ಮಾಡಿದರೆ ಸಾಕು ಮೊದಲು ನಮ್ಮ ಹಿರಿಯರು ಮನೆಯನ್ನು ಕಟ್ಟಿಸಿದ್ದಾಗ ಅವರೆಲ್ಲರೂ ಆಗ್ನೇಯಕ್ಕೆ ಅಡುಗೆ ಕೋಣೆಯನ್ನು ಇಟ್ಟಿದ್ದಾರೆಯೇ ಹೇಗೆ ಎಂಬುದನ್ನು ವಿಚಾರಿಸಿ. ನೀವು ಮೊದಲ ಹತ್ತು ಮನೆಗಳನ್ನು ನೋಡಿದರೆ ಸಾಕು. ಅದರಲ್ಲಿ ತಮಗೆ ಆರರಿಂದ ಎಂಟು ಮನೆಗಳಲ್ಲಿ ಆಗ್ನೇಯಕ್ಕೆ ಅಡುಗೆ ಮನೆ ಇರಲಾರದ್ದು ಸಿಗುತ್ತವೆ. ಇನ್ನೇನೊ ಎರಡರಿಂದ ಮೂರು ಮನೆಗಳಲ್ಲಿ ಆಗ್ನೇಯಕ್ಕೆ ಅಡುಗೆ ಮನೆ ಇರುವುದು ಸಿಗಬಹುದು. ಅಂದರೆ ಮೊದಲಿನಿಂದ ಹಿರಿಯರೆಲ್ಲರು ಅಡುಗೆ ಮನೆಯನ್ನು ಆಗ್ನೇಯಕ್ಕೆ ಇಡುತ್ತಿರಲಿಲ್ಲ ಎಂಬುದು ನಿಮಗೆ ಸ್ಪಷ್ಟವಾಗುತ್ತದೆ. 20-30 ವರ್ಷಗಳಲ್ಲಿ ಈಗಿನ ವಾಸ್ತುವಿನ ಪಂಡಿತರು ಬರೆದಿರುವ ವಾಸ್ತು ಪುಸ್ತಕದ ಮೂಲಕ ನಾವೆಲ್ಲರು ಆಗ್ನೇಯಕ್ಕೆ ಅಡುಗೆ ಮನೆಯನ್ನು ಇಡಲು ಪ್ರಾರಂಭಿಸಿದ್ದೇವೆ.
ಒಂದು ವೇಳೆ ಆಗ್ನೇಯದಲ್ಲಿ ಅಡುಗೆ ಕೋಣೆ ಇರದಿದ್ದರೆ? ಇರದಿದ್ದರೂ ಯಾವ ತೊಂದರೆಯೂ ನಿಮಗೆ ಇದರಿಂದ ಉಂಟಾಗುವುದಿಲ್ಲ ಎಂಬ ವೈಜ್ಞಾನಿಕ ಭರವಸೆಯನ್ನು ನಾನು ಕೊಡುತ್ತೇನೆ. ಅಲ್ಲದೆ ಹೀಗಿರುವ ಸಾಕಷ್ಟು ಮನೆಗಳನ್ನು ನಿಮಗೆ ತೋರಿಸಬಹುದು ಇನ್ನು
ವಾಸ್ತುವಿನ ಬಗ್ಗೆ ಬರೆದ ಪುಸ್ತಕಗಳಲ್ಲಿ ಅಡುಗೆ ಮಾಡುತ್ತಿರಬೇಕಾದರೆ ಪೂರ್ವ ದಿಕ್ಕಿಗೆ ಮುಖ ಮಾಡಬೇಕೆಂದು ಬರೆದಿರುತ್ತಾರೆ.ಈ ವಿಷಯದ ಬಗ್ಗೆ ತಾವೇ ಸ್ವಲ್ಪ ವಿಚಾರ ಇಲ್ಲಿ ಒಂದು ಮಹತ್ವದ ವಿಷಯವೆಂದರೆ ನೀವು ಅಡುಗೆ ಮಾಡುವ ಗ್ಯಾಸ್ ಸ್ಟೋವ್ನ ದಿಕ್ಕು ಬಹಳ ಮುಖ್ಯ. ನನ್ನದೊಂದು ಪ್ರಶ್ನೆ ಎಂದರೆ ಅಡುಗೆ ಮಾಡುವಾಗ ಗ್ಯಾಸ್ ಸ್ಟೋವ್ವು ಮುಖ್ಯವೋ? ನಮ್ಮ ಮುಖ ಮುಖ್ಯವೋ? ಗ್ಯಾಸ್ ಸ್ಟೋವೇ ಪ್ರಾರಂಭವಾಗದಿದ್ದಾಗ ನಮ್ಮ ಮುಖ ಯಾವ ಕಡೆ ಇದ್ದರೇನು ಪ್ರಯೋಜನ? ಇಲ್ಲಿ ಇನ್ನೊಂದು ವಿಶೇಷ ಎಂದರೆ ಅಡುಗೆ ಮನೆಯಲ್ಲಿ ಇಟ್ಟಿರುವ ಗ್ಯಾಸ್ ಸ್ಟೋವಿನ ದಿಕ್ಕನ್ನು ನೋಡಿಯೇ ಸರಳ ವಾಸ್ತುವಿನ ಮೂಲಕ ಆ ಮನೆಯಲ್ಲಿ ಆರೋಗ್ಯದ ತೊಂದರೆ ಇದೆಯೋ ಇಲ್ಲವೋ ಎಂದು ನಿಖರವಾಗಿ ಹೇಳಬಹುದು. ಅಲ್ಲದೆ ಅದರಿಂದಾಗಿ ಯಾವದಾದರೂ ಕೆಲಸದಲ್ಲಿ ನಿಮಗೆ ದುರಾದೃಷ್ಟ ಸಹ ಉಂಟಾಗಬಹುದು ಯಾವಾಗ ಮನೆಯಲ್ಲಿ ಅಡುಗೆ ಕೋಣೆ ನೋಡಿ ಈ ವಿಷಯವನ್ನು ನಾವು ತಿಳಿಸಿದ್ದೇವೆಯೋ ಆಗ ಯಾರು ಇದನ್ನು ಅಲ್ಲಗಳೆದಿಲ್ಲ. ಅದಕ್ಕಾಗಿ ದಯವಿಟ್ಟು ತಮ್ಮ ಮನೆಯಲ್ಲಿ ಆಗ್ನೇಯಕ್ಕೆ ಅಡುಗೆ ಮನೆ ಇಲ್ಲವೆಂದು ಭಯ ಪಡಬೇಕಿಲ್ಲ. ಇದಕ್ಕೊಂದು ಉದಾಹರಣೆ ಎಂದರೆ:- ಬಾಗಲಕೋಟೆಯಲ್ಲಿ ನಮ್ಮ ಅಜ್ಜನವರು ಕಟ್ಟಿಸಿರುವ 24 ಕೋಣೆಯ ಮನೆ. ಆ ಮನೆಯಲ್ಲಿಯೂ ಸಹಿತ ಆಗ್ನೇಯಕ್ಕೆ ಅಡುಗೆ ಮನೆ ಇಲ್ಲ, ಆದರೂ ಆ ಮನೆಯಲ್ಲಿ ನಮ್ಮ ತಂದೆ ಅಜ್ಜನವರು ಒಳ್ಳೆಯ ರೀತಿಯಲ್ಲಿ ಜೀವನ ಮಾಡಿ ಸಾಕಷ್ಟು ಹಣವನ್ನು ಗಳಿಸಿರುತ್ತಾರೆ. ಇವತ್ತಿಗೂ ಅದು ನೋಡಲು ಸಿಗುವುದು.








