ಸರಳ ವಾಸ್ತು ಕಛೇರಿಗಳು, ಶಾಲೆಗಳು, ಮಹಾವಿದ್ಯಾಲಯಗಳು, ಆಸ್ಪತ್ರೆಗಳು, ಸಂಸ್ಥೆಗಳು ಮತ್ತು ಹೊಟೇಲುಗಳಂತಹ ವ್ಯವಹಾರಕ್ಕಾಗಿ  ವಾಸ್ತು ವಿಗಾಗಿ ತಜ್ಞರ ಸಮಾಲೋಚನೆ ಗಳನ್ನು ಒದಗಿಸುವುದು.

ಕೈಗಾರಿಕೆಗಾಗಿ ವಾಸ್ತು

ತಮ್ಮ ಉದ್ಯಮಗಳು ಉನ್ನತಿಹೊಂದಲು ಉತ್ತಮ ಲಾಭಾಂಶಗಳಿರುವ ಹೊಸ ಕಾರ್ಯಸಾಧ್ಯತೆಗಳಿರುವಂತಹ ಯೋಜನೆಗಳನ್ನು ಸ್ಥಾಪಿಸಲು ಬಯಸುವ ನಿರೀಕ್ಷಿತ ಕೈಗಾರಿಕೋದ್ಯಮಿಗಳು ಭೂಮಿ, ಅನಿಯಮಿತ ಮತ್ತು ಅಗ್ಗದ ವಿದ್ಯುತ್ ಮೂಲ, ರಸ್ತೆ ಮತ್ತು ರೈಲು ಜಾಲದ ಮೂಲಕ ಆ ಜಮೀನಿಗೆ ಸುಲಭವಾಗಿ ತಲುಪುವ ಸಾಧ್ಯತೆ, ಕಚ್ಚಾ ವಸ್ತುಗಳು ಮತ್ತು ಮಾನವ ಸಂಪನ್ಮೂಲಗಳ ಲಭ್ಯತೆಗಳಂತಹ ಮೂಲಭೂತ ಸೌಕರ್ಯಗಳು ಸಂಪೂರ್ಣವಾಗಿ ಲಭ್ಯವಿರುವಂತಹ, ಹಾಗೂ ಉದ್ಯಮಕ್ಕೆ ಸರಿಹೊಂದುವ ಜಮೀನನ್ನು ಆಯ್ಕೆಮಾಡುವಂತಹ ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿ ಎಂದಿಗೂ ತಿಳಿದಿರಬೇಕಾಗುವುದು.ವ್ಯವಹಾರಗಳಿಗೆ ವಾಸ್ತು ತತ್ವಗಳನ್ನು ಅನ್ವಯಿಸುವುದರಿಂದ ನಿಮ್ಮ ವ್ಯವಹಾರದಲ್ಲಿ ಗುಣಾತ್ಮಕ ದೃಷ್ಟಿಕೋನವನ್ನು ತರುವ ಮೂಲಕ ವ್ಯವಹಾರವು ಪ್ರಗತಿಯನ್ನು ಸಾಧಿಸಿ ಹೊಸ ಉನ್ನತಿಗಳನ್ನು ಸಾಧಿಸಲು ನೆರವಾಗುವುದು.

ವ್ಯವಹಾರಗಳಲ್ಲಿ ತೊಡಗಿರುವ ವ್ಯಕ್ತಿಗಳು ತಮ್ಮ ತಮ್ಮ ವ್ಯವಹಾರಗಳಲ್ಲಿ ಈ ಕೆಳಗಿನಂತಹ ರೂಪಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ:

 • ಮಾರುಕಟ್ಟೆಯಲ್ಲಿ ಅವಕಾಶಗಳ ಹೊರತಾಗಿಯೂ ವ್ಯವಹಾರದಲ್ಲಿ ನಷ್ಟ.
 • ಜಮೀನು/ಆಸ್ತಿ ಕಾನೂನು ವಿವಾದಗಳಲ್ಲಿ ಸಿಲುಕಿರುವುದು.
 • ಕಾರ್ಮಿಕರ ಬಾಧೆಗಳು.

ಹೋಟೆಲ್ಗಾಗಿ ವಾಸ್ತು

ಹೊಟೇಲುಗಳು ಮತ್ತು ಉಪಹಾರಗೃಹಗಳಿಗೆ ವಾಸ್ತು ಶಾಸ್ತ್ರದ ತತ್ವಗಳನ್ನು ಅನ್ವಯಿಸುವುದರಿಂದ, ಆ ಹೊಟೇಲುಗಳಿಗೆ ಭೇಟಿಗಾರರು ಅಥವಾ ಅತಿಥಿಗಳು ಪುನಃ ಹಿಂದಿರುಗಬೇಕೆನಿಸುವಂತಹ ಅನುಭವವುಂಟಾಗುವಂತೆ ಖಚಿತಪಡಿಸುವುದು ಹಾಗೂ ಅವುಗಳು ಉತ್ತಮ ಪ್ರಗತಿಯುಳ್ಳ ವ್ಯವಹಾರಗಳಾಗಿ ಬದಲಾಯಿಸುವಂತೆ ಅವುಗಳಿಗೆ ಅನೇಕ ರೀತಿಯಿಂದ ಸಹಾಯವಾಗುವುದು.

 • ಸ್ವಾಗತ ಕೊಠಡಿ ಮತ್ತು ಉಪಹಾರಗೃಹ
 • ಸಮಾವೇಶ ಭವನವನ್ನು ನಿರ್ಮಿಸುವುದು
 • ಹೊಟೇಲ್ ಕೋಣೆಗಳಲ್ಲಿ ಹಾಸಿಗೆ

ಕಾರ್ಪೋರೇಟ್ಗಾಗಿ ವಾಸ್ತು

ವ್ಯವಹಾರಕ್ಕಾಗಿ ವಾಸ್ತು ವು ಕಛೇರಿಯ ಸರಿಯಾದ ಸ್ಥಳ; ಕಛೇರಿಯ ಹೊರಭಾಗದಲ್ಲಿನ ಇಳಿಜಾರು, ಆಕಾರ, ಇತ್ಯಾದಿ; ಕಛೇರಿಯ ವಿಭಾಗಗಳು ಮತ್ತು ಸ್ವಾಗತ ಕೊಠಡಿಗಳಿರುವ ದಿಕ್ಕುಗಳು; ವಿವಿಧ ವಿದ್ಯುನ್ಮಾನ ಯಂತ್ರಕಗಳ ಸ್ಥಿತಿಗಳು, ಹಾಗೂ ಅಂತಹ ಇನ್ನೂ ಅನೇಕ ಅಂಶಗಳನ್ನು ಪರಿಗಣಿಸುವುದು.

 • ಕೆಲಸ ಮಾಡುವಾಗ ಎದುರಿಸುವ ದಿಕ್ಕು
 • ಸ್ವಾಗತ ಕೊಠಡಿಯ ಕೌಂಟರ್
 • ಮುಖ್ಯ ದ್ವಾರದ ಭಾಗ
 • ಸಭಾಂಗಣದ ಭಾಗ

ಆಸ್ಪತ್ರೆಗಾಗಿ ವಾಸ್ತು

ರೋಗಿಗಳು ಕೂಡ ಬೇಗನೆ ಮತ್ತು ಬಹಳ ಪರಿಣಾಮಕಾರಿಯಾಗಿ ಗುಣಮುಖರಾಗುವರು. ವ್ಯವಹಾರಗಳಿಗಾಗಿ ವಾಸ್ತುವಿನಲ್ಲಿ ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳು ಕೂಡ ಸೇರಿರುವವು. ನಾವೀಗ ನೋಡುತ್ತಿರುವಂತೆ ಅನೇಕ ಆಸ್ಪತ್ರೆಗಳು ಇತ್ತೀಚೆಗೆ ಕಟ್ಟುನಿಟ್ಟಾದ ಸ್ಪರ್ಧೆಗಳನ್ನು ಎದುರಿಸುತ್ತಿರುವರು, ಹಾಗೂ ವೈದ್ಯರು ಕೂಡ ಇಂದಿನ ದಿನಗಳಲ್ಲಿ ಸಮಯದೊಡನೆ ಸ್ಪರ್ಧೆಯಲ್ಲಿ ತೊಡಗಿರುವರು, ಎಂದರೆ, ಅವರುಗಳು ಒಂದು ದಿನದಲ್ಲಿ ಸುಮಾರು 16 ರಿಂದ 18 ಗಂಟೆಗಳನ್ನು ಆಸ್ಪತ್ರೆಗಳಲ್ಲಿಯೇ ಕೆಲಸಮಾಡಿದರೂ ಕೂಡ ಅವರಲ್ಲಿ ಅನೇಕರಿಗೆ ಅವರುಗಳು ನಿರೀಕ್ಷಿಸುವ ಲಾಭಗಳು ದೊರೆಯುತ್ತಿಲ್ಲ.

ಈ ಕೆಳಗಿನ ಅಂಶಗಳು ಆಸ್ಪತ್ರೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವವು:

 • ವೈದ್ಯಕೀಯ ಸಲಕರಣೆಗಳ ಕೊಠಡಿ
 • ಸ್ವಾಗತ ಕೊಠಡಿಯ ಕೌಂಟರ್
 • ವೈದ್ಯಕೀಯ ಉಪಕರಣಗಳ ದಾಸ್ತಾನು ಕೊಠಡಿ
 • ಐಸಿಯು/ವೈದ್ಯಕೀಯ ವಾರ್ಡ್

ಶೈಕ್ಷಣಿಕ ಸಂಸ್ಥೆಗಾಗಿ ವಾಸ್ತು

 • ಶಾಲಾ ಕೊಠಡಿಯ ದಿಕ್ಕು
 • ಶೌಚಾಲಯ ಕಟ್ಟಡಗಳ ದಿಕ್ಕು
 • ಆಡಳಿತ ಮಂಡಳಿಯ ಕಟ್ಟಡದ ದಿಕ್ಕು
 • ಆಟದ ಮೈದಾನದ ದಿಕ್ಕು