ಇಂದಿನ ಜಗತ್ತಿನಲ್ಲಿ ಗಗನಕ್ಕೇರುತ್ತಿರುವ ಬೆಲೆಗಳಲ್ಲಿ ಕಾಳಜಿಯಿಂದ ಹಣ ಖರ್ಚುಮಾಡುವುದು ಮತ್ತು ಸಾಧ್ಯವಾದಷ್ಟು ಹಣವನ್ನು ಉಳಿತಾಯ ಮಾಡುವುದು ಕುಟುಂಬದ ಪ್ರತಿ ಸದಸ್ಯರ ಜವಾಬ್ದಾರಿಯಾಗಿದೆ. ಏಕೆಂದರೆ ಕುಟುಂಬಕ್ಕಾಗಿ ಹಣ ಸಂಪಾದಿಸುವವರಿಂದ ಸಾಧ್ಯವಾಗುವುದು ಅಷ್ಟೇ ಆಗಿರುತ್ತದೆ. ನಿಮ್ಮ ವೆಚ್ಚಗಳನ್ನು ತಗ್ಗಿಸುವುದಕ್ಕಾಗಿ ನಿಮಗೆ ಸಹಾಯ ಮಾಡುವಂಥ ಹಲವಾರು ಸಲಹೆಗಳು ಮತ್ತು ಉಪಾಯಗಳನ್ನು ಹಣಕಾಸು ತಜ್ಞರು ನಿಮಗೆ ತಿಳಿಸುತ್ತಾರೆ. ಈ ಹೂಡಿಕೆಗಳನ್ನು ಸೂಕ್ತ ಹಣಕಾಸು ಯೋಜನೆಗಳಲ್ಲಿ ತೊಡಗಿಸುವ ಮೂಲಕ ನೀವು ಭವಿಷ್ಯಕ್ಕಾಗಿ ಉತ್ತಮವಾಗಿ ಸ್ವತ್ತನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಸಹಾಯವಾಗುವುದು.
ವಾಡಿಕೆಯ ಪ್ರಯತ್ನಿಸಲಾಗಿರುವ ಮತ್ತು ಪರೀಕ್ಷಿಸಲಾಗಿರುವ ಉಳಿತಾಯ ಮತ್ತು ಹಣ ಹೆಚ್ಚಳ ವಿಧಾನಗಳ ಬದಲಿಗೆ ನಿಮ್ಮ ಸ್ವತ್ತನ್ನು ಹೆಚ್ಚಿಸಬಲ್ಲ ಇನ್ನೊಂದು ವಿಧಾನವೆಂದರೆ ವಾಸ್ತುಶಾಸ್ತ್ರ. ವಾಸ್ತು ಎಂಬುದು ಪ್ರಾಚೀನ ಭಾರತ ವಿಜ್ಞಾನವಾಗಿದ್ದು ಅದು ಶಕ್ತಿಯ ಹರಿವನ್ನು ಸುಧಾರಿಸುವುದು ಮತ್ತು ಸುತ್ತಮುತ್ತಲಿನ ಪರಿಸರಗಳಲ್ಲಿ ಧನಾತ್ಮಕತೆಯನ್ನು ತರುವುದು. ವಾಸ್ತು ಶಾಸ್ತ್ರವು ಹಲವಾರು ನಿಯಮಗಳನ್ನು ಹೊಂದಿದ್ದು ಕುಟುಂಬದ ಸಂಪತ್ತನ್ನು ಹೆಚ್ಚಿಸುವ ಸಾಮಾನ್ಯ ಉದ್ದೇಶಕ್ಕಾಗಿ ಅವುಗಳನ್ನು ಕುಟುಂಬದ ಸದಸ್ಯರ ನಡುವೆ ಹಂಚಿಕೊಳ್ಳಬಹುದು.
ಧನಾರ್ಜನೆಗಾಗಿ ಕುಟುಂಬವು ಕೊಡುಗೆ ಸಲ್ಲಿಸಬಹುದಾದ 5 ಸರಳವಾದ ವಿಧಾನಗಳನ್ನು ಕೆಳಗೆ ನೀಡಲಾಗಿದೆ:
- ಮನೆಗೆ ಪ್ರಮುಖವಾಗಿ ಹಣವನ್ನು ಸಂಪಾದಿಸುವವರು ಕ್ಯಾಷ್ ಲಾಕರ್ ಅನ್ನು ಬೀಮ್ ಕೆಳಗೆ ಇರಿಸುವಂತಿಲ್ಲ. ಮನೆಯ ಸ್ಥಳವನ್ನು ಅವಲಂಬಿಸಿ ಕ್ಯಾಷ್ ಲಾಕರ್ ಅನ್ನು ನಿರ್ದಿಷ್ಟವಾದ ದಿಕ್ಕಿನಲ್ಲಿ ಇಡಬೇಕು. (ಹೆಚ್ಚಿನ ವಿವರಗಳಿಗಾಗಿ ನಮ್ಮ ತಜ್ಞರನ್ನು ಸಂಪರ್ಕಿಸಿ)
- ಇನ್ನೊಂದು ಟ್ರಿಕ್ ಎಂದರೆ ನಿಮ್ಮ ಲಾಕರ್ ಅನ್ನು ಟಾಯ್ಲೆಟ್ ಮತ್ತು ಬಾತ್ರೂಂ ಗೋಡೆಗೆ ಲಗತ್ತಿಸಬೇಡಿ.
- ಗೃಹಿಣಿಯರು ಮನೆಯನ್ನು ಸದಾಕಾಲವೂ ಸ್ವಚ್ಛವಾಗಿಡಬೇಕು. ಕಿಟಕಿಯಲ್ಲಿ ಯಾವುದೇ ಕೊಳಕು ಇರುವಂತಿಲ್ಲ. ಏಕೆಂದರೆ ಇದು ಶಕ್ತಿಯ ಹರಿವಿನ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಉಂಟುಮಾಡುವುದು.
- ನಿಮ್ಮ ಲಾಕರ್ ಅನ್ನು ಸದಾ ಸ್ವಚ್ಛವಾಗಿಡಿ.
- ಮನೆಯಲ್ಲಿ ಅಕ್ವೇರಿಯಂ ಇರಿಸುವ ಮೂಲಕ ಮತ್ತು ಅದನ್ನು ಸತತವಾಗಿ ಸ್ವಚ್ಛಗೊಳಿಸುವ ಮೂಲಕ ಮಕ್ಕಳು ಮನೆಯಲ್ಲಿ ತಮ್ಮ ಉತ್ಸಾಹವನ್ನು ಪ್ರದರ್ಶಿಸಬಹುದು. ಅವರು ಹಕ್ಕಿಗಳಿಗೆ ಕಾಳುಗಳು ಮತ್ತು ನೀರನ್ನು ಉಣಿಸಬಹುದು.
ಇವು ವಾಸ್ತುವಿನ ಪ್ರಕಾರ ಧನಸಂಪತ್ತನ್ನು ಹೆಚ್ಚಿಸುವ ಸರಳವಾದ ವಿಧಾನಗಳಾಗಿವೆ. ಮನೆಯಲ್ಲಿನ ಸ್ಥಳಗಳು ಅಂತೆಯೇ ಮನೆಯಲ್ಲಿನ ಪೀಠೋಪಕರಣಗಳ ಸ್ಥಳಗಳಿಗೆ ಸಂಬಂಧಿಸಿ ಪ್ರಮುಖ ವ್ಯಕ್ತಿಯ ನೆಚ್ಚಿನ ದಿಕ್ಕನ್ನು ಆಧರಿಸಿದ ಹಲವಾರು ವಿಧಾನಗಳಿರುತ್ತವೆ. ಕುಟುಂಬವು ತನ್ನ ಸಂಪತ್ತನ್ನು ಹೆಚ್ಚಿಸಬಹುದಾದ ಇನ್ನೂ ಹೆಚ್ಚಿನ ವಿಧಾನಗಳನ್ನು ಸರಳ ವಾಸ್ತುವಿನಲ್ಲಿನ ನಮ್ಮ ತಜ್ಞರು ವೈಜ್ಞಾನಿಕವಾಗಿ ವಿವರಿಸಬಲ್ಲರು.









Thanky Thanky for all this good infinmatoor!
Dear Sir/Madam,
Thank you for your comment. We at Saral Vaastu always strive to make a difference in people’s life and you taking your time out to review us is much appreciated.
-Team Saral Vaastu