ಈಗಾಗಲೇ ಕಟ್ಟಿರುವ ಮನೆಯನ್ನು ಒಡೆಯದೆ ಬದಲಾವಣೆ ಮಾಡದೆ ಸರಳ ವಾಸ್ತು ಅಳವಡಿಸುವ ಮೂಲಕ ಕ್ರಾಂತಿಯನ್ನು ತಂದಿರುವ ಸಂಸ್ಥೆಯು ಹೊಸ ಮನೆ / ಉದ್ಯೋಗ ಸ್ಥಳಗಳಿಗೆ ನಕ್ಷೆ ಹಾಕಿ ಕೊಡುವ ಮತ್ತೊಂದು ದಿಟ್ಟ ಹೆಜ್ಜೆ.
ಹೊಸ ಮನೆಗೆ ನಕ್ಷೆ ಹಾಕಿಸಿಕೊಳ್ಳುವವರು ಕೆಳಗಿನ ಅಂಶಗಳನ್ನು ಗಮನಿಸಬೇಕು :-
1) ಮೊದಲು ಸಂಸ್ಥೆಗೆ ಕರೆ ಮಾಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
2) ಸಂಸ್ಥೆಯ ತಜ್ಞರು ನಿಗದಿಪಡಿಸಿದ ದಿನದಂದು ತಮ್ಮ ನಿವೇಶನಕ್ಕೆ ಭೇಟಿ ಕೊಡುವರು.
3) ಸರಳವಾಸ್ತುವಿನ ನೊಂದಣಿ (Saral Vastu Registration) ಪತ್ರ ತುಂಬಿ ಕೊಡಬೇಕು.
4) ತಮ್ಮ ಅವಶ್ಯಕತೆಗಳನ್ನು ತಜ್ಞರಿಗೆ ತಿಳಿಸಬೇಕು.
5) ತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಮನೆಯ ನಕ್ಷೆಯನ್ನು ಸರಳವಾಸ್ತು ಪ್ರಕಾರ ತಯಾರಿಸಿ ತಮ್ಮ ವಿಳಾಸಕ್ಕೆ 8 ದಿನಗಳ ಒಳಗೆ ಕೊರಿಯರ ಮೂಲಕ ಕಳುಹಿಸಲಾಗುವುದು.
6) ಈ ಹಾಕಿಕೊಟ್ಟ ನಕ್ಷೆ ಎರಡರಿಂದ ಮೂರು ಪೀಳಿಗೆಯವರೆಗೆ ಎಲ್ಲ ರೀತಿಯ ಅಭಿವೃದ್ಧಿ ಹೊಂದಲು ಸಹಾಯಕವಾಗುವುದು.
7) ಮನೆಯನ್ನು ಕಟ್ಟಲು ಪ್ರಾರಂಭಿಸಿದರೆ, 6 ರಿಂದ 8 ತಿಂಗಳ ಒಳಗೆ ಯಾವುದೇ ಅಡೆತಡೆ ಇಲ್ಲದೆ ಮನೆಯ ಕಟ್ಟಡ ಕಟ್ಟುವುದನ್ನು ಮುಗಿಸುವ ಭರವಸೆ ಸಂಸ್ಥೆಯದು.
8) ಸರಳವಾಸ್ತು ಪ್ರಕಾರ ಕಟ್ಟಿದ ಮನೆಯೆಂದರೆ ಶಾಂತಿ ಸಮಾಧಾನ ಮತ್ತು ಆನಂದದ ಬೀಡು.








