ನಾವು ನಮ್ಮ ಜಾಹಿರಾತುಗಾರರಿಗೆ ‒ ಅವರು ನಮ್ಮ ಬಳಕೆದಾರರನ್ನು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಜಾಲತಾಣದಲ್ಲಿ ಜಾಹಿರಾತುಗಳ ಮೌಲ್ಯವನ್ನು ಅವರು ದೃಢೀಕರಿಸಿಕೊಳ್ಳಲು ಸಹಾಯವಾಗುವುದಕ್ಕಾಗಿ ‒ ಮಾಹಿತಿಯನ್ನು ಒದಗಿಸಿದಲ್ಲಿ, ಅದು ಸಾಮಾನ್ಯವಾಗಿ ನಮ್ಮ ಎಪ್ ನೊಳಗಿನ ವಿವಿಧ ಪುಟಗಳಿಗೆ ಬರುವ ಭೇಟಿಗಳ ಬಗ್ಗೆ ಒಗ್ಗೂಡಿಸಲಾದ ಸರಾಸರಿ ಅಂಕಿಅಂಶಗಳ ರೂಪದಲ್ಲಿರುವುದು. ನೀವು ಸರಳ್ವಾಸ್ತು ಎಪ್ ನೊಡನೆ ನೋಂದಾಯಿಸಿಕೊಂಡಲ್ಲಿ, ನಿಮಗೆ ಪ್ರಯೋಜನವಾಗುವುದೆಂದು ನಾವು ನಂಬುವಂತಹ ವೈಶಿಷ್ಟ್ಯಗಳನ್ನು ಒದಗಿಸುವಂತಹ ಅದ್ಯತನಗೊಳಿಸಲಾದ ನಿಮ್ಮ ವಿಷಯಗಳನ್ನು ನೀವು ಕಾಲ-ಕಾಲಕ್ಕೆ ಪಡೆಯುವಿರಿ.
ಈ ದತ್ತಸಂಚಯ (ಡೇಟಾಬೇಸ್) ವನ್ನು ಒಂದು ಫೈರ್ವಾಲ್ ನಿಂದ ಭದ್ರಗೊಳಿಸಲಾಗಿರುವ ಸರ್ವರ್ಗಳಲ್ಲಿ ದಾಸ್ತಾನುಮಾಡಲಾಗುವುದು; ಈ ಸರ್ವರ್ಗಳನ್ನು ತಲುಪಲು ಗುಪ್ತಪದಗಳಿಂದ ಭದ್ರಗೊಳಿಸಿರಲಾಗುವುದು ಹಾಗೂ ಕಟ್ಟುನಿಟ್ಟಾಗಿ ಸೀಮಿತ ಬಳಕೆದಾರರಿಗೆ ಮಾತ್ರ ಅವಕಾಶವಿರುವುದು. ಆದಾಗ್ಯೂ, ನಮ್ಮ ಭದ್ರತಾ ಕ್ರಮಗಳು ಎಷ್ಟೇ ಪರಿಣಾಮಕಾರಿಯಾಗಿದ್ದರೂ ಸಹ, ಯಾವುದೇ ಭದ್ರತಾ ವ್ಯವಸ್ಥೆಯು ಅಭೇದ್ಯವಲ್ಲ. ನಾವು ನಮ್ಮ ದತ್ತಸಂಚಯದ ಭದ್ರತೆಯ ಬಗ್ಗೆ ಖಾತರಿ ನೀಡಲಾಗುವುದಿಲ್ಲ, ಹಾಗೆಯೇ ನೀವು ನಮಗೆ ಅಂತರ್ಜಾಲದ ಮೂಲಕ ಒದಗಿಸುವ ಮಾಹಿತಿಯು ನಿಮ್ಮಿಂದ ನಮಗೆ ರವಾನಿಸಲಾಗುತ್ತಿರುವಾಗ ಅದನ್ನು ಇತರರು ಕದ್ದಾಲಿಸಲಾರರು ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಮತ್ತು, ಸಹಜವಾಗಿ, ಚರ್ಚೆ ಕ್ಷೇತ್ರಗಳಿಗೆ ನೀವು ಸೇರಿಸುವ ನಿಮ್ಮ ಪೋಸ್ಟ್ಗಳು ಅಂತರ್ಜಾಲವನ್ನು ತಲುಪಬಲ್ಲ ಯಾರಿಗೇ ಆದರೂ ಲಭ್ಯವಾಗುವವು.
ಆದಾಗ್ಯೂ, ಅಂತರ್ಜಾಲವು ಒಂದು ನಿರಂತರವಾಗಿ ವಿಕಸಿಸುತ್ತಿರುವ ಮಾಧ್ಯಮವಾಗಿರುವುದು. ಅವಶ್ಯವಿರುವ ಭವಿಷ್ಯದ ಬದಲಾವಣೆಗಳನ್ನು ಅಳವಡಿಸುವುದಕ್ಕಾಗಿ, ನಾವು ಕಾಲ-ಕಾಲಕ್ಕೆ ನಮ್ಮ ಗೋಪ್ಯತೆ ಕಾರ್ಯನೀತಿಯನ್ನು ಬದಲಿಸಬಹುದು. ಆದರೂ ಸಹಜವಾಗಿ, ಹೊಸ ಕಾರ್ಯನೀತಿ ಏನೇ ಇದ್ದರೂ ಕೂಡ, ನಾವು ಸಂಗ್ರಹಿಸುವ ಯಾವುದೇ ಮಾಹಿತಿಯ ನಮ್ಮ ಬಳಕೆಯು ಅಂತಹ ಮಾಹಿತಿಯ ಸಂಗ್ರಹಕ್ಕೆ ಅನ್ವಯಿಸುವ ನಮ್ಮ ಕಾರ್ಯನೀತಿಯೊಂದಿಗೆ ಯಾವಾಗಲೂ ಸ್ಥಿರವಾಗಿ ಹೊಂದಿರುವುದು.
ನಿಮಗೆ ಈ ಕಾರ್ಯನೀತಿಯ ಬಗ್ಗೆ ಯಾವುದೇ ಪ್ರಶ್ನೆಗಳು ಇದ್ದಲ್ಲಿ ಅಥವಾ ಸ್ಫಷ್ಟೀಕರಣಗಳು ಬೇಕಾದ್ದಲ್ಲಿ, ನೀವು ಅವುಗಳನ್ನು ಇಮೇಲ್ ಮೂಲಕ app@saralvaastu.com ಕ್ಕೆ ಅಥವಾ ಅಂಚೆಯ ಮೂಲಕ ಸಿ. ಜಿ. ಪವಾರ್ ಖಾಸಗಿ ನಿಯಮಿತ ಕ್ಕೆ ಈಎಲ್‑86, ಟಿಟಿಸಿ ಕೈಗಾರಿಕಾ ಪ್ರದೇಶ, ಎಂಐಡಿಸಿ, ಮಹಾಪೆ, ನವಿ ಮಂಬೈ ಮಹಾರಾಷ್ಟ್ರ, 400 701 ರವಾನಿಸಬಹುದು ಅಥವಾ ನಮ್ಮ ದೂರವಾಣಿ ಸಂಖ್ಯೆಯಾದ (022) 61092732 ಗೆ ಕರೆ ನೀಡಬಹುದು.