ವಾಸ್ತು ಶಾಸ್ತ್ರ ಅಥವಾ ವಾಸ್ತುಶಿಲ್ಪ ಮತ್ತು ಕಟ್ಟಡನಿರ್ಮಾಣದ ವಿಜ್ಞಾನವು ಪ್ರಾಚೀನವಾದುದು, ಇದು ಆರ್ಕಿಟೆಕ್ಚರಿನ(ವಾಸ್ತುಶಿಲ್ಪ) ಸಾಂಪ್ರದಾಯಿಕ ಹಿಂದೂ ಪದ್ಧತಿಯಾಗಿದೆ. ಮನೆ, ಕಚೇರಿಗಳು, ದೇವಾಲಯಗಳು, ಕೆಲಸದ ಸ್ಥಳಗಳು ಹೀಗೆ ಯಾವುದೇ ಇರಲಿ. ವಾಸ್ತುವು ಅಡಿಪಾಯ, ಲೇಯೌಟುಗಳು, ಸೋಶಿಯಲ್ ಜಾಮಿಟ್ರಿ(ಸಾಮಾಜಿಕ ರೇಖಾಗಣಿತ) ಮತ್ತು ಯಾವುದೇ ನಿವಾಸಕ್ಕಾಗಿ ನೆಲದ ವ್ಯವಸ್ಥೆಯನ್ನು ಹೇಳುವುದು.
ಈ ವ್ಯವಸ್ಥೆಯ ಮೂಲಭೂತ ತತ್ವವೆಂದರೆ ರೇಖಾಗಣಿತದ ವಿನ್ಯಾಸ, ದಿಕ್ಕಿನ ನಿಗದಿ ಇತ್ಯಾದಿಯ ಜೊತೆಗೆ ಪ್ರಕೃತಿಯೊಂದಿಗೆ ಕಟ್ಟಡ ಸಂರಚನೆಯನ್ನು ಸಮಗ್ರಗೊಳಿಸುವುದಾಗಿದೆ. ಸರಳ ವಾಸ್ತುವು ಈ ಪ್ರಾಚೀನವಾದ ವಿಜ್ಞಾನವನ್ನು ಬಳಸಿಕೊಳ್ಳುವುದು ಮತ್ತು ಜನರ ಜೀವನವನ್ನು ಸುಧಾರಿಸುವುದು. ಸರಳ ವಾಸ್ತುವು ಒಟ್ಟಾರೆ ಸ್ಥಳ, ಅದರ ವಿನ್ಯಾಸ, ವಾತಾನುಕೂಲ, ಬಣ್ಣ, ವಸ್ತು, ವಿನ್ಯಾಸ, ದಿಕ್ಕು ಹಾಗೂ ವಸ್ತುಗಳತ್ತ ಗಮನಹರಿಸುವುದು.
ವಾಸ್ತುವು ಪ್ರತಿ ವ್ಯಕ್ತಿಯಲ್ಲಿನ ಶಕ್ತಿಯ ಜೊತೆ ಪ್ರಕೃತಿಯ ಶಕ್ತಿಗಳನ್ನು ಸಮತೋಲನಗೊಳಿಸುವುದಕ್ಕೆ ಜವಾಬ್ದಾರವಾಗಿದೆ ಎಂದು ನಂಬಲಾಗುತ್ತದೆ.ಇದು ವ್ಯಕ್ತಿ ಅಥವಾ ಕುಟುಂಬಕ್ಕೆ ಒಳ್ಳೆಯ ಆರೋಗ್ಯ, ಸಂತೋಷ ಹಾಗೂ ಸಂಪತ್ತನ್ನು ನೀಡುವುದು.ವಾಸ್ತುವು ವ್ಯಕ್ತಿಯ ಆಧ್ಯಾತ್ಮಿಕ ತಳಹದಿಯನ್ನು ಕೂಡ ಬಲಪಡಿಸುವುದು.ಸುತ್ತಮುತ್ತಲಿನ ವಾತಾವರಣದ ಜೊತೆ ವ್ಯಕ್ತಿಯನ್ನು ಸೌಹಾರ್ದಯುತಗೊಳಿಸುವ ಮೂಲಕ ಇದು ವ್ಯಕ್ತಿಗೆ ಆಂತರಿಕ ತೃಪ್ತಿಯನ್ನು ಕೂಡ ಒದಗಿಸುವುದು. ಸರಳ ವಾಸ್ತುವು ಕೇವಲ ವಾಸ್ತುಶಾಸ್ತ್ರದ ತತ್ವಗಳನ್ನು ಪಾಲಿಸುವುದಷ್ಟೇ ಅಲ್ಲ, ಅದನ್ನು ಸುಧಾರಿಸಿದೆ ಕೂಡ.
ವಾಸ್ತು ಎಂಬುದು ಕಟ್ಟುನಿಟ್ಟಿನ ವಿಷಯವಲ್ಲ ಮತ್ತು ಸರಳವಾಸ್ತುವು ಇಂದಿನ ಜಗತ್ತಿಗೆ ಸೂಕ್ತವಾಗಬಲ್ಲ ವಿಷಯವನ್ನು ತಿಳಿಸುವುದು. ಸರಳ ವಾಸ್ತುವಿನ ಕೆಲವು ವಿಶೇಷ ಗುಣಗಳು ಮತ್ತು ಪ್ರಯೋಜನಗಳನ್ನು ಹಾಗೂ ಅವು ಹೇಗೆ ಸಂಪತ್ತು ಹಾಗೂ ಯೋಗಕ್ಷೇಮಗಳಲ್ಲಿ ಪರಿಣಮಿಸುತ್ತವೆ ಎಂಬುದನ್ನು ಕೆಳಗೆ ತೋರಿಸಲಾಗಿದೆ.
ಸರಳ ವಾಸ್ತುವನ್ನು ಭಿನ್ನವಾಗಿ ಮಾಡುವ 10 ವಿಷಯಗಳು:
- ಇದು ಸಾಮಾನ್ಯ ವಾಸ್ತುವಿಗಿಂತ ಭಿನ್ನವಾದುದು:
ಪ್ರತಿ ವ್ಯಕ್ತಿಯೂ ಭಿನ್ನ. ಹೀಗಾಗಿ ಪ್ರತಿ ಮನೆ ಮತ್ತು ಅದರ ಕೊಠಡಿಗಳು, ಪ್ರತಿ ಜಾಗ, ಪ್ರತಿ ಸನ್ನಿವೇಶ ಹಾಗೂ ಪ್ರತಿ ಕುಟುಂಬ ಹಾಗೂ ಅದರ ಸಮಸ್ಯೆಗಳು ಭಿನ್ನವಾಗಿರುತ್ತವೆ. ಹೀಗಾಗಿ ಒಂದೇ ಬಗೆಯ ವಾಸ್ತು ಪರಿಹಾರಗಳು ಪ್ರತಿ ಸಮಸ್ಯೆಗೂ ಹಾಗೂ ಪ್ರತಿ ವ್ಯಕ್ತಿಗೂ ಅನ್ವಯಿಸಬೇಕಾಗಿಲ್ಲ.ಸರಳ ವಾಸ್ತುವು ವಿಭಿನ್ನ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ವಿಭಿನ್ನವಾದ ಪರಿಹಾರಗಳನ್ನು ಸಲಹೆಮಾಡಿದೆ. ವಾಸ್ತುಶಾಸ್ತ್ರದ ಮೂಲಭೂತ ತತ್ವಗಳು ಒಂದೇ ರೀತಿಯಾಗಿದ್ದರೂ ಇದನ್ನು ಅನ್ವಯಿಸುವ ರೀತಿಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ.
- ನಮ್ಮ ತಜ್ಞರು:
ಸರಳ ವಾಸ್ತುವಿನಲ್ಲಿನ ತಜ್ಞರು ವಾಸ್ತು ಶಾಸ್ತ್ರದ ಕಲೆಯನ್ನು ಅರಿತಿರುವ ವೃತ್ತಿಪರರಾಗಿದ್ದಾರೆ. ಅವರು ವಾಸ್ತು ವಿಶ್ಲೇಷಣೆ ನಡೆಸುವಲ್ಲಿ ಮತ್ತು ಅದರ ಫಲಿತಾಂಶವನ್ನು ಭವಿಷ್ಯ ನುಡಿಯುವಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿದ್ದಾರೆ.
- ವಾಸ್ತು ಮತ್ತು ಜಾತಕವನ್ನು ಸಂಯೋಜಿಸುವುದು:
ಸರಳ ವಾಸ್ತುವು ಕುಟುಂಬಕ್ಕೆ ಹೆಚ್ಚಿನ ಆದಾಯವನ್ನು ತರುವ ವ್ಯಕ್ತಿಯ ಜಾತಕವನ್ನು ಅಥವಾ ಜನ್ಮದಿನಾಂಕವನ್ನು ವಿಶ್ಲೇಷಿಸುವ ಮೂಲಕ ವಿಶಿಷ್ಟ ಪರಿಹಾರಗಳನ್ನು ಒದಗಿಸುವುದು. ಇದು ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನವಾದ ಪರಿಹಾರಗಳನ್ನು ಒದಗಿಸುವುದು.
- ಅನುಕೂಲಕರ ದಿಕ್ಕು:
ಸರಳವಾಸ್ತುವಿನಿಂದ ಅಭಿವೃದ್ಧಿಗೊಳಿಸಲಾಗಿರುವ ವಾಸ್ತುವಿನ ಇನ್ನೊಂದು ಮುಖವೆಂದರೆ ವ್ಯಕ್ತಿಗೆ ಅಚ್ಚುಮೆಚ್ಚಿನದ್ದೆನಿಸುವ ದಿಕ್ಕು. ಪ್ರತಿ ವ್ಯಕ್ತಿಗೂ 4 ಅನುಕೂಲಕರ ಮತ್ತು 4 ಅನಾನುಕೂಲಕರ ದಿಕ್ಕುಗಳಿರುತ್ತವೆ. ಈ ಅನುಕೂಲಕರ ದಿಕ್ಕುಗಳಲ್ಲಿ ಕುಳಿತುಕೊಳ್ಳುವುದು ಅಥವಾ ನಿದ್ರಿಸುವುದು ಒಟ್ಟಾರೆಯಾಗಿ ಯೋಗಕ್ಷೇಮವನ್ನು ಸುಧಾರಿಸುವುದು ಎಂದು ತಿಳಿದುಬಂದಿದೆ.
- ನಿವಾಸಗಳು ಮತ್ತು ಅದರಲ್ಲಿ ವಾಸಿಸುವ ವ್ಯಕ್ತಿಗಳ ಸವಿವರ ವಿಶ್ಲೇಷಣೆ:
ನಮ್ಮ ತಜ್ಞರು ನಿಮ್ಮ ಮನೆ ಅಥವಾ ಕಚೇರಿ ಅಥವಾ ಕಾರ್ಯಾಗಾರಗಳ, ಅಂತೆಯೇ ಕೆಲಸದ ಸ್ಥಳಗಳಲ್ಲಿ ಉಳಿಯುವ ಜನರುಗಳ ಸವಿವರವಾದ ವಿಶ್ಲೇಷಣೆಯನ್ನು ನಡೆಸುತ್ತಾರೆ. ಈ ವಿಶ್ಲೇಷಣೆಯ ನಂತರವಷ್ಟೇ ನಾವು ನಿಮಗೆ ಪರಿಹಾರವನ್ನು ನೀಡಬಲ್ಲೆವು.
- ಈಗಾಗಲೇ ಇರುವ ಕಟ್ಟಡವನ್ನು ಹಾನಿಮಾಡುವ ವಿಚಾರವಿಲ್ಲ:
ಹಲವಾರು ವಾಸ್ತು ತಜ್ಞರು ಒಂದು ಕಟ್ಟಡವನ್ನು ಧ್ವಂಸಗೊಳಿಸುವ ಅಥವಾ ವಾಸ್ತುಶಾಸ್ತ್ರದ ಪ್ರಕಾರ ಮರುನಿರ್ಮಿಸುವ ಸಲಹೆಗಳನ್ನು ನೀಡುತ್ತಾರೆ. ಈ ಪ್ರಕ್ರಿಯೆಗೆ ಸಮಯವು ಅಗತ್ಯವಾಗುವುದಷ್ಟೇ ಅಲ್ಲ, ಇದು ದುಬಾರಿಯಾಗುತ್ತದೆ ಕೂಡ. ನಿವಾಸದಲ್ಲಿ ವಾಸಮಾಡುವ ವ್ಯಕ್ತಿಗಳಿಗೆ ಅನಾನುಕೂಲವನ್ನು ಕೂಡ ಉಂಟುಮಾಡುವುದು. ಸರಳ ವಾಸ್ತುವು ಅನಿವಾರ್ಯವೆನಿಸದೇ ಇದ್ದಲ್ಲಿ ಯಾವುದೇ ನಿರ್ಮಾಣವನ್ನು ಒಡೆದುಹಾಕುವ ಸಲಹೆಮಾಡುವುದಿಲ್ಲ.
- ವಾಸ್ತು ಸಾಮಗ್ರಿ:
ವಾಸ್ತು ಸರಿಪಡಿಸುವ ಉತ್ಪನ್ನಗಳೊಂದಿಗೆ ವ್ಯಕ್ತಿಗೆ ಅತಿಭಾರ ಹೊರಿಸುವ ಬದಲಿಗೆ ಸರಳ ವಾಸ್ತುವು ಗ್ರಾಹಕರಿಗೆ ಆದರ್ಶಪ್ರಾಯವಾಗಿರುವ 10-12 ವಸ್ತುಗಳನ್ನು ನಿಗದಿಗೊಳಿಸಿದೆ. ತೇಜೋವಲಯವನ್ನು ಹೆಚ್ಚಿಸುವುದಕ್ಕಾಗಿ ಈ ಎಲ್ಲ ಸಾಮಗ್ರಿಗಳಿಗೂ ನಮ್ಮ ಗುರೂಜಿಯವರು ಶಕ್ತಿ ತುಂಬಿರುತ್ತಾರೆ.
- ಆಧುನಿಕ ಸಲಕರಣೆ:
ನಮ್ಮ ತಜ್ಞರು ಅತ್ಯಲ್ಪಕಾಲದಲ್ಲಿ ಮತ್ತು ನಿಖರವಾಗಿ ಯಾವುದೇ ನಿವಾಸದ ವಾಸ್ತು ನಿರ್ಮಾಣವನ್ನು ರಚನೆಮಾಡುವ ಆಧುನಿಕ ಸಲಕರಣೆಗಳನ್ನು ಹೊಂದಿದ್ದಾರೆ.
- ಪ್ರವೇಶ ಸುಲಭ:
ನಮ್ಮ ತಜ್ಞರ ಭೇಟಿಗೆ ಬುಕ್ ಮಾಡುವುದಕ್ಕಾಗಿ ನೀವು ನಿಮ್ಮ ವಿವರಗಳನ್ನು ನಮ್ಮ ವೆಬ್ಸೈಟ್ನಲ್ಲಿ ಭರ್ತಿಮಾಡಬಹುದು ಅಥವಾ ನಮಗೆ ಕರೆನೀಡಬಹುದು.ಅಲ್ಪ ಸಮಯದಲ್ಲೇ ನಮ್ಮ ತಜ್ಞರು ನಿಮ್ಮ ಮನೆಯನ್ನು ಅಥವಾ ಕಚೇರಿಯನ್ನು ಭೇಟಿಮಾಡುತ್ತಾರೆ. ನಿಮ್ಮ ಮನೆಯ ವಿಶ್ಲೇಷಣೆಯನ್ನು ಮಾಡುತ್ತಾರೆ ಮತ್ತು ನಿಮ್ಮ ಸ್ಥಿತಿಯ ಕುರಿತು ಭವಿಷ್ಯ ನುಡಿಯುತ್ತಾರೆ.
- ವೆಚ್ಚದಲ್ಲಿ ಉಳಿತಾಯ:
ಸರಳ ವಾಸ್ತುವು ಅಗ್ಗದ ದರದಲ್ಲಿ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಮತ್ತು ಉತ್ಪನ್ನಗಳನ್ನು ಒದಗಿಸುವಲ್ಲಿ ನಂಬಿಕೆಯಿಟ್ಟಿದೆ.








