ಮನುಷ್ಯ ಒಟ್ಟಾರೆ ಯೋಗಕ್ಷೇಮವನ್ನು ಉತ್ತಮಪಡಿಸುವ ಗುರಿಯಿಂದ, ಒಂದು ಕಟ್ಟಡದ ಮತ್ತು ಅದರ ಸುತ್ತಲಿನ ಸ್ಥಳದ ಸಕಾರಾತ್ಮಕ ಶಕ್ತಿಯನ್ನು ಜಾಗೃತಗೊಳಿಸುವ ಒಂದು ವಿಜ್ಞಾನವೇ ವಾಸ್ತು; ವಾಸ್ತುವನ್ನು ತಮ್ಮ ತಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಬೇಕೇ ಹೊರತು ಬೇರೆಲ್ಲೂ ಅಲ್ಲ. ಕಟ್ಟಡವನ್ನು ಮನೆಯನ್ನಾಗಿಸುವುದು ಮನೆಯಲ್ಲಿ ವಾಸಿಸುವಂತಹ ಜನ ಹಾಗು ವಾಸ್ತುವಿನ ಅಂಶ. ಮನೆ ಎಂಬುದು ನಮ್ಮ ಗುರುತಿನ ವಿಸ್ತರಣೆ ಮತ್ತು ನಮ್ಮನ್ನು ಕಂಡುಕೊಳ್ಳಬಹುದಾದ ಸ್ಥಳ; ಹೀಗಾಗಿ ಪ್ರತಿಯೊಂದು ಮನೆಯಲ್ಲೂ ಮನೆಗಾಗಿ ವಾಸ್ತುವನ್ನು ಅನುಸರಿಸಲೇಬೇಕು. ನಿಮ್ಮ ಧರ್ಮ, ಜಾತಿ ಅಥವಾ ನಂಬಿಕೆಗಳು ಏನೇ ಆಗಿದ್ದರೂ ಒಮ್ಮೆ ನೀವು ಮನೆಗಾಗಿ ಸರಳ ವಾಸ್ತು ಉಪಾಯಗಳನ್ನು ಅರ್ಥ ಮಾಡಿಕೊಂಡರೆ, ಆಗ ನಿಮಗೆ, ಅದು ಸೂಕ್ಷ್ಮ ರೀತಿಯಲ್ಲಿ ಕೆಲಸ ಮಾಡುವಂತಹ ವಿಜ್ಞಾನ ಎಂಬುದು ಅರಿವಿಗೆ ಬರುತ್ತದೆ. ಮನೆಯೆಂಬುದರ ಅರ್ಥವೇ ದೇವರು ಮತ್ತು ಮನುಷ್ಯರು ವಾಸಿಸುವ ಸ್ಥಳ ಎಂದು, ಹೀಗಾಗಿ ಇವರಿಬ್ಬರಿಗೂ ಸೂಕ್ತವಾಗುವಂತೆ ಅದನ್ನು ವಿನ್ಯಾಸ ಮಾಡುವುದೇ ಸುಖ ಸಮೃದ್ಧಿಯ ನಿಜವಾದ ನಿಜವಾದ ಜಾಣ್ಮೆ.
ನಿಮ್ಮ ಮನೆಯಲ್ಲಿ ಬೆಳಕು ಚೆನ್ನಾಗಿರುತ್ತದೆಯೇ?
ಯಾವುದೇ ಕೋಣೆಯಲ್ಲಿ ಕತ್ತಲೆ ಇರದಂತೆ ನೋಡಿಕೊಳ್ಳಿ, ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಹರಡುವ ಕತ್ತಲಾದ ಮೂಲೆಗಳು ಮತ್ತು ರಾತ್ರಿಯಲ್ಲಿ ಮಂದವಾದ ಬೆಳಕು ಇರದಂತೆ ನೋಡಿಕೊಳ್ಳಿ. ಕತ್ತಲು, ಅದರಲ್ಲೂ ವಿಶೇಷವಾಗಿ ರಾತ್ರಿಯಲ್ಲಿ ಕತ್ತಲು ಕೆಟ್ಟ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ನಿಮ್ಮ ಮನೆಯಲ್ಲಿ ಒಳ್ಳೆಯ ಬೆಳಕು ಇರದಿದ್ದರೆ, ನೀವು ನಿಮ್ಮ ಕುಟುಂಬದ ಸದಸ್ಯರ ನಡುವೆ ಡಲ್ನೆಸ್ /ಮಂಕುತನವನ್ನು ಕಾಣುತ್ತೀರಿ.
ನಿಮ್ಮ ಮನೆಯಲ್ಲಿ ಮುರಿದ ಕನ್ನಡಿಗಳಿವೆಯೇ?
ಮನೆಯಲ್ಲಿ ಮುರಿದ ಕನ್ನಡಿಗಳು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುವುದರಿಂದ ಅವುಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದನ್ನು ತಪ್ಪಿಸಿ. ಕನ್ನಡಿಯನ್ನು ವಾಸ್ತು ಪ್ರಕಾರ ಬಳಸಿದರೆ ಅದು ಸಕಾರಾತ್ಮಕತೆಯನ್ನು ಪ್ರತಿಫಲಿಸುವ ಶಕ್ತಿಯನ್ನು ಹೊಂದುತ್ತದೆ ಮತ್ತು ಊಹಿಸಲೂ ಸಾಧ್ಯವಿಲ್ಲದಷ್ಟು ಅದೃಷ್ಟವನ್ನು ಆಕರ್ಷಿಸುತ್ತದೆ. ಆದರೆ ಮುರಿದ ಕನ್ನಡಿಗಳು ದುರಾದೃಷ್ಟವನ್ನು ಆಹ್ವಾನಿಸುತ್ತವೆ.
ಮನೆಯ ಹತ್ತಿರ ಯಾವುದೇ ದೇವರ ಆರಾಧನೆಯ ಸ್ಥಳ ಇರುವುದು ಒಳ್ಳೆಯದೋ ಅಥವಾ ಕೆಟ್ಟದೋ?
ವಾಸ್ತು ಪ್ರಕಾರ ನಿಮ್ಮ ಮನೆಯ ಪಕ್ಕದಲ್ಲಿ ಅಥವಾ ಮುಂದೆ ಯಾವುದೇ ದೇವಸ್ಥಾನ, ಚರ್ಚ್ ಅಥವಾ ಮಸೀದಿ ಇರಬಾರದು, ಏಕೆಂದರೆ ಇವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಆರ್ಥಿಕವಾಗಿ ಏನೂ ತೊಂದರೆಯಾಗುವುದಿಲ್ಲ ಆದರೆ ವಾಸ ಮಾಡುವವರು ಆರೋಗ್ಯದ ಸಮಸ್ಯೆಗಳನ್ನು ಮತ್ತು ಮಾನಸಿಕ ಒತ್ತಡವನ್ನು ಎದುರಿಸುತ್ತಾರೆ. ಕೆಲ ನಿರ್ದಿಷ್ಟ ದೇವರುಗಳ ದೇವಸ್ಥಾನದ ಹತ್ತಿರ ವಾಸ ಮಾಡಲೇಬಾರದು ಎಂಬ ನಿಯಮಗಳು ವಾಸ್ತುವಿನಲ್ಲಿವೆ.
ನಿಮ್ಮ ಮನೆ ಸ್ವಚ್ಛವಾಗಿದೆಯೇ?
ಮನೆಯನ್ನು ಯಾವಾಗಲೂ ಸ್ವಚ್ಛವಾಗಿರಿಸಿ ಮತ್ತು ಅಸ್ತವ್ಯಸ್ತತೆಯನ್ನು ತಪ್ಪಿಸಿ, ಹೀಗೆ ಮಾಡುವುದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಸ್ವಚ್ಛ ಸ್ಥಳಗಳು ಆಂತರಿಕ ಸಂತೋಷವನ್ನು ಉಂಟು ಮಾಡುವುದರಿಂದ ಜನರು ಸ್ವಚ್ಛವಾದ ಸ್ಥಳಗಳಲ್ಲಿ ವಾಸಿಸುವ ಸಹಜ ಪ್ರವೃತ್ತಿಯನ್ನು ಹೊಂದಿರುತ್ತಾರೆ.
ಊಟದ ಮನೆಯಲ್ಲಿ ಕನ್ನಡಿ ಹಾಕಬೇಕೆಂದು ಏಕೆ ಶಿಫಾರಸು ಮಾಡಲಾಗುತ್ತದೆ?
ಏಕೆಂದರೆ ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಮತ್ತು ಆಹಾರ ಮತ್ತು ಸಂಪತ್ತು ದುಪ್ಪಟ್ಟಾಗುವುದನ್ನು ಸೂಚಿಸುತ್ತದೆ.








