ಮೇಲಿನ ವಿಷಯದ ಬಗ್ಗೆಯೂ ದೇಶದ ಪ್ರತಿಯೊಂದು ವಾಸ್ತು ಪುಸ್ತಕಗಳಲ್ಲಿ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯ ಇರಬಾರದು. ಇದ್ದರೆ ಮನೆಯ ಯಜಮಾನನಿಗೆ ಸಾವು ಉಂಟಾಗುತ್ತದೆ ಅನ್ನುವಮಟ್ಟಿಗೆ ಬರೆದಿದ್ದಾರೆ. ನಾನು ಹೇಳಿರುವಂತೆಯೇ ಏನೇ ಬರೆಯುವುದಕ್ಕೂ ಒಂದು ಸೀಮೆ ಇದೆ, ಆದರೆ ಇವತ್ತು ಈ ರೀತಿ ಜನರಲ್ಲಿ ಭಯ ಹುಟ್ಟಿಸುವುದರಿಂದ ಕೆಲವರು ಶೌಚಾಲಯವನ್ನು ಒಡೆದು ಹಾಕಿದ್ದಾರೆ. ಇನ್ನೂ ಕೆಲವರು ಒಡೆಯುವವರಿದ್ದಾರೆ ಅದಕ್ಕಿಂತ ಮೊದಲು ಕೆಳಗೆ ಬರೆದಿರುವುದನ್ನು ಓದಿ ಮುಂದಿನ ನಿರ್ಧಾರಕ್ಕೆ ಬನ್ನಿ.
ನಾನು ಸ್ಪಷ್ಟಪಡಿಸುವುದೇನೆಂದರೆ ಈ ಪುಸ್ತಕದಲ್ಲಿ ನಾನು ಏನು ಬರೆದಿದ್ದೇನೆ ಅದೆಲ್ಲವೋ Realistic ಹಾಗೂ Practicle ಆಗಿರುವುದು ಅಂತ ನನ್ನ ನಂಬಿಕೆ. ಏಕೆಂದರೆ ಪ್ರತಿಯೊಂದಕ್ಕೂ ನನ್ನಲ್ಲಿ ಸಾಕಷ್ಟು ಉದಾಹರಣೆಗಳು ಇದೆ ಎಂದು ಆತ್ಮವಿಶ್ವಾಸದಿಂದ ಹೇಳಬಹುದು. ಈಶಾನ್ಯದಲ್ಲಿ ಶೌಚಾಲಯ ಒಳ್ಳೆಯದಲ್ಲ ಎನ್ನುವುದು ಎಲ್ಲರಿಗೂ ಸಂಬಂಧಪಡುವುದಿಲ್ಲ. ಮೊದಲೇ ತಿಳಿಸಿರುವಂತೆ ಪ್ರತಿಯೋರ್ವ ವ್ಯಕ್ತಿಗೂ ನಾಲ್ಕು ಒಳ್ಳೆಯ ಹಾಗೂ ನಾಲ್ಕು ಕೆಟ್ಟ ದಿಕ್ಕುಗಳು ಇರುತ್ತವೆ.
ಈಶಾನ್ಯ ದಿಕ್ಕು ನಮ್ಮ ಪಾಲಿಗೆ ನಾಲ್ಕು ಕೆಟ್ಟ ದಿಕ್ಕುಗಳಲ್ಲಿ ಬಂದಿದ್ದರೆ ಅದು ಕೆಟ್ಟ ಫಲಿತಾಂಶ ನೀಡುವುದಿಲ್ಲ, ನಮಗೆ ಅದು ಒಳ್ಳೆಯ ಫಲಿತಾಂಶವನ್ನೇ ನೀಡುವುದು. ಈ ಮಾತನ್ನು ಓದಿ ತಮಗೆ ಆಶ್ಚರ್ಯವಾಗಬಹುದು ಆದರೆ ಇದು ನಿತ್ಯ ಸತ್ಯ.
ಇದಕ್ಕೆ ಒಂದು ಉದಾಹರಣೆ ಎಂದರೆ ಗದಗಿನಲ್ಲಿ ಮಾನ್ವಿಯವರು ವಾಸಿಸುವ ಮನೆ. ಮತ್ತೊಂದು ಉದಾಹರಣೆ ಬೇಕೆಂದರೆ ನವಿ ಮುಂಬೈನಲ್ಲಿ ನಾನೇ ವಾಸಿಸುವ ಮನೆ. ನಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿಯೇ ಶೌಚಾಲಯ ಇದೆ. ನಾನು ಇದನ್ನು 2000ನೇ ಇಸ್ವಿಯಲ್ಲಿ ತೆಗೆದುಕೊಂಡಿರುತ್ತೇನೆ. ಎಂದಿನಿಂದ ನಾನು ಈ ಮನೆಯಲ್ಲಿ ವಾಸಿಸುತ್ತಿದ್ದೇನೋ ಅಂದಿನಿಂದ ಆನಂದದಿಂದ ಇದ್ದೇನೆ. ಅಲ್ಲದೇ ನನಗೆ ಈ ಮನೆಯೂ ವಾಸ್ತುವಿನಲ್ಲಿ ಸಾಕಷ್ಟು ಪ್ರಶಸ್ತಿ ಗಳಿಸಲು ಹಾಗೂ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ಸಿಗಲು ಸಹ ಕಾರಣವಾಗಿದೆ. ಇದಕ್ಕೆ ಕಾರಣವಿಷ್ಟೆ ಈಶಾನ್ಯ ಎನ್ನುವುದು ನನ್ನ ಪಾಲಿನ ನಾಲ್ಕು ಕೆಟ್ಟ ದಿಕ್ಕುಗಳಲ್ಲಿ ಒಂದು. ಹಾಗೆಯೇ, ಈಶಾನ್ಯ ದಿಕ್ಕು ಎನ್ನುವುದು ನಾಲ್ಕು ಒಳ್ಳೆಯ ದಿಕ್ಕಿನಲ್ಲಿ ಯಾವುದಾದರೂ ಒಂದು ದಿಕ್ಕಿಗೆ ಬಂದಿದ್ದು ಅಲ್ಲಿ ಶೌಚಾಲಯ ಬಂದರೆ ಏನು ಮಾಡಬೇಕು? ಎನ್ನುವ ಪ್ರಶ್ನೆ ಬರುತ್ತದೆ. ಒಂದು ವೇಳೆ ಈಶಾನ್ಯವು ಅದರ ನಾಲ್ಕು ಒಳ್ಳೆಯ ದಿಕ್ಕಿನಲ್ಲಿ ಬಂದಿದ್ದೂ ಅಲ್ಲಿ ಶೌಚಾಲಯ ಬಂದಿದ್ದರೆ ಅದು ಅವರಿಗೆ ಒಳ್ಳೆಯ ಫಲಿತಾಂಶವನ್ನು ನೀಡುವುದಿಲ್ಲ. ಹಾಗೆಂದು ವಾಸ್ತು ಪಂಡಿತರು ಬರೆದಿರುವಂತೆ ಸಾವಿಗೆ ಕಾರಣವಾಗುದಿಲ್ಲ. ಶೌಚಾಲಯವನ್ನು ಯಾಕೆ ನೀವು ಒಡೆದು ತೆಗೆಯಬೇಕು? ನಿಜವಾಗಿಯೂ ಅದು ಏನು ಮಾಡುತ್ತದೆ.? ನಾನು ಹೇಳಿದ ಹಾಗೆ ಶೌಚಾಲಯದಲ್ಲಿ ಋಣಾತ್ಮಕ ಶಕ್ತಿಯು ಉತ್ಪನ್ನವಾಗುತ್ತಿರುತ್ತದೆ. ಋಣಾತ್ಮಕ ಶಕ್ತಿಯು ಯಾವಾಗ ಉತ್ಪನ್ನವಾಗುತ್ತದೆ ಎಂದರೆ ನಾವು ಶೌಚಾಲಯವನ್ನು ಉಪಯೋಗಿಸಿದಾಗ ಮಾತ್ರ. ಒಂದು ಉಪಯೋಗ ಮಾಡುವುದನ್ನು ನಿಲ್ಲಿಸಿದರೆ? ಆಗ ಋಣಾತ್ಮಕ ಶಕ್ತಿಯು ಉತ್ಪನ್ನವಾಗುವುದು ತಕ್ಷಣವೇ ನಿಲ್ಲುವುದು. ಆಗ ಎರಡು–ಮೂರು ದಿನಗಳಲ್ಲಿಯೇ ಇದರ ಫಲಿತಾಂಶದ ಬಗ್ಗೆ ನಿಮಗೆ ತಿಳಿಯುವುದು. ಶೌಚಾಲಯವನ್ನು ಒಡೆಯುವ ಅವಶ್ಯಕತೆ ಇಲ್ಲದೆ ಅದನ್ನು ಸ್ಟೋರ್ ರೂಮ್ ಆಗಿ ಉಪಯೋಗಿಸಬಹುದು. ಒಂದು ವೇಳೆ ಮನೆಯಲ್ಲಿ ಒಂದೆ ಶೌಚಾಲಯವಿದ್ದರೆ ಅದನ್ನು ಮುಚ್ಚಿ ಅಥವಾ ಉಪಯೋಗ ಮಾಡದಿರುವ ಅವಶ್ಯಕತೆಯೂ ಇಲ್ಲ. ಋಣಾತ್ಮಕ ಶಕ್ತಿಯನ್ನು ಕಡಿಮೆ ಮಾಡುವ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು, ಆಗಲೂ ಕೂಡ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ.








