“ಆರೋಗ್ಯವೇ ಭಾಗ್ಯ” ಎಂಬುದು ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಹಳೇ ಗಾದೆಮಾತು. ಈ ಗುರಿಯತ್ತ ಹೆಜ್ಜೆ ಇರಿಸುತ್ತಾ ಜನರು ತಮ್ಮ ದೇಹ, ತಾವು ಸೇವಿಸುವಂತಹ ಆಹಾರ, ತಾವು ಉಸಿರಾಡುವ ಗಾಳಿ, ತಾವು ತೆಗೆದುಕೊಳ್ಳುವ ಮೆಡಿಕಲ್ ಇನ್ಶ್ಯೂರೆನ್ಸ್, ಮುಂತಾದವುಗಳ ಬಗ್ಗೆ ಗಮನವಹಿಸುತ್ತಾರೆ. ಆದರೆ ಆರೋಗ್ಯಕ್ಕಾಗಿ ವಾಸ್ತು ಪರಿಹಾರಗಳನ್ನು ಅವರು ಮರೆತುಬಿಡುತ್ತಾರೆ. ಆರೋಗ್ಯಪೂರ್ಣ ಜೀವನಕ್ಕಾಗಿ ತೆಗೆದುಕೊಳ್ಳಲಾದ ಯಾವುದೇ ಕ್ರಮಗಳ ಹೊರತಾಗಿ ವಾಸ್ತುವನ್ನು ಗಮನಿಸದಿದ್ದರೆ ಕುಟುಂಬದಲ್ಲಿ ಆರೋಗ್ಯದ ಸಮಸ್ಯೆಗಳು ಕಂಡುಬರಬಹುದು. ಒಂದು ವಾಸಸ್ಥಳದ ಸಕಾರಾತ್ಮಕ ಶಕ್ತಿಯತ್ತ ಗಮನ ಕೇಂದ್ರೀಕರಿಸುವ ಬ್ರಹ್ಮಾಂಡ-ವಿಜ್ಞಾನದ ಅಂಶವನ್ನು ಆರೋಗ್ಯಕ್ಕಾಗಿ ವಾಸ್ತು ಒಳಗೊಳ್ಳುತ್ತದೆ. ಇಂತಹ ಸಕಾರಾತ್ಮಕ ಶಕ್ತಿಯು ಕೇವಲ ಒಂದು ವ್ಯಕ್ತಿಯ ಮತ್ತು ಆಕೆಯ/ಆತನ ಕುಟುಂಬದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದಷ್ಟೇ ಅಲ್ಲದೆ ಒಟ್ಟಾರೆ ಯೋಗಕ್ಷೇಮವನ್ನೂ ಸಹ ಉತ್ತಮಪಡಿಸುತ್ತದೆ.
ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದರ ಜೊತೆ, ದೇಹದೊಳಗಿನ 7 ಚಕ್ರಗಳನ್ನು ಕ್ರಿಯಾಶೀಲಗೊಳಿಸುವುದು ಮತ್ತು ಸಮತೋಲನಗೊಳಿಸುವುದು ಆರೋಗ್ಯಕ್ಕಾಗಿ ವಾಸ್ತುವಿನ ಮಹತ್ತರವಾದ ಸಹಾಯ. ಚಕ್ರಗಳು ಎಂಬುದು ಒಟ್ಟು ಯೋಗಕ್ಷೇಮಕ್ಕೆ ಅಗತ್ಯವಾಗುವಂತಹ ಸನಾತನ ವಿಜ್ಞಾನ. ದೇಹದಲ್ಲಿರುವ ಏಳು ಚಕ್ರಗಳು ತೆರೆದುಕೊಂಡು, ಸಮತೋಲನೆಯಲ್ಲಿದ್ದರೆ ವ್ಯಕ್ತಿ ತನ್ನ ಆರೋಗ್ಯದ ಅತ್ಯುತ್ತಮ ಮಟ್ಟದಲ್ಲಿರಲು ಸಾಧ್ಯ. ಉತ್ತಮ ವಾಸ್ತುವಿನಿಂದ ಹೊಮ್ಮುವ ಸಕಾರಾತ್ಮಕ ಶಕ್ತಿಯು ಒಬ್ಬ ವ್ಯಕ್ತಿಯ ಏಳು ಚಕ್ರಗಳನ್ನು ಸಮತೋಲನೆಯಲ್ಲಿರಿಸಲು ಹೆಚ್ಚಿನ ಮಟ್ಟಿಗೆ ಕಾರಣವಾಗುತ್ತದೆ ಮತ್ತು ಆಂತರಿಕ ಶಾಂತಿ ಕಂಡುಕೊಳ್ಳಲು ಮತ್ತು ನೆಮ್ಮದಿಯ ಆರೋಗ್ಯಪೂರ್ಣ ಬದುಕನ್ನು ಕಳೆಯಲು ನೆರವಾಗುತ್ತದೆ.
ಅಳವಡಿಸಿಕೊಳ್ಳಬಹುದಾದ ಕೆಲ ವಾಸ್ತು ಉಪಾಯಗಳು ಈ ಕೆಳಗಿನಂತಿವೆ: –
ನೀವು ಬೀಮ್ ಕೆಳಗೆ ಕುಳಿತು ಕೆಲಸ ಮಾಡುತ್ತೀರಾ?
ಬೀಮ್ ಕೆಳಗೆ ಅಥವಾ ಕಂಬದ ಹತ್ತಿರ ಕುಳಿತು ಕೆಲಸ ಮಾಡುವುದದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ, ಹಾಗೆ ಮಾಡುವುದನ್ನು ತಪ್ಪಿಸಿ. ವಾಸಸ್ಥಳದ ಎಲ್ಲಾ ಋಣಾತ್ಮಕ ಶಕ್ತಿಗಳೂ ಬೀಮ್ನಲ್ಲಿರುತ್ತವೆ ಹಾಗು ಅವು ನಿಮಗೆ ವರ್ಗಾವಣೆಗೊಳ್ಳುತ್ತವೆ. ಹೀಗಾಗಿ ಅಂತಹ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ಶಾಶ್ವತವಾಗಿ ತಪ್ಪಿಸಿ.
ನೀವು ಯಾವ ದಿಕ್ಕಿಗೆ ತಲೆ ಇರಿಸಿ ನಿದ್ರಿಸುತ್ತೀರಿ?
ನಿಮ್ಮ ಅನುಕೂಲಕರ ದಿಕ್ಕಿನಲ್ಲಿ ನಿದ್ರಿಸುವುದರಿಂದ ನಿಮ್ಮ ಏಳೂ (7) ಚಕ್ರಗಳು ಶಕ್ತಿಯುತಗೊಳ್ಳುತ್ತವೆ. ಕ್ರಿಯಾಶೀಲ ಚಕ್ರಗಳು ಯಾವುದೇ ಪ್ರಾಪಂಚಿಕ ಸಮಸ್ಯೆಗಳನ್ನು ನಿಭಾಯಿಸುವಂತಹ ಶಕ್ತಿಯನ್ನು ನೀಡುತ್ತವೆ.
ನಿಮ್ಮ ಬಾತ್ರೂಮ್ ಹಾಗು ಟಾಯ್ಲೆಟ್ಗಳ ಬಗ್ಗೆ ಗಮನವಹಿಸಿ;
ಮನೆ ಅಥವಾ ಆಫೀಸ್ನಲ್ಲಿ ಬಾಗಿಲು ತೆಗೆದಿರಿಸಲಾದ ಟಾಯ್ಲೆಟ್ಗಳು ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಬಾತ್ರೂಮ್ ಮತ್ತು ಟಾಯ್ಲೆಟ್ನಿಂದ ಬಹಳಷ್ಟು ಋಣಾತ್ಮಕ ಶಕ್ತಿ ಹೊಮ್ಮುತ್ತದೆ, ಹೀಗಾಗಿ ಅವುಗಳ ಬಾಗಿಲನ್ನು ಮುಚ್ಚಿರುವುದು ಒಳಿತು.
ನಿಮ್ಮ ಮನೆಯಲ್ಲಿ ಬಳಸದೇ ಇರುವಂತಹ ಔಷಧಗಳು ಸುಮ್ಮನೆ ಹಾಗೇ ಇವೆಯೇ?
ಇದ್ದರೆ ತಕ್ಷಣವೇ ಅವುಗಳನ್ನು ತೆಗೆದುಹಾಕಿ. ಸರಳ ವಾಸ್ತು ಪ್ರಕಾರ ಬಳಸದೇ ಇರುವ ಔಷಧಗಳು ಹಿಂದಿನ ಕಾಯಿಲೆಯ ಋಣಾತ್ಮಕ ಮಾನಸಿಕ ಅನುಭವವನ್ನು ಪ್ರತಿನಿಧಿಸುವುದರಿಂದ, ಆವುಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ .









about my health
Dear Savitri,
We appreciate your interest to acquaint yourself with Saral Vaastu concept.Please share your contact details with us so that our concern team can get back to you and help you with the same.You can Email us your details on our email ID support@saralvaastu.com.
For any queries, please contact on 9448286758/9448286755 (8 am to 8 pm). You can download your personal vastu assistant, Saral Vaastu mobile app, from google play store https://goo.gl/pYZ9WG.