ಬಿಸಿನೆಸ್ನಲ್ಲಿ ಯಶಸ್ಸನ್ನು ಕಾಣಬೇಕೆಂಬುದು ಕೇವಲ ಮಾಲೀಕರು, ಮ್ಯಾನೇಜ್ಮೆಂಟ್ ಮತ್ತು ಹೂಡಿಕೆದಾರರ ಗುರಿಯಷ್ಟೇ ಆಗಿರದೆ, ಅದು ಅದರಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮತ್ತು ಅದರೊಂದಿಗೆ ಸಂಬಂಧ ಹೊಂದಿದ ಇತರ ವ್ಯಕ್ತಿಗಳ ಗುರಿಯೂ ಆಗಿರುತ್ತದೆ. ಬಿಸಿನೆಸ್ನ ಯಶಸ್ಸು ಅವರಿಗೆ ವೃತ್ತಿಪರ ಪ್ರಗತಿಯ ಗ್ಯಾರಂಟಿಯನ್ನು ನೀಡುತ್ತದೆ. ವಿಪರೀತ ಸ್ಫರ್ದೆಯುಳ್ಳ ಇಂದಿನ ಯುಗದಲ್ಲಿ, ಪ್ರತಿಯೊಂದು ಕಂಪನಿಯೂ ಉಳಿದವರಿಗಿಂತ ವಿಭಿನ್ನವಾದ ಏನನ್ನಾದರೂ ಮಾಡಲು ಯತ್ನಿಸುತ್ತದೆ. ಎಲ್ಲಕ್ಕಿಂತ ಮುಖ್ಯವಲ್ಲದಿದ್ದರೂ, ಬಿಸಿನೆಸ್ಗಾಗಿ ವಾಸ್ತು ಉಪಾಯಗಳು ಅಂತಹ ಒಂದು ಅಂಶವಾಗಿದ್ದು, ಇದು ನಿಮ್ಮ ಸ್ಫರ್ದಿಗಳಿಗಿಂತ ನಿಮ್ಮ ಬಿಸಿನೆಸ್ ಅನ್ನು ವಿಭಿನ್ನವಾಗಿಸುತ್ತದೆ. ಬಿಸಿನೆಸ್ಗಾಗಿ ವಾಸ್ತು ಉಪಾಯಗಳನ್ನು ಅನುಸರಿಸುವುದರಿಂದ ನೀವು ನಿಮ್ಮ ಕ್ಲಯಂಟ್ಗಳು ಮತ್ತು ಗ್ರಾಹಕರಿಂದ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತೀರಿ, ಉತ್ಪನ್ನಗಳ ಮಾರಾಟ ಉತ್ತಮಗೊಳ್ಳುತ್ತದೆ, ಆಫೀಸ್ ಹೆಚ್ಚು ವ್ಯವಸ್ಥಿತವಾಗುತ್ತದೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಅತ್ಯುತ್ತಮ ಸಾಮರ್ಥ್ಯದ ಮಟ್ಟದಲ್ಲಿ ಪೂರ್ಣ ಬದ್ಧತೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ನೀವು ಸಾಕ್ಷಿಯಾಗುತ್ತೀರಿ. ಈಗಾಗಲೇ ಇರುವಂತಹ ಆಫೀಸ್ಗೆ ಕೆಲ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವುದರಿಂದ ಬಿಸಿನೆಸ್ನಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಸಾಧ್ಯವಿದೆ. ಈ ಬದಲಾವಣೆಗಳು, ಉದ್ಯೋಗಿಗಳು ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ, ಮುಂತಾದವು ಆಗಿರಬಹುದು.
ತಿಳಿದಿರುವಂತಹವುಗಳ ಪೈಕಿ, ಕೆಲ ಅಪರೂಪದ ವಾಸ್ತು ಉಪಾಯಗಳು ಈ ಕೆಳಗಿನಂತಿವೆ: –
- ನೀವು ನಿಮ್ಮ ಬಿಸಿನೆಸ್ನಲ್ಲಿ ನಷ್ಟ ಎದುರಿಸುತ್ತಿದ್ದೀರಾ ಹಾಗು ಅದಕ್ಕೆ ಕಾರಣ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲವೇ? ವಾಸ್ತು ಪ್ರಕಾರ ನಿಮಗೆ ನಿಮ್ಮ ಬಿಸಿನೆಸ್ನಲ್ಲಿ ಸತತ ನಷ್ಟವಾಗುತ್ತಿದ್ದರೆ, ನಿಮ್ಮ ಮನೆಯ ಉದ್ಯೋಗಸ್ಥಾನದ 66% ಕೆಟ್ಟ ಪ್ರಭಾವ ಹೊಂದಿದೆ ಎಂದರ್ಥ. ಉದ್ಯೋಗ ಸ್ಥಾನವೆಂದರೆ, ವೃತ್ತಿಪರ ಯಶಸ್ಸನ್ನು ಆಳುವಂತಹ ನಿಮ್ಮ ಮನೆಯಲ್ಲಿನ ಒಂದು ಸ್ಥಳ. ಈ ದೋಷವನ್ನು ಹೋಗಲಾಡಿಸಲು ಕೇವಲ ಒಬ್ಬ ಪರಿಣಿತ ವಾಸ್ತು ತಜ್ಞರು ಮಾತ್ರ ಸಹಾಯ ಮಾಡಬಲ್ಲರು.
- ಬಿಸಿನೆಸ್ ಮಾಡುವಾಗ ಯಾವುದೇ ನಿರ್ದಿಷ್ಟ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಬೇಕು? ಯಾವುದೇ ವ್ಯಕ್ತಿ ಬಿಸಿನೆಸ್ ಮಾಡುವಾಗ ತನ್ನ ಮೊದಲ ಒಳ್ಳೆಯ ದಿಕ್ಕಿಗೆ ಎದುರಾಗಿ ಕುಳಿತರೆ, ಉತ್ತಮ ಫಲಿತಾಂಶವನ್ನು ಪಡೆಯುತ್ತಾನೆ.
- ಅಷ್ಟೇ ಅಲ್ಲದೆ, ಆಫೀಸ್ ಅಥವಾ ಕೆಲಸದ ಸ್ಥಳದಲ್ಲಿ ನಿಮ್ಮ 1ನೇ ಉತ್ತಮ ದಿಕ್ಕಿನಲ್ಲಿ ಕುಳಿತುಕೊಳ್ಳುವುದು, ನಿಮ್ಮ ಬಿಸಿನೆಸ್ ಬೆಳವಣಿಗೆ ಹೊಂದುವುದರಲ್ಲಿ ನೆರವಾಗುತ್ತದೆ.








