ರೊಮಾನ್ಸ್, ಮದುವೆ ಮತ್ತು ಸಂಬಂಧಗಳನ್ನು ನಿಭಾಯಿಸುವ ವಿಷಯದಲ್ಲಿ ಈ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಸ್ವಲ್ಪ ಅದೃಷ್ಟ ಬೇಕೇ ಬೇಕಾಗುತ್ತದೆ – ಆ ಅದೃಷ್ಟ ವಾಸ್ತು ಆಗಿದೆ. ನಮ್ಮಲ್ಲಿ ಪ್ರತಿಯೊಬ್ಬರ ಸುತ್ತಲೂ ಸಣ್ಣ ಪ್ರಮಾಣದಲ್ಲಿ ಇರುವಂತಹ ಶಕ್ತಿಯನ್ನು ಹೆಚ್ಚಿಸುವಂತಹ ಹಾಗು ಅದನ್ನು ನಮ್ಮೊಳಗಿನ ಶಕ್ತಿ ಮತ್ತು ಭಾವತರಂಗಗಳಿಗೆ ಹೊಂದಿಸುವಂತಹ ಪವಿತ್ರವಾದ ವಿಜ್ಞಾನವೇ ವಾಸ್ತು. ಈ ಎರಡೂ ಶಕ್ತಿಗಳು ಹೊಂದಿಕೊಂಡಾಗ ವ್ಯಕ್ತಿಯಲ್ಲಿ ಆಕರ್ಷಕ ವ್ಯಕ್ತಿತ್ವ ಉಂಟಾಗುತ್ತದೆ ಮತ್ತು ಆತ/ಆಕೆ ತನ್ನೊಳಗೆ ಶಾಂತಿ ಮತ್ತು ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಸಂಬಂಧಗಳಿಗಾಗಿ ವಾಸ್ತು ಉಪಾಯಗಳು ಇದೇ ತತ್ವವನ್ನು ಆಧರಿಸಿವೆ ಮತ್ತು ದಂಪತಿಗಳು ತಮ್ಮ ಜೀವನವನ್ನು ದೀರ್ಘಕಾಲದವರೆಗೆ ಪ್ರೀತಿ ಮತ್ತು ಸಾಮರಸ್ಯದಿಂದ ಬಾಳಲು ಸಹಾಯ ಮಾಡುತ್ತವೆ. ಈ ವಾಸ್ತು ಉಪಾಯಗಳನ್ನು ಮುಖ್ಯವಾಗಿ ಬೆಡ್ರೂಮ್ನಲ್ಲಿ ಅಳವಡಿಸಬೇಕಾಗುತ್ತದಾದರೂ, ಮನೆಯ ಸಂಬಂಧಗಳ ಸ್ಥಾನವೆನ್ನಬಹುದಾದ (ತಪ್ಪು ಕಟ್ಟಡ-ನಿರ್ಮಾಣ ಶೈಲಿಯಿಂದ ಕಳೆದುಹೋಗಿರುವಂತಹ) ಕೆಲ ಸ್ಥಳಗಳನ್ನು ವಾಸ್ತು ದೋಷದಿಂದ ಮುಕ್ತಗೊಳಿಸಬೇಕಾಗುತ್ತದೆ. ಸರಳ ವಾಸ್ತುವಿನ ಸಂಬಂಧಗಳಿಗಾಗಿ ವಾಸ್ತುವಿನಲ್ಲಿ ಪ್ರತಿ ದೋಷಕ್ಕೂ ಪರಿಹಾರವಿದೆ.
ಬೆಡ್ರೂಮ್ನಲ್ಲಿ ಹಾಕಬಹುದಾದ ಅತ್ಯುತ್ತಮ ಪೇಂಟಿಂಗ್ಗಳು ಅಥವಾ ಫೋಟೋಗಳು ಯಾವುವು ಎಂಬುದು ನಿಮಗೆ ತಿಳಿದಿದೆಯೇ?
ಉತ್ತಮ ಸಂಬಂಧಗಳಿಗಾಗಿ ಬೆಡ್ರೂಮ್ನಲ್ಲಿ ಜೋಡಿಗಳಿರುವ ಪೋಟೋ ಹಾಕಿ (ಉದಾಹರಣೆಗೆ, ರಾಧಾ-ಕೃಷ್ಣ ಅಥವಾ ಗಂಡ-ಹೆಂಡತಿ, ಪ್ರೇಮ-ಪಕ್ಷಿಗಳು, ಮುಂತಾದ). ಈ ಫೋಟೋಗಳನ್ನು ನಿರ್ದಿಷ್ಟಪಡಿಸಲಾದ ಸಂಬಂಧಗಳ ದಿಕ್ಕಿನಲ್ಲಿ ಹಾಕಬೇಕು. ಈ ಚಿತ್ರಗಳು ದಂಪತಿಯಲ್ಲಿ ಶಾಂತಿ, ಪ್ರೀತಿ ಮತ್ತು ಪ್ರಣಯದ ಭಾವನೆಗಳನ್ನು ಉದ್ದೀಪಿಸುತ್ತವೆ.
ನಿಮ್ಮ ಮನೆಯ ಸಂಬಂಧಗಳ ಸ್ಥಾನ ಎಲ್ಲಿದೆ ಮತ್ತು ಅದರ ನಿರ್ಮಾಣ ಸರಿಯಾಗಿದೆಯೇ?
ಸಂಬಂಧಗಳ ಸ್ಥಾನವನ್ನು ಕಟ್ಟಡ ನಿರ್ಮಾಣಕ್ಕೂ ಮೊದಲೇ ಗುರುತಿಸಬೇಕಾಗುತ್ತದೆ ಮತ್ತು ಇದು ಮಾಲೀಕರ ಅಥವಾ ಮನೆಗಾಗಿ ಮುಖ್ಯ ಸಂಪಾದನೆ ಮಾಡುವವರ ಜನ್ಮ ದಿನಾಂಕವನ್ನು ಆಧರಿಸುತ್ತದೆ. ಮನೆಯ ಸಂಬಂಧಗಳ ಸ್ಥಾನದಲ್ಲಿ ಬಟ್ಟೆ ಒಗೆಯುವುದು ಮತ್ತು ಪಾತ್ರೆ ತೊಳೆಯುವಂತಹ ಕೆಲಸಗಳನ್ನು ಮಾಡಿದರೆ ಅದು ಸಂಬಂಧಗಳ ಸ್ಥಾನದ ಮೇಲೆ ಪ್ರಭಾವ ಬೀರುತ್ತದೆ. ಸಂಬಂಧಗಳ ಸ್ಥಾನವನ್ನು ಪತ್ತೆ ಮಾಡಿ ಮತ್ತು ಆರೋಗ್ಯಪೂರ್ಣ ಸಂಬಂಧಗಳನ್ನು ಆನಂದಿಸಲು ವಾಸ್ತು ತಿದ್ದುಪಡಿಗಳನ್ನು ಮಾಡಿ.
ನಿಮ್ಮ ಮನೆಯ ಗೋಡೆಯ ಪೇಟಿಂಗ್ ಹೇಗಿರಬೇಕು?
ಮನೆಯಲ್ಲಿ ತಿಳಿ ಬಣ್ಣದ ಪೇಟಿಂಗ್ ಬಳಸುವುದು, ನೀವು ಶಾಂತಿಯಿಂದಿರುವಲ್ಲಿ ನೆರವಾಗುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಸಂಬಂಧ ಉತ್ತಮಪಡಿಸಿಕೊಳ್ಳಲು ನೆರವಾಗುತ್ತದೆ. ದಟ್ಟವಾದ ಮತ್ತು ರಾಚುವಂತಹ ಬಣ್ಣಗಳನ್ನು ತಪ್ಪಿಸಿ.








