ವಾಸ್ತುವಿನ ಮೊದಲ ಅಧ್ಯಾಯವೇ ಮನೆಯ ಮುಖ್ಯ ದ್ವಾರ. ಈ ಮೊದಲನೆಯ ಅಧ್ಯಾಯದಲ್ಲಿ ನಾವು ಎಷ್ಟೊಂದು ತಪ್ಪು ತಿಳುವಳಿಕೆಗೆ ಬಲಿಯಾಗಿದ್ದೇವೆ ಎಂಬುದು ಇಲ್ಲಿಯವರೆಗೆ ಯಾರಿಗೂ ಗೊತ್ತಿರಲಾರದ ವಿಷಯವನ್ನು ನಾನು ನಕ್ಷೆಯ ಮೂಲಕ ಕೆಳಗೆ ಪ್ರಸ್ತಾಪವನ್ನು ಮಾಡುತ್ತಿದ್ದೇನೆ. ಈ ಮೇಲಿನ ಚಿತ್ರದಲ್ಲಿ ಮೂರು ನಕ್ಷೆಗಳನ್ನು ಗಮನಿಸಿ ನೋಡಿರಿ. ನಿಮಗೆ ಮೊದಲನೆಯ ನಕ್ಷೆಯ ಮುಖ್ಯ ದ್ವಾರ ಯಾವುದೆಂದು ತಿಳಿದು ಬರುತ್ತದೆ?
ನನ್ನ ಪ್ರತಿಯೊಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನಿಸಿದಾಗ ಬಂದ ಉತ್ತರ, ಉತ್ತರ ಬಾಗಿಲು ಎಂದು. ಇದಕ್ಕೆ ನನ್ನ ಸಹಮತವಿದೆ. ಇನ್ನು 2 ನೇಯ ನಕ್ಷೆಯ ಮುಖ್ಯ ದ್ವಾರ ಯಾವ ದಿಕ್ಕಿಗೆ ಇದೆ ಎಂದು ಪ್ರಶ್ನಿಸಿದರೆ ಪ್ರತಿಯೊಬ್ಬರಿಂದ ಬಂದ ಉತ್ತರ ಮತ್ತು ದೇಶದ ಪ್ರತಿಯೊಂದು ವಾಸ್ತು ಪುಸ್ತಕದಲ್ಲಿ ಬರೆದ ಉತ್ತರ, ಇದು ಈಶಾನ್ಯದ ಬಾಗಿಲು ಎಂದು. ಈ ಉತ್ತರಕ್ಕೆ ಓರ್ವ ಇಂಜಿನೀಯರ ಆಗಿ ನನ್ನ ಸಹಮತವಿಲ್ಲ. ಏಕೆ ಸಹಮತವಿಲ್ಲವೆಂದು ಮುಂದೆ ವಿವರಿಸುತ್ತೇನೆ.















