plan4

ವಾಸ್ತು ಶಾಸ್ತ್ರ ಎಂಬುದು ಪ್ರಕೃತಿಯ ಪಂಚ ಮಹಾಭೂತಗಳು ಮತ್ತು ಬ್ರಹ್ಮಾಂಡ ಶಕ್ತಿಯನ್ನು ಒಟ್ಟುಗೂಡಿಸಿಕೊಂಡ ದಿಕ್ಕುಗಳ ವಿಜ್ಞಾನ. ವ್ಯಕ್ತಿಯ ಜನ್ಮ ದಿನಾಂಕ ಮತ್ತು ಲಿಂಗವನ್ನು ಬಳಸುವ ವಿಶಿಷ್ಟವಾದ ಕ್ರಮಾವಳಿಯನ್ನು ಆಧರಿಸಿದ, ಜನರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುವ ಸರಳವಾಸ್ತು, ಒಂದು ರುಜುವಾತಾದ ವೈಜ್ಞಾನಿಕ ಪರಿಹಾರ.

ನಿಮ್ಮ ಮನೆಯ ಪ್ಲಾನ್‌ನಲ್ಲಿ ನೀವು ವಾಸ್ತುವನ್ನು ಏಕೆ ಪರಿಗಣಿಸಬೇಕು?

ನೀವು ನಿಮ್ಮ ಮನೆಯನ್ನು ದಿನದಿನವೂ ಅಥವಾ ಪ್ರತಿ ತಿಂಗಳೂ ನಿರ್ಮಾಣ ಮಾಡುವುದಿಲ್ಲ. ಇದು ಒಂದು ಬಾರಿ ಮಾಡುವಂತಹ ಪ್ರಕ್ರಿಯೆ, ಕೆಲವರಿಗೆ ಇದು ಜೀವನದಲ್ಲಿ ಒಮ್ಮೆ ಮಾತ್ರ ಮಾಡಲಾಗುವ ಸಾಧನೆ. ಮನೆಯು ನಮ್ಮ ಕುಟುಂಬವು ಸಂತೋಷದಿಂದ ಬಾಳುವಂತಹ ಸ್ಥಳವಾಗಲಿದೆ ಎಂಬ ನಿರೀಕ್ಷೆಯೊಂದಿಗೆ ಆರಾಮದಾಯಕವಾದ ಮತ್ತು ಸುಂದರವಾದ ಮನೆಯನ್ನು ಸೃಷ್ಟಿಸಲು ನಾವು ಬಹಳ ಸಮಯವನ್ನು ತೆಗೆದುಕೊಳ್ಳುತ್ತೇವೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಸಂತೋಷ ಎಂಬುದು ಅಂತರಂಗ ಹಾಗು ಬಹಿರಂಗದ ತತ್ವಗಳು ಒಟ್ಟಿಗೆ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಆಧರಿಸಿರುತ್ತದೆ. ಸೂರ್ಯನ ಬೆಳಕು, ಪರಿಶುದ್ಧವಾದ ಗಾಳಿಯಂತಹ ಬಹಿರಂಗದ ತತ್ವಗಳು ನಿಮ್ಮ ದೇಹದಲ್ಲಿನ 7 ಚಕ್ರಗಳಿಗೆ ಸಾಮರ್ಥ್ಯ ನೀಡಬಲ್ಲ ಸಕಾರಾತ್ಮಕ ಶಕ್ತಿಯನ್ನು ಒಯ್ಯುತ್ತವೆ. .

ನಿಮ್ಮ ಮನೆಯನ್ನು ಯಾವ ರೀತಿಯಲ್ಲಿ ನಿರ್ಮಿಸಬೇಕೆಂದರೆ, ಅದು ಮನೆಯಲ್ಲಿ ಸತತವಾಗಿ ಸಕಾರಾತ್ಮಕ ಶಕ್ತಿಯನ್ನು ಉಂಟು ಮಾಡಿ ನಕಾರಾತ್ಮಕ ಶಕ್ತಿಯನ್ನುಂಟು ಮಾಡುವ ತತ್ವಗಳನ್ನು ಮುಚ್ಚುವಂತಿರಬೇಕು. ಸಕಾರಾತ್ಮಕ ಶಕ್ತಿಯ ಹರಿವನ್ನು ಹೇಗೆ ಸಾಧಿಸುವುದು ಎಂಬ ಬಗ್ಗೆ ನಮ್ಮ ಪುರಾತನ ವಾಸ್ತು ಶಾಸ್ತ್ರವು ಹಲವು ಸಿದ್ಧಾಂತಗಳನ್ನು ಹೊಂದಿದೆ.

ಸರಳ ಮನೆ ಪ್ಲಾನ್‌ಗಳು ನಿವೇಶನದ ಅಳತೆ, ಮತ್ತು ದಿಕ್ಕುಗಳು, ಜನ್ಮ ದಿನಾಂಕ ಮತ್ತು ಲಿಂಗದಂತಹ ವ್ಯಕ್ತಿಗತ ವಿವರಗಳನ್ನು ಒಳಗೊಂಡು, ವಾಸ್ತು ಶಾಸ್ತ್ರದ ಸುಧಾರಿತ ಆವೃತ್ತಿಗಳನ್ನು ನಿಗದಿಪಡಿಸುತ್ತವೆ.

ಸರಳ ಮನೆ ಪ್ಲಾನ್‌ಗಳು – ಹಲವು ವರ್ಷಗಳಿಂದ ಬೇರೆಬೇರೆ ಬಗೆಯ ಮನೆ ಮಾಡೆಲ್‌ಗಳಿಗಾಗಿ ಮನೆ ಪ್ಲಾನ್‌ಗಳನ್ನು ತಯಾರಿಸುವಲ್ಲಿ ಅಗಾಧ ಅನುಭವವುಳ್ಳ ತಜ್ಞರಿಂದ ನಿಗದಿಪಡಿಸಲಾದ ಸರಳವಾಸ್ತು ತತ್ವಗಳನ್ನು ಆಧರಿಸಿರುವ ವಾಸ್ತು ಪ್ರಕಾರದ ಮನೆ ಪ್ಲಾನ್‌ಗಳು ಆಗಿವೆ.

ಸರಳ ಮನೆ ಪ್ಲಾನ್‌ಗಳನ್ನು ಯಾವಾಗ ಬಳಸಬೇಕು?

ಸರಳ ಮನೆ ಪ್ಲಾನ್‌ಗಳನ್ನು ನಿವೇಶನ ಖರೀದಿಯ ಸಮಯದಲ್ಲಿ ಅನುಸರಿಸಬಹುದು. ಏಕೆಂದರೆ ಕೆಲ ನಿವೇಶನಗಳು ಜನ್ಮ ದಿನಾಂಕವನ್ನು ಆಧರಿಸಿ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಅನುಕೂಲಕರವಾಗಿರುತ್ತದೆ.

ಸರಳ ಮನೆ ಪ್ಲಾನ್‌ಗಳನ್ನು ಖಾಲಿ ನಿವೇಶನದಲ್ಲಿ ಮನೆ ನಿರ್ಮಿಸುವ ಸಮಯದಲ್ಲಿ ಸಹ ಅನುಸರಿಸಬಹುದು. ನಮ್ಮ ತಜ್ಞರು, ವಾಸ್ತುವನ್ನು ಪಾಲಿಸುವಂತಹ ಸುಂದರ ಮನೆಗಳನ್ನು, ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೃಷ್ಟಿಸಿದ ಸಾಧನೆ-ದಾಖಲೆಗಳನ್ನು ಹೊಂದಿದ್ದಾರೆ.

ಸರಳ ವಾಸ್ತು ಪ್ಲಾನ್‌ಗಳನ್ನು ಬಳಸುವುದರ ಪ್ರಯೋಜನವೇನು?

ಸರಳ ಮನೆ ಪ್ಲಾನ್‌ಗಳು ವಾಸ್ತು ಪಾಲಿಸುವಂತಹ ರಚನೆಯ ಮೇಲೆ ಗಮನ ಕೇಂದ್ರೀಕರಿಸುತ್ತವೆ, ಇದರಿಂದ ವ್ಯಕ್ತಿಗೆ ಲಾಭವಾಗುತ್ತದೆ. ಸರಳ ಹೌಸ್ ಪ್ಲಾನ್‌ಗಳ ಆಧಾರದ ಮೇಲೆ ನಿರ್ಮಿಸಲಾದ ಯಾವುದೇ ಮನೆಯು ವಾಸಿಸಲು ಅನುಕೂಲಕರವಾಗಿರುವುದಷ್ಟೇ ಅಲ್ಲದೆ, ವಾಸ ಮಾಡುವವರಿಗೆ ಸಕಾರಾತ್ಮಕ ಶಕ್ತಿ, ಒಳ್ಳೆ ಆರೋಗ್ಯ, ಸಮೃದ್ಧಿ ಮತ್ತು ಸಂಪತ್ತನ್ನು ನೀಡುತ್ತದೆ.