ಆಫೀಸ್ಗಳ ಕಟ್ಟಡ ನಿರ್ಮಾಣದ ವಿಷಯದಲ್ಲಿ, ಬಹಳಷ್ಟು ಜನರು ವಾಸ್ತು ಶಾಸ್ತ್ರದ ತತ್ವಗಳನ್ನು ಅನುಸರಿಸುತ್ತಾರೆ. ಆಫೀಸ್ಗಾಗಿ ವಾಸ್ತು ಎಂಬುದು ಕಟ್ಟಡದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಂತಹ ಹಾಗು ಉದ್ಯೋಗ ನೀಡುವವರ ಮತ್ತು ಉದ್ಯೋಗಿಗಳ ಸುಖಸಮೃದ್ಧಿಯನ್ನು ಹೆಚ್ಚಿಸುವುದನ್ನು ಸಾಧ್ಯವಾಗಿಸುವಂತಹ ಆಫೀಸ್ ಕಟ್ಟಡದ ನಿರ್ಮಾಣ ಮತ್ತು ಇಂಟೀರಿಯರ್ ವಿನ್ಯಾಸದ (ಹೊರಭಾಗದ ಪ್ರದೇಶ ಸಹ) ವಿಜ್ಞಾನ. ವಾಸ್ತುಶಾಸ್ತ್ರ ಎಂಬುದು ಕಟ್ಟಡವನ್ನು ನಿರ್ಮಿಸಲಾಗುವ ಭೂಮಿಯಿಂದ ಆರಂಭಿಸಿ ಪ್ರತ್ಯೇಕ ಕೋಣೆಗಳು, ಬಾಗಿಲುಗಳು ಮತ್ತು ಕಿಟಕಿಗಳ ನಿರ್ಮಾಣದವರೆಗೆ, ಆಸ್ತಿಯ ಶಕ್ತಿಯನ್ನು ಒಗ್ಗೂಡಿಸಿ ವ್ಯವಸ್ಥಿತಗೊಳಿಸುವ ಒಂದು ಪುರಾತನ ಭಾರತೀಯ ತಂತ್ರಜ್ಞಾನ. ಕಂಪನಿಯು ಹೆಚ್ಚು ಬಿಸಿನೆಸ್ ಪಡೆಯಲು, ಆರ್ಥಿಕವಾಗಿ ಹಾಗು ಒಂದು ಬ್ರ್ಯಾಂಡ್ ಆಗಿ ಬೆಳೆಯಲು ವಾಸ್ತು ಪರಿಹಾರಗಳು ಕಂಪನಿಗೆ ನೆರವಾಗುತ್ತವೆ. ನೀವು ಆಫೀಸ್ಗಾಗಿ ನಿವೇಶನವನ್ನು ಕೊಳ್ಳಲಿದ್ದರೆ ಅಥವಾ ನಿವೇಶನದಲ್ಲಿ ಆಫೀಸ್ ಕಟ್ಟಡ ನಿರ್ಮಾಣ ಮಾಡಹೊರಟಿದ್ದರೆ ಅಥವಾ ಈಗಾಗಲೇ ಇರುವಂತಹ ಆಫೀಸ್ ಅನ್ನು ಹೆಚ್ಚು ಆಕರ್ಷಕ ಹಾಗು ಶಕ್ತಿಸಂಪನ್ನವಾಗಿ ಮಾಡಬೇಕೆಂದಿದ್ದರೂ ಸಹ ಆಫೀಸ್ಗಾಗಿ ವಾಸ್ತು ಉಪಾಯಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ: –
- 7 ಚಕ್ರಗಳನ್ನು ಕ್ರಿಯಾಶೀಲಗೊಳಿಸಲು ಮತ್ತು ಕೆಲಸದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಆಫೀಸ್ನಲ್ಲಿರುವಾಗ ನಿಮ್ಮ ಅತ್ಯಂತ ಅನುಕೂಲಕರ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಿ. ವಾಸ್ತುಶಕ್ತಿಯುಳ್ಳ ಆಫೀಸ್ ನಲ್ಲಿ ಅನುಕೂಲಕರ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳುವುದರಿಂದ ದೇಹದ ಚಕ್ರಗಳು ಕ್ರಿಯಾಶೀಲಗೊಳ್ಳುತ್ತವೆ ಮತ್ತು ಇದು ನೀವು ನಿಮ್ಮ ಕರ್ತವ್ಯವನ್ನು ಸಂಪೂರ್ಣ ಶಕ್ತಿಯ ಮಟ್ಟದಲ್ಲಿ ಮಾಡುವಲ್ಲಿ ನೆರವಾಗುತ್ತದೆ ಹಾಗು ಸೃಜನಾತ್ಮಕ ಆಲೋಚನೆಗಳ ಮೂಲಕ ಬಿಸಿನೆಸ್ ಅನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲೂ ನೆರವಾಗುತ್ತದೆ.
- ನೀವು ನಿಮ್ಮ ಆಫೀಸ್ ಅಥವಾ ಕೆಲಸದ ಸ್ಥಳದಲ್ಲಿ ಮೊದಲ ಅನುಕೂಲಕರ ದಿಕ್ಕಿನಲ್ಲಿ ಕುಳಿತುಕೊಳ್ಳುವುದು ಬಿಸಿನೆಸ್ ಪ್ರಗತಿ ಹೊಂದುವುದರಲ್ಲಿ ನೆರವಾಗುತ್ತದೆ. ಅನುಕೂಲಕರ ದಿಕ್ಕುಗಳು ವ್ಯಕ್ತಿಯ ಜನ್ಮ ದಿನಾಂಕವನ್ನು ಆಧರಿಸಿರುತ್ತದೆ.








