ಒತ್ತಡರಹಿತ ಜೀವನಕ್ಕಾಗಿ ಮನೆಯ ವಾಸ್ತು ಮುಖ್ಯವಾಗುತ್ತದೆ. ಒಂದು ಸಂಬಂಧದಲ್ಲಿ ಸಾಮರಸ್ಯ ಮತ್ತು ಶಾಂತಿ ಇರಬೇಕೆಂದರೆ ಮಲಗುವ ಕೋಣೆಗಾಗಿ ವಾಸ್ತು ಉಪಾಯಗಳನ್ನು ಖಂಡಿತ ಅನುಸರಿಸಲೇಬೇಕು. ಸಂಬಂಧಗಳನ್ನು ಕಟ್ಟಲು ಮತ್ತು ಕಾಯ್ದುಕೊಳ್ಳಲು ಬೆಡ್ರೂಮ್ನ ವಾಸ್ತು ಮುಖ್ಯವಾಗುತ್ತದೆ, ಹೀಗಾಗಿ ವಾಸ್ತು ತಜ್ಞರು ಮನೆ ಬೆಡ್ರೂಮನ್ನು ಕೂಲಂಕುಷವಾಗಿ ಗಮನಿಸುತ್ತಾರೆ. ಹಿಂದಿನ ಕಾಲದಲ್ಲಿ ಪ್ರತಿ ಮನೆಯಲ್ಲೂ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಇರಿಸಲು ಸಾಕಷ್ಟು ಸ್ಥಳಾವಕಾಶವಿರುತ್ತಿತ್ತು, ಆದರೆ ಈಗ ಮನೆಗಳಲ್ಲಿ ಸ್ಥಳಾವಕಾಶ ಕಡಿಮೆ ಇದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿರುತ್ತವೆ. ಸಿಟಿಗಳಲ್ಲಿ ಮತ್ತು ಪಟ್ಟಣಗಳಲ್ಲಿರುವ ಮನೆಗಳಲ್ಲಂತೂ ಇದು ವಿಶೇಷವಾಗಿ ಕಂಡುಬರುತ್ತದೆ. ವಸ್ತುಗಳು ಚೆಲ್ಲಾಪಿಲ್ಲಿಯಾಗಿರದ ಬೆಡ್ರೂಮ್ನಲ್ಲಿ ಶಕ್ತಿಯ ಹರಿವು ಸುಗಮವಾಗಿರುತ್ತದೆ. ಬೆಡ್ರೂಮ್ ವಾಸ್ತು ಸರಿಯಾಗಿದ್ದರೆ, ಅದು ದಂಪತಿಗಳ ಸಂಬಂಧವು ಸಮರಸತೆಯಿಂದ ಕೂಡಿರುವುದಕ್ಕೆ ನೆರವಾಗುತ್ತದೆ. ಬೆಡ್ರೂಮ್ಗಾಗಿ ವಾಸ್ತು ಮುಖ್ಯವಾಗುವುದಕ್ಕೆ ಇನ್ನೊಂದು ಕಾರಣವೇನೆಂದರೆ ಇಡೀ ದಿನದ ಸತತ ಕೆಲಸ ಕಾರ್ಯಗಳ ಬಳಿಕ ಜನರು ಈ ಸ್ಥಳಕ್ಕೆ ನಿದ್ರಿಸಲು ಬರುತ್ತಾರೆ ವಾಸ್ತು ಸರಿಯಾಗಿದ್ದರೆ ಜನರು ತಮ್ಮ ತೊಂದರೆಗಳನ್ನು ಎದುರಿಸಲು ನವಚೈತನ್ಯದಿಂದ ಕೂಡಿದವರಾಗಿ ಬೆಳಗ್ಗೆ ಎಚ್ಚರಗೊಳ್ಳುತ್ತಾರೆ.
ನಿಮ್ಮ ಮಲಗುವ ಕೋಣೆಗಾಗಿ ಎರಡು ಸಾಮಾನ್ಯ ವಾಸ್ತು ಉಪಾಯಗಳು ಈ ಕೆಳಗಿನಂತಿವೆ: –
- ಬೆಡ್ರೂಮ್ನಲ್ಲಿ ಮೀನಿನ ಅಕ್ವೇರಿಯಂ ಇರಿಸಬಹುದೇ? ವಾಸ್ತು ಶಾಸ್ತ್ರದ ಪ್ರಕಾರ . ಬೆಡ್ರೂಮ್ನಲ್ಲಿ ಅಕ್ವೇರಿಯಂ ಇರಿಸುವುದನ್ನು ತಪ್ಪಿಸುವುದು ಒಳ್ಳೆಯದು. ಅಕ್ವೇರಿಯಂನಲ್ಲಿಈಜುತ್ತಿರುವ ಮೀನುಗಳನ್ನು ನೋಡುವುದರಿಂದ ಒತ್ತಡದಿಂದ ರಿಲೀಫ್ ದೊರೆತರೂ ಕೂಡ, ಅದನ್ನು ಬೆಡ್ರೂಮ್ನಲ್ಲಿ ಇರಿಸುವುದು, ದಂಪತಿಯ ನಡುವೆ ವಿರಸಕ್ಕೆ ಮೂಲವಾಗುತ್ತದೆ.
- ಬೆಡ್ರೂಮ್ನಲ್ಲಿ ಎಂತಹ ಪೇಂಟಿಂಗ್ಗಳನ್ನು ಇರಿಸಬಾರದು? ಬೆಡ್ರೂಮ್ನಲ್ಲಿ ನೀರಿನ ಪೋಸ್ಟರ್ಗಳನ್ನು ಇರಿಸಬೇಡಿ. ಇರಿಸಬೇಕಾದಂತಹ ಪೋಸ್ಟರ್ಗಳ ಬಗ್ಗೆ ನಮ್ಮ ತಜ್ಞರಿಂದ ತಿಳಿಯಿರಿ.
- ಹಾಸಿಗೆಯ ಆಕಾರ ಸಾಮಾನ್ಯವಾಗಿರಬೇಕು ಮತ್ತು ಯಾವುದೇ ವಿಭಿನ್ನ ಆಕಾರವನ್ನು ತಪ್ಪಿಸಿ. ಬೇರೆ ಬೇರೆ ಆಕಾರದ ಹಾಸಿಗೆಗಳು ವ್ಯಕ್ತಿಯ ನಿದ್ರೆಯ ಶೈಲಿಯ ಮೇಲೆ ಪ್ರಭಾವ ಬೀರುವುದಷ್ಟೇ ಅಲ್ಲದೆ, ಸುತ್ತಲೂ ಪೀಠೋಪಕರಣಗಳನ್ನು ಇರಿಸುವುದಕ್ಕೂ ತೊಂದರೆ ಉಂಟು ಮಾಡುತ್ತದೆ.








