ಎಷ್ಟೋ ಕಡೆ ಉಪನ್ಯಾಸ ಕಾರ್ಯಕ್ರಮ ನೀಡುತ್ತಿರುವಾಗ ನನಗೆ ಹಲವು ಬಾರಿ ಸಭಿಕರಲ್ಲಿ ವಿಶೇಷವಾಗಿ ಮಹಿಳೆಯರು ಒಂದು ಪ್ರಶ್ನೆ ಕೇಳಿದ್ದುಂಟು. ವಾಸ್ತುವಿನ ಪರಿಣಾಮವು ನಮ್ಮ ಶರೀರದ ಮೇಲೆ ಆಗುವುದೇ? ಈ ಪ್ರಶ್ನೆಗೆ ನನ್ನ ಖಚಿತ ಉತ್ತರ ಸಂಬಂಧವಿದೆ. ಇನ್ನು ತಿಳಿಯದೆಯೇ ನಾವು ಮಲಗುವ ದಿಕ್ಕು ಹಾಗೂ ಮಂಚ ಇಡುವ ರೀತಿ ಸರಿ ಇಲ್ಲದಿದ್ದರೆ ಅದು ನಮ್ಮ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಅದು ಹೇಗೆಂಬುದನ್ನು ಕೆಳಗಿನ ನಕ್ಷೆಯ ಮೂಲಕ ವಿವರಿಸುತ್ತೇನೆ.
ಚಿತ್ರ-1 ರಲ್ಲಿ ಕಾಣಿಸಿದ ನಕ್ಷೆಯನ್ನು ವೀಕ್ಷಿಸಿದರೆ ನಿಮಗೆ ಮಂಚವು ಎರಡೂ ಕಡೆಯ ಗೋಡೆಗೆ ಹತ್ತಿರುವುದು ಅರಿವಾಗುತ್ತದೆ. ಈ ರೀತಿಯಾಗಿ ಮಂಚ ಇರಿಸಿದ್ದಲ್ಲಿ ಸ್ತ್ರೀಯರು ಮಲಗಿಕೊಂಡರೆ ಅವರು ಉಪವಾಸ, ಮಿತ ಆಹಾರ ಸೇವನೆ (Dieting) ಮಾಡುತ್ತಿದ್ದರೂ ದಪ್ಪವಾಗುತ್ತಾರೆ. ನೀವು ಇದೇನು ಆಶ್ಚರ್ಯ ಎನ್ನಬಹುದು. ನಾನು ನೀಮಗೆ ತಿಳಿಸಿರುವಂತೆ ಶಕ್ತಿಯು (energy) ಮನೆಯಲ್ಲಿ ಸಂಚಾರವಾಗುತ್ತಿರುತ್ತದೆ. ಮನೆಯಲ್ಲಿ ಮಂಚವು ಎರಡು ಕಡೆಗೆ ಹತ್ತಿಕೊಂಡಿರುವಾಗ ಶಕ್ತಿಯು ಸರಾಗವಾಗಿ ಹರಿದಾಡಲು ಆಗುವುದಿಲ್ಲ. ಹಾಗಾಗಿ ಮಲಗುವ ಮಹಿಳೆಗೆ ಪೂರ್ತಿ ಶಕ್ತಿ ಸಿಗಲು ತೊಂದರೆಯಾಗಿ ಅವರು ದಪ್ಪವಾಗುತ್ತಾ ಹೋಗುತ್ತಾರೆ.
ಇನ್ನು ಎರಡನೇ ಚಿತ್ರವನ್ನು ವೀಕ್ಷಿಸಿ. ಈ ರೀತಿಯಾಗಿ ಸಾಮಾನ್ಯವಾಗಿ ಪ್ರತಿಯೊಂದು ವಸತಿ ಗೃಹಗಳಲ್ಲಿ ಮಂಚವನ್ನು ಹಾಕಿಸಿರುತ್ತಾರೆ. ಈ ರೀತಿಯಾಗಿ ಮಂಚ ಹಾಕಿರುವುದು ವೈಜ್ಞಾನಿಕವಾಗಿ ಸರಿಯಾಗಿದೆ. ಏಕೆಂದರೆ ಇಲ್ಲಿ ಶಕ್ತಿಯು ಯಾವುದೇ ತೊಂದರೆ ಇಲ್ಲದೆ ಸರಾಗವಾಗಿ ಹರಿದಾಡುತ್ತಿರುತ್ತದೆ. ಮಲಗುವ ವ್ಯಕ್ತಿಯು ಶಕ್ತಿಯನ್ನು ಸುಲಭವಾಗಿ ತೆಗೆದುಕೊಳ್ಳುವ ಮೂಲಕ ದಪ್ಪಗಾಗುವುದಿಲ್ಲ ಮತ್ತು ಅವರ ಆರೋಗ್ಯವು ಕೂಡ ಚೆನ್ನಾಗಿರುತ್ತದೆ.









