ಆರೋಗ್ಯಕ್ಕಾಗಿ ವಾಸ್ತುವಿನ ಉದ್ದೇಶ ಸಂಪತ್ತಿನ ಅಧಿದೇವತೆಯಾದ ಕುಬೇರನನ್ನು ಸಂತುಷ್ಟನಾಗಿರಿಸುವುದು. ಕುಬೇರ ಸಂತುಷ್ಟನಾದರೆ, ಆತನ ಭಕ್ತರಿಗೆ ಸಂಪತ್ತು, ಸೌಭಾಗ್ಯ ಮತ್ತು ಸಮೃದ್ಧಿ ಒದಗಿ ಬರುತ್ತದೆ. ಹಾಗೆಂದ ಮಾತ್ರಕ್ಕೆ ಸಂಪತ್ತಿಗಾಗಿ ವಾಸ್ತುವನ್ನು ದೇವತೆಯನ್ನು ಸಂತುಷ್ಟಗೊಳಿಸುವುದಕ್ಕೆ ಮಾತ್ರ ಮಿತಗೊಳಿಸಬೇಕಿಲ್ಲ, ತಮಗೆ ಎಷ್ಟು ಹೆಚ್ಚು ಸಂಪಾದನೆ ಮಾಡಲು ಸಾಧ್ಯವೋ ಅಷ್ಟನ್ನೂ ಮಾಡುವುದು ಎಲ್ಲಾ ಮನುಷ್ಯರ ಗುರಿಯಾಗಿರುವುದರಿಂದ ಇದು ಎಲ್ಲಾ ಧರ್ಮಗಳನ್ನು ಮತ್ತು ಚೌಕಟ್ಟುಗಳನ್ನು ದಾಟಿದೆ; ಈ ಗುರಿಯಿಂದಲೇ ಅವರು ಕಷ್ಟಪಟ್ಟು ದುಡಿಯುವುದು ಮತ್ತು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಮತ್ತು ಹೂಡಿಕೆಯ ಆಯ್ಕೆಗಳನ್ನು ಮಾಡುವುದು. ಅಂತಹ ಜನರು ಸಂಪಾದಿಸಿದ ಹಣ ಕಡಿಮೆಯಾಗದೇ, ದ್ವಿಗುಣಿತಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ವಾಸ್ತು ಅವರಿಗೆ ಬೆಂಬಲ ನೀಡುತ್ತದೆ. ವಾಸ್ತು ಉಪಾಯಗಳು ಕೇವಲ ಮನೆಯಲ್ಲಷ್ಟೇ ಅಲ್ಲ ಆಫೀಸುಗಳಲ್ಲೂ ಸಹ ಪ್ರಯೋಜನಕಾರಿಯಾಗಬಲ್ಲವು.
ಸಂಪತ್ತಿಗಾಗಿ ವಾಸ್ತುವಿನ ಕೆಲ ಉಪಾಯಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ:
- ವಾಸ್ತುವಿನಲ್ಲಿ ದೋಷಪೂರ್ಣ ಕೊಳಾಯಿಗಳು ಅಥವಾ ಸೋರುವ ನಲ್ಲಿಗಳನ್ನು ಕೆಟ್ಟವೆಂದು ಪರಿಗಣಿಸಲಾಗುತ್ತದೆ ಏಕೆ? ವಾಸ್ತುಶಾಸ್ತ್ರದ ಪ್ರಕಾರ ಕೊಳಾಯಿ, ಪೈಪುಗಳು, ನಳಿಕೆಗಳು, ನಲ್ಲಿಗಳು ಮುಂತಾದ ಯಾವುದೇ ಮಾಧ್ಯಮದ ಮೂಲಕ ನೀರಿನ ಸೋರಿಕೆಯಾಗುವುದು ಮನೆಯಲ್ಲಿ ಅಥವಾ ಆಫೀಸಿನಲ್ಲಿ ಹಣ ನಷ್ಟವಾಗುವುದನ್ನು ಸೂಚಿಸುತ್ತದೆ. ಈ ರೀತಿ ಹಣ ನಷ್ಟ ನಮ್ಮ ಅರಿವಿಗೆ ಬರದೇ ಆಗಾಗ ನಡೆಯುವಂಥದ್ದು. ಆದ್ದರಿಂದ, ನಲ್ಲಿ ಅಥವಾ ಸಿಂಕಿನಲ್ಲಿ ಯಾವುದೇ ಸೋರಿಕೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಆರ್ಥಿಕ ನಷ್ಟಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.
- ನಿಮ್ಮ ಮನೆಯ ಇತರ ಬಾಗಿಲುಗಳು ಮುಖ್ಯ ಬಾಗಿಲಿನ ನೇರಕ್ಕೆ ಇರಬಾರದು, ಇದ್ದರೆ ಅದು ನಿಮ್ಮ ಆರೋಗ್ಯ ಮತ್ತು ಸಂಪತ್ತಿನ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ.
- ನಿಮ್ಮ ಮನೆಗೆ ಪೇಂಟಿಂಗ್ಗಳು ಅಥವಾ ಚಿತ್ರಗಳಿಂದ ಅಲಂಕಾರ ಮಾಡುವುದು ಸಕಾರಾತ್ಮಕ ಶಕ್ತಿಯನ್ನು ಉಂಟು ಮಾಡುವ ಅತ್ಯುತ್ತಮ ವಿಧಾನ. ಇದು ನಿಮ್ಮ ಹಣಕಾಸು, ವಿದ್ಯಾಭ್ಯಾಸ, ಸಂಬಂಧಗಳು & ಆರೋಗ್ಯಸಂಬಂಧಿ ತೊಂದರೆಗಳ ಮೇಲೆ ಪ್ರಭಾವ ಬೀರುತ್ತದೆ.









such wonderful information thanks for the same
Thanks
Dear Praveen,
Thank you for your comment. We at Saral Vaastu always strive to make a difference in people’s life and you taking your time out to review us is much appreciated.
For any queries, please contact on 9448286758/9448286755 (8 am to 8 pm). You can download your personal vastu assistant, Saral Vaastu mobile app, from google play store https://goo.gl/pYZ9WG.
-Team Saral Vaastu