ಇದು ಒಂದು ಮುಖ್ಯವಾದ ವಿಷಯವಾಗಿದ್ದು, ಪ್ರತಿಯೊಬ್ಬರೂ ಈ ರೀತಿಯೇ ಇರಿಸುವುದು ಸಹಜ. ಇಲ್ಲಿ ಬಹುಮುಖ್ಯವಾದ ವಿಷಯದ ಬಗ್ಗೆ ಗಮನವಿರಲಿ. ಒಂದು ವೇಳೆ ಈಶಾನ್ಯ ಎನ್ನುವುದು ಮನೆಯ ಮುಂದೆ ಬಂದಿದ್ದು ಆಗ ಅಲ್ಲಿ ಬೋರವೆಲ್ ಹಾಕಿಸಿದರೆ ಅದು ತುಂಬಾ ಶ್ರೆಷ್ಠ ಅಂದಿನಿಂದ ಆ ಮನೆಯಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಂಡು ಬರುವುದು. ಮನೆಯ ಅಕ್ಕಪಕ್ಕದಲ್ಲಿ ಬಂದರೂ ನಡೆಯುತ್ತದೆ ಅದರಿಂದ ಏನೂ ತೊಂದರೆ ಇಲ್ಲ. ಆದರೆ ಈಶಾನ್ಯ ಎನ್ನುವುದು ಮನೆಯ ಹಿಂದೆ ಬಂದಿದ್ದಾಗ ಅಲ್ಲಿ ಬೋರವೆಲ್ ಹಾಕಿಸಿದರೆ ಅಂದಿನಿಂದಲೇ ಆ ಮನೆಯಲ್ಲಿ ಹಣಕಾಸಿಗೆ ಸಂಬಂಧಿಸಿದ ತೊಂದರೆಯೂ ಪ್ರಾರಂಭವಾಗುವುದು. ಅಷ್ಟೆ ಅಲ್ಲದೇ ಪ್ರತಿಯೊಂದರಲ್ಲಿಯೂ ಹಾನಿ ಸಂಭವಿಸಬಹುದು.
ಇದನ್ನು ನಾನು ಹೇಳುತ್ತಿದ್ದೆನೆಂದು ನಂಬುವುದು ಬೇಡ. ನಿಮ್ಮ ಸ್ನೇಹಿತರಲ್ಲಿ ಅಥವಾ ಬಂಧು ಬಳಗದವರಲ್ಲಿ ಈಶಾನ್ಯ ದಿಕ್ಕು ಮನೆಯ ಹಿಂದೆ ಬಂದಿದ್ದು ಬೋರವೆಲ್ ಹಾಕಿಸಿದವರಿದ್ದರೆ ಅವರಿಂದಲೇ ಸ್ಪಷ್ಟ ಚಿತ್ರಣ ನಿಮಗೆ ದೊರೆಯುತ್ತದೆ. ಎಂದಿನಿಂದ ಆ ಬೋರವೆಲ್ ಉಪಯೋಗ ಆಗುವುದೋ ಅಂದಿನಿಂದ ಅವರಿಗೆ ಹಣಕಾಸಿನ ತೊಂದರೆಯು ಪ್ರಾರಂಭವಾಗುತ್ತದೆ.
ಇಂದಿನ ಪ್ರಚಲಿತ ವಾಸ್ತು ಪುಸ್ತಕಗಳನ್ನು ಓದಿ ಮನೆಯ ಹಿಂಬದಿಯಲ್ಲಿ ಈಶಾನ್ಯ ಬಂದಿದ್ದರೆ ಅಲ್ಲಿ ಬೋರವೆಲ್ ಹಾಕಿಸಿ ಹಣಕಾಸಿನ ತೊಂದರೆಗೆ ಸಿಲುಕುವ ಮೊದಲು ವಿಚಾರಿಸುವುದು ಒಳ್ಳೆಯದು. ಇದಕ್ಕೆ ಒಂದು ಉದಾಹರಣೆ ಎಂದರೆ ಹಿಂದಿನ ಕಾಲದಲ್ಲಿ ರಾಜರೆಲ್ಲರೂ ಅರಮನೆ ಕಟ್ಟಿಸುತ್ತಿರುವಾಗ ನೀರಿನ ಕಾರಂಜಿಯನ್ನು ಅರಮನೆಯ ಮುಂದೆ ಇಡುತ್ತಿದ್ದರು. ನೀರಿನ ಕಾರಂಜಿಯೂ ಹೆಚ್ಚಿನ ಮಟ್ಟದಲ್ಲಿ ಧನಾತ್ಮಕ ಶಕ್ತಿಯನ್ನು ಬರಮಾಡಿಕೊಳ್ಳುತ್ತದೆ. ಹಾಗಾಗಿ ಮನೆಯ ಮುಂದೆ ನೀರಿನ ಕಾರಂಜಿ, ಬೋರವೆಲ್ ಬಂದರೆ ಅದು ನಿಮಗೆ ಒಳ್ಳೆಯ ಫಲಿತಾಂಶವನ್ನೇ ಕೊಡುತ್ತದೆ.
ಇದಕ್ಕೆ ನಾನು ನಿಮಗೆ ಇನ್ನೊಂದು ಉದಾಹರಣೆ ನೀಡಲು ಬಯಸುತ್ತೇನೆ. ಹಾವೇರಿಯಲ್ಲಿ ಒಬ್ಬ ವ್ಯಕ್ತಿಯ ಮನೆಯ ವಾಯುವ್ಯ ದಿಕ್ಕು ಮುಂದುಗಡೆಗೆ ಬರುತ್ತಿತ್ತು ಅಲ್ಲಿ ಬೋರವೆಲ್ ಹಾಕಿಸಿದಾಗ ಅವರಿಗೆ ನಾಲ್ಕು ಇಂಚು ನೀರು ಧಾರಾಳವಾಗಿ ಸಿಗಲು ಪ್ರಾರಂಭವಾಯಿತು. ನಂತರದ ದಿನಗಳಲ್ಲಿ ವಾಸ್ತು ತಜ್ಞರೊಬ್ಬರ ಮಾತು ಕೇಳಿ ಈಶಾನ್ಯದಲ್ಲಿಯೇ ಬೋರವೆಲ್ ಇರಬೇಕೆಂದು ತಿಳಿದುಕೊಂಡು ಈಶಾನ್ಯಕ್ಕೆ ಬೋರ್ವೆಲ್ ಹಾಕಿಸತೊಡಗಿದರು. ಹಾಗೂ ವಾಯುವ್ಯ ದಿಕ್ಕಿನಲ್ಲಿರುವ ಬೋರನ್ನು ಕಲ್ಲುಗಳಿಂದ ಮುಚ್ಚಿಸಿದರು. ನಂತರದ ದಿನಗಳಲ್ಲಿ ಆದದ್ದೇನು? ಈಶಾನ್ಯದಲ್ಲಿ ಎಷ್ಟೋ ಆಳಕ್ಕೆ ಬೋರವೆಲ್ ಹೊಡಿಸಿದರೂ ನೀರು ಸಿಗಲೇ ಇಲ್ಲ ಆಗ ಅವರುಗಳು ಟ್ಯಾಂಕರ ಮೂಲಕ ನೀರನ್ನು ತರಿಸಿ ಮನೆಯಲ್ಲಿ ಉಪಯೋಗಿಸಲು ಪ್ರಾರಂಭ ಮಾಡಿದ್ದಾರೆ. ಈ ಉದಾಹರಣೆಯ ಮೂಲಕ ನಾನು ನಿಮಗೆ ಹೇಳಬಯಸುವುದಿಷ್ಟೆ ಯಾವುದೇ ಒಂದು ಸಲಹೆ ಪಡೆದುಕೊಳ್ಳುವ ಮೊದಲು ಅದು ಎಷ್ಟೊಂದು ವೈಜ್ಞಾನಿಕ ಹಾಗೂ ಪ್ರಾಯೋಗಿಕ ಆಗಿದೆ ಎಂದು ತಿಳಿದು ನಡೆದುಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಮೇಲಿನ ಉದಾಹರಣೆಯಂತೆಯೇ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.








