ಈ ಮೇಲಿನ ಪ್ರಶ್ನೆ ಅತೀ ಮುಖ್ಯವಾದದ್ದು, ಅದಕ್ಕಿಂತ ಮೊದಲು ನನ್ನ ಒಂದು ಪ್ರಶ್ನೆ ದೇವರು ಎಲ್ಲಿದ್ದಾನೆ?
ನನ್ನ ಪ್ರತಿಯೊಂದು ಉಪನ್ಯಾಸ ಕಾರ್ಯಕ್ರಮದಲ್ಲಿ ನಾನು ಈ ಪ್ರಶ್ನೆಯನ್ನು ಸಭಿಕರಿಗೆ ಕೇಳಿದಾಗ ಪ್ರತಿಯೊಬ್ಬರಿಂದ ಬಂದ ಉತ್ತರ ದೇವರು ಎಲ್ಲ ಕಡೆ ಇದ್ದಾನೆ ಎಂದು ಬಂದಿರುತ್ತದೆ. ತಾವು ಹೊಸ ಮನೆ ಕಟ್ಟಿಸಿ ಒಳಗೆ ಹೋದಾಗ ಮತ್ತೆ ಇದೇ ಪ್ರಶ್ನೆ ಕೇಳಿದರೆ ಆಗ ಬರುವ ಉತ್ತರ “ಈಶಾನ್ಯ“ಎಂದು ಬರುತ್ತದೆ. ಕೆಲವೇ ನಿಮಿಷಗಳಲ್ಲಿ ಎಲ್ಲ ಕಡೆಗೆ ಇರುತ್ತಾನೆ ಎಂದು ಹೇಳಿದವರೇ ದೇವರ ಸ್ಥಾನವು ಈಶಾನ್ಯದಲ್ಲಿ ಎಂದು ಹೇಳಿ ತಾವೇ ಹೇಳಿದ ಮಾತಿಗೆ ತಿರುಗಿ ಬೀಳುವರು. ಇದಕ್ಕೆ ಏನು ಕಾರಣ? ಪ್ರತಿಯೊಂದು ವಾಸ್ತುವಿನ ಪುಸ್ತಕದಲ್ಲಿ ಈಶಾನ್ಯದಲ್ಲಿ ದೇವರ ಕೋಣೆ ಕಟ್ಟಿರಬೇಕು. ಇರದಿದ್ದರೆ ನಿಮಗೆ ಕೆಡಕಾಗುತ್ತದೆ ಎಂದು ಬರೆದು ಭಯ ಹುಟ್ಟಿಸಿರುತ್ತಾರೆ. ಈ ಭಯವೇ ಜನರನ್ನು ತಪ್ಪು ದಾರಿಗೆ ಎಳೆಯುವುದು. ಇದಕ್ಕೆ ನಾನು ಕೊಡುವ ಉತ್ತರವನ್ನು ಸ್ವಲ್ಪ ಗಮನ ಕೊಟ್ಟು ಓದಿದರೆ ಸಾಕು ನಿಜ ಏನೆಂದು ತಮಗೇ ತಿಳಿಯುತ್ತದೆ.
ಹೋಗಲಿ ಪುಸ್ತಕಗಳನ್ನು ಬರೆದಿರುವವರ ಪ್ರಕಾರವೇ ಹೋಗೋಣ, ತಮ್ಮ ಮನೆಯಲ್ಲಿ ಈಶಾನ್ಯದಲ್ಲಿ ದೇವರನ್ನ ಕುಳ್ಳಿರಿಸಿದವರು ಯಾರು? ತಾವೇ ತಾನೆ? ಯಾವಾಗ ನಿಮ್ಮ ಮಾತಿನಂತೆ ಅಥವಾ ನೀವು ಕುಳ್ಳಿರಿಸಿದ ಹಾಗೆ ದೇವರು ಈಶಾನ್ಯದಲ್ಲಿ ಕುಳಿತುಕೊಂಡನೆಂದರೆ ಯಾರ ಮಾತನ್ನು ಯಾರು ಕೇಳಿದಂತಾಯಿತು. ಯಾವಾಗ ನಿಮ್ಮ ಮಾತಿನಂತೆ ದೇವರು ಕುಳಿತನೋ ಆಗ God Of God Supreme of God ಯಾರು ಆದರು? ನೀವಾ ಅಥವಾ ದೇವರಾ? ಅಲ್ಲಿ ನೀವು Supreme of God ಆದಿರಿ ಮತ್ತೆ ಸ್ವಲ್ಪ ವಿಚಾರ ಮಾಡಿ ನೋಡಿ, ದೇವರಿಗೆ ಇದೇ ನಿನ್ನ ಸ್ಥಾನ ನೀನು ಇಲ್ಲಿಯೇ ಕುಳಿತುಕೊಳ್ಳು ಎಂದು ಹೇಳುವ ಶಕ್ತಿ ನಮ್ಮಲ್ಲಿ ಬಂದಿದಿಯೋ ಹೇಗೆ? ದೇವರಿಗೆ ನೀನು ಇಲ್ಲೇ ಕುಳಿತುಕೊಳ್ಳು ಎನ್ನಲು ನಾವ್ಯಾರು? ನಾವು ಯಾವಾಗ ದೇವರು ಎಲ್ಲ ಕಡೆ ಇರುವನೆಂದು ಹೇಳುವೆವೋ ಹಾಗೆಯೇ ದೇವರನ್ನು ಮನೆಯಲ್ಲಿ ಯಾವುದೇ ಸ್ಥಾನದಲ್ಲಿಯಾದರೂ ಇಡಬಹುದು.
ನಮ್ಮ ಸರಳ ವಾಸ್ತುವಿನಲ್ಲಿ ಇದಕ್ಕಿರುವ ಒಂದೇ ಷರತ್ತೆಂದರೆ ದೇವರ ಮನೆ ಯಾವುದೇ ಸ್ನಾನ ಗೃಹಕ್ಕೆ ಅಥವಾ ಶೌಚಗೃಹಕ್ಕೆ ಹತ್ತಿರಬಾರದು, ದೇವರ ಕೋಣೆ ಶೌಚಗೃಹ ಹಾಗೂ ಸ್ನಾನಗೃಹದ ಮೇಲೆ ಅಥವಾ ಕೆಳಗಡೆಗೆ ಬರಬಾರದು. ಈ ಷರತ್ತು ಯಾಕೆ ಎಂದು ಕೇಳಿದರೆ ನಮ್ಮ ಉತ್ತರ ಪೂಜಾ ಸ್ಥಾನವನ್ನು ಬಹಳ ಸ್ವಚ್ಛವಾಗಿ ಇಟ್ಟರುತ್ತೇವೆ ಅಲ್ಲದೇ ಹೂವು, ಅಗರಬತ್ತಿ, ಘಂಟೆ ಹೊಡೆಯುವುದು ಮುಂತಾದವುಗಳಿಂದ ಅಲ್ಲಿ ಧನಾತ್ಮಕ ಶಕ್ತಿಯು ಉತ್ಪನ್ನವಾಗುತ್ತಿರುತ್ತದೆ. ಅದೇ ರೀತಿ ಸ್ನಾನದಗೃಹ ಮತ್ತು ಶೌಚಗೃಹದಲ್ಲಿ ಋಣಾತ್ಮಕ ಶಕ್ತಿ ಉತ್ಪನ್ನವಾಗುತ್ತಿರುತ್ತದೆ. ಈ ಎರಡು ಶಕ್ತಿಗಳು ಸಮೀಪವಿದ್ದರೆ ಕೂಡಿಕೊಂಡು ಋಣಾತ್ಮಕ ಶಕ್ತಿ ಮನೆ ತುಂಬ ಹರಡುವುದರ ಮೂಲಕ ಮನೆಯಲ್ಲಿ ಅಶಾಂತಿ ಶುರುವಾಗುವುದು. ಹಾಗೆಯೇ ಮೊದಲು ನಾನು ತಿಳಿಸಿರುವಂತೆಯೇ ನಿಮಗೆ ಮನಃಶಾಂತಿಯನ್ನ ದೇವರು ಕೊಡುವುದಿಲ್ಲ! ಅಲ್ಲಿರುವ ಘಂಟೆ, ಹೂವು, ಮಂಗಳಾರತಿ ಇವುಗಳೇ ಮನಃಶಾಂತಿಯನ್ನು ಕೊಡುವುದು. ಅದಕ್ಕಾಗಿಯೇ ಪೂಜಾ ಕೋಣೆಯಲ್ಲಿ ದೇವರ ಪೋಟೋ ಇಡದೇ ಬಹಳಷ್ಟು ಹೂಗಳನ್ನು ಇಟ್ಟು ಅಗರಬತ್ತಿ ಹಚ್ಚಿ ಘಂಟೆ ಬಾರಿಸಿದರೆ ಸಾಕು ನಿಮ್ಮ ಮನೆಯಲ್ಲಿ ಶಾಂತತೆಯ ವಾತಾವರಣದ ಅನುಭವ ಬರುವುದು. ಇದನ್ನು ಬಿಟ್ಟು ನಾವು ದೇವರನ್ನು ಈಶಾನ್ಯದಲ್ಲಿ ಕುಳ್ಳಿರಿಸಿದರೆ ಆಯ್ತು, ನಮಗೆಲ್ಲ ಮನಃಶಾಂತಿ ಸಿಗುವುದೆಂಬುದು ನಮ್ಮ ಮೂರ್ಖತನದ ಪರಮಾವಧಿ. ಇನ್ನು ಕೆಲವು ವಾಸ್ತು ಪಂಡಿತರು ದೇವರನ್ನು ಇದೇ ದಿಕ್ಕಿಗೆ ಮುಖ ಮಾಡಿ ಇಡಬೇಕೆಂದು ಬರೆದಿರುತ್ತಾರೆ. ದೇವರನ್ನು ನಾವು ವೇದಗಳಲ್ಲಿ ನಿರಾಕಾರ, ನಿರ್ಗುಣ ಎಂದು ವರ್ಣಿಸಿರುವುದನ್ನು ಓದಿರುತ್ತೇವೆ. ನಿರಾಕಾರವೆಂದರೆ ಆಕಾರ ರಹಿತನೆಂದು ಅರ್ಥ. ನಿರ್ಗುಣ ಎಂದರೆ ಗುಣಾತೀತ ಅಥವಾ ಗುಣಗಳಿಂದ ಅಥಿತನಾದವನೆಂದು ಅರ್ಥ. ಇನ್ನು ನೀವೆ ವಿಚಾರ ಮಾಡಿ ನೋಡಿ ಆಕಾರ ರಹಿತನಾದ ಭಗನಂತನನ್ನು ಯಾವ ದಿಕ್ಕಿಗಾದರು ಮುಖ ಮಾಡಿ ಕುಳ್ಳಿರಿಸಿದರೂ ಏನು ವ್ಯತ್ಯಾಸ ಉಂಟಾಗಬಹುದು? ಅಥವಾ ದೇವರ ಮುಖ ಹೀಗೆ ಇರಬೇಕೆಂದು ಹೇಳಲು ನಾವು ಯಾರು? ನಮಗೆ ಆ ಚೈತನ್ಯ ಬಂದಿದಿಯೋ ಹೇಗೆ…? ಇದರ ತಿರ್ಮಾನ ತಾವೇ ತೆಗೆದುಕೊಳ್ಳಬಹುದು.
ನಮ್ಮ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಕೆಲವು ಜನರು ದೇವರಿಗೆ ಎರಡು ಅಗರಬತ್ತಿ ಹಚ್ಚುವವರಿದ್ದಾರೆ, ಕೆಲವೊಂದು ಜನ ಒಂದು ಅಗರಬತ್ತಿಯನ್ನು ಹಚ್ಚುವವರಿದ್ದಾರೆ, ಇನ್ನೂ ಕೆಲವರು ಒಂದೇ ಅಗರಬತ್ತಿಯನ್ನು ಹಚ್ಚಿ ದೇವರಿಗೆ ಬೆಳಗಿ ಮತ್ತೆ ಅದನ್ನು ಆರಿಸಿ ಮರುದಿನ ಮತ್ತೆ ಅದನ್ನೇ ಬೆಳಗುವವರಿದ್ದಾರೆ. ಯಾವಾಗ ನಾವು ಅಗರಬತ್ತಿಯ ಖರ್ಚಿನ ಬಗ್ಗೆ ವಿಚಾರ ಮಾಡುತ್ತೇವೆಯೋ ಆಗ ನಮಗೆ ಸಿಗುವ ಧನಾತ್ಮಕ ಶಕ್ತಿಯ ಪ್ರಮಾಣ ಕೂಡ ಕಡಿಮೆಯಾಗುವುದು. ಅದಕ್ಕಾಗಿ ನಾವು ನಿಜವಾಗಿ ಏನು ಮಾಡಬೇಕೋ ಅದನ್ನು ಬಿಟ್ಟು ಮಾಡಲಾರದ್ದನ್ನು ಮಾಡಲು ಹೋರಟಿದ್ದೇವೆ. ಇನ್ನು ಮುಂದಾದರೂ ದೇವರನ್ನು ಮನೆಯಲ್ಲಿ ಯಾವುದೇ ಸ್ಥಳದಲ್ಲಿ ಇಡಬಹುದೆಂದು ನೀವು ತಿಳಿದಿದ್ದೀರಿ ಎಂದು ನಂಬುತ್ತೇನೆ.








