ನಾನು ಈ ಮೊದಲೆ ತಿಳಿಸಿರುವಂತೆ ಪ್ರತಿಯೊಬ್ಬ ವ್ಯಕ್ತಿಗೂ ಜನ್ಮ ದಿನಾಂಕದ ಆಧಾರದ ಮೇಲೆ ನಾಲ್ಕು ಒಳ್ಳೆಯ ದಿಕ್ಕುಗಳು ಮತ್ತು ನಾಲ್ಕು ಕೆಟ್ಟ ದಿಕ್ಕುಗಳು ಬಂದಿರುತ್ತವೆ. ಇವು ವಿದ್ಯಾರ್ಥಿಗಳಿಗೂ ಸಹಿತ ಅನ್ವಯಿಸುತ್ತವೆ. ವಿದ್ಯಾರ್ಥಿಗಳು ತಮ್ಮದೇ ಆದ ಒಳ್ಳೆಯ ದಿಕ್ಕುಗಳನ್ನು ಅನುಸರಿದರೆ ಓದುವಾಗ ಏಕಾಗ್ರತೆಯು ಹೆಚ್ಚಿ ಅವರು ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯಬಹುದು. ಇದರ ಜೊತೆಗೆ ಮನೆಯಲ್ಲಿಯ ಸರಸ್ವತಿ ಸ್ಥಾನದಲ್ಲಿ ಸಹಿತ ತೊಂದರೆಯು ಇರಬಾರದು. ಮನೆಯಲ್ಲಿ ಒಂದು ವೇಳೆ ಸರಸ್ವತಿಯ ಸ್ಥಾನದಲ್ಲಿ ತೊಂದರೆ ಇದ್ದರೆ ಆ ಮನೆಯಲ್ಲಿ ಯಾರೂ ಅಭ್ಯಾಸದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುವುದಿಲ್ಲ.
ಇನ್ನೂ ಸಾಕಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿಯೇ ನಾನು ವಿಶೇಷ ಉಪನ್ಯಾಸಗಳನ್ನು ನೀಡಿರುತ್ತೇನೆ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಸರಳ ವಾಸ್ತುವನ್ನು ಅಳವಡಿಸುವ ಮೂಲಕ
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಿ ಜೀವನದಲ್ಲಿ ಪ್ರಗತಿ ಪಥದಲ್ಲಿ ಸಾಗಿರುವ ಉದಾಹರಣೆಗಳು ಬೇಕಾದಷ್ಟಿವೆ.ಇನ್ನು ಓದುಗರಿಗೆ ಹೆಚ್ಚಿನ ವಿವರ ಬೇಕಾದಲ್ಲಿ ಸಂಸ್ಥೆಯ ಕಾರ್ಯಾಲಯದಲ್ಲಿ ಮಾಹಿತಿಯನ್ನು ಪಡೆಯಬಹುದು.
ನಾನೊಮ್ಮೆ ಬೆಂಗಳೂರಿನಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡುವಾಗ ಓರ್ವ ವಿದ್ಯಾರ್ಥಿಯು ಎದ್ದು ನಿಂತು ಸರ್ ನೀವು ಹೇಳಿದಂತೆ ನಾವು ಒಳ್ಳೆಯ ದಿಕ್ಕನ್ನು ಮನೆಯಲ್ಲಿ ಪಾಲಿಸಬಹುದು. ಆದರೆ ಪರಿಕ್ಷಾ ಕೊಠಡಿಯಲ್ಲಿ ಹೇಗೆ ಪಾಲಿಸಲು ಸಾಧ್ಯ ಎಂದು ಪ್ರಶ್ನಿಸಿದನು. ಈ ಪ್ರಶ್ನೆಗೆ ಉತ್ತರವನ್ನು ಕೆಳಗಿನ ಚಿತ್ರದ ಮೂಲಕ ವಿವರಿಸುತ್ತೇನೆ.
ಚಿತ್ರ ಒಂದರಲ್ಲಿ ನೋಡಿರುವಂತೆ ವಿದ್ಯಾರ್ಥಿಯ ಪರೀಕ್ಷಾ ಟೇಬಲ್ ಉತ್ತರಕ್ಕೆ ಅಭಿಮುಖವಾಗಿದ್ದಾಗ ವಿದ್ಯಾರ್ಥಿಯು ನೇರವಾಗಿ ಕುಳಿತರೆ ಉತ್ತರಕ್ಕೆ ದಿಕ್ಕನ್ನು ಎದುರುಗೊಂಡಂತೆ.
ಚಿತ್ರ ಎರಡರಲ್ಲಿ ತೋರಿಸಿರುವಂತೆ ಒಂದು ವೇಳೆ ವಿದ್ಯಾರ್ಥಿಗೆ ಉತ್ತರ ದಿಕ್ಕು ಕೆಟ್ಟ ದಿಕ್ಕುಗಳಲ್ಲಿ ಬಂದಿದ್ದರೆ ಆತನು ಕುಳಿತಲ್ಲಿಯೇ ಸ್ವಲ್ಪ ಬಲಕ್ಕೆ ಮುಖ ಮಾಡಿ ಕುಳಿತರೆ ಈಶಾನ್ಯ ದಿಕ್ಕನ್ನು ಎದುರುಗೊಂಡಂತೆ.
ಚಿತ್ರ ಮೂರರಲ್ಲಿ ತೋರಿಸಿರುವಂತೆ ಒಂದು ವೇಳೆ ವಿದ್ಯಾರ್ಥಿಗೆ ಉತ್ತರ ದಿಕ್ಕು ಕೆಟ್ಟ ದಿಕ್ಕುಗಳಲ್ಲಿ ಬಂದಿದ್ದರೆ ಆತನು ಸ್ವಲ್ಪ ಎಡಕ್ಕೆ ಮುಖ ಮಾಡಿ ಕುಳಿತರೆ ವಾಯುವ್ಯ ದಿಕ್ಕನ್ನು ಎದುರುಗೊಂಡಂತೆ.










