಷ್ಟವಾಗುತ್ತದೆ. ಜನರ ಹಾಗೂ ಅವರ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳುವುದು ಕಷ್ಟಕರವಾದುದು. ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆಯುವಾಗ ಜನರು ಅಲ್ಲಿನ ವ್ಯಕ್ತಿಗಳೊಂದಿಗೆ ಸಂಘರ್ಷಕ್ಕೆ ಈಡಾಗಬಹುದು.
ಈ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಅಥವಾ ಕುಟುಂಬ ಸುಲಭವಾಗಿ ಬೆರೆಯುವುದು ಹೇಗೆ?
ಸಾಂಸ್ಕೃತಿಕವಾಗಿ ಹೊಂದಿಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡುವ ಹಲವಾರು ವಿಧಾನಗಳು ಹಾಗೂ ತತ್ವಗಳಿವೆ. ಆದರೆ ನೀವು ವಾಸ್ತುವಿನ ಬಗ್ಗೆ ಆಲೋಚಿಸಿದ್ದೀರಾ? ಪ್ರತಿ ವಸ್ತು ಅಥವಾ ಅಲಂಕಾರದ ಪ್ರತಿ ತುಣುಕು ಕೂಡ ನಿಮಗೆ ಸುರಕ್ಷಿತವಾಗಿ ಸಾಂಸ್ಕೃತಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುವುದು ಎಂಬುದನ್ನು ನೀವು ಅರಿತಿದ್ದೀರಾ? ನೀವು ನಿಮ್ಮ ತೀರ್ಮಾನಗಳನ್ನು ಮಾಡುವುದಕ್ಕೂ ಮುನ್ನ ವಾಸ್ತು ಅಥವಾ ವಾಸ್ತು ಶಾಸ್ತ್ರ ಸ್ವಯಂಚಾಲಿತವಾಗಿ ನಿಮಗೆ ಹೊಂದಿಕೊಳ್ಳಲು ಸಹಾಯ ಮಾಡುವುದಿಲ್ಲ, ಬದಲಿಗೆ ಇದು ಕ್ರಮೇಣದ ಪ್ರಕ್ರಿಯೆಯಾಗಿದ್ದು ಈ ಬದಲಾವಣೆಯನ್ನು ಮಾಡಿಕೊಳ್ಳಲು ನಿಮಗೆ ಸಹಾಯಕವಾಗುವುದು.
ಕೆಳಗೆ ಸರಳವಾದ ವಾಸ್ತುಶಾಸ್ತ್ರದ ಉದಾಹರಣೆಗಳನ್ನು ನೀಡಲಾಗಿದ್ದು ಅವು ನೀವು ಮನೆಯನ್ನು ಸ್ಥಳಾಂತರಿಸಿದಾಗ ನಿಮಗೆ ಸನ್ನಿವೇಶದೊಂದಿಗೆ ಹೊಂದಿಕೊಳ್ಳಲು ಸಹಾಯಮಾಡುತ್ತವೆ.
- ವಾಸ್ತು ಶಾಸ್ತ್ರವು ಸದಾಕಾಲವೂ ಮನೆಯ ಮುಖ್ಯದ್ವಾರವನ್ನು ಸ್ವಚ್ಛವಾಗಿ ಮತ್ತು ವಿಶಾಲವಾಗಿ ಇಡುವುದನ್ನು ಸಲಹೆಮಾಡುತ್ತದೆ. ನೀವು ಹೊಸ ಸ್ಥಳಕ್ಕೆ ಹೋದಾಗ ಆ ಸ್ಥಳದಲ್ಲಿನ ಜನರು ನಿಮ್ಮನ್ನು ಭೇಟಿಮಾಡಲು ಹಾಗೂ ಮನೆಯನ್ನು ನೋಡಲು ಬರುತ್ತಾರೆ. ಹೀಗಾಗಿ ವಾಸ್ತುವಿನ ಪ್ರಕಾರ ನಿಮ್ಮ ಮನೆಯನ್ನು ವ್ಯವಸ್ಥೆಮಾಡುವುದು ಮುಖ್ಯವಾಗಿದೆ. ಮನೆಯ ಮುಖ್ಯದ್ವಾರವು ಅಚ್ಚುಕಟ್ಟಾಗಿರಬೇಕು. ಇದು ನಿಮ್ಮ ಮನೆಗೆ ಹೊಸ ಸ್ನೇಹಿತರಿಗೆ ಮುಕ್ತ ಆಹ್ವಾನವನ್ನು ಪ್ರತಿಬಿಂಬಿಸುವುದು. ಮನೆಯಲ್ಲಿ ವಿಶಾಲ ಸ್ಥಳವಿರಲಿ ಮತ್ತು ಈ ಭಾಗದಿಂದ ನಿಮ್ಮ ಚಪ್ಪಲಿಗಳನ್ನು ದೂರವಿಡಿ.
- ದೇವತೆಗಳದ್ದೇ ಇರಲಿ ಯಾರದ್ದೇ ಆಗಿರಲಿ, ಉಗ್ರವಾದ ಪೋಸ್ಟರುಗಳು ಅಥವಾ ಗೋಡೆ ಅಲಂಕಾರಗಳನ್ನು ಮುಖ್ಯ ಕೊಠಡಿ ಅಥವಾ ಬೆಡ್ ರೂಮುಗಳಲ್ಲಿ ಬಳಕೆಮಾಡಬೇಡಿ. ಇದು ಕುಟುಂಬದ ಸದಸ್ಯರು ಶಾಂತಿ ಕಳೆದುಕೊಳ್ಳುವಂತೆ ಮಾಡುವುದು.
- ನಿಮ್ಮ ಮನೆಯಲ್ಲಿ ಆಹ್ವಾನದ ಸುಗಂಧವಿರಲಿ. ಹೂವುಗಳು ಮತ್ತು ಊದುಬತ್ತಿಗಳ ಸುಗಂಧ ಉತ್ತಮ ಆಯ್ಕೆ. ಮೊದಲು ನಿಮ್ಮ ನೆಚ್ಚಿನ ದಿಕ್ಕನ್ನು ಅರ್ಥಮಾಡಿಕೊಳ್ಳಿ. ಪರಿಸರದ ಜೊತೆ ಹೊಂದಾಣಿಕೆ ಸಾಧಿಸುವುದಕ್ಕಾಗಿ ಸಮರ್ಪಕವಾಗಿ ಬಳಕೆಮಾಡಬೇಕಾದ ನಾಲ್ಕು ನೆಚ್ಚಿನ ದಿಕ್ಕುಗಳಿವೆ.
- ನಿಮ್ಮ ಮನೆಯಲ್ಲಿ ಸರಿಯಾದ ವಾಸ್ತು ಸಾಮಗ್ರಿಗಳನ್ನು ಇಟ್ಟುಕೊಂಡು ಧನಾತ್ಮಕತೆಯನ್ನು ಹಬ್ಬಿಸಿ. ಸ್ಫಟಿಕಗಳಂಥ ವಾಸ್ತು ಸಾಮಗ್ರಿಗಳು
ಮನೆಯಲ್ಲಿ ರಮಣೀಯತೆಯನ್ನು ಹೆಚ್ಚಿಸಬಲ್ಲವು ಮತ್ತು ಕುಟುಂಬದ ಸದಸ್ಯರ ನಡುವೆ ಶಾಂತಿ ಮೂಡಿಸಬಲ್ಲವು.
ಇವು ಹಾಗೂ ಬೇರೆ ವಾಸ್ತು ಸಲಹೆಗಳು ಯಾವುದೇ ವ್ಯಕ್ತಿಗೆ ಸಾಂಸ್ಕೃತಿಕ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಸಹಾಯಮಾಡುತ್ತವೆ. ಸರಳ ವಾಸ್ತುವಿನಲ್ಲಿನ ತಜ್ಞರು ನಿಮಗೆ ವಾಸ್ತು ಸಾಮಗ್ರಿಗಳ ಕುರಿತು ಶಿಕ್ಷಣ ನೀಡುವುದಷ್ಟೇ ಅಲ್ಲ, ಸರಳವಾದ ರೀತಿಯಲ್ಲಿ ನೆಚ್ಚಿನ ದಿಕ್ಕುಗಳ ಬಗ್ಗೆ ತಿಳಿಸುತ್ತಾರೆ.








